ಖಾಸಗಿ ಬಸ್ (Bus) ಮತ್ತು ಪೆಟ್ರೋಲ್ ಟ್ಯಾಂಕರ್ (Petrol Tanker) ನಡುವೆ ಮುಖಾಮುಖಿ ಡಿಕ್ಕಿಯಾಗಿ (Collision) ದೊಡ್ಡ ದುರಂತವೊಂದು ತಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಕೋಡೂರು ಬಳಿ ಶನಿವಾರ ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಕೆಲವರಿಗೆ ಗಾಯವಾಗಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಖಾಸಗಿ ಬಸ್ ಹಾಗೂ ಪೆಟ್ರೋಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದೆ. ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಅನೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾರಿಗೂ ಹೆಚ್ಚು ಅಪಾಯವಾಗಿಲ್ಲ. ಆದರೆ ಓರ್ವ ಮಹಿಳಾ ಪ್ರಯಾಣಿಕರ ತಲೆಗೆ ಪೆಟ್ಟು ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ತಕ್ಷಣ ಸ್ಥಳೀಯರು ಅಂಬುಲೆನ್ಸ್ ಕರೆಸಿ ಗಾಯಾಳುಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳನ್ನು ಹೊಸನಗರ ಆಸ್ಪತ್ರೆಗೆ ರವಾನಿಸಲಾಗಿದೆ. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರತ್ಯೇಕ ಘಟನೆ :- ಕಸ ತುಂಬಿಕೊಳ್ಳುತ್ತಿದ್ದ ಟ್ರ್ಯಾಕ್ಟರ್‌ಗೆ ಬಿಎಂಟಿಸಿ ಬಸ್ ಡಿಕ್ಕಿ- ತಪ್ಪಿದ ಅನಾಹುತ
ಬೆಂಗಳೂರು: ಕಸ ತುಂಬಿಕೊಳ್ಳುತ್ತಿದ್ದ ಟ್ರ್ಯಾಕ್ಟರ್‌ಗೆ (Tractor) ಬಿಎಂಟಿಸಿ ಬಸ್ (BMTC Bus) ಡಿಕ್ಕಿ ಹೊಡೆದ ಘಟನೆ ಇಂದು ಮುಂಜಾನೆ ಬೆಂಗಳೂರಿನ (Bengaluru) ಕಾವೇರಿ ಜಂಕ್ಷನ್ ನಲ್ಲಿ ನಡೆದಿದೆ.
ಫುಟ್‌ಪಾತ್‌ನಲ್ಲಿ ಕಸ ತುಂಬಿಕೊಳ್ಳುತ್ತಿದ್ದ ಟ್ರ್ಯಾಕ್ಟರ್‌ಗೆ ಯಲಹಂಕ ನ್ಯೂಟೌನ್ ನಿಂದ ಮೆಜೆಸ್ಟಿಗ್ ಬರುತ್ತಿದ್ದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಿಎಂಟಿಸಿ ಬಸ್‌ನ ಮುಂಭಾಗ ಜಖಂ ಆಗಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.
ಮುಂಜಾನೆ ದಟ್ಟ ಮಂಜಿದ್ದ ಕಾರಣ ಎದುರಲ್ಲಿ ಟ್ರ್ಯಾಕ್ಟರ್ ಇರುವುದು ತಿಳಿಯದೇ ಬಸ್ ಅದಕ್ಕೆ ಡಿಕ್ಕಿ ಹೊಡೆದದೆ ಎನ್ನಲಾಗಿದೆ. ಘಟನೆಯಲ್ಲಿ ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ.
ವಿಚಾರ ತಿಳಿದು ಘಟನ ಸ್ಥಳಕ್ಕೆ ಸದಾಶಿವನಗರ ಸಂಚಾರಿ ಪೊಲೀಸರು ಬಂದು ಬಸ್ ತೆರವು ಮಾಡಿದ್ದಾರೆ.
ಪ್ರತ್ಯೇಕ ಘಟನೆ :- ನೈಸ್ ರೋಡ್ ನಲ್ಲಿ ಗುದ್ದೋಡು ಪ್ರಕರಣ – ಇಬ್ಬರು ಮಹಿಳೆಯರು ಬಲಿ!
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಹಿಟ್ ಅಂಡ್ ರನ್ (Hit and Run ) ಕೇಸ್ ಹೆಚ್ಚಾಗುತ್ತಿದ್ದು, ಈ ಸಾಲಿಗೆ ಮತ್ತೊಂದು ಉದಾಹರಣೆ ಸೇರ್ಪಡೆಗೊಂಡಿದೆ.
ನೈಸ್ ರಸ್ತೆ ಬದಿ ಹುಲ್ಲು ತೆಗೆಯುತ್ತಿದ್ದ ಮಹಿಳಾ ಕಾರ್ಮಿಕರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರೋ ಘಟನೆ ವರದಿಯಾಗಿದೆ. ನಗರದ ಹೊಸಕೆರೆಹಳ್ಳಿ ನೈಸ್ ರಸ್ತೆಯಲ್ಲಿ ಎಂಟ್ರಿ ಪಾಯಿಂಟ್ ಬಳಿ ಶುಕ್ರವಾರ ಸಂಜೆ ಈ ಘಟನೆ ಸಂಭವಿಸಿದೆ.
ಮೃತರಿಬ್ಬರು ಯಾದಗಿರಿ ಮೂಲದವರಾಗಿದ್ದಾರೆ. ದುರ್ದೈವಿಗಳನ್ನು ರಂಗಮ್ಮ (45) ಹಾಗೂ ಚೌಡಮ್ಮ (55) ಎಂದು ಗುರುತಿಸಲಾಗಿದೆ. ಕೂಲಿ ಕಾರ್ಮಿಕರಾಗಿದ್ದ ಇವರು ನೈಸ್ ರಸ್ತೆ ಬದಿಯಲ್ಲಿ ಹುಲ್ಲು ತೆರವು ಕಾರ್ಯದಲ್ಲಿ ತೊಡಗಿದ್ದರು. ಸದ್ಯ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಖಾಸಗಿ ಬಸ್ – ಪೆಟ್ರೋಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ – ಹಲವರಿಗೆ ಗಾಯ
WhatsApp Group
Join Now