ಒಂದೇ ಕುಟುಂಬದ ನಾಲ್ವರ ಸಜೀವ ದಹನಕ್ಕೆ ಮನೆಯಲ್ಲಿದ್ದ ಫ್ರಿಡ್ಜ್ (Fridge) ಕಾರಣ ಎಂದು ತಿಳಿದು ಬಂದಿದೆ. ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಬಳಿಕ ಮನೆಯಲ್ಲಿದ್ದ ಫ್ರಿಡ್ಜ್ ಸ್ಫೋಟಗೊಂಡಿದ್ದು, ಭೀಕರ ಅಗ್ನಿಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗಾವಿಯ ಚಾವ್ಹಾಣ್ ಗಲ್ಲಿಯಲ್ಲಿ ಈ ಘಟನೆ ಸಂಭವಿಸಿದೆ.
ಫ್ರಿಡ್ಜ್ ಪಕ್ಕದಲ್ಲೇ ಮಲಗಿದ್ರು ನಾಲ್ವರು!
ಶಾರ್ಟ್ ಸರ್ಕ್ಯೂಟ್ನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣದಲ್ಲೇ ಮನೆ ಹೊತ್ತಿ ಉರಿದಿದೆ. ಮಹಿಳೆಯರ ಸಾವಿನ ದುರಂತಕ್ಕೆ ಫ್ರಿಡ್ಜ್ ಸ್ಪೋಟವೇ ಕಾರಣ ಎನ್ನಲಾಗ್ತಿದೆ. ಊಟ ಮಾಡಿ ಮಲಗಿದ ಮೇಲೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಈ ವೇಳೆ ಫ್ರಿಡ್ಜ್ ಬ್ಲಾಸ್ಟ್ ಆಗಿರೋದೇ ನಾಲ್ವರ ಸಾವಿಗೆ ಕಾರಣ ಎನ್ನಲಾಗ್ತಿದೆ.
ಫ್ರಿಡ್ಜ್ ಪಕ್ಕದಲ್ಲೇ ಮಲಗಿದ್ದ ಮಹಿಳೆಯರು
ನಾಲ್ವರು ಮಹಿಳೆಯರು ಫ್ರಿಡ್ಜ್ ಮುಂಭಾಗದಲ್ಲೇ ಮಲಗಿದ್ದರಂತೆ. ಪಕ್ಕದಲ್ಲೇ ಫ್ರಿಡ್ಜ್ ಸ್ಫೋಟಗೊಂಡ ಹಿನ್ನೆಲೆ ಮಹಿಳೆಯರು ಸಾವನ್ನಪ್ಪಿದ್ದಾರೆ. ಸ್ಪೋಟಕ್ಕೆ ಸಂಪೂರ್ಣವಾಗಿ ಸುಟ್ಟ ಹೋದ ಫ್ರಿಡ್ಜ್ ಕೇವಲ ಡಬ್ಬಿಯಂತೆ ಕಾಣ್ತಿದೆ.
ಗಣಪತಿ ಮಂಟಪ ಕೂಡ ಸುಟ್ಟಿದೆ
ತಗಡಿನ ಶೆಡ್ನಿಂದ ನಿರ್ಮಿಸಿದ್ದ ಮನೆಯಲ್ಲಿ ಆರು ಜನ ಕುಟುಂಬಸ್ಥರು ಇದ್ದರು. ಹಬ್ಬದ ಹಿನ್ನೆಲೆ ಮನೆಯಲ್ಲೇ ಗಣಪತಿ ಕೂರಿಸಿದ್ರು. ಬೆಂಕಿ ಅವಘಡದಲ್ಲಿ ಗಣಪತಿ ಮಂಟಪ ಅಲ್ಪ ಭಾಗ ಮಾತ್ರ ಸುಟ್ಟಿದೆ. ನಾಲ್ವರು ಸಾವನ್ನಪ್ಪಿದ ಬಳಿಕ ಪಕ್ಕದ ಮನೆಯವರು ಗಣಪತಿ ಮೂರ್ತಿ ವಿಸರ್ಜನೆ ಮಾಡಿದ್ದಾರೆ.
ನಾಲ್ವರು ಸಾವು, ಇಬ್ಬರ ಸ್ಥಿತಿ ಗಂಭೀರ
ಗಜಾನನ ರಾಜಾರಾಮ ದಮೋನೆ (65), ರೋಷನ ಗಜಾನನ ದಮೋನೆ (21), ಶಾರದಾ ದಮೋನೆ (45), ಭಾರತಿ ರಾಜಾರಾಮ ದಮೋನೆ (50), ಮೃತ ದುರ್ದೈವಿಗಳಾಗಿದ್ದಾರೆ. ಪ್ರಿಯಾ ಗಜಾನನ ದಮೋನೆ (28,) ಗಂಗಾ ಗಜಾನನ ದಮೋನೆ (25) ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬದಲ್ಲಿ ಭಾರೀ ದುರಂತ ಸಂಭವಿಸಿದೆ. ಹಬ್ಬ ಮಾಡಿದ ಖುಷಿಯಲ್ಲಿದ್ದ ಕುಟುಂಬ ಬೆಂಕಿಗೆ ಬಲಿಯಾಗಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಫ್ರಿಡ್ಜ್ ಸ್ಪೋಟಕ್ಕೆ ಹೋಯ್ತಾ ಒಂದೇ ಕುಟುಂಬದ ನಾಲ್ವರ ಪ್ರಾಣ.? ಭೀಕರ ಅಗ್ನಿ ಅವಘಡಕ್ಕೆ ಅಸಲಿ ಕಾರಣ ಏನು.?
WhatsApp Group
Join Now