PhonePe Loan Facility : ಫೋನ್ ಪೇ ಮೂಲಕ ಪಡೆಯಿರಿ ಸಾಲ – ನಿಮಗೂ ಸಿಗುತ್ತಾ ಬೇಗ ಚೆಕ್ ಮಾಡಿ

PhonePe Loan Facility : ನಮಸ್ಕಾರ ಸ್ನೇಹಿತರೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಪ್ಪು ಹಣ ತಡೆಗಟ್ಟುವ ಸಲುವಾಗಿ ಕ್ಯಾಶ್ ಲೆಸ್ ವ್ಯವಹಾರವನ್ನು ಹೆಚ್ಚು ಪ್ರೋತ್ಸಾಹಿಸುತ್ತಿದೆ. ಇದಕ್ಕೆ ಜನರು ಕೂಡ ಇಂದು ಒಗ್ಗಿಕೊಂಡಿದ್ದಾರೆ. ಹಾಗಾಗಿ ನಾವು ನಮ್ಮ ಕೈಯಲ್ಲಿ ಹಣ ಇಲ್ಲದೆ ಇದ್ದರೂ ಯುಪಿಐ ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತೇವೆ.

ಇದನ್ನೂ ಕೂಡ ಓದಿ : Govt New Rules : ಅಕ್ಟೋಬರ್ 1 ರಿಂದ ಹೊಸ ನಿಯಮಗಳು ಜಾರಿಗೆ.! ಪ್ರಧಾನಿ ಮೋದಿಯವರ 5 ಪ್ರಮುಖ ಘೋಷಣೆಗಳೇನು.?

WhatsApp Group Join Now

ಯಾವುದೇ ರೀತಿಯ ಪೇಮೆಂಟ್ ಮಾಡಲು ಯುಪಿಐ ಬಹಳ ಉತ್ತಮವಾಗಿರುವ ಸಾಧನವಾಗಿದ್ದು, ಯುಪಿಐ ಅಡಿಯಲ್ಲಿ ಕ್ಷಣಮಾತ್ರದಲ್ಲಿ ಒಬ್ಬರ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಿದೆ. ಇನ್ನು ಈ ರೀತಿ ಹಣ ಪಾವತಿ ಮಾಡಲು ಬೇರೆ ಬೇರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ (Third party application) ಗಳನ್ನು ಬಳಸುತ್ತೇವೆ. ಅವುಗಳಲ್ಲಿ ಮುಖ್ಯವಾಗಿರುವ ಹಾಗೂ ಜನಪ್ರಿಯವಾಗಿರುವ ಪೇಮೆಂಟ್ ಅಪ್ಲಿಕೇಶನ್ ಫೋನ್ ಪೇ! ಹಣ ಪಾವತಿ ಮಾಡಲು ಬಿಲ್ ಪಾವತಿ ಮಾಡಲು ಹೀಗೆ ಬೇರೆ ಬೇರೆ ಕಾರಣಕ್ಕೆ ಫೋನ್ ಪೇ ಅಪ್ಲಿಕೇಶನ್ ಬಳಸಬಹುದು. ಫೋನ್ ಪೇ ದೇಶಾದ್ಯಂತ ಸುಮಾರು 50 ಕೋಟಿಗೂ ಅಧಿಕ ಬಳಕೆದಾರರನ್ನು, 3.0.7 ಕೋಟಿ ಗ್ರಾಹಕರನ್ನು ಹೊಂದಿದೆ.

ಇದನ್ನೂ ಕೂಡ ಓದಿ : Gruhalakshmi Scheme Updates : ‘ಕೈ’ ಕೊಟ್ಟ ಗೃಹಲಕ್ಷ್ಮಿ ಯೋಜನೆ ಹಣ.! ಕಾದು ಕುಳಿತ ಫಲಾನುಭವಿಗಳು ಕಂಗಾಲು – ಮುಂದೇನು.?

WhatsApp Group Join Now

ಈಗಾಗಲೇ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸುಲಭವಾಗಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಅದರಂತೆ ಈಗ ಫೋನ್ ಪೇ ವಿಶೇಷವಾಗಿ ಕ್ರೆಡಿಟ್ ಲೈನ್ ಪರಿಚಯಿಸಿದ್ದು, ಗ್ರಾಹಕರಿಗೆ ಕ್ಷಣಮಾತ್ರದಲ್ಲಿ ಸಾಲ ಸೌಲಭ್ಯ ಒದಗಿಸಲು ಅಗತ್ಯ ಇರುವ ಸಾಧ್ಯತೆಗಳನ್ನು ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಇದೀಗ ಫೋನ್ ಪೇ ಕೇವಲ ಪೇಮೆಂಟ್ ಅಪ್ಲಿಕೇಶನ್ ಆಗಿ ಉಳಿದಿಲ್ಲ. ಕ್ರೆಡಿಟ್ ಆಯ್ಕೆಯ ಮೂಲಕ ಸಾಲವನ್ನು ಪಡೆಯಬಹುದು. ಇದಕ್ಕಾಗಿ ಫೋನ್ ಬ್ಯಾಂಕ್ ಹಾಗೂ ಬ್ಯಾಂಕಿಂಗ್ ಅಲ್ಲದ ಎನ್ ಬಿ ಎಫ್ ಸಿ (NBFC) ಗಳ ಜೊತೆಗೆ ಚರ್ಚೆ ನಡೆಸಿದೆ ಎನ್ನಲಾಗಿದೆ. ಫೋನ್ ಪೇ ಅಪ್ಲಿಕೇಶನ್ ನಲ್ಲಿ ನೀವು ಸಾಲ ಪಡೆದುಕೊಳ್ಳಲು ಫೋನ್ ನೇರವಾಗಿ ಸಾಲ ಸೌಲಭ್ಯ ನೀಡುವುದಿಲ್ಲ ಬದಲಾಗಿ ಬೇರೆ ಬೇರೆ ಬ್ಯಾಂಕ್ ಗಳ ಜೊತೆಗೆ ಟೈ ಅಪ್ ಮಾಡಿಕೊಂಡು ಬ್ಯಾಂಕುಗಳ ಮೂಲಕ ಸಾಲ ಒದಗಿಸುತ್ತದೆ.

ಇದನ್ನೂ ಕೂಡ ಓದಿ : Atal Pension Yojana : ಈ ಯೋಜನೆಯಡಿ ಪ್ರತಿ ತಿಂಗಳಿಗೆ ₹5,000/- ಪಿಂಚಣಿ ಪಡೆಯಲು ಅರ್ಜಿ ಆಹ್ವಾನ.! ಬೇಕಾಗುವ ದಾಖಲೆಗಳೇನು.?

ಫೋನ್ ಪೇ ಸಾಲ ಸೌಲಭ್ಯ ಯಾರೆಲ್ಲಾ ಪಡೆಯಬಹುದು.?

ಯಾವುದೇ ವ್ಯಕ್ತಿಯ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ, ಅಂದರೆ 750ಕ್ಕಿಂತ ಹೆಚ್ಚಿಗೆ ಇದ್ದರೆ ಸುಲಭವಾಗಿ ಫೋನ್ ಪೇ ಮೂಲಕ ಸಾಲ ಪಡೆಯಬಹುದು. ಫೋನ್ ಪೇ ಇನ್ನು ಕೇವಲ ಆರು ತಿಂಗಳ ಒಳಗೆ ಸಾಲ ನೀಡುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಿದೆ. ಫೋನ್ ಪೇಯಲ್ಲಿ ಸಾಲ ಸೌಲಭ್ಯ ಮಾತ್ರವಲ್ಲದೆ ಇನ್ನೂ ಹಲವು ಪ್ರಯೋಜನಗಳನ್ನು ಮುಂದಿನ ದಿನಗಳಲ್ಲಿ ಗ್ರಾಹಕರು ಪಡೆಯಬಹುದು. ಇನ್ನು ಫೋನ್ ಪೇ ಮೂಲಕ ಎಷ್ಟು ಸಾಲ ಸೌಲಭ್ಯ ಪಡೆಯಬಹುದು ಎನ್ನುವುದನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

WhatsApp Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply