ಮೇಷ :-
ಕನಿಷ್ಟ ಈ ದಿನವಾದರೂ ನಿಮ್ಮ ದುರಾಕ್ರಮಣ ಪ್ರವೃತ್ತಿಯನ್ನು ನಿಯಂತ್ರಣದಲ್ಲಿಡುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಸ್ವಲ್ಪ ಅಸ್ವಸ್ಥರಾಗಿರುವಂತೆ ಅನಿಸಬಹುದು. ನಿಮ್ಮ ಪ್ರಯತ್ನಗಳಿಗೆ ನಿರೀಕ್ಷಿತ ಫಲ ದೊರೆಯುವುದಿಲ್ಲ.
ಮಕ್ಕಳಿಗೆ ಸಂಬಂಧಿಸಿ ಉದ್ವೇಗಗಳು ಉಂಟಾಗಬಹುದು. ವೃತ್ತಿಯಲ್ಲಿನ ತಲ್ಲೀನತೆಯಿಂದಾಗಿ ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಅಹಿತಕರ ಆಲೋಚನೆಗಳನ್ನು ಮತ್ತು ವರ್ತನೆಗಳನ್ನು ದೂರವಿರಿಸಬೇಕು. ಅನಗತ್ಯ ಜವಾಬ್ಧಾರಿಗಳನ್ನು ಪಡೆದುಕೊಳ್ಳಬೇಡಿ. ಉದರ ಸಂಬಂಧ ಕಾಯಿಲೆ ಉಂಟಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸಾಧ್ಯವಿದ್ದರೆ ನಿಮ್ಮ ಪ್ರಯಾಣ ಯೋಜನೆಗಳನ್ನು ಮುಂದೂಡಿ. ಕಚೇರಿ ಸಂಬಂಧಿ ವಿಚಾರಗಳು ಲಾಭದಾಯಕವಾಗಿರುತ್ತದೆ.
ವೃಷಭ :-
ಇಂದು ನೀವು ಸಂಪೂರ್ಣ ಉತ್ಸಾಹ, ಮನೋನಿಶ್ಚಯ ಹಾಗೂ ಆತ್ಮವಿಶ್ವಾಸದಿಂದಿರುತ್ತೀರಿ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ನಿಮ್ಮ ಪ್ರಯತ್ನಗಳ ಫಲಿತಾಂಶವು ನಿಮ್ಮ ಭರವಸೆಗಳನ್ನು ಈಡೇರಿಸಲಿವೆ. ಮನೆಯಿಂದ ಸಹಾಯ ಮತ್ತು ಲಾಭ ದೊರೆಯುವುದು ಖಂಡಿತವಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಪಾಠವು ಸುಲಭ ಮತ್ತು ಖುಷಿ ತರುವಂತಿರುತ್ತದೆ. ಕಚೇರಿ ಸಹಾಯ, ಹಣಕಾಸು ವ್ಯವಹಾರಗಳಲ್ಲಿ ಲಾಭವು ಹೆಚ್ಚಿನಂಶ ದೊರೆಯಲಿದೆ. ಮಕ್ಕಳಿದೆ ಸಂಬಂಧಿಸಿ ಖರ್ಚು ಉಂಟಾಗುವ ಸಾಧ್ಯತೆಯಿದೆ. ಅವರಿಗೆ ಅನುಕೂಲವಾಗುವಂತೆ ಬಂಡವಾಳ ಹೂಡುವ ಸಾಧ್ಯತೆಯಿದೆ. ಕಲಾವಿದರು ಮತ್ತು ಕ್ರೀಡಾಳುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಶಕ್ತರಾಗಿರಬೇಕು..
ಮಿಥುನ :-
ಇಂದು ಕೈಗೆತ್ತಿಕೊಂಡ ಕಾರ್ಯಗಳು ಮತ್ತು ಯೋಜನೆಗಳು ಯಶಸ್ವಿಯಾಗಲಿವೆ ಎಂಬುದಾಗಿ ಗಣೇಶ ಹೇಳುತ್ತಾರೆ. ಕಚೇರಿಯಿಂದ ಸಹಾಯ ದೊರೆಯುವ ಸಾಧ್ಯತೆಗಳು ಬಲವಾಗಿವೆ. ವೃತ್ತಿನಿರತರು ಮತ್ತು ಉದ್ಯಮಿಗಳು ತಮ್ಮ ಮೇಲಾಧಿಕಾರಿಗಳಿಂದ ಸಾಕಷ್ಟು ಪ್ರೋತ್ಸಾಹ ಮತ್ತು ಬೆಂಬಲವನ್ನು ನಿರೀಕ್ಷಿಸಬಹುದು. ಸಣ್ಣ ಪ್ರವಾಸ ಕೈಗೊಳ್ಳಬಹುದು. ಸ್ನೇಹಿತರು, ಪ್ರೀತಿಪಾತ್ರರು ಅಥವಾ ನೆರೆಯವರೊಂದಿಗಿನ ಜಗಳಗಳು ನಿಮಗೆ ಬೇಕಾದ ರೀತಿಯಲ್ಲೇ ಕಾರ್ಯನಿರ್ವಹಿಸಲಿವೆ. ನಿಮ್ಮ ಮನೋಭಾವ ಮತ್ತು ಆಲೋಚನೆಗಳು ಸತತ ಬದಲಾವಣೆಯ ಸ್ಥಿತಿಯಲ್ಲಿರುವ ಸಾಧ್ಯತೆಯಿದೆ. ಶತ್ರುಗಳು ಮತ್ತು ಕೆಡುಕನ್ನುಂಟುಮಾಡುವವರು ತಗ್ಗಿ ನಡೆಯಬಹುದು. ಆರ್ಥಿಕ ವಿಚಾರದಲ್ಲಿ ಉಂಟಾಗಬಹುದಾದ ಏರುಪೇರಿಗೆ ತಯಾರಾಗಿರಿ.
ಕರ್ಕಾಟಕ :-
ನಿಮ್ಮ ನಿರಾಶಾ ಮನೋಭಾವವು ನಿಮ್ಮಲ್ಲಿನ ಒಳ್ಳೆಯತನವನ್ನು ತೆಗೆದುಹಾಕಲು ಅನುವುಮಾಡಿಕೊಡಬೇಡಿ ಎಂಬುದಾಗಿ ಗಣೇಶ ಒತ್ತಾಯಿಸುತ್ತಾರೆ. ನಿಮ್ಮ ದೈಹಿಕ ಮತ್ತು ಮಾನಸಿಕ ನಿಶ್ಯಕ್ತಿ, ತೊಂದರೆಗಳು ಮತ್ತು ಹತಾಶೆಗಳನ್ನು ಮೆಟ್ಟಿನಿಲ್ಲಲು ಸಿದ್ಧರಾಗಿರಿ. ಕಣ್ಣಿನ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಮನೆಯ ವಾತಾವರಣವು ನೀರಸ ಮತ್ತು ನಿರುತ್ಸಾಹದಿಂದಿರುತ್ತದೆ. ಮನಸ್ತಾಪ ಮತ್ತು ಸಂದೇಹಗಳಿಗೆ ಆಸ್ಪದ ನೀಡಬೇಡಿ.ವಿದ್ಯಾರ್ಥಿಗಳು ತಾವು ಮಾಡಿರುವ ಕಠಿಣ ಪರಿಶ್ರಮಕ್ಕೆ ತಕ್ಕುದಾದ ಪ್ರತಿಫಲವನ್ನು ಪಡೆಯಲಾರರು. ಅನೈತಿಕ ಮತ್ತು ಅದೈವಿಕ ಆಲೋಚನೆಗಳಿಂದ ದೂರವಿರಿ. ಖರ್ಚು ಮಿತಿಮೀರುವ ಸಾಧ್ಯತೆಯಿದೆ.
ಸಿಂಹ :-
ಉತ್ಸಾಹ ಮತ್ತು ಆತ್ಮವಿಶ್ವಾಸವು ಇಂದು ನಿಮ್ಮಲ್ಲಿ ಉಕ್ಕಿಹರಿಯುತ್ತದೆ. ಆದ್ದರಿಂದ ನೀವು ತ್ವರಿತ ಮತ್ತು ಖಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ತರಾಗುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ತಂದೆ ಹಾಗೂ ಕುಟುಂಬದ ಹಿರಿಯರಿಂದ ಸಹಾಯ ಹಾಗೂ ಲಾಭಗಳು ಸಿಗುವ ಸಾಧ್ಯತೆ ದಟ್ಟವಾಗಿದೆ. ನಿಮ್ಮ ವರ್ಛಸ್ಸು ವೃದ್ಧಿಯಾಗುವ ಸಾಧ್ಯತೆಯಿದೆ. ನೀವು ಇಂದು ಜಂಭ ಹಾಗೂ ಅಸಹನೆಯಿಂದ ಇರುವ ಸಂಭವವಿದೆ. ನಿಮ್ಮ ದುರಾಕ್ರಮಣ ಪ್ರವೃತ್ತಿಯನ್ನು ನಿಯಂತ್ರಿಸಿ. ಶಾಂತರಾಗಿರಿ ಮತ್ತು ನಿಮ್ಮ ಮಾತು ಹಾಗೂ ವರ್ತನೆಯಲ್ಲಿ ಸಭ್ಯತೆಯಿರಲಿ. ನಿಮ್ಮ ಆರೋಗ್ಯದ ವಿಚಾರದಲ್ಲಿ ರಾಜಿಮಾಡಿಕೊಳ್ಳಬೇಡಿ.
ಕನ್ಯಾ :-
ಆತ್ಮ ಹಾಗೂ ಅಹಂ ನಡುವೆ ಸಂಘರ್ಷ ಉಂಟಾಗಲಿದೆ. ಏನೇ ಆದರೂ, ಅದನ್ನು ತಪ್ಪಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.ನೀವು ಕಡಿಮೆ ಚೈತನ್ಯ ಹಾಗೂ ಉತ್ಸಾಹವನ್ನು ಹೊಂದಿರುವ ಸಾಧ್ಯತೆಯಿದೆ. ಇದು ಅತೀ ಉದ್ವೇಗಕ್ಕೆ ಕಾರಣವಾಗಲು ಬಿಡಬೇಡಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಜಗಳ ಹಾಗೂ ವಾಗ್ವಾದ ನಡೆಸುವ ಸಾಧ್ಯತೆಗಳು ದಟ್ಟವಾಗಿದೆ. ನೀವು ಇಂದು ತೀವ್ರ ಒತ್ತಾಯ ಹಾಗೂ ಅಸಹನೆಯಿಂದ ಕೂಡಿರಬಹುದು. ಧಾರ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಖರ್ಚುವೆಚ್ಚಗಳನ್ನು ತಪ್ಪಿಸಲು ಸಾಧ್ಯವಿಲ್ಲ. ವಿಶೇಷವಾಗಿ ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಅನಿರೀಕ್ಷಿತ ಖರ್ಚುವೆಚ್ಚ ಉಂಟಾಗಲಿದೆ. ಸಾಧ್ಯವಿದ್ದಷ್ಟು ಜಗಳ ಹಾಗೂ ಸಂಘರ್ಷದಿಂದ ದೂರವಿರಿ.
ತುಲಾ :-
ಅದೃಷ್ಟ ತುಲಾ ರಾಶಿಗೆ ಒಳ್ಳೆಯ ಸಮಯಗಳು ಮುಂದುವರಿಯಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿನ್ನೆಯ ಅದ್ಭುತ ತಾರಾಬಲ ಹೊಂದಾಣಿಕೆಯಿಂದ ನೀವು ಗೆಲುವಿನಿಂದಿರುವಿರಿ. ನೀವು ಈಗಾಗಲೇ ಸ್ನೇಹಿತರೊಂದಿಗಿನ, ನಿಮ್ಮ ಕುಟುಂಬದವರೊಂದಿಗಿನ ಅಥವಾ ನಿಮ್ಮ ಇನಿಯನೊಂದಿಗಿನ ಪ್ರಯಾಣವನ್ನು ಆನಂದಿಸುತ್ತಿರಬಹುದು. ಇಲ್ಲದಿದ್ದಲ್ಲಿ, ಸದ್ಯದಲ್ಲಿಯೇ ನಿಮ್ಮ ಜೀವನದ ಪ್ರಯಾಣವನ್ನು ಪ್ರಾರಂಭಿಸುವಿರಿ. ವಿವಿಧ ಕಡೆಗಳಿಂದ ಲಾಭವು ಹರಿದುಬರಲಿದೆ ಮತ್ತು ನಿಮ್ಮ ಹಣಕಾಸು ಸ್ಥಿತಿಯಲ್ಲಿ ಅಭಿವೃದ್ಧಿ ಉಂಟಾಗಲಿದೆ. ಗೆಳೆತನವು ಅನ್ಯೋನ್ಯವಾಗಿರುತ್ತದೆ ಮತ್ತು ಅನುಕೂಲಕರವಾಗಿರುತ್ತದೆ ಮತ್ತು ಸ್ನೇಹಿತರಿಗಾಗಿ ವೆಚ್ಚಮಾಡಲು ನೀವು ಹಿಂಜರಿಯುವುದಿಲ್ಲ. ಸ್ನೇಹಿತೆಯರೊಂದಿಗಿನ ಸಂಬಂಧವು ಇನ್ನೂ ಉತ್ತಮ ರೀತಿಯಲ್ಲಿರುತ್ತದೆ. ಅವರಿಂದ ನಿಮಗೆ ಪ್ರಯೋಜನ ಉಂಟಾಗಬಹುದು. ವಿವಾಹ ಸಂಬಂಧ ಅನ್ವೇಷಣೆಯಲ್ಲಿ ತೊಡಗಿರುವವರಿಗೆ ಉತ್ಕೃಷ್ಟ ಸಮಯ. ನೀವು ‘ಒಬ್ಬರನ್ನು’ ಈಗ ಯಾವುದೇ ಸಮಯದಲ್ಲೂ ಭೇಟಿ ಮಾಡಬಹುದು. ಖಾದ್ಯ ಪ್ರಿಯರಿಗೆ ಉತ್ತಮ ಸಮಯ.
ವೃಶ್ಚಿಕ :-
ಎಲ್ಲಾ ವಿಷಯಗಳಲ್ಲೂ ಈ ದಿನವು ಒಳ್ಳೆಯ ದಿನವಾಗಿರುವ ಭರವಸೆಯಿದೆ. ಆದ್ದರಿಂದ ವೃತ್ತಿ ಮತ್ತು ಉದ್ಯಮ ಕ್ಷೇತ್ರವು ಉತ್ತಮ ಹಾಗೂ ಪ್ರೋತ್ಸಾಹದಾಯಕವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಮೇಲಾಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳು ಸಂತುಷ್ಟರಾಗಿರುತ್ತಾರೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಎಲ್ಲವೂ ಯಾವುದೇ ಪ್ರಯಾಸ ಹಾಗೂ ಶ್ರಮವಿಲ್ಲದೆ ಸಾಗುತ್ತವೆ. ಘನತೆ ಮತ್ತು ಜನಪ್ರಿಯತೆಯು ವೃದ್ಧಿಯಾಗಲಿದೆ.ಬಡ್ತಿ ಸಿಗುವ ನಿರೀಕ್ಷೆಯಿದೆ. ಮನೆಯ ವಾತಾವರಣವು ಶಾಂತಿ ಹಾಗೂ ಖುಷಿಯಿಂದ ತುಂಬಿರುತ್ತದೆ. ಇಂದು ಕಚೇರಿ ನಿಮಿತ್ತ ಪ್ರವಾಸ ಕೈಗೊಳ್ಳಲು ಸಿದ್ಧರಾಗಿರಿ. ನಿಮ್ಮ ಮಕ್ಕಳಲ್ಲಿನ ಅಭಿವೃದ್ಧಿಯ ತೃಪ್ತಿ ಹಾಗೂ ಸಂತಸದ ಮೂಲವಾಗಲಿದೆ.
ಧನು :-
ಇಂದು ನೀವು ಒಂದು ಸಂದರ್ಭದಿಂದ ತೊಂದರೆಗೀಡಾಗುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಭಯಪಡುತ್ತಾರೆ. ನೀವು ದಿನಪೂರ್ತಿ ನಿರಾಸಕ್ತಿ ಹಾಗೂ ಆಲಸ್ಯದ ಭಾವನೆಯನ್ನು ಹೊಂದಬಹುದು. ನಿಮ್ಮ ಮನಸ್ಸು ಒತ್ತಡ ಹಾಗೂ ಉದ್ವೇಗದಿಂದ ನರಳಬಹುದು. ವ್ಯವಹಾರದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ. ಕೆಟ್ಟ ಮತ್ತು ಹಾನಿಕಾರಕ ಆಲೋಚನೆಗಳಿಂದ ದೂರವಿರಿ. ಯಾವುದೇ ಕಾರ್ಯ ಪ್ರಾರಂಭಿಸುವ ಮೊದಲು ಎಚ್ಚರಿಕೆಯಿಂದ ಯೋಜನೆ ರೂಪಿಸಿ. ನಿಮ್ಮ ಮೇಲಾಧಿಕಾರಿಗಳ ಅಸಮಾಧಾನಕ್ಕೆ ಗುರಿಯಾಗದಂತೆ ನೋಡಿಕೊಳ್ಳಿ. ಶತ್ರುಗಳನ್ನು ಮತ್ತು ಪ್ರತಿಸ್ಪರ್ಧಿಗಳ ಮುಖಾಮುಖಿಯು ಹಿತಕರವಲ್ಲ.
ಮಕರ :-
ಆಕಸ್ಮಿಕ ಆರೋಗ್ಯ ಖರ್ಚುಗಳಿಗೆ ಇಂದು ಸಿದ್ಧರಾಗಿರಿ ಎಂಬುದಾಗಿ ಗಣೇಶ ಒತ್ತಾಯಿಸುತ್ತಾರೆ. ಸಾಮಾಜಿಕ ಹೊಣೆ ಹಾಗೂ ಬಾಹ್ಯ ಚಟುವಟಿಕೆಗಳು ನಿಮ್ಮ ಖರ್ಚುವೆಚ್ಚಗಳನ್ನು ಇನ್ನಷ್ಟು ಹೆಚ್ಚಿಸಲಿವೆ. ನಿಮ್ಮ ತಿನ್ನುವ ಹವ್ಯಾಸದ ಬಗ್ಗೆ ಗಮನವಿರಲಿ. ನೀವು ನಿಮ್ಮ ತಾಳ್ಮೆ ಕಳೆದುಕೊಳ್ಳದಂತೆ ಎಚ್ಚರವಹಿಸಿ. ಸಕಾರಾತ್ಮಕವಾಗಿರಿ ಮತ್ತು ಎಲ್ಲಾ ನಿರಾಶೆ ಹಾಗೂ ಋಣಾತ್ಮಕ ಚಿಂತನೆಗಳಿಂದ ದೂರವಿರಿ. ವ್ಯವಹಾರ ಕ್ಷೇತ್ರವು ಉತ್ತಮ ಹಾಗೂ ಅನುಕೂಲಕರವಾಗಿರುತ್ತದೆ. ಏನೇ ಆದರೂ, ನೀವು ನಿಮ್ಮ ವ್ಯವಹಾರ ಪಾಲುದಾರರನ್ನು ದ್ವೇಷಿಸಬಾರದು ಅಥವಾ ಅವರ ಮನಸ್ಸನ್ನು ನೋಯಿಸಬಾರದು. ನಿಮ್ಮ ಅನುಭವ ಮತ್ತು ವ್ಯವಹಾರ ಕೌಶಲ್ಯವು ಎಲ್ಲಾ ಕಚೇರಿ ಸಂಬಂಧಿ ವಿಚಾರಗಳನ್ನು ತೃಪ್ತಿಕರವಾಗಿ ನಿಭಾಯಿಸಲು ನಿಮಗೆ ನೆರವಾಗುತ್ತದೆ.
ಕುಂಭ :-
ಇಂದು ಎಲ್ಲಾ ಕಾರ್ಯಗಳನ್ನು ಸಂಪೂರ್ಣ ಮನೋನಿಶ್ಚಯ ಹಾಗೂ ವಿಶ್ವಾಸದಿಂದ ಪೂರ್ಣಗೊಳಿಸುವುದನ್ನು ಗಣೇಶ ಸಂತೋಷದಿಂದ ಕಾಣುತ್ತಾರೆ. ಪ್ರಯಾಣ ಅಥವಾ ರಜಾ ಪ್ರವಾಸ ತೆರಳುವ ಸಾಧ್ಯತೆಯಿದೆ. ಅಚ್ಚುಕಟ್ಟಾದ ಬಣ್ಣಬಣ್ಣದ ಉಡುಪು ಧರಿಸುವಂತಹ ಮತ್ತು ಸ್ವಾದಿಷ್ಟ ಭೋಜನ ಸವಿಯುವಂತಹ ಸಮಾರಂಭವು ಏರ್ಪಡಲಿದೆ. ಪಾಲುದಾರಿಕೆಯಲ್ಲಿ ಲಾಭ ಉಂಟಾಗಲಿದೆ. ಆಹ್ಲಾದಕರ ಕಾರು ಪ್ರಯಾಣ ಮಾಡಲಿದ್ದೀರಿ.
ಮೀನ :-
ಉಲ್ಲಾಸಕರ ಹಾಗೂ ವಿಶೇಷ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಆತ್ಮವಿಶ್ವಾಸವು ನಿಮ್ಮ ದಿನವಿಡೀ ಹುರಿದುಂಬಿಸುತ್ತಿರುತ್ತದೆ. ನಿಮ್ಮ ಉತ್ಸಾಹಕ್ಕೆ ಎಲ್ಲೆಯಿರುವುದಿಲ್ಲ. ಮನೆಯ ವಾತಾವರಣವು ಶಾಂತಿ ಹಾಗೂ ಸಾಮರಸ್ಯದಿಂದ ತುಂಬಿರುವ ಭರವಸೆಯಿದೆ. ಶತ್ರುಗಳು ಹಾಗೂ ಪ್ರತಿಸ್ಪರ್ಧಿಗಳ ಪ್ರಭಾವವು ತಗ್ಗುತ್ತದೆ. ನಿಮ್ಮ ಉದ್ವೇಗ ಹಾಗೂ ದುರಾಕ್ರಮಣ ಪ್ರವೃತ್ತಿಯ ಬಗ್ಗೆ ಎಚ್ಚರದಿಂದಿರಿ. ಮಾತು ಹಾಗೂ ವರ್ತನೆಯಲ್ಲಿ ವಿನಯತೆಯಿರಲಿ. ಸಹೋದ್ಯೋಗಿಗಳು ಮತ್ತು ಜತೆ ಕೆಲಸಗಾರರು ವಿಶೇಷವಾಗಿ ಸ್ನೇಹಪರ ಹಾಗೂ ಸಹಕಾರದಿಂದ ಕೂಡಿರುತ್ತಾರೆ. ನಿಮ್ಮ ಹುಟ್ಟೂರಿನಿಂದ ಬರುವ ಸುದ್ಧಿಯು ನಿಮ್ಮ ಸಂತಸ ಹಾಗೂ ಸಮಾಧಾನದಲ್ಲಿರಿಸುತ್ತದೆ.
Horoscope Today : 04 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now