Horoscope Today : 23 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಇಂದು ನೀವು ಅತ್ಯಂತ ಉಲ್ಲಾಸಭರಿತವಾಗಿರುತ್ತೀರಿ ಎಂದು ಶ್ರೀ ಗಣೇಶ ಹೇಳುತ್ತಾರೆ. ಅಲ್ಲದೆ, ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ. ಇಂದು ನೀವು ಏನೇ ಮಾಡಿದರೂ ಅದರಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ. ನಿಮ್ಮ ಕುಟುಂಬದ ವಾತಾವರಣದಲ್ಲಿ ಇಂದು ಸಂತಸ ತುಂಬಿರುತ್ತದೆ.

ಅವರಿಂದ ನಿಮಗೆ ಲಾಭವೂ ಉಂಟಾಗಬಹುದು.ಇಂದು ನಿಮಗೆ ಧನಲಾಭದ ಯೋಗವಿದೆ. ನಿಮ್ಮ ಸ್ನೇಹಿತರೊಂದಿಗೆ ಅಥವಾ ಆಪ್ತರೊಂದಿಗೆ ವಿಹಾರ ಹೋಗಲು ಇಂದು ಉತ್ತಮ ದಿನ. ನಿಮ್ಮ ಮನಸ್ಸಿಗೆ ಮುದ ನೀಡುವಂತಹ ಉಡುಗೊರೆಗಳನ್ನು ನೀವು ಅವರಿಂದ ಪಡೆಯಬಹುದು..

ವೃಷಭ :-

ಈ ದಿನ ನಿಮಗೆ ಉತ್ತಮವಾಗಿರಲಾರದು ಎಂಬುದಾಗಿ ಶ್ರೀಗಣೇಶ ಹೇಳುತ್ತಾರೆ. ಎಲ್ಲಾ ರೀತಿಯ ತೊಂದರೆಗಳೂ ನಿಮ್ಮನ್ನು ಚಿಂತೆಗೀಡುಮಾಡುತ್ತದೆ. ದೈಹಿಕವಾಗಿ ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ನಿಮ್ಮ ಮತ್ತು ನಿಮ್ಮ ಆಪ್ತರ ನಡುವೆ ಸಂಘರ್ಷ ತಲೆದೋರುವ ಸಾಧ್ಯತೆಯಿದ್ದು, ಇದು ನಿಮ್ಮ ಕುಟುಂಬದ ವಾತಾವರಣದಲ್ಲಿ ಅಸ್ಥಿರತೆಯನ್ನು ಉಂಟುಮಾಡಬಹುದು.ನೀವು ಕೈಗೆತ್ತಿಕೊಂಡ ಕಾರ್ಯವನ್ನು ಇಂದು ನೀವು ಪೂರ್ಣಗೊಳಿಸುವುದಿಲ್ಲ. ಇಂದು ಹೆಚ್ಚಿನ ಖರ್ಚಿಗೆ ಕೂಡ ಹಾದಿ ಸಿಗಬಹುದು. ಕಠಿಣ ಶ್ರಮದ ಹೊರತಾಗಿಯೂ ಕಳಪೆ ಫಲಿತಾಂಶದಿಂದಾಗಿ ನೀವು ವ್ಯಾಕುಲತೆಗೊಳಗಾಗಬಹುದು. ಗೊಂದಲವನ್ನು ತಡೆಗಟ್ಟುವ ಸಲುವಾಗಿ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಾಕಷ್ಟು ಆಲೋಚಿಸುವುದು ಒಳಿತು.

ಮಿಥುನ :-

ವಿವಿಧ ರೀತಿಯ ಲಾಭದಾಯಕತೆಯು ನಿಮ್ಮ ಇಂದಿನ ಸಂತಸವನ್ನು ಇಮ್ಮಡಿಗೊಳಿಸುತ್ತದೆ ಎಂಬುದಾಗಿ ಶ್ರೀಗಣೇಶ ಹೇಳುತ್ತಾರೆ. ನಿಮ್ಮ ಹೆಂಡತಿ ಅಥವಾ ಮಕ್ಕಳಿಂದ ನೀವು ಸಂತೋಷದ ಸುದ್ದಿ ಪಡೆಯುವಿರಿ. ಸ್ನೇಹಿತರನ್ನು ಭೇಟಿ ಮಾಡುವ ವೇಳೆ ನೀವು ಸಾಕಷ್ಟು ಖುಷಿಯನ್ನು ಪಡೆಯುವಿರಿ. ವಿವಾಹ ಪ್ರಯತ್ನದಲ್ಲಿ ತೊಡಗಿರುವವರಿಗೆ ಸೂಕ್ತ ಸಂಗಾತಿ ದೊರಕುವ ಸಾಧ್ಯತೆಯಿದೆ.

ಕರ್ಕಾಟಕ :-

ಉದ್ಯೋಗಸ್ಥರಿಗೆ ಇಂದು ಲಾಭದಾಯಕ ದಿನವಾಗಲಿದೆ ಎಂಬುದಾಗಿ ಶ್ರೀಗಣೇಶ ಹೇಳುತ್ತಾನೆ.ನಿಮ್ಮ ಮೇಲಿನ ವ್ಯಕ್ತಿಗಳಿಂದ ಸಾಕಷ್ಟು ಬೆಂಬಲ ನಿಮಗೆ ಸಿಗಲಿದೆ. ಬಡ್ತಿ ಸಿಗುವ ಸಾಧ್ಯತೆಯೂ ಇದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಅತಿ ಮುಖ್ಯ ವಿಚಾರವೊಂದರ ಬಗ್ಗೆ ನೀವು ಚರ್ಚಿಸಲಿದ್ದೀರಿ. ನಿಮ್ಮ ತಾಯಿಯ ಆರೋಗ್ಯ ನಿಮ್ಮನ್ನು ಚಿಂತೆಗೀಡುಮಾಡುವುದಿಲ್ಲ. ಇಂದು ನೀವು ಗೌರವ ಮತ್ತು ಹಣ ಗಳಿಸುತ್ತೀರಿ. ನಿಮ್ಮ ಗೃಹ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದ್ದೀರಿ. ಅತಿಯಾದ ಕೆಲಸದ ಒತ್ತಡದಿಂದಾಗಿ ನೀವು ಸ್ವಲ್ಪ ಆಯಾಸಗೊಳ್ಳಬಹುದು. ಆದರೂ, ನಿಮ್ಮ ಆರೋಗ್ಯ ಅದರ ಒತ್ತಡವನ್ನು ತಡೆಯದು.ನಿಮ್ಮ ಕುಟುಂಬ ಜೀವನವು ಸಂತೋಷವಾಗಿರುತ್ತದೆ.

ಸಿಂಹ :-

ಇಂದು ನೀವು ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ಯಾತ್ರಾಸ್ಥಳಕ್ಕೆ ತೆರಳಲು ಇಂದು ಯೋಗ್ಯ ದಿನವಾಗಿದೆ.ಒಮ್ಮೆ ನೀವು ಒಂದು ಕಾರ್ಯವನ್ನು ಮಾಡಲು ನಿರ್ಧರಿಸಿದರೆ ಅದನ್ನು ಪೂರ್ಣಗೊಳಿಸಲು ಸಂಪೂರ್ಣವಾಗಿ ಪ್ರಯತ್ನಿಸುತ್ತೀರಿ. ನಿಮ್ಮ ಗುರಿಯಲ್ಲಿ ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತೀರಿ. ನಿಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳಿ. ನಿಮ್ಮ ಉದ್ಯೋಗದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುವ ಸಂಭವವಿದೆ. ನಿಮ್ಮ ಮೇಲಾಧಿಕಾರಿಗಳ ಅಸಮಧಾನದಿಂದ ನಿಮ್ಮ ಮನಸ್ಸಿಗೆ ನೋವುಂಟಾಗಲಿದೆ. ಆರೋಗ್ಯವು ಸಾಮಾನ್ಯವಾಗಿ ಇರುತ್ತದೆ.

ಕನ್ಯಾ :-

ಯೋಚಿಸಿ ಮಾತನಾಡುವಂತೆ ಶ್ರೀಗಣೇಶ ನಿಮಗೆ ಸಲಹೆ ನೀಡುತ್ತಾರೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಇಂದು ಸಕಾಲವಲ್ಲ. ನೀವು ಕೋಪಗೊಳ್ಳಬಹುದು ಅಥವಾ ಕ್ಷೋಭೆಗೊಳ್ಳಬಹುದು. ಜಾಗ್ರತೆಯಿಂದಿರಿ. ಕುಟುಂಬ ಸದಸ್ಯರೊಂದಿಗಿನ ಜಗಳದಿಂದಾಗಿ ನಿಮಗೆ ಬೇಸರವುಂಟಾಗುತ್ತದೆ. ಸಾದ್ಯವಿದ್ದರೆ, ಇಂದು ಪ್ರಯಾಣ ಮಾಡುವುದನ್ನು ಆದಷ್ಟು ತಪ್ಪಿಸಿ. ನಿಮಗೆ ಕೆಡುಕನ್ನುಂಟುಮಾಡಲು ಬಯಸುವ ವ್ಯಕ್ತಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.

ತುಲಾ :-

ಪ್ರೀತಿಗೆ ಸಂಬಂಧಿಸಿದಂತೆ ನೀವು ಇಂದು ಉಜ್ವಲ ದಿನವನ್ನು ಹೊಂದಿರುತ್ತೀರಿ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ವಿವಾಹಿತಕು ತಮ್ಮ ಸಂಗಾತಿಯಲ್ಲಿ ತಮ್ಮ ಪ್ರೀತಿಯನ್ನು ಹೆಚ್ಚಿಸಿಕೊಳ್ಳುವ ಹಾದಿಯಲ್ಲಿರಬಹುದು ಅಥವಾ ಎರಡನೇ ಮಧುಚಂದ್ರಕ್ಕೆ ಸಿದ್ಧರಾಗಬಹುದು.ಅವಿವಾಹಿತರಿಗೂ ಗ್ರಹಗತಿಗಳು ಅತ್ಯುತ್ತಮವಾಗಿರುತ್ತದೆ. ಪ್ರೀತಿಯು ನಿಮ್ಮ ಬಾಗಿಲನ್ನು ತಟ್ಟುತ್ತಿದೆ. ಅದಕ್ಕಿಂತ ಸರಿಯಾಗಿ ಹೇಳುವುದಾದರೆ ಅದು ಬಾಗಿಲಿನೆಡೆಗಿನ ಮೆಟ್ಟಿಲುಗಳನ್ನು ಹತ್ತುತ್ತಿದೆ.ಶೃಂಗಾರಗೊಳ್ಳಿ, ಅಚ್ಚುಕಟ್ಟಾಗಿರಿ, ಉತ್ತಮ ಉಡುಪನ್ನು ಧರಿಸಿ ಮತ್ತು ಅವುಗಳನ್ನು ಮುತ್ತಿನಿಂದ ಜೋಡಿಸಿ. ಪ್ರೀತಿಪಾತ್ರರೊಂದಿಗಿನ ಪ್ರಯಾಣವು ಖುಷಿಭರಿತವಾಗಿರುತ್ತದೆ. ನಿಮ್ಮ ಜೀವನದುದ್ದಕ್ಕೀ ನೆನಪಿಡುವ ಸಮಯಾವಕಾಶದಲ್ಲಿ ನೀವಿದ್ದೀರಿ.ವೃತ್ತಿನಿರತರಿಗೆ ಮತ್ತು ಉದ್ಯಮಿಗಳಿಗೆ ಇದು ಉತ್ತಮ ಸಮಯ. ನಿಮ್ಮ ಸಾಮಾಜಿಕ ಸ್ಥಾನಮಾನವು ವೃದ್ಧಿಯಾಗಲಿದೆ ಮತ್ತು ಆಕಸ್ಮಿಕ ಫಲಪ್ರಾಪ್ತಿ ದೊರೆಯಬಹುದು.

ವೃಶ್ಚಿಕ :-

ಮುಂಜಾನೆಯಿಂದ ನಿಮಗೆ ಗಾಳಿಯಲ್ಲಿನ ಹಠಾತ್ ತಾಜಾತನ ಮತ್ತು ಸಕಾರಾತ್ಮಕತೆಯ ಅರಿವಾಗಲಿದೆ.ಆದ್ದರಿಂದ ಹೂಗಳು ಸುವಾಸನೆ ಸುಮಧುರವಾಗಲಿದೆ, ಗಾಳಿಯು ತಂಪಾಗಲಿದೆ ಮತ್ತು ನಿಮ್ಮ ದನಿಯು ಸಿಹಿಸಿಹಿಯಾಗಲಿದೆ. ನಿಮ್ಮೊಳಗೆ ಏನಾಗಿದೆ ಎಂಬುದರ ಬಗ್ಗೆ ನೀವು ಆಶ್ಚರ್ಯಪಡುವಿರಿ. ಒಮ್ಮೆಲೇ ಎಲ್ಲವೂ ಆಶಾದಾಯಕವಾಗಿ ಕಂಡುಬರುತ್ತದೆ. ಈ ಸಮಯದಲ್ಲಿ ನೀವು ನಿಮಗೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದೀರಿ. ನಿಮಗೇ ನೀವು ಸ್ವಲ್ಪ ಸಮಯಾವಕಾಶ ಕಲ್ಪಿಸಿ. ಯಾಕೆಂದರೆ, ಇದು ಗ್ರಹಗತಿಯ ತಪ್ಪು. ಕೊನೆಯವರೆಗೂ ಒಳ್ಳೆಯ ವಿಚಾರಗಳನ್ನು ಆನಂದಿಸಿ. ಜೊತೆಗಾರರಿಂದ ಮತ್ತು ಸಹೋದ್ಯೋಗಿಗಳಿಂದ ಸಹಕಾರವನ್ನು ಪಡೆಯುತ್ತೀರಿ ಮತ್ತು ನಿಮ್ಮ ಹೆತ್ತವರಿಂದ ಉತ್ತೇಜನಕಾರಿ ಸುದ್ದಿಯನ್ನು ಕೇಳುವಿರಿ. ಹಣಕಾಸು ಲಾಭ ಉಂಟಾಗಲಿದೆ.ಬಾಕಿ ಉಳಿದಿರುವ ಕಾರ್ಯವನ್ನು ಮುಗಿಸುವ ಸಾಧ್ಯತೆಯಿದೆ. ಜೀವನದ ಮಧುರ ಕ್ಷಣಗಳನ್ನು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಿ.

ಧನು :-

ಗ್ರಹಗತಿಯ ತೊಡಕಿನಿಂದ ಗೃಹಗಳು ಇನ್ನೂ ಚೇತರಿಸಿಕೊಂಡಿರುವಂತೆ ಕಂಡುಬರುವುದಿಲ್ಲ. ಪರಿಣಾಮವಾಗಿ, ನೀವು ಅನಾರೋಗ್ಯಪೀಡಿತರಾಗಬಹುದು ಅಥವಾ ಮಾನಸಿಕವಾಗಿ ಅಸ್ಥಿರತೆಯನ್ನು ಹೊಂದಬಹುದು.ಜೀರ್ಣಕ್ರಿಯೆ ಸಂಬಂಧಿ ಕಾಯಿಲೆಗೆ ನೀವು ಏನು ಸೇವಿಸುತ್ತೀರಿ ಎಂಬುದರ ಬಗ್ಗೆ ದೃಷ್ಟಿಹಾಯಿಸಿ. ಇದು, ಕಳೆದ ಎರಡು ದಿನಗಳಿಂದ ನೀವು ಅನುಭವಿಸುತ್ತಿರುವ ಒತ್ತಡದ ಕಾರಣದಿಂದಾಗಿ ಉಂಟಾಗಿರುವ ಆಸಿಡಿಟಿ ಕಾಯಿಲೆಯಾಗಿರಬಹುದು. ಕೆಲವು ಮುಖ್ಯ ಯೋಜನೆಗಳ ಕುರಿತಾದ ನಿರ್ಣಯಗಳ ಬಗ್ಗೆ ಅಥವಾ ನೀವು ಕೈಗೊಂಡ ಸಂದರ್ಶನಗಳ ಬಗ್ಗೆ ನೀವು ಸಾಕಷ್ಟು ಚಿಂತಿಸಿರಬಹುದು. ಫಲಿತಾಂಶವು ಮುಂದೆ ಹೋಗಿದ್ದಿರಬಹುದು. ಇದು ನಿಮ್ಮ ಮಕ್ಕಳಿಗೆ ಸಂಬಂಧಿಸಿಯೂ ಆಗಿರಬಹುದು. ಆಳವಾಗಿ ಉಸಿರು ತೆಗೆದುಕೊಳ್ಳಿ ಮತ್ತು ವಿಷಯಗಳು ಅವುಗಳ ಹಾದಿಯಲ್ಲಿ ಸಾಗಲಿ. ಓದು ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ನೆಮ್ಮದಿಯನ್ನು ಕಾಣಿ.

ಮಕರ :-

ಇಂದು ನೀವು ಆಲಸ್ಯ ಹಾಗೂ ತೂಕಡಿಕೆಯ ಭಾವನೆಯನ್ನು ಹೊಂದಿರುತ್ತೀರಿ. ಇದರಿಂದಾಗಿ ನೀವು ಜಡದಿಂದ ಹಾಗೂ ಭಾವಶೂನ್ಯವಾಗಿರುವ ಬಗ್ಗೆ ಆಶ್ಚರ್ಯಪಡಬೇಕಾಗಿಲ್ಲ.ಸಣ್ಣ ಅಡಚಣೆಗಳು, ಅನಿರೀಕ್ಷಿತ ತೊಡಕುಗಳು ಉಂಟಾಗುತ್ತದೆ ಇದರಿಂದಾಗಿ ಅಭಿವೃದ್ಧಿ ಮತ್ತು ಏಕಾಗ್ರತೆ ಕಷ್ಟಕರವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಅಲ್ಲದೆ, ನಿಮ್ಮ ಸುತ್ತಲಿರುವ ಜನರು ನಿಮಗೆ ಸಹಕರಿಸಲು ನಿರಾಕರಿಸುತ್ತಾರೆ. ದಿನದಲ್ಲಿ ಅತಿ ಹೆಚ್ಚು ವ್ಯವಹಾರದಲ್ಲಿ ತೊಡಗಬೇಕಾಗುತ್ತದೆ. ದೃಢನಿರ್ಧಾರದಿಂದ ಮುಂದುವರಿಯಿರಿ ಮತ್ತು ಎಚ್ಚರಿಕೆಯಿಂದಿರುವುದನ್ನು ರೂಢಿ ಮಾಡಿಕೊಳ್ಳಿ. ಚರ್ಚೆ ನಡೆಸುವುದೂ ಒಂದು ಕಲೆಯಾಗಿರಬಹುದು ಮತ್ತು ಅದರ ಕುರಿತಾಗಿ ನೀವು ನಿಮ್ಮೊಳಗೇ ಹೆಮ್ಮೆ ಪಡುತ್ತಿರಬಹುದು. ಆದರೆ, ನಿಮ್ಮ ಕೌಶಲ್ಯವನ್ನು ಬಳಕೆಗೆ ತರಲು ಇದು ಸಕಾಲವಲ್ಲ. ನಿಷ್ಪ್ರಯೋಜಕ ಚರ್ಚೆಗಳು ಅನಗತ್ಯವಾಗಿ ಬೇಸರವನ್ನು ಉಂಟುಮಾಡುತ್ತದೆ ಮತ್ತು ದ್ವೇಷಭರಿತ ಮುಖಾಮುಖಿಯಾಗಿ ಮಾರ್ಪಾಡಾಗುತ್ತದೆ ಇದು ನೋವು ಹಾಗೂ ಅವಮಾನಕ್ಕೆ ಹಾದಿ ಮಾಡುಕೊಡುತ್ತದೆ. ಎಚ್ಚರಿಕೆಯಿಂದಿರಿ. ವಿಶ್ರಾಂತಿ ಪಡೆಯಿರಿ, ನಿದ್ರಿಸಿ.

ಕುಂಭ :-

ಈ ಸಮಯದಿಂದ, ಹೆಚ್ಚಿನ ನಕಾರಾತ್ಮಕ ಚಿಂತನೆಗಳು ಒಳ್ಳೆಯ ಕಾರಣಕ್ಕಾಗಿಯೇ ನಿಮ್ಮಿಂದ ಹೊರಹೋಗಿರಬೇಕು ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಕಳೆದ ಹದಿನೈದು ದಿನಗಳಲ್ಲಿ ನೀವು ಆನಂದಿಸಿರುವುದರಲ್ಲಿ ಈ ದಿನವು ಅತ್ಯಂತ ಉತ್ಕೃಷ್ಟ ದಿನವಾಗಿ ಅಂತ್ಯಗೊಳ್ಳಲಿದೆ. ನೀವು ಖುಷಿಯಾಗಿರುತ್ತೀರಿ, ಉತ್ಸಾಹದಿಂದಿರುತ್ತೀರಿ ಮತ್ತು ಹೊರಗೆ ಹೋಗಿ ಜನರೊಂದಿಗೆ ಬೆರೆಯಲು ಬಯಸುತ್ತೀರಿ. ಈ ಎಲ್ಲಾ ಚೈತನ್ಯ, ಸಕಾರಾತ್ಮಕ ಭಾವನೆ ಹಾಗೂ ಅದೃಷ್ಟದ ಗೃಹಗತಿಯು ಪ್ರಯಾಣ ಅಥವಾ ಕುಟುಂಬದೊಂದಿಗೆ ಸಣ್ಣ ಸಂತೋಷ ವಿಹಾರವನ್ನು ತೆರಳಲು ಯೋಜನೆ ರೂಪಿಸಲು ಪ್ರೇರೇಪಿಸುತ್ತದೆ. ನಿಮ್ಮ ಪ್ರೀತಿಯ ಒಡಹುಟ್ಟಿದವರೊಂದಿಗೆ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ನೀವು ದಿನವನ್ನು ಆನಂದಿಸುವಿರಿ ಮತ್ತು ಉತ್ತಮ ಆರೋಗ್ಯದೊಂದಿಗೆ ಸಂಭ್ರಮದಿಂದ ದಿನ ಕಳೆಯುವಿರಿ.ಒಡಹುಟ್ಟಿದವರು ಅಥವಾ ಆತ್ಮೀಯ ಸ್ನೇಹಿತರು ವಿದೇಶದಿಂದ ಆಗಮಿಸುವುದನ್ನು ನೀವು ನಿರೀಕ್ಷಿಸಬಹುದು. ಮಜಾ ಮಾಡಿ.

ಮೀನ :-

ಇಂದು ನೀವು ಏನೇ ಮಾತನಾಡುವ ಮುನ್ನ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ.ನಿಮ್ಮ ಕಾರ್ಯದಲ್ಲಿನ ವಿಫಲತೆಯು ನಿಮ್ಮ ವಾತಾವರಣವನ್ನು ಪ್ರತಿಕೂಲವಾಗಿಸಲಿದೆ. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಸರಿಯಾಗಿ ನೀವು ಪರೀಕ್ಷಿಸಿಕೊಳ್ಳುವ ಅಗತ್ಯವಿದೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಅತ್ಯಂತ ಎಚ್ಚರಿಕೆವಹಿಸಿ. ನೀವು ಇಂದು ಹೆಚ್ಚು ಆಯಾಸಗೊಳ್ಳಬಹುದು. ಸಂಬಂಧಿಕರ ನಡುವಿನ ಅನಗತ್ಯ ಘಟನೆಗಳು ನಿಮ್ಮ ಮತ್ತು ಅವರ ನಡುವೆ ಋಣಾತ್ಮಕ ಸಂವೇದನೆ ಉಂಟುಮಾಡಬಹುದು. ಮಿತಿಮೀರಿದ ಆಹಾರ ಸೇವನೆಯನ್ನು ತಪ್ಪಿಸಿ.

WhatsApp Group Join Now

Spread the love

Leave a Reply