ಗಂಡನ ಬಿಟ್ಟು ಲವರ್ ಜೊತೆ ವಿವಾಹಿತೆ ದೋಸ್ತಿ : ಕುತ್ತಿಗೆಗೆ ಚಾಕು ಇರಿದು‌ ಉಸಿರು ನಿಲ್ಲಿಸಿದ ಪ್ರಿಯಕರ!

Spread the love

ಇತ್ತೀಚಿಗೆ ಅಕ್ರಮ ಸಂಬಂಧಗಳಿಂದ ಕೊಲೆಯಾಗುತ್ತಿರುವ ಪ್ರಕರಣ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಕಾರವಾರದಲ್ಲೂ  ವಿವಾಹಿತೆ ಮಹಿಳೆಯೊಬ್ಬರು ಕೊಲೆಯಾಗಿದ್ದಾರೆ. ಗಂಡನನ್ನ ಬಿಟ್ಟು ಬೇರೋಬ್ಬನ ಜೊತೆ ಸಲುಗೆ ಹೊಂದಿದ್ದ ಮಹಿಳೆ ಬರ್ಬರವಾಗಿ ಹತ್ಯೆಯಾಗಿದ್ದಾಳೆ.

ರಂಜಿತಾ ಎಂಬ ವಿವಾಹಿತೆ ಮಹಿಳೆಯೊಂದಿಗೆ ಸಲುಗೆ ಹೊಂದಿದ್ದ ರಫಿಕ್ ಆಕೆಯ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಬಳಿಕ ಎಸ್ಕೇಪ್ ಆಗಿ ತಲೆಮರಿಸಿಕೊಂಡಿದ್ದಾನೆ.

ಮದುವೆಯಾಗಿ ಗಂಡನಿಂದ ದೂರ ಇದ್ದ ಮೃತ ರಂಜಿತಾ

ಪ್ರಿಯಕರ ರಫಿಕ್ನಿಂದ ಕೊಲೆಯಾಗಿರುವ ರಂಜಿತಾ ಮದುವೆಯಾಗಿ ಗಂಡನಿಂದ ದೂರ ಇದ್ದಳು ಎನ್ನಲಾಗಿದೆ. ಗಂಡನಿಂದ ದೂರವಾಗಿದ್ದ ವಿವಾಹಿತೆ ಮಹಿಳೆ ರಂಜಿತಾ ಜೊತೆ ರಫಿಕ್ ಸಲುಗೆ ಹೊಂದಿದ್ದನು, ಯಲ್ಲಾಪುರ ಮೂಲದವರಾಗಿದ್ದ ರಂಜಿತಾ ಮತ್ತು ರಫಿಕ್, ಕಳೆದ ಹತ್ತಾರು ವರ್ಷಗಳಿಂದಲೂ ಸಲುಗೆ ಹೊಂದಿದ್ದರು ಎಂದು ತಿಳಿದು ಬಂದಿದೆ. ಆದ್ರೆ, ಕೊಲೆಗೆ ನಿಖರ ಕಾರಣ ಏನು ಎಂದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ರಫಿಕ್

ವಿವಾಹಿತೆಯೊಂದಿಗೆ ಸಲುಗೆ ಹೊಂದಿದ್ದ ರಫಿಕ್, ಆಕೆಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರಂಜಿತಾ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ರಂಜಿತಾ ಸಾವನ್ನಪ್ಪಿದ್ದಾಳೆ. ಅತ್ತ ರಂಜಿತಾಳನ್ನ ಕೊಲೆ ಮಾಡಿದ ಆರೋಪಿ ರಫಿಕ್, ಆಕೆಯ ಕುತ್ತಿಗೆಗೆ ಚಾಕು ಚುಚ್ಚಿ ಪರಾರಿಯಾಗಿದ್ದಾನೆ. ಇನ್ನು ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ರಫಿಕ್ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಪ್ರತ್ಯೇಕ ಘಟನೆ :- ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ

ಬಸ್ನಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಘಟನೆ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಬುಧವಾರ ನಡೆದಿದೆ. ಕಾರವಾರದಿಂದ ಅಂಕೋಲಾ ಕಡೆಗೆ ಹೊಗುತ್ತಿದ್ದ ಬಸ್ನಲ್ಲಿ ಈ ಕೃತ್ಯ ನಡೆದಿದೆ. ಯುವತಿ ಬಸ್ನಲ್ಲಿ ನಿದ್ದೆ ಮಾಡುವ ವೇಳೆ ಪಕ್ಕದಲ್ಲಿ ಕುಳಿತ್ತಿದ್ದ ವ್ಯಕ್ತಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಕ್ಷಣ ಆತನ ವಿಡಿಯೋ ಮಾಡಿದ ಯುವತಿ ಸೋಶಿಯಲ್ ಮೀಡಿಯಾದಲ್ಲಿ ಪೊಸ್ಟ್ ಮಾಡಿದ್ದಾರೆ.

ಜೊತೆಗೆ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಶಿಕ್ಷೆಗೆ ಮನವಿ ಮಾಡಿದ್ದಾರೆ. ಇದರ ಜೊತೆ ಯುವಕನಿಗೆ ಅವಾಚ್ಯ ಶಬ್ದಗಳಿಂದ ಉಗಿದು ಆಕ್ರೋಶ ವ್ಯಕ್ತಪಡಿಸಿದ ಯುವತಿ, ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕೆಂದು ಮಹಿಳೆಯರಿಗೆ ಸಂದೇಶ ನೀಡಿದ್ದಾರೆ.

WhatsApp Group Join Now

Spread the love

Leave a Reply