ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಮುಂದಾದ ರಾಜ್ಯ ಸರ್ಕಾರ.! ಸುಗ್ರೀವಾಜ್ಞೆ ತರಲು ಸಿದ್ಧತೆ.? – Microfinance Harassment

Spread the love

Microfinance Harassment : ಮೈಕ್ರೋಫೈನಾನ್ಸ್ ಕಂಪನಿಗಳ (Microfinance) ಹಾವಳಿ ಹೆಚ್ಚಾಗಿದ್ದು ಕೆಲವು ಊರುಗಳಲ್ಲಿ ಜನರು ಮನೆಯನ್ನೇ ಬಿಟ್ಟು ಓಡಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಮೈಕ್ರೋಫೈನಾನ್ಸ್‌ಗಳ ಕಿರುಕುಳ ಸಹಿಸುವುದಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು. ಅದರ ಹೊರತಾಗಿಯೂ ರಾಜ್ಯದ ಹಲವೆಡೆ ಮೈಕ್ರೋಫೈನಾನ್ಸ್‌ ಸಿಬ್ಬಂದಿ ಕಿರುಕುಳ ಮುಂದುವರೆದಿತ್ತು. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ (Ordinance) ಮೂಲಕ ಕಠಿಣ ಕಾನೂನು (Law) ತರಲು ಸರ್ಕಾರ ಮುಂದಾಗಿದೆ.

ಪತ್ನಿಯ ದೇಹವನ್ನು ಪೀಸ್ ಪೀಸ್ ಮಾಡಿ ಕುಕ್ಕರ್ನಲ್ಲಿ ಬೇಯಿಸಿದ ಕೇಸ್ : ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು!

ಹೌದು, ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ಕನ್ನಡ ಸುದ್ಧಿ ಮಾಧ್ಯಮಗಳು ನಿರಂತರವಾಗಿ ಸುದ್ದಿ ಪ್ರಸಾರ ಮಾಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ನಾಳೆ (ಜನವರಿ 25) ಮೈಕ್ರೋಫೈನಾನ್ಸ್ ಕಿರುಕುಳ ತಡೆಯಲು ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಲು ಸಭೆ ನಡೆಸಲು ಮುಂದಾಗಿದೆ. ಸರ್ಕಾರ ಕೆಲವೇ ದಿನಗಳಲ್ಲಿ ಮೈಕ್ರೋಫೈನಾನ್ಸ್ ಕಿರುಕುಳ ತಪ್ಪಿಸಲು ಕಾನೂನು ಜಾರಿ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಈ ಕುರಿತು ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನಾಳೆ‌ ಸಿಎಂ ನೇತೃತ್ವದಲ್ಲಿ ಸಭೆ ಇದೆ. ಈ ಸಭೆಯಲ್ಲಿ ಯಾವ ರೀತಿಯ ಕಾನೂನು ತರಬೇಕು ಎಂಬುದರ ಕುರಿತು ಕಂದಾಯ ಇಲಾಖೆ ಹಾಗೂ ಗೃಹ ಸಚಿವರು ಚರ್ಚೆ ಮಾಡುತ್ತಾರೆ. ಹಿಂದಿನಿಂದಲೂ ಈ ವಿಚಾರದ ಬಗ್ಗೆ ಅಧ್ಯಯನ ಮಾಡ್ತಿದ್ದೇವೆ. ಸದ್ಯದಲ್ಲೇ ಒಂದು ತೀರ್ಮಾನ ಮಾಡ್ತೇವೆ ಎಂದರು.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಕಂದಾಯ ಸಚಿವ ಕೃಷ್ಣಬೈರೇಗೌಡ ಏನಂದ್ರು?

ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯೆ ನೀಡಿದ್ದು, ಹಳ್ಳಿಗಳಲ್ಲಿ ಸಣ್ಣಪುಟ್ಟ ಸಾಲಗಳನ್ನು ಜನ ಮಾಡಿದ್ದಾರೆ. ಸಾಲ ಮರುಪಾವತಿ ಶಕ್ತಿಗಿಂತ ಮಿರಿ ಮಾಡಿದ್ದಾರೆ, ಇವರಿಗೆ ಸಾಲ ಮರುಪಾವತಿ ಮಾಡೋಕೆ ಶಕ್ತಿ ಇಲ್ಲದೆ ಇರೋ ವಿಚಾರ ಗೊತ್ತಿದ್ರು ಕಂಪನಿಗಳು ಸಾಲ ಕೊಟ್ಟಿದೆ. ಇವತ್ತು ಜನರ ಬಳಿ ವಸೂಲಿ ಮಾಡೋಕೆ ‌ಹೋದಾಗ ಕೆಲ ಊರುಗಳಲ್ಲಿ ಜನ ಊರು ಬಿಟ್ಟು ಹೋಗ್ತಿದ್ದಾರೆ. ಕೆಲವರು ದುಡಿಕಿನ ಹೆಜ್ಜೆ ಇಡುತ್ತಿದ್ದು, ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿದೆ ಹಾಗಾಗಿ ನಾಳೆ ಇದರ ಬಗ್ಗೆ ಸಿಎಂ ಜೊತೆ ಸಭೆ ಕರೆದಿದ್ದೇವೆ ಎಂದರು.

ಮೈಕ್ರೋಫೈನಾನ್ಸ್ ಕೇಂದ್ರ ಹಾಗೂ ಆರ್‌ಬಿಐ ಅಡಿಯಲ್ಲಿ ಬರುತ್ತೆ

ಸಭೆಗೆ ಪೈನಾನ್ಸ್ ಕೊಡುವವರನ್ನು ಕರೆಸಿ ಬಲವಂತವಾಗಿ ವಸೂಲಿ ಮಾಡುವ ಕ್ರಮ ಮಾಡದಂತೆ ಸೂಚನೆ ಕೊಡಲಿದ್ದೇವೆ, ಆದ್ರೆ ಮೈಕ್ರೋಪೈನಾನ್ಸ್ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಕೆಳಗಡೆ ಬರುವಂತದ್ದು, ಆದರೂ‌ ಕೂಡ ಕೇಂದ್ರ, ಆರ್‌ಬಿಐ ಏನೂ ಮಾಡ್ತಿಲ್ಲ, ಕೇಂದ್ರ ಸರ್ಕಾರ ಇದಕ್ಕೊಂದು ಕಾನೂನು ತರಬೇಕು ಅಂತಾ ಒತ್ತಾಯ ಮಾಡ್ತೀವಿ ಎಂದರು.

Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ರಾಜ್ಯ ಸರ್ಕಾರ ಕೈಚೆಲ್ಲಿ ಕೂರಬಾರದು ಎನ್ನುವ ಉದ್ದೇಶದಿಂದ ಸಿಎಂ ಜೊತೆ ಸಭೆ ಮಾಡ್ತೀವಿ, ಎಲ್ಲಾ ಕಂಪನಿಗಳಿಗೆ ಈ ರೀತಿಯಲ್ಲಿ ಅತ್ಯಾಧಿಕ ಸಾಲ ಕೊಟ್ಟು ಸಾಲದ ಸುಳಿಗೆ ಅಮಾಯಕ ಜನರನ್ನು ಸಿಲುಕಿಸದಂತೆ ಕಟ್ಟು ನಿಟ್ಟಿನ ಎಚ್ಚರಿಕೆ ಕೊಡ್ತಿವಿ, ವಸೂಲಾತಿಯಲ್ಲಿ‌ ಕೂಡ ಈ ರೀತಿಯಾಗಿ ಅತಿರೇಕದ ಕ್ರಮಗಳನ್ನ ಕೈಗೊಳ್ಳದಂತೆ ಸೂಚನೆ ಕೊಡ್ತಿವಿ ಎಂದರು.

WhatsApp Group Join Now

Spread the love

Leave a Reply