Ration Card : ನಮಸ್ಕಾರ ಸ್ನೇಹಿತರೇ, ನಿಮ್ಮ ಬಳಿ ಪಡಿತರ ಚೀಟಿ ಇದೆಯಾ.? ಹಾಗಾದ್ರೆ ಕಡ್ಡಾಯವಾಗಿ ಈ ಸುದ್ದಿಯನ್ನು ನೋಡಲೇಬೇಕು. ಏಕೆಂದರೆ ಆಗಸ್ಟ್ 31ರೊಳಗಡೆ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರು ಈ ಕೆಲಸ ಮಾಡಬೇಕು, ಇಲ್ಲವಾದರೆ ರೇಷನ್ ಕಾರ್ಡ್ ರದ್ದು ಮಾಡಲಾಗುವುದು ಎಂದು ಸಚಿವರಾದ ಕೆ.ಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಕೂಡ ಓದಿ : ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲ ಸೌಲಭ್ಯ – business loan for women
ಈಗಿನ ಕಾಲದಲ್ಲಿ ರೇಷನ್ ಕಾರ್ಡ್ ಎಷ್ಟು ಮುಖ್ಯವಾಗುತ್ತದೆ ಅಂದರೆ ಸರಕಾರದ ವಿವಿಧ ರೀತಿ ಯೋಜನೆಗಳ ಲಾಭ ಪಡೆಯಬೇಕಾದರೆ ನೀವು ರೇಷನ್ ಕಾರ್ಡ್ ಹೊಂದಿರಬೇಕು. ಸಾಕಷ್ಟು ಜನರು ಅಕ್ರಮವಾಗಿ ಮತ್ತು ಸುಳ್ಳು ದಾಖಲಾತಿಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಆದ್ದರಿಂದ ಸರ್ಕಾರವು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇರುತ್ತೆ ಇಲ್ಲವಾದರೆ ರದ್ದು ಮಾಡಲಾಗುತ್ತೆ
ಬಿಪಿಎಲ್ ರೇಷನ್ ಕಾರ್ಡ್ ಇದ್ರೆ ನಮ್ಮ ಕರ್ನಾಟಕದಲ್ಲಿ ಜಾರಿಗೆ ಇರುವಂತಹ 5 ಗ್ಯಾರಂಟಿಗಳ ಯೋಜನೆಯ ಲಾಭ ಪಡೆಯಬಹುದು. ಜೊತೆಗೆ ಕೇಂದ್ರ ಸರ್ಕಾರ ಹಾಗೂ ಇತರ ಯೋಜನೆಗಳ ಲಾಭ ಪಡೆಯಬಹುದು. ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇರಬೇಕಾದರೆ ಕಡ್ಡಾಯವಾಗಿ ನೀವು ಆಗಸ್ಟ್ 31ನೇ ತಾರೀಖಿನ ಒಳಗಡೆಯಾಗಿ ಈ ಕೆಲಸ ಮಾಡಿ ಇತರ ವಿವರವನ್ನು ಕೆಳಗಡೆ ವಿವರಿಸಲಾಗಿದೆ.
ಇದನ್ನೂ ಕೂಡ ಓದಿ : RF Scholarship : ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ₹50,000/- ಸ್ಕಾಲರ್ಶಿಪ್.! ಹೇಗೆ ಅರ್ಜಿ ಸಲ್ಲಿಸುವುದು.? ಕೊನೆಯ ದಿನಾಂಕ ಯಾವುದು.?
ಅಗಸ್ಟ್ 31 ಕೊನೆಯ ದಿನಾಂಕ ಏಕೆ.?
ರಾಜ್ಯ ಸರ್ಕಾರ ಕಡೆಯಿಂದ ಪಡಿತರ ಚೀಟಿ ಹೊಂದಿದವರಿಗೆ ಆಗಸ್ಟ್ 31ನೇ ತಾರೀಕು ಕೊನೆಯ ದಿನಾಂಕ ಏಕೆಂದರೆ ಈ ದಿನಾಂಕದೊಳಗೆ ರೇಷನ್ ಕಾರ್ಡ್ ಹೊಂದಿದಂತವರು ಪ್ರತಿಯೊಬ್ಬರು ತಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಈ-ಕೆವೈಸಿ ಮಾಡಿಸುವುದು ಕಡ್ಡಾಯ. ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಅಂದರೆ ಮಾತ್ರ ರೇಷನ್ ಕಾರ್ಡ್ ಚಾಲ್ತಿಯಲ್ಲಿರುತ್ತದೆ.
ಈಗಾಗಲೇ ರಾಜ್ಯ ಸರ್ಕಾರ ಕಡೆಯಿಂದ ಸಾಕಷ್ಟು ಸಲ ಈ-ಕೆವೈಸಿ ಮಾಡಿಸಲು ಅವಕಾಶ ಕೊಟ್ಟಿದೆ ಮತ್ತು ಎರಡರಿಂದ ಮೂರು ಸಲ ದಿನಾಂಕ ವಿಸ್ತರಣೆ ಮಾಡುತ್ತಾ ಬಂದಿದೆ. ಹಾಗಾಗಿ ರಾಜ್ಯ ಸರ್ಕಾರ ಆಗಸ್ಟ್ 31 ನೇ ತಾರೀಕು ಕೊನೆಯ ದಿನಾಂಕ ಪ್ರಕಟಣೆ ಮಾಡಿದ್ದು ಈ ದಿನಾಂಕದ ಒಳಗಡೆ ರೇಷನ್ ಕಾರ್ಡ್ ಹೊಂದಿದವರು ಪ್ರತಿಯೊಬ್ಬರು ಈ-ಕೆವೈಸಿ ಮಾಡಿಸಬೇಕು. ಹಾಗಾಗಿ ಈ ದಿನಾಂಕವನ್ನು ಮುಂದೂಡಬಹುದು ಅಥವಾ ಈ ದಿನಾಂಕವೇ ಕೊನೆಯ ಮಾಡಬಹುದು ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಪ್ಡೇಟ್ ಬಂದರೆ ನಾವು ನಿಮಗೆ ಮತ್ತೆ ಅಪ್ಡೇಟ್ ಮಾಡುತ್ತೇವೆ.
ಇದನ್ನೂ ಕೂಡ ಓದಿ : Grama Panchayath Jobs : ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..! 10ನೇ ತರಗತಿ ಪಾಸ್ ಆದ್ರೆ ಸಾಕಂತೆ.! ಬೇಗ ಅರ್ಜಿ ಸಲ್ಲಿಸಿ
ಈ-ಕೆವೈಸಿ ಎಲ್ಲಿ ಮಾಡಿಸುವುದು.?
ರೇಷನ್ ಕಾರ್ಡ್ ಹೊಂದಿರುವವರು ಈ-ಕೆವೈಸಿ ಮಾಡಿಸಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ. ಈ-ಕೆವೈಸಿ ಮಾಡಿಸಲು ನಿಮಗೆ ಬೆಳಗ್ಗೆ 7:00 AM ಗಂಟೆಯಿಂದ ಸಾಯಂಕಾಲ 6:00 PM ಗಂಟೆಯವರೆಗೆ ಅವಕಾಶವಿರುತ್ತದೆ. ಹಾಗಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಸದಸ್ಯರ ಈ-ಕೆವೈಸಿ ಆಗಿಲ್ಲವೆಂದರೆ ಕೂಡಲೇ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಈ ಕೆಲಸ ಮಾಡಿ.
ನಿಮ್ಮ ಹತ್ತಿರದಲ್ಲಿರುವಂತ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಈ-ಕೆವೈಸಿ ಮಾಡಿಸಬಹುದು. ಜೊತೆಗೆ ಈ ಆಧಾರ್ ಕಾರ್ಡ್ ಲಿಂಕ್ ಕೂಡ ಮಾಡಿಸಬಹುದು. ಹಾಗಾಗಿ ಭೇಟಿ ನೀಡಿ ಬೇಗ ಮಾಡಿಸಿಕೊಳ್ಳಿ. ಮತ್ತು ಅಗಸ್ಟ್ 31 ನೇ ತಾರೀಕು ಕೊನೆಯ ದಿನಾಂಕವಾಗಿದ್ದು, ಈ ದಿನಾಂಕವನ್ನು ರಾಜ್ಯ ಸರ್ಕಾರ ಕಡೆಯಿಂದ ಮುಂದೂಡಬಹುದು ಹಾಗಾಗಿ ಯಾವುದೇ ಅಪ್ಡೇಟ್ ಸಿಕ್ಕ ನಂತರ ನಾವು ನಿಮಗೆ ಅಪ್ಡೇಟ್ ಮಾಡುತ್ತೇವೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Arecanut Price : ಇಂದಿನ ಅಡಿಕೆ ಧಾರಣೆ : ಚೇತರಿಕೆ ಕಂಡಿತಾ ಅಡಿಕೆ ದರ : ಇಲ್ಲಿದೆ ಡಿಸೆಂಬರ್ 23ರ ದರಪಟ್ಟಿ
- ರಕ್ತನಾಳಗಳಲ್ಲಿ ಬ್ಲಾಕೇಜ್ ಇಲ್ಲದಿದ್ದರೂ ಕಾಡಬಹುದು ಹೃದಯಾಘಾತ! ಏನಿದು MINOCA? 2025ರಲ್ಲಿ ಈ ಪ್ರಕರಣಗಳು ಹೆಚ್ಚುತ್ತಿರುವುದು ಏಕೆ?
- ‘ಲವರ್’ ಜೊತೆ ಸೇರಿ ಪತಿಗೆ ನೇಣು ಬಿಗಿದು ಕೊಂದು ‘ಹೃದಯಾಘಾತ’ ಎಂದು ಬಿಂಬಿಸಿದ ಪಾಪಿ ಪತ್ನಿ.!
- ಮುಸ್ಲಿಂ ವೈದ್ಯೆಯ ನಕಾಬ್ ಎಳೆದ ಪ್ರಕರಣ : ಸಿಎಂ ನಿತೀಶ್ ಭಾವಚಿತ್ರಕ್ಕೆ ಚಪ್ಪಲಿ ಏಟು
- Horoscope Today : ಡಿಸೆಂಬರ್ 23 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಫೆಬ್ರವರಿ-ಮಾರ್ಚ್ ತಿಂಗಳ `ಗೃಹಲಕ್ಷ್ಮಿ’ ಹಣ ಬಿಡುಗಡೆ : ಸಿಎಂ ಸಿದ್ದರಾಮಯ್ಯ ಘೋಷಣೆ
- ಡಿ ಕೆ ಶಿವಕುಮಾರ್ ಎಷ್ಟೇ ಯತ್ನಿಸಿದರೂ ನಾನು ಸಿದ್ದರಾಮಯ್ಯ ಪರ : ಮಾಜಿ ಸಚಿವ ಕೆ.ಎನ್ ರಾಜಣ್ಣ
- ಗಂಡ ಇಷ್ಟ ಇಲ್ಲ, ಪ್ರೇಮಿಯೂ ಸೇರಿಸ್ತಿಲ್ಲ; ‘ಯಾರಿಗೆ ಬೇಕು ಈ ಲೋಕ’ವೆಂದು ಲೈವ್ನಲ್ಲಿ ನೇಣಿಗೆ ಶರಣಾದ ಗೃಹಿಣಿ!
- ನಾರ್ಮಲ್ ಕೊಲೆಸ್ಟ್ರಾಲ್ ಇದ್ದರೂ ಭಾರತೀಯರಲ್ಲಿ ಹೃದಯಾಘಾತ ಸಂಭವಿಸುವುದೇಕೆ.? ಇಲ್ಲಿದೆ ವೈದ್ಯರು ನೀಡುವ 5 ಆಘಾತಕಾರಿ ಕಾರಣಗಳು
- ಕೊಲೆಸ್ಟ್ರಾಲ್ ಹೆಚ್ಚಾಗಿದೆ ಅಂತ ಚಿಂತೆನಾ? ಈ ಒಂದು ಹಣ್ಣು ತಿಂದ್ರೆ ಸಾಕು ರಕ್ತದಲ್ಲಿರೋ LDL ಕಡಿಮೆಯಾಗುತ್ತೆ.!
- ಬೆಂಗಳೂರಲ್ಲಿ ಆಂಟಿ ಸಹವಾಸ ಬೇಡ ಅಂದ ಯುವಕನ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ : ಮಹಿಳೆ ಅರೆಸ್ಟ್
- Horoscope Today : ಡಿಸೆಂಬರ್ 22 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : ಸೋಮವಾರದ 12 ರಾಶಿ ಭವಿಷ್ಯ ಇಲ್ಲಿದೆ
- ರಾಜ್ಯದಲ್ಲಿ ಮರ್ಯಾದಾ ಹತ್ಯೆ : ಅನ್ಯ ಜಾತಿ ಯುವಕನ ಜತೆ ಮದುವೆ : ಗರ್ಭಿಣಿ ಮಗಳನ್ನು ಕೊಂದ ಪಾಲಕರು
- ಅನ್ಯ ಧರ್ಮಿಯ ಜೊತೆ ಮದುವೆ : ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ಗ್ಯಾಸ್ಟ್ರಿಕ್ ಎಂದು 5 ವರ್ಷ ಸುಮ್ಮನಿದ್ದ ವ್ಯಕ್ತಿಗೆ ವೈದ್ಯರ ಬಳಿ ಹೋದಾಗ ಕಾದಿತ್ತು ಶಾಕ್!
- ಇಳಿ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ತಂದೆ – ಆಸ್ತಿಗಾಗಿ ಮಕ್ಕಳಿಂದ ಹಲ್ಲೆ.!
- ತಾಕತ್ತಿದ್ರೆ ನೋಟಲ್ಲಿರುವ ಮಹಾತ್ಮ ಗಾಂಧಿ ಚಿತ್ರ ತೆಗೆಯಿರಿ : ಕೇಂದ್ರಕ್ಕೆ ಡಿ.ಕೆ ಶಿವಕುಮಾರ್ ಸವಾಲು!
- ಅಸಮರ್ಥರನ್ನು ಜಗದೇಕ ವೀರ ಎನ್ನಬೇಕೆ? : ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕೆ
- ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಮಕ್ಕಳು, ಗರ್ಭಿಣಿಯರಿಗೆ ಅಪಾಯ; ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ
- ಸಾಮೂಹಿಕ ಅತ್ಯಾಚಾರ ಪ್ರಕರಣ: ಏಳೂ ಆರೋಪಿಗಳು ಯಾದಗಿರಿಗೆ ಗಡಿಪಾರು



















