ಪೇಂಟ್ ಮಾಡಲು ಬಂದವನ ಜತೆ ಲವ್ವಿಡವ್ವಿ: ಗಂಡನ ಕಥೆ ಮುಗಿಸಲು ಡೀಲ್; ಬಯಲಿಗೆ ಬಂದಿದ್ದೇ ರೋಚಕ

Spread the love

ಹೊಸ ಮನೆಗೆ ಪೇಂಟಿಂಗ್ ಮಾಡಲು ಬಂದಿದ್ದ ಯುವಕನೊಂದಿಗೆ ಸ್ನೇಹ ಬೆಳಸಿ, ಪತ್ನಿಯೇ ಪತಿಯ ಕೊಲೆ ಮಾಡಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಪತಿಯ ಕೊಲೆಗೆಪತ್ನಿಯೇ ಸಂಚು ರೂಪಿಸಿದ್ದು, ಆಕೆಯ ಪ್ರಿಯಕರ ಹಾಗೂ ಇತರೆ ಇಬ್ಬರು ಈ ಕೃತ್ಯಕ್ಕೆ ಸಹಕರಿಸಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ನಾಲ್ವರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?

ರಾಜಶೇಖರ್ ಹಾಗೂ ಅಶ್ವಿನಿಗೆ ಸಂಬಂಧದಲ್ಲಿಯೇ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ 6 ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ. ಆದರೆ ದಂಪತಿ ಮಧ್ಯೆ ಸಾಮರಸ್ಯವಿರಲಿಲ್ಲವಂತೆ. ಈ ಮಧ್ಯೆ ರಾಜಶೇಖರ್ ನೂತನವಾಗಿ ಮನೆ ಕಟ್ಟಿಸಿದ್ದರು. ಮನೆಯ ಪೇಂಟಿಂಗ್ ಕೆಲಸಕ್ಕೆ ಬಂದಿದ್ದ ಮದೀನಾ ನಗರ ವಾಸಿ ಆನಂದ್ ಕಲ್ಲೂರ, ಅಶ್ವಿನಿಗೆ ಪರಿಚಯವಾಗಿದ್ದ. ಇವರಿಬ್ಬರ ಪರಿಚಯ ಮುಂದೆ ಪ್ರೀತಿಗೆ ತಿರುಗಿದೆ. ‘ಅಶ್ವಿನಿ ನನ್ನ ಗಂಡನನ್ನು ಮುಗಿಸಿ ಬಿಡೋಣ, ನಂತರ ನಾನು-ನೀನು ಜೊತೆಯಾಗಿರೋಣ’ ಎಂದು ಆನಂದ್ಗೆ ಹೇಳಿದ್ದಳಂತೆ. ಆನಂದ್ ಸಹ ತನಗೆ ಮದುವೆಯಾಗಿರುವ ವಿಚಾರ ಮುಚ್ಚಿಟ್ಟು ರಾಜಶೇಖರ್ ಕೊಲೆ ಮಾಡಿ ಇಡೀ ಆಸ್ತಿ ಹೊಡೆಯಲು ಮುಂದಾಗಿದ್ದ.

ಪತಿ ಹತ್ಯೆಗೆ ಪತ್ನಿಯ ಮಾಸ್ಟರ್ ಪ್ಲ್ಯಾನ್

ರಾಜಶೇಖರ್ ಕೊಲೆಗೆ ಪಕ್ಕಾ ಪ್ಲ್ಯಾನ್ ಮಾಡುತ್ತಾರೆ. ಅದೊಂದು ದಿನ ರಾಜಶೇಖರ್ ಎಂದಿನಂತೆ ವಾಕಿಂಗ್ಗೆ ತೆರಳಿದ್ದು, ತಕ್ಷಣ ಈ ವಿಚಾರವನ್ನು ಅಶ್ವಿನಿ ಆನಂದ್ಗೆ ತಿಳಿಸುತ್ತಾಳೆ. ಅತ್ತ ಆನಂದ್ ತನ್ನದೇ ಏರಿಯಾದ ಸಹಚರರಾದ ಓರ್ವ ಅಪ್ರಾಪ್ತ ಬಾಲಕ ಹಾಗೂ ಸಚಿನ ಬಡಳ್ಳಿಗೆ ಮೊದಲೇ ಪ್ಲ್ಯಾನ್ ಮಾಡಿದಂತೆ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಬರಲು ಹೇಳಿ, ತಾನು ರೀಂಗ್ ರೋಡ್ ಬಳಿಯ ಜುಮನಾಳ ರಸ್ತೆಯಲ್ಲಿ ಕಾಯುತ್ತಾ ನಿಂತಿದ್ದ.

ಈ ವೇಳೆ ಅಶ್ವಿನಿ, ಆನಂದ್ ಜೊತೆಗೆ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದಳು. ಇದೇ ವೇಳೆ ಜಮನಾಳದತ್ತ ರಾಜಶೇಖರ್ ನಡೆದುಕೊಂಡು ಹೋಗುತ್ತಿರುವುದನ್ನ ಕಂಡ ಆನಂದ್ ಈತನ ಮೇಲೆ ವಾಹನ ಚಲಾಯಿಸಿ ಬಿಡಿ ಎಂದು ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಸಚಿನ್ಗೆ ಹೇಳುತ್ತಾನೆ. ಆಗ ಸಚಿಸ್ ಬಡಳ್ಳಿ ವೇಗವಾಗಿ ಸ್ಕಾರ್ಪಿಯೋ ಚಲಾಯಿಸಿಕೊಂಡು ರಾಜಶೇಖರ್ಗೆ ಡಿಕ್ಕಿ ಹೊಡೆಯುತ್ತಾನೆ. ಡಿಕ್ಕಿಯ ರಭಸಕ್ಕೆ ರಾಜಶೇಖರ್ನನ್ನ ನೂರು ಅಡಿ ದೂರ ಎಳೆದುಕೊಂಡ ಹೋಗಲಾಗಿದ್ದು, ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

ಸ್ಕೂಟಿಯಲ್ಲಿ ಬಂದ ಆನಂದ್, ರಾಜಶೇಖರ್ ಮೃತಪಟ್ಟಿದ್ದನ್ನು ಖಚಿತ ಮಾಡಿಕೊಂಡು ಆಶ್ವಿನಿಗೆ ಕೆಲಸ ಮುಗಿಯಿತು ಎಂದು ವಿಷಯ ತಿಳಿಸಿ ಅಲ್ಲಿಂದ ಹೋಗುತ್ತಾನೆ. ಅಪರಿಚತ ವಾಹನ ಡಿಕ್ಕಿಯಾಗಿ ನನ್ನ ಪತಿ ಮೃತಪಟ್ಟಿದ್ದಾರೆಂದು ಅಶ್ವಿನಿ ಪೊಲೀಸ್ ಠಾಣೆಗೆ ದೂರು ನೀಡಿ ಸುಮ್ಮನಿರುತ್ತಾಳೆ.

ಸಿಸಿಟಿವಿ ದೃಶ್ಯಗಳಿಂದ ಪ್ರಕರಣಕ್ಕೆ ತಿರುವು

ಇನ್ನು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ರಾಜಶೇಖರ್ ಅಪಘಾತದಲ್ಲಿ ಸಾವಿಗೀಡಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ನಗರ ಡಿವೈಎಸ್ಪಿ ನಾಗರಾಜ್ ಅವರ ನೇತೃತ್ವದಲ್ಲಿ ಫೀಲ್ಡಿಗಿಳಿದ ತನಿಖಾ ತಂಡ ರಾಜಶೇಖರ್ ಮೃತಪಟ್ಟ ಸ್ಥಳದ ಸುತ್ತಮುತ್ತಲ ಸ್ಥಳಗಳಲ್ಲಿನ ಸಿಸಿ ಕ್ಯಾಮೆರಾಗಳನ್ನು ಚೆಕ್ ಮಾಡಿದ್ದಾರೆ. ಎರಡು ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಹಾಗೂ ಓರ್ವ ವ್ಯಕ್ತಿ ಸ್ಕೂಟಿಯಲ್ಲಿ ಕುಳಿತುಕೊಂಡಿರುವುದು, ಸ್ಕ್ರಾರ್ಪಿಯೋ ವಾಹನ ಹೋಗಿರುವುದು ಸೆರೆಯಾಗಿತ್ತು. ಅದೇ ಸ್ಕಾರ್ಪಿಯೋ ರಾಖಶೇಖರ್ಗೆ ಡಿಕ್ಕಿ ಹೊಡೆದು 100 ಅಡಿಗೂ ಹೆಚ್ಚು ದೂರು ಎಳೆದೊಯ್ದಿದ್ದು ಇನ್ನೊಂದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇತ್ತ ರಾಜಶೇಖರ್ ಪತ್ನಿ ಅಶ್ವಿನಿ ನಡವಳಿಕೆ ಮೇಲೆಯೂ ಖಾಕಿ ಪಡೆ ಕಣ್ಣಿಟ್ಟಿತ್ತು. ಗಂಡ ಮೃತಪಟ್ಟ ದುಃಖ ಆಕೆಯ ಮುಖದಲ್ಲಿ ಕಂಡಿರಲಿಲ್ಲ. ಅತ್ತ ಸ್ಕಾರ್ಪಿಯೋ ವಾಹನ ಯಾರದ್ದೆಂದು ಕಂಡುಹಿಡಿದು ಚಾಲನನನ್ನು ವಿಚಾರಣೆ ಮಾಡಿದಾಗ ಇಡೀ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ರಾಜಶೇಖರ್ನನ್ನು ಅಪಘಾತದ ರೂಪದಲ್ಲಿ ಕೊಲೆ ಮಾಡುವುದಕ್ಕೆ ಆತನ ಪತ್ನಿ ಅಶ್ವಿನಿಯೇ ಪಕ್ಕಾ ಪ್ಲ್ಯಾನ್ ಮಾಡಿದ್ದು ತನಿಖೆಯಲ್ಲಿ ಬಯಲಾಗಿದೆ. ಸದ್ಯ ಪತ್ನಿ ಸೇರಿ ನಾಲ್ವರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

WhatsApp Group Join Now

Spread the love

Leave a Reply