Horoscope Today : 20 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ನಿಮ್ಮ ನಿರ್ಧಾರ ಕೈಗೊಳ್ಳುವ ಕೌಶಲ್ಯವು ಸವಾಲಾಗಿ ಪರಿಣಮಿಸುತ್ತದೆ ಮತ್ತು ದೃಢ ನಿಲುವನ್ನು ತಾಳಲು ನಿಮಗೆ ಅನುವು ಮಾಡಿಕೊಡುವುದಿಲ್ಲ. ವಿವಿಧ ಮಾರ್ಗಗಳಿಗೆ ನಿಮ್ಮ ಮನಸ್ಸು ಎಳೆಯಲ್ಪಡುವುದರಿಂದ ನೀವು ಚಂಚಲತೆಯಿಂದ ಕೂಡಿರುತ್ತೀರಿ. ಇದು ನಿಮಗೆ ಅಥವಾ ಯಾರಿಗೇ ಆದರೂ ಉತ್ತಮ ವಿಚಾರವಲ್ಲ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ.

ಇತರರು ನಿಮ್ಮ ಜೀವನದಲ್ಲಿ ಈಗಲೂ ನಿರ್ಣಾಯಕ ಪಾತ್ರ ವಹಿಸುತ್ತಾರೆ, ಆದರೆ ಸದ್ಯಕ್ಕೆ ಅಷ್ಟು ಧನಾತ್ಮಕವಾಗಿ ಅಲ್ಲ. ನಿಮ್ಮ ನಿಸ್ವಾರ್ಥವನ್ನು ಪ್ರದರ್ಶಿಸಲು ಇದು ಸಮಯವಲ್ಲ. ನಿಮ್ಮ ವ್ಯವಹಾರಗಳಿಗೆ ಸಂಬಂಧಿಸದ ವಿಚಾರಗಳಲ್ಲಿ ಮಧ್ಯಪ್ರವೇಶಿಸುವುದರಿಂದ ಇದು ಸಂಭಾವ್ಯ ತೊಂದರೆಯನ್ನು ಉಂಟುಮಾಡುತ್ತದೆ. ಸಾಮಾನ್ಯ ಕಾಯಿಲೆಯಿಂದ ನೀವು ಇನ್ನೂ ಸಂಪೂರ್ಣವಾಗಿ ಚೇತರಿಕೆ ಕಾಣಲಾರಿರಿ. ವಿಶ್ರಾಂತರಾಗಿರಿ. ಮನೆಯಲ್ಲೇ ಇರಿ. ನಿಮ್ಮ ಸಂಗಾತಿಯೊಂದಿಗೆ ಸಂವಾದ ನಡೆಸಿ. ಸಾಕುಪ್ರಾಣಿಗಳೊಂದಿಗೆ ಆಟವಾಡಿ. ಆಧ್ಯಾತ್ಮವು ನಿಮಗೆ ಶಾಂತಿಯನ್ನು ನೀಡುತ್ತದೆ. ಎಚ್ಚರಿಕೆಯಿಂದ ಬಂಡವಾಳ ಹೂಡಿ. ಕೊಡುಕೊಳ್ಳುವಿಕೆಯ ವ್ಯವಹಾರ ಬೇಡ.

ವೃಷಭ :-

ಗ್ರಹಗತಿಗಳು ನಿಮ್ಮನ್ನು ಪ್ರಶಂಸಿಸಲು ಸಿದ್ಧವಾಗಿವೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಗ್ರಹಗತಿಗಳು ಇಂದು ನಿಮಗಾಗಿ ದಯಪಾಲಿಸುವ ಸಂತೋಷವನ್ನು ಆನಂದಿಸಿ ಮತ್ತು ಹಂಚಿಕೊಳ್ಳಿ. ಲಕ್ಷ್ಮೀದೇವಿಯು ಹಣಕಾಸಿನಲ್ಲಿ ಯಶಸ್ಸು, ಮತ್ತು ವ್ಯವಹಾರ ಹಾಗೂ ವೃತ್ತಿಯಲ್ಲಿ ಆರ್ಥಿಕ ಲಾಭವನ್ನು ಅನುಗ್ರಹಿಸುತ್ತಾಳೆ. ಸಂಜೆಯ ವೇಳೆ ನೀವು ನಿಮ್ಮ ಪ್ರೀತಿಪಾತ್ರರು ಮತ್ತು ಕುಟುಂಬ ಸದಸ್ಯರೊಂದಿಗೆ ಖುಷಿ ಹಾಗೂ ಸಡಗರವನ್ನು ಹಂಚಿಕೊಳ್ಳುವಿರಿ. ಬಹುಶಃ ನಿಮ್ಮ ಸಂಗಾತಿಗೆ ಖುಷಿಭರಿತ ಅಚ್ಚರಿಯನ್ನು ನೀಡಲು ಮುಂಚಿತವಾಗಿಯೇ ಸಿನಿಮಾ ಟಿಕೆಟ್ ಖರೀದಿಸುವುದು ಉತ್ತಮ ಆಲೋಚನೆ. ಹೊಸ ಪರಿಚಯಗಳು ಆಕರ್ಷಕವಾಗಿರುತ್ತದೆ. ನಿಮಗೆ ಗೊತ್ತಿಲ್ಲದೆ, ಭವಷ್ಯದ ಉದ್ಯಮ ಪಾಲುದಾರರನ್ನು ನೀವು ಕಂಡುಕೊಳ್ಳಬಹುದು. ನಗರದ ಹೊರವಲಯಗಳಿಗೆ ಸಣ್ಣ ಪ್ರಯಾಣ ಮತ್ತು ಪ್ರವಾಸವು ಖುಷಿಯನ್ನು ತರುತ್ತದೆ.

ಮಿಥುನ :-

ಸದೃಢ ದೈಹಿಕ ಆರೋಗ್ಯ ಮತ್ತು ಶಾಂತ ಮಾನಸಿಕ ಸ್ಥಿತಿಯು ನಿಮ್ಮನ್ನು ದಿನಪೂರ್ತಿ ಹರ್ಷ ಹಾಗೂ ಖುಷಿಯಲ್ಲಿರಿಸುತ್ತದೆ. ಕಚೇರಿಯಲ್ಲಿ ನೀವು ಪ್ರಶಂಸೆಯನ್ನು ಪಡೆಯುವ ಅಥವಾ ನಿಮ್ಮ ಸ್ಥಾನದಲ್ಲಿ ವೃದ್ಧಿಯನ್ನು ಪಡೆಯುವ ಸಾದ್ಯತೆಯಿರುವುದರಿಂದ ಕಾರ್ಯಕ್ಷೇತ್ರದಲ್ಲಿ ನೀವು ಸಂತೋಷದಲ್ಲಿರುತ್ತೀರಿ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಮೊದಲೇ ಪ್ರಾರಂಭಿಸಿದ ಯೋಜನೆಗಳು ಫಲಪ್ರದವಾಗಲಿದೆ ಮತ್ತು ನೀವು ಲಾಭ, ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಒಂದೇ ಬಾರಿ ಪಡೆಯುತ್ತೀರಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ವರಿಷ್ಠರೊಂದಿಗೆ ಉತ್ತಮ ವಾತಾವರಣವನ್ನು ಹಂಚಿಕೊಳ್ಳುತ್ತೀರಿ ಮತ್ತು ಇದು ನಿಮ್ಮ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಸಹೋದ್ಯೋಗಿಗಳೊಂದಿಗಿನ ಪ್ರಣಯ ಸಂಬಂಧವು ಅಸಹಜವಾದುದಲ್ಲ. ಮುಂದಕ್ಕೆ ಸಾಗಿ, ಎಲ್ಲವನ್ನೂ ಪಡೆದುಕೊಳ್ಳಿ. ಅಧಿಕಾರಿ ಅಥವಾ ಸರಕಾರಿ ಸಂಬಂಧಿತ ಕಾರ್ಯಗಳು ಫಲಪ್ರದವಾಗಿರುತ್ತದೆ.

ಕರ್ಕಾಟಕ :-

ಇಂದು ಮಹಿಳಾ ಅದೃಷ್ಟವು ನಿಮ್ಮ ಕಡೆಗಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ವಿದೇಶಿ ನೆಲದಿಂದ ಸುದ್ದಿಯನ್ನು ನಿರೀಕ್ಷಿಸಬಹುದು. ಸಣ್ಣ ಪ್ರವಾಸ ಅಥವಾ ಯಾತ್ರೆಗೆ ಯೋಜನೆ ರೂಪಿಸಬಹುದು. ಇದು ನಿಮ್ಮನ್ನು ಉಲ್ಲಾಸಗೊಳಿಸುತ್ತದೆ. ದಿನವಿಡೀ ನೀವು ಮಾನಸಿಕವಾಗಿ ಆರಾಮದಾಯಕ ಹಾಗೂ ದೈಹಿಕವಾಗಿ ಆರೋಗ್ಯದಿಂದಿರುತ್ತೀರಿ. ನಿಮ್ಮ ಸ್ನೇಹಿತರ ಮತ್ತು ಪ್ರೀತಿಪಾತ್ರರ ಸಾಂಗತ್ಯದೊಂದಿಗೆ ನಿಮ್ಮ ದಿನವನ್ನು ಅತ್ಯಂತ ಖುಷಿಯಿಂದ ಕಳೆಯುತ್ತೀರಿ. ವೃತ್ತಿ ಮತ್ತು ಆಕಸ್ಮಿಕ ಲಾಭಗಳು ಉಂಟಾಗಲಿದೆ. ವಿದೇಶಕ್ಕೆ ತೆರಳುವ ಅಥವಾ ಯಾತ್ರಾಸ್ಥಳಕ್ಕೆ ತೆರಳುವ ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ.

ಸಿಂಹ :-

ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯವಿದೆ. ವೈದ್ಯಕೀಯ ವೆಚ್ಚಗಳುಂಟಾಗುವ ಸಾಧ್ಯತೆಯಿದೆ. ಇಂದು ಹೊರಗೆ ಹೋಗಿ ತಿನ್ನುವುದನ್ನು ನೀವು ತಪ್ಪಿಸಿ. ಕೆಲವು ಋಣಾತ್ಮಕ ಆಲೋಚನೆಗಳು ದಿನವಿಡೀ ನಿಮಗೆ ತೊಂದರೆ ನೀಡಲಿವೆ. ಅವುಗಳಿಂದ ದೂರವಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಧ್ಯಾನ ಮತ್ತು ಆಧ್ಯಾತ್ಮವು ನಿಮ್ಮ ಸಮಸ್ಯೆಗಳಿಂದ ಹೊರಬರಲು ಸಹಾಯಕವಾಗಲಿದೆ ಮತ್ತು ಮಾನಸಿಕವಾಗಿ ನಿಮ್ಮನ್ನು ಆರಾಮದಾಯಕವಾಗಿರಿಸುತ್ತದೆ.

ಕನ್ಯಾ :-

ಈ ದಿನವು ನಿಮಗೆ ಅತ್ಯಂತ ಶುಭದಿನವಾಗಿರುವ ಸಂಭವವಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಹೆಸರು ಮತ್ತು ಖ್ಯಾತಿಯನ್ನು ಸುಲಭವಾಗಿ ಗಳಿಸಬಹುದು. ಇಂದು ಉದ್ಯಮಿಗಳು ಮತ್ತು ಉದ್ಯಮ ಪಾಲುದಾರರ ನಡುವೆ ಸಾಕಷ್ಟು ಸಕಾರಾತ್ಮಕ ಮನೋಭಾವವಿರುತ್ತದೆ. ಹೊಸ ಬಟ್ಟೆಗಳ ಖರೀದಿಯು ನಿಮ್ಮನ್ನು ಖುಷಿಯಲ್ಲಿರಿಸುತ್ತದೆ. ಸ್ನೇಹಿತರೊಂದಿಗೆ ಹರ್ಷದ ಪ್ರವಾಸ ತೆರಳಲಿದ್ದೀರಿ.

ತುಲಾ :-

ಇಂದು ದೈಹಿಕವಾಗಿ ನೀವು ಆರೋಗ್ಯದಿಂದಿರುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ವೃತ್ತಿ ಕ್ಷೇತ್ರದಲ್ಲೂ ನಿಮಗೆ ಪ್ರಯೋಜನ ಉಂಟಾಗಲಿದೆ. ನಿಮ್ಮ ಸಹೋದ್ಯೋಗಿಗಳು ಉತ್ತಮ ರೀತಿಯಲ್ಲಿ ಸಹಕರಿಸುತ್ತಾರೆ. ವೈಯಕ್ತಿಕ ನೆಲೆಯಲ್ಲಿ, ಇಂದು ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಉಲ್ಲಾಸದಿಂದ ನಿಮ್ಮ ದಿನವು ಕಳೆಯುವ ಸಂಭವವಿದೆ. ಜೊತೆಗೆ, ನೀವು ನಿಮ್ಮ ನಾಲಗೆಯ ಮೇಲೆ ಹತೋಟಿಯನ್ನಿಡುವುದು ಅತಿ ಮುಖ್ಯವಾಗಿದೆ. ಮಿತಿಮೀರಿದ ಖರ್ಚನ್ನು ತಪ್ಪಿಸಿ. ಇಂದು ನೀವು ಎಲ್ಲಾ ಕಾರ್ಯಗಳಲ್ಲೂ ಯಶಸ್ಸನ್ನು ಕಾಣುವಿರಿ ಮತ್ತು ಇದು ನಿಮಗೆ ಹೆಸರು ಮತ್ತು ಖ್ಯಾತಿಯನ್ನು ತರುತ್ತದೆ.

ವೃಶ್ಚಿಕ :-

ಇಂದು ಗೃಹಕ್ಷೇತ್ರದಲ್ಲಿ ಶಾಂತಿಯ ವಾತಾವರಣವು ಮನೆಮಾಡಿರುತ್ತದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಇಂದು ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯ ಮತ್ತು ಉತ್ಸಾಹದಿಂದಿರುತ್ತೀರಿ. ಆನಾರೋಗ್ಯದಿಂದ ಬಳಲುತ್ತಿರವವರು ಇದು ಉಲ್ಲಾಸದಿಂದಿರುವ ಸಮಯ. ಆರೋಗ್ಯದಲ್ಲಿ ಗುರುತರ ಅಭಿವೃದ್ಧಿಯು ಖಂಡಿತವಾಗಿಯೂ ಸಾಧ್ಯವಿದೆ. ಇಂದು ನೀವು ನಿಮ್ಮ ಸಹೋದ್ಯೋಗಿಗಳಿಂದ ಸಹಕಾರ ಮತ್ತು ಬೆಂಬಲವನ್ನು ಪಡೆಯುತ್ತಿರಿ ಮತ್ತು ಹೌದು ನೀವು ನಿಮ್ಮ ಪ್ರತಿಸ್ಪರ್ಧಿಗಳನ್ನು ಸೋಲಿಸಲು ಶಕ್ತರಾಗುತ್ತೀರಿ. ಹಳೆಯ ಸ್ನೇಹಿತೆಯೊಬ್ಬರನ್ನು ಇಂದು ನೀವು ಭೇಟಿ ಮಾಡಬಹುದು. ತಾಯಿಯ ಕಡೆಯಿಂದ ಶುಭಸುದ್ದಿ ಬರುವ ಸಂಭವವಿದೆ. ಅಪೂರ್ಣಗೊಂಡಿರುವ ಕಾರ್ಯಗಳು ಇಂದು ಪೂರ್ಣಗೊಳ್ಳಲಿವೆ. ಒಂದೇ ದಿನ ಹಣಕಾಸು ಲಾಭ ಮತ್ತು ಕಡಿಮೆ ಖರ್ಚು ಸಂಭವಿಸಿದರೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು.

ಧನು :-

ನಿಮ್ಮ ಪ್ರಯಾಣದ ಯೋಜನೆಗಳನ್ನು ತಡೆಹಿಡಿಯುವಂತೆ ಗಣೇಶ ಸಲಹೆ ನೀಡುತ್ತಾರೆ. ಅಜೀರ್ಣ ಸಮಸ್ಯೆಗಳು ನಿಮ್ಮನ್ನು ತೊಂದರೆಗೀಡುಮಾಡುವ ಸಾಧ್ಯತೆಯಿದೆ. ನಿಮ್ಮ ಮಕ್ಕಳ ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿ ವಿಚಾರಗಳು ನಿಮ್ಮ ಮನಸ್ಸಲ್ಲಿ ತುಂಬಿರುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸುವಂತೆ ಮತ್ತು ಬೌದ್ಧಿಕ ಚರ್ಚೆಗಳಲ್ಲಿ ಎಚ್ಚರಿಕೆಯಿಂದಿರುವಂತೆ ಗಣೇಶ ಸಲಹೆ ನೀಡುತ್ತಾರೆ. ಏನೇ ಆದರೂ, ಸಾಹಿತ್ಯ ಮತ್ತು ಕಲೆಯನ್ನು ಅಭಿವೃದ್ಧಿಪಡಿಸುವತ್ತ ನೀವು ಒಲವು ತೋರಬಹುದು. ಮತ್ತು ನಿಮ್ಮ ಆತ್ಮೀಯರೊಂದಿಗೆ ನಿಮ್ಮ ಉತ್ತಮ ಸಮಯವನ್ನು ಕಳೆಬಹುದು. ಆನಂದಿಸಿ.

ಮಕರ :-

ನಿಮ್ಮ ಎಂದಿನ ಉತ್ಸಾಹ ಮತ್ತು ಚೈತನ್ಯವನ್ನು ಕಳೆದುಕೊಳ್ಳುವುದರ ಜೊತೆಗೆ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಉತ್ತಮವಾಗಿರುವುದಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ಮನೆಯಲ್ಲಿನ ಸಂಘರ್ಷವು ಇದಕ್ಕೆ ಕಾರಣವಾಗಿರಬಹುದು.ಅಥವಾ ನೀವು ಸ್ವಲ್ಪ ಅಸ್ವಸ್ಥರಾಗಿರುವಂತೆ ಕಂಡುಬರಬಹುದು. ಎದೆ ನೋವು ಅಥವಾ ನಿದ್ರಾಹೀನತೆಯ ಅನುಭವವಾಗುತ್ತದೆ. ಅಥವಾ ನಿಮ್ಮ ಸಾಮಾಜಿಕ ನಿಲುವು ಅಥವಾ ಗೌರವಕ್ಕೆ ತೊಂದರೆ ತರುವು ಯಾವುದೇ ಪರಿಸ್ಥಿತಿ ಉಂಟಾಗಿರಬಹುದು. ಜಲಾವೃತ ಪ್ರದೇಶಗಳಿಂದ ಮತ್ತು ಋಣಾತ್ಮಕ ಮಹಿಳಾ ಪ್ರಭಾವದಿಂದ ದೂರವಿರಿ. ದಿನದಾಂತ್ಯದಲ್ಲಿ ಉತ್ತಮ ನಿದ್ರೆಯನ್ನು ಪಡೆಯಲು ಧ್ಯಾನ ಮಾಡಿ.

ಕುಂಭ :-

ದಿನದ ಪ್ರಾರಂಭವು ಖುಷಿಯಿಂದ ತುಂಬಿರುತ್ತದೆ ಮತ್ತು ನೀವು ಉಲ್ಲಾಸದಿಂದಿರುತ್ತೀರಿ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಇಂದು ನೀವು ಚಿಂತೆಯಿಂದ ದೂರವಿರುವುದರಿಂದ ಇಂದು ನೀವು ಹರ್ಷ ಮತ್ತು ನಿರುತ್ಸಾಹದಿಂದ ದೂರವಿರುತ್ತೀರಿ. ಸ್ನೇಹಿತರೊಂದಿಗೆ ಖುಷಿ ವಿನಿಮಯ, ಒಡಹುಟ್ಟಿದವರೊಂದಿಗೆ ಉತ್ತಮ ಸಮಯ ಕಳೆಯುವಿಕೆ ಇವೆಲ್ಲವೂ ಇಂದು ನಿಮ್ಮ ‘ಮಾಡಬೇಕಾದ ವಿಷಯಗಳ’ ಪಟ್ಟಿಯಲ್ಲಿರುತ್ತದೆ. ಆನಂದದಾಯಕ ಸಣ್ಣಪ್ರವಾಸವನ್ನು ಇಂದು ನೀವು ಕೈಗೊಳ್ಳಬಹುದು. ನಿಮ್ಮ ಸ್ಪರ್ಧಿಗಳನ್ನು ಸೋಲಿಸಿ ಯಶಸ್ಸನ್ನು ಪಡೆಯುವುದರಿಂದ ಅದೃಷ್ಟವು ನಿಮ್ಮಲ್ಲಿ ಕಂಗೊಳಿಸುತ್ತಿರುತ್ತದೆ.

ಮೀನ :-

ಇಂದು ನಿಮ್ಮ ಯೋಗದಲ್ಲಿ ಖರ್ಚಿನ ಚಿತ್ರಣವಿರುವುದರಿಂದ ಅಗತ್ಯವಾದ ವಿಚಾರಗಳಿಗೆ ಮಾತ್ರವೇ ಪ್ರಾಮುಖ್ಯತೆ ನೀಡಿ ನಿಮ್ಮ ಹಣಕಾಸು ವಿವರಗಳನ್ನು ಸುಸ್ಥಿತಿಯಲ್ಲಿಡುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಸರಿಯಾದ ಸಮಯದಲ್ಲಿ ಮಾತು ಮತ್ತು ನಿಮ್ಮ ಕೋಪವನ್ನು ನಿಯಂತ್ರಿಸದಿದ್ದಲ್ಲಿ ನೀವು ಸಂಘರ್ಷಕ್ಕೆ ಒಳಗಾಗುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಹಣ ಕೊಡುಕೊಳ್ಳುವಿಕೆಯ ವ್ಯವಹಾರದಲ್ಲಿ ತೊಡಗುವ ವೇಳೆ ಎಚ್ಚರದಿಂದಿರಿ. ಅರ್ಥರಹಿತ ಆಲೋಚನೆಗಳಿಂದ ಮತ್ತು ಕುಟುಂಬ ಸದಸ್ಯರೊಂದಿಗಿನ ವಾಗ್ವಾದಗಳಿಂದ ದೂರವಿರಿ ಇದು ನಿಮ್ಮ ಸಾಮಾನ್ಯ ದಿನದ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತದೆ.

WhatsApp Group Join Now

Spread the love

Leave a Reply