ಹಣೆಗೆ ಅರಿಶಿಣ, ಕುಂಕುಮವಿಟ್ಟು, ಹೂ ಮುಡಿದು ದಸರಾ ಉದ್ಘಾಟನೆ ಮಾಡೋದಾದ್ರೆ ಬನ್ನಿ ಎಂದ ಪ್ರತಾಪ್ ಸಿಂಹ

Spread the love

ಹುಬ್ಬಳ್ಳಿ : ಬಾನು ಮುಷ್ತಾಕ್ ಅವರೇ ನಿಮ್ಮನ್ನ ಅಲ್ಲಾನೇ ಮಸೀದಿ ಒಳಗೆ ಬಿಟ್ಟಿಲ್ಲ. ಇನ್ನು ಅರಿಶಿಣ ಕುಂಕುವಿಟ್ಟ ತಾಯಿ ಚಾಮುಂಡೇಶ್ವರಿ ನಿಮ್ಮನ್ನು ಕರೆಸಿಕೊಳ್ತಾಳಾ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಟಾಂಗ್ ಕೊಟ್ಟಿದ್ದಾರೆ.

WhatsApp Group Join Now

ಹುಬ್ಬಳ್ಳಿಯ (Hubballi) ಈದ್ಗಾ ಮೈದಾನದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ರಿಗೆ (Banu Mushtaq) ಆಹ್ವಾನ ನೀಡಲಾಗಿದೆ. ಅವರ ಮೇಲೆ ನಮಗೆಲ್ಲ ಗೌರವ ಇದೆ. ಆದರೆ ಹಿಂದೂ ಧಾರ್ಮಿಕ ಶ್ರೇಷ್ಠ ಭಾವನೆಯ ಮುಕುಟವಾಗಿರುವ ದಸರಾ (Dasara) ಉದ್ಘಾಟನೆಯನ್ನು ಅವರ ಕೈಯಲ್ಲಿ ಮಾಡಿಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ.

Post office Scheme : ಪೋಸ್ಟ್ ಆಫೀಸ್ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!

WhatsApp Group Join Now

ಅರಿಶಿಣ, ಕುಂಕುಮ, ಹೂವಿಟ್ಟು ದಸರಾ ಉದ್ಘಾಟನೆ ಮಾಡಿ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಬಾನು ಮುಷ್ತಾಕ್ ಅವರೇ ನಿಮಗೆ ಆತ್ಮಸಾಕ್ಷಿ ಇಲ್ವ? ಅದೇಗೆ ನೀವು ಉದ್ಘಾಟನೆಗೆ ಒಪ್ಪಿಕೊಂಡ್ರಿ? ಬಾನು ಮೇಡಂ ನಿಮ್ಮ ಅಲ್ಲಾನೇ ನಿಮ್ಮನ್ನು ಮಸೀದಿ ಒಳಗೆ ಬಿಟ್ಟಿಲ್ಲ. ಇನ್ನು ನಮ್ಮ ಅರಿಶಿಣ ಕುಂಕುಮವಿಟ್ಟ ಚಾಮುಂಡಿ ನಿಮ್ಮನ್ನು ಬೆಟ್ಟಕ್ಕೆ ಕರೆಸಿಕೊಳ್ಳುತ್ತಾಳಾ? ನೀವು ಸೀರೆಯುಟ್ಟು, ಅರಿಶಿಣ, ಕುಂಕುಮ ಮತ್ತು ಹೂವಿಟ್ಟು ಬಂದು ದಸರಾ ಉದ್ಘಾಟನೆ ಮಾಡಿ ಎಂದಿದ್ದಾರೆ.

Kisan Credit Card Scheme : ಇನ್ನು ಮುಂದೆ ಎಲ್ಲ ರೈತರಿಗೂ ಪಶು ಕಿಸಾನ್ ಕಾರ್ಡ್ ನಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ.! ಅರ್ಜಿ ಸಲ್ಲಿಸುವುದು ಹೇಗೆ.?

WhatsApp Group Join Now

ನನ್ನನ್ನು ಮತಾಂತರ ಮಾಡದೇ ಮೆಕ್ಕಾಗೆ ಕಳುಹಿಸ್ತೀರಾ?
ನಾವು ನೆಲ, ಜಲ, ಪರಿಸರದಲ್ಲಿ ದೇವರನ್ನು ಕಾಣುತ್ತೇವೆ. ಇದು ನಮ್ಮ ಧರ್ಮ. ಮರುಭೂಮಿಯ ಮರಳಿನಲ್ಲಿ ಹುಟ್ಟಿದ ಧರ್ಮ ನಮ್ಮದಲ್ಲ. ಬಾನು ಮುಷ್ತಾಕ್ ಅವರೇ ನಿಮಗೆ ನಮ್ಮ ಧರ್ಮದ ಹಬ್ಬವನ್ನು ಉದ್ಘಾಟನೆ ಮಾಡಲು ಮನಸ್ಸಾದ್ರೂ ಹೇಗೆ ಒಪ್ಪುತ್ತೆ? ವಿವಿಧತೆಯಲ್ಲಿ ಏಕತೆ ಬರೀ ಹಿಂದೂಗಳಲ್ಲಿ ಮಾತ್ರ. ಆದರೆ ಮುಸ್ಲಿಂ, ಕ್ರಿಶ್ಚಿಯನ್ನರಲ್ಲಿ ಇದು ಇಲ್ಲ. ನಾವು ಹೆಣ್ಣು ಮಕ್ಕಳಲ್ಲಿ ದೇವಿಯಲ್ಲಿ ಕಾಣುತ್ತೇವೆ. ನಿಮ್ಮ ಧರ್ಮದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳುತ್ತೀರಾ. ನನ್ನನ್ನು ಮತಾಂತರ ಮಾಡದೇ, ಸುನ್ನತ್ ಮಾಡಿಕೊಳ್ಳದೆ ಬರೀ ಪ್ರವಾಸಿಗನಾಗಿ ಮೆಕ್ಕಾಗೆ ಕಳುಹಿಸಿಕೊಡ್ತೀರಾ? ಇಲ್ಲ ಎಂದಾದರೆ ನೀವು ಹೇಗೆ ನಮ್ಮ ಸಂಸ್ಕೃತಿಯನ್ನು ಪಾಲಿಸದೆ ದಸರಾ ಉದ್ಘಾಟನೆಗೆ ಬರ್ತಿರಾ ಎಂದು ಕೇಳಿದ್ದಾರೆ.

Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.

ಧರ್ಮಸ್ಥಳ ಕೇಸ್‌ನಲ್ಲಿ (Dharmasthala Case) ಯಾರೆಲ್ಲ ಇದ್ದಾರೆಂದು ನಿಮಗೆ ಗೊತ್ತಾಗಿದೆ. ಯಾರೋ ಬುರುಡೆ ದಾಸ ಏನೋ ಹೇಳಿದ ಎಂದು ಕನ್ವರ್ಟ್ ಕ್ರಿಶ್ಚಿಯನ್ ಚಿನ್ನಯ್ಯ ಈಗ ಬಾಯಿಬಿಟ್ಟಿದ್ದಾನೆ. ಸಮೀರ್ ತನ್ನ ಧರ್ಮದ ಬಗ್ಗೆ ಮಾತಾಡ್ತಾನಾ? ಮಸೀದಿ, ಮದರಾಸದಲ್ಲಿನ ಅತ್ಯಾಚಾರ, ಅನಾಚಾರದ ಬಗ್ಗೆ ಮಾತಾಡ್ತಾನಾ? ತುಂಡಾಗಿ ಉಳಿದಿರುವ ಹಿಂದೂ ಧರ್ಮ ಭೂಮಿಯನ್ನು ನಾವು ರಕ್ಷಣೆ ಮಾಡಬೇಕಿದೆ. ಗೌಡ, ಲಿಂಗಾಯತ, ಬ್ರಾಹ್ಮಣ, ಮರಾಠ, ಎಸ್ಟಿ, ಎಸ್ಸಿ ಆಗಬೇಡಿ. ಎಲ್ಲರೂ ಜಾತಿ ಎನ್ನುವ ದರಿದ್ರ ಮನಸ್ಥಿತಿಯಿಂದ ಹೊರ ಬಂದು ಹಿಂದೂಗಳಾಗಿ. ಧರ್ಮಸ್ಥಳದ ಅಪಪ್ರಚಾರದ ವಿರುದ್ಧ ಹಿಂದೂಗಳೆಲ್ಲ ಒಂದಾಗಿ ಎಂದು ಕರೆ ನೀಡಿದ್ದಾರೆ.


Spread the love

Leave a Reply