ಎಡ ಭುಜದ ಬಿಗಿತವನ್ನು ಗ್ಯಾಸ್ ಎಂದು ತಿಳಿದುಕೊಂಡರೆ ಜೀವಕ್ಕೆ ಅಪಾಯ! ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

Spread the love

ಪ್ರತಿಯೊಬ್ಬರೂ ತಮ್ಮ ಆರೋಗ್ಯ(Health)ಕ್ಕೆ ಗಮನ ಕೊಡುವುದು ತುಂಬಾ ಮುಖ್ಯ. ಕೆಲವು ಲಕ್ಷಣಗಳು ಸಾಮಾನ್ಯವಾಗಿ ಕಂಡರೂ ಅಪಾಯಕಾರಿ (Dangerous) ಆಗಬಹುದು. ಇಂದು ಪ್ರಪಂಚದಾದ್ಯಂತ ಬಹಳಷ್ಟು ಜನರು ಹೃದಯ (Heart) ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದು ಗಂಭೀರ ವಿಷಯ.

ವಯಸ್ಸಾದವರು ಮಾತ್ರವಲ್ಲ, ಯುವಕರಿಗೂ ಹೃದಯಾಘಾತ (Heart Attack) ಬರಬಹುದು. ಅದು ಯಾವಾಗ ಬೇಕಾದರೂ ಯಾರಿಗಾದರೂ ಬರಬಹುದು.

ಹೃದಯಾಘಾತದ ಮೊದಲ ಲಕ್ಷಣಗಳನ್ನು ಜನರು ಸಾಮಾನ್ಯ ನೋವು ಅಂದುಕೊಳ್ಳುತ್ತಾರೆ. ಇದರಿಂದ ಚಿಕಿತ್ಸೆ ತಡವಾಗಿ, ಪರಿಸ್ಥಿತಿ ಹದಗೆಟ್ಟು ಸಾವು ಸಂಭವಿಸಬಹುದು. ಅಂತಹ ಕೆಲವು ಸಾಮಾನ್ಯ ಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ .

ಹೃದಯಾಘಾತ ಆಗೋದು ಹೇಗೆ.?

ಹೃದಯಕ್ಕೆ ರಕ್ತ ಮತ್ತು ಆಮ್ಲಜನಕ ತರುವ ನಾಳಗಳು ಇದ್ದಕ್ಕಿದ್ದಂತೆ ಮುಚ್ಚಿದಾಗ ಹೃದಯಾಘಾತ ಆಗುತ್ತದೆ. ಇದು ಸಾಮಾನ್ಯವಾಗಿ ನಾಳಗಳಲ್ಲಿ ಕೊಬ್ಬಿನ ಪದರ ಒಡೆದು ರಕ್ತ ಹೆಪ್ಪುಗಟ್ಟುವುದರಿಂದ ಆಗುತ್ತದೆ. ಆಮ್ಲಜನಕ ಸಿಗದೆ ಹೃದಯಕ್ಕೆ ಹಾನಿಯಾಗುತ್ತದೆ. ಇದರಿಂದ ಎದೆಯಲ್ಲಿ ತೀವ್ರ ನೋವು ಅಥವಾ ಒತ್ತಡ ಮತ್ತು ಉಸಿರಾಟಕ್ಕೆ ತೊಂದರೆ ಆಗುತ್ತದೆ.

ತಕ್ಷಣ ಚಿಕಿತ್ಸೆ ನೀಡದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು. ರಕ್ತದ ಹರಿವು ಸರಿಪಡಿಸಲು ಹೆಚ್ಚು ಸಮಯ ತೆಗೆದುಕೊಂಡರೆ ಹೃದಯ ಸ್ನಾಯುವಿಗೆ ಹೆಚ್ಚು ಹಾನಿ ಆಗುತ್ತದೆ ಎಂದು ಅಮೆರಿಕಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ವರದಿ ಎಚ್ಚರಿಸಿದೆ.

ಭುಜದ ನೋವು ಅಪಾಯ.!

ಹೃದಯಾಘಾತದ ಲಕ್ಷಣಗಳು ಕೇವಲ ಎದೆ ನೋವು ಅಥವಾ ಉಸಿರಾಟದ ತೊಂದರೆ ಮಾತ್ರವಲ್ಲ. ಸಾಮಾನ್ಯ ಲಕ್ಷಣಗಳೂ ಹೃದಯಾಘಾತವನ್ನು ತೋರಿಸಬಹುದು. ಅವುಗಳಲ್ಲಿ ಇವು ಸೇರಿವೆ.

ದವಡೆ, ಕತ್ತು ಅಥವಾ ಬೆನ್ನಿನಲ್ಲಿ ನೋವು ಅಥವಾ ಅಸೌಕರ್ಯ.

ಒಂದು ಅಥವಾ ಎರಡೂ ತೋಳುಗಳು ಅಥವಾ ಹೆಗಲುಗಳಲ್ಲಿ ನೋವು.

ಉಸಿರಾಡಲು ಕಷ್ಟ. ಇದು ಎದೆ ನೋವಿನೊಂದಿಗೆ ಅಥವಾ ಅದಕ್ಕಿಂತ ಮೊದಲು ಬರಬಹುದು.

ಎದೆಯ ನಡುವೆ ಅಥವಾ ಎಡಭಾಗದಲ್ಲಿ ನೋವು, ಒತ್ತಡ, ಬಿಗಿತ ಅಥವಾ ಭಾರದ ಭಾವನೆ.

ದೇಹ ದುರ್ಬಲವಾಗಿ, ತಲೆ ಸುತ್ತಿ ಅಥವಾ ಮೂರ್ಛೆ ಹೋಗುವಂತೆ ಅನಿಸುವುದು.

ಜನರು ಈ ಲಕ್ಷಣಗಳನ್ನು ಸಾಮಾನ್ಯವಾಗಿ ಗ್ಯಾಸ್ ಅಥವಾ ತಪ್ಪಾಗಿ ಮಲಗಿದ್ದರಿಂದ ಬಂದ ಭುಜ/ಕುತ್ತಿಗೆ ನೋವು ಎಂದು ತಿಳಿಯುತ್ತಾರೆ. ಆದರೆ ನೋವಿನ ಜೊತೆಗೆ ಬೇರೆ ಲಕ್ಷಣಗಳು ಕಾಣಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಹೇಗೆ.?

ಕೆಟ್ಟ ಆಹಾರ, ಸಕ್ಕರೆ ಕಾಯಿಲೆ, ದಪ್ಪದೇಹ ಮತ್ತು ರಕ್ತದೊತ್ತಡದ ಸಮಸ್ಯೆಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ. ವೈದ್ಯರು ಹೇಳಿದಂತೆ ಔಷಧಿ ಮತ್ತು ಆಹಾರ ತೆಗೆದುಕೊಳ್ಳಿ.

ಸಿಡಿಸಿ ಪ್ರಕಾರ, ಕೆಲವು ಸರಳ ಕ್ರಮಗಳಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಹೃದಯ ಸಮಸ್ಯೆ ಇದ್ದರೆ, ವೈದ್ಯರು ಹೇಳಿದಂತೆ ಸೈಕಲ್ ಹಾಕಿ ಮತ್ತು ನಡೆಯಿರಿ.

ಜೀವನಶೈಲಿ ಬದಲಾಯಿಸಿ. ಆರೋಗ್ಯಕರ ಆಹಾರ ತಿನ್ನಿ, ವೈದ್ಯರು ಕೊಟ್ಟ ಔಷಧಿ ತೆಗೆದುಕೊಳ್ಳಿ, ಹೆಚ್ಚು ಚಲನೆ ಮಾಡಿ, ಸಿಗರೇಟ್ ಬಿಡಿ ಮತ್ತು ಒತ್ತಡವನ್ನು ಕಡಿಮೆ ಮಾಡಿ. ಇದರಿಂದ ಹೃದಯದ ಆರೋಗ್ಯ ಮತ್ತು ಜೀವನದ ಗುಣಮಟ್ಟ ಸುಧಾರಿಸುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. Kannada News Timeಗೂ ಇದಕ್ಕೂ ಸಂಬಂಧವಿಲ್ಲ. ಇದಕ್ಕೆ ಜವಾಬ್ದಾರಿಯಲ್ಲ)

WhatsApp Group Join Now

Spread the love

Leave a Reply