PhonePe – Google Pay : ಫೋನ್ ಪೇ – ಗೂಗಲ್ ಪೇನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಹೋದರೆ ಏನು ಮಾಡಬೇಕು.? ಮರಳಿ ಸಿಗುತ್ತಾ.?

PhonePe – Google Pay : ನಮಸ್ಕಾರ ಸ್ನೇಹಿತರೇ, ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಇಂದು ಡಿಜಿಟಲ್ ಪಾವತಿ ಮಾಡುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಈಗ ಜನರು ಸುಲಭವಾಗಿ ಯುಪಿಐ ಮೂಲಕ ಯಾರಿಗೆ ಬೇಕಾದರೂ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಆದರೆ, ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪುಗಳಿಂದಾಗಿ, ತಪ್ಪಾದ ಯುಪಿಐ ಐಡಿಯಲ್ಲಿ ಪಾವತಿ ಮಾಡಿಬಿಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ. ಈ ಸಮಸ್ಯೆಯನ್ನು ನಿಭಾಯಿಸಲು ನಾವು ನಿಮಗೆ ಕೆಲವು ಸುಲಭ ಮಾರ್ಗಗಳನ್ನು ಹೇಳುತ್ತೇವೆ.

ಇದನ್ನೂ ಕೂಡ ಓದಿ : Gruhalakshmi Scheme Updates : ‘ಕೈ’ ಕೊಟ್ಟ ಗೃಹಲಕ್ಷ್ಮಿ ಯೋಜನೆ ಹಣ.! ಕಾದು ಕುಳಿತ ಫಲಾನುಭವಿಗಳು ಕಂಗಾಲು – ಮುಂದೇನು.?

UPI ಅಪ್ಲಿಕೇಶನ್ ಕಸ್ಟಮರ್ ಕೇರ್ ಸಂಪರ್ಕಿಸಿ :-

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ, ಬಳಕೆದಾರರು ಯುಪಿಐನಲ್ಲಿ ತಪ್ಪಾಗಿ ಬೇರೆಯವರ ಖಾತೆಗೆ ಹಣ ಹಾಕಿದರೆ ಮೊದಲು ಪಾವತಿ ಸೇವಾ ಪೂರೈಕೆದಾರರಿಗೆ ಸಮಸ್ಯೆಯನ್ನು ವರದಿ ಮಾಡಬೇಕು. ಗೂಗಲ್ ಪೇ (Google Pay), ಫೋನ್ ಪೇ (PhonePe), ಪೇಟಿಎಂ (Paytm) ಅಥವಾ ಯಾವುದೇ ಯುಪಿಐ ಅಪ್ಲಿಕೇಶನ್‌ನ ಕಸ್ಟಮರ್ ಕೇರ್ಗೆ ಕರೆ ಮಾಡುವ ಮೂಲಕ ನೀವು ವಿಷಯದ ಬಗ್ಗೆ ತಿಳಿಸಬೇಕು. ನಿಮ್ಮ ಸಮಸ್ಯೆಯನ್ನು ಹೇಳಿಕೊಂಡು ಮರುಪಾವತಿಯನ್ನು ಕೇಳಬಹುದು.

NPCI ಪೋರ್ಟಲ್‌ನಲ್ಲಿ ದೂರು ನೀಡಿ :-

ನಿಮಗೆ ಕಸ್ಟಮರ್ ಕೇರ್ನಿಂದ ಸಹಾಯ ಸಿಗದಿದ್ದರೆ, ನೀವು NPCI ಪೋರ್ಟಲ್‌ನಲ್ಲಿ ದೂರು ನೀಡಬಹುದು. ಇದಕ್ಕಾಗಿ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ.

ಇದನ್ನೂ ಕೂಡ ಓದಿ : Atal Pension Yojana : ಈ ಯೋಜನೆಯಡಿ ಪ್ರತಿ ತಿಂಗಳಿಗೆ ₹5,000/- ಪಿಂಚಣಿ ಪಡೆಯಲು ಅರ್ಜಿ ಆಹ್ವಾನ.! ಬೇಕಾಗುವ ದಾಖಲೆಗಳೇನು.?

NPCI ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ನಂತರ What we do ಹೆಸರಿನ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದಾದ ಬಳಿಕ UPI ಮೇಲೆ ಟ್ಯಾಪ್ ಮಾಡಿ. ನಂತರ Dispute Redressal Mechanism ಆಯ್ಕೆಮಾಡಿ. ದೂರು ವಿಭಾಗದ ಅಡಿಯಲ್ಲಿ, ಯುಪಿಐ ವಹಿವಾಟು ಐಡಿ, ವರ್ಚುವಲ್ ಪಾವತಿ ವಿಳಾಸ, ವರ್ಗಾವಣೆಯಾದ ಮೊತ್ತ, ವಹಿವಾಟಿನ ದಿನಾಂಕ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಒಳಗೊಂಡಿರುವ ವಹಿವಾಟಿನ ವಿವರಗಳನ್ನು ನಮೂದಿಸಿ.

ಇಲ್ಲಿ ಇನ್ನೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ ಎಂಬ ಕಾರಣವನ್ನು ಆಯ್ಕೆಮಾಡಿ. ಕೊನೆಯಲ್ಲಿ ದೂರನ್ನು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ. ಬ್ಯಾಂಕ್ ಅನ್ನು ಸಂಪರ್ಕಿಸಿ. ದೂರು ನೀಡಿದ ನಂತರವೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದಾದರೆ, ನೀವು ಪಾವತಿ ಸೇವಾ ಪೂರೈಕೆದಾರರ ಬ್ಯಾಂಕ್ ಅಥವಾ ಹಣವನ್ನು ಕಳುಹಿಸಿರುವ ಖಾತೆಯ ಬ್ಯಾಂಕ್‌ಗೆ ನಿಮ್ಮ ದೂರನ್ನು ಸಲ್ಲಿಸಬಹುದು. ಈ ದೂರನ್ನು PSP/TPAP ಅಪ್ಲಿಕೇಶನ್‌ನಲ್ಲಿ ದಾಖಲಿಸಬಹುದು.

ಇದನ್ನೂ ಕೂಡ ಓದಿ : BPL Ration Card : ಪಾನ್ ಕಾರ್ಡ್ – ಆಧಾರ್ ಕಾರ್ಡ್ ಜೋಡಣೆ ಮಾಡಿದ ಬಡವರ ಬಿಪಿಎಲ್ ಕಾರ್ಡ್ ರದ್ದು.?ಗ್ಯಾರಂಟಿ ಸೌಲಭ್ಯವೂ ಕಡಿತ.!

ಒಂಬುಡ್ಸ್‌ಮನ್‌ಗೆ ದೂರು ನೀಡಿ :-

ಮೇಲಿನ ವಿಧಾನಗಳನ್ನು ಅನುಸರಿಸಿದ ನಂತರವೂ ದೂರಿಗೆ ಯಾವುದೇ ಪರಿಹಾರ ಸಿಗದಿದ್ದರೆ, 30 ದಿನಗಳ ನಂತರ ನೀವು ಡಿಜಿಟಲ್ ದೂರಿಗಾಗಿ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ರನ್ನು ಸಂಪರ್ಕಿಸಬಹುದು. ಆರ್‌ಬಿಐ ಪ್ರಕಾರ ಯಾರು ಬೇಕಾದರೂ ಲೋಕಪಾಲ್‌ಗೆ ದೂರು ಸಲ್ಲಿಸಬಹುದು. ನಿಮ್ಮ ದೂರನ್ನು ನೀವು ಕಾಗದದ ಮೂಲಕ ಬರೆದು ಅದನ್ನು ಪೋಸ್ಟ್/ಫ್ಯಾಕ್ಸ್ ಮೂಲಕ ಕಚೇರಿಗೆ ಕಳುಹಿಸಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply