ಸಿದ್ದ ಅಂದರೆ ಶಿವ, ರಾಮ ಅಂದರೆ ವಿಷ್ಣು, ಅದೇ ನನ್ನ ಜನ್ಮನಾಮ : ಮುಖ್ಯಮಂತ್ರಿ ಸಿದ್ದರಾಮಯ್ಯ

Spread the love

ಗದಗ: ಸಿದ್ದ ಅಂದರೆ ಶಿವ, ರಾಮ ಅಂದರೆ ವಿಷ್ಣು. ಶಿವ ಮತ್ತು ವಿಷ್ಣು ಹೆಸರಿನಿಂದಲೇ ನನ್ನ ಜನ್ಮನಾಮ ಸಿದ್ದರಾಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶನಿವಾರ (ಡಿ.12) ಏರ್ಪಡಿಸಿದ್ದ ಸಿ.ಎನ್.ಆರ್.ರಾವ್ 10 ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮದಲ್ಲಿ ಕಂದಾಚಾರ, ಮೌಡ್ಯತೆ ಮತ್ತು ಜಾತಿಯತೆ ಕುರಿತು ವಿಷಯ ಪ್ರಸ್ತಾಪಿಸಿದ ಸಂದರ್ಭದಲ್ಲಿ ಸಾಂದರ್ಭಿಕವಾಗಿ ಸಿಎಂ ಶಿವ ಮತ್ತು ವಿಷ್ಣು ಹೆಸರು ಪ್ರಸ್ತಾಪಿಸಿದರು.

ನನ್ನ ಹೆಸರಲ್ಲಿ ಶಿವ ಮತ್ತು ವಿಷ್ಣು ಇದ್ದಾನೆ. ಆದರೆ ಕಂದಾಚಾರ ಮೌಢ್ಯತೆ ಇಲ್ಲ. ದೇಶದಲ್ಲಿ ಶಿಕ್ಷಣವಂತರಿಂದಲೇ ಅತೀ ಹೆಚ್ಚು ಜಾತಿ ವ್ಯವಸ್ಥೆ ಬೇರೂರುತ್ತಿದೆ. ಇವ ನಮ್ಮವ, ಇವ ನಮ್ಮವ ಎಂದು ಬಸವಣ್ಣನವರ ವಚನ ಹೇಳುತ್ತಲೇ ನಿಮ್ಮ ಜಾತಿ ಏನು? ಎಂದು ಹೇಳುವ ಸಮಾಜ ನಿರ್ಮಾಣ ಆಗುತ್ತಿದೆ. ಸಮಾನತೆಯ ಸಮಾಜ ನಿರ್ಮಾಣ ಮಾಡಲು ವೈಜ್ಞಾನಿಕ ಮನೋಭಾವ ಅಗತ್ಯ. ಜಾತಿಯತೆ ಹೋಗಲಾಡಿಸಲು ಕಂದಾಚಾರ, ಮೌಢ್ಯಗಳನ್ನು ಬಿಡಬೇಕು. ಮನುಷ್ಯ ಸಮಾಜ ನಿರ್ಮಾಣ ಮಾಡಲು ಜಾತಿವ್ಯವಸ್ಥೆ ನಿರ್ಮೂಲನೆ ಮಾಡಬೇಕು. ನಾನು ಮೊದಲು ಸಿಎಂ ಆಗಿದ್ದ ಸಂದರ್ಭದಲ್ಲಿ ಮೌಢ್ಯ ನಿರ್ಮೂಲನೆ ಕಾಯ್ದೆ ಜಾರಿ ಮಾಡಿದ್ದೆವು ಎಂದು ಸಿಎಂ ಹೇಳಿದರು.

ಕರ್ಮ ಸಿದ್ದಾಂತವನ್ನು ಬಸವಣ್ಣ ವಿರೋಧಿಸಿದ್ದರು. ಇಂದಿನ ಜನ್ಮದ ನ್ಯೂನತೆಗಳು ಹಿಂದಿನ ಜನ್ಮದ ಕರ್ಮಗಳಿಂದ ಎಂಬುದು ಸುಳ್ಳು, ಇದು ಮೌಢ್ಯ ನಂಬಿಕೆ. ಇದನ್ನೇ ಬಸವಣ್ಣ ವಿರೋಧಿಸಿದ್ದರು. ಹಾಗಾಗಿ ಶೈಕ್ಷಣಿಕ ಅವಧಿಯಲ್ಲೇ ಕಂದಾಚಾರ, ಮೌಢ್ಯವನ್ನು ನಂಬದೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

WhatsApp Group Join Now

Spread the love

Leave a Reply