ಜಗತ್ತಿನಾದ್ಯಂತ ಸಂಭವಿಸುತ್ತಿರುವ ಸರಣಿ ನೈಸರ್ಗಿಕ ವಿಕೋಪಗಳು ಮತ್ತು ಮಳೆಯಿಲ್ಲದೆ ಕಂಗಾಲಾಗಿರುವ ರೈತ ಸಮುದಾಯದ ಪರಿಸ್ಥಿತಿಯನ್ನು ಗಮನಿಸಿದರೆ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವಾಣಿ ಅಕ್ಷರಶಃ ನಿಜವಾಗುತ್ತಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.
ಹವಾಮಾನ ವೈಪರೀತ್ಯ ಮತ್ತು ಜಾಗತಿಕ ಸಂಕಷ್ಟಗಳ ಬಗ್ಗೆ ಶ್ರೀಗಳು ನೀಡಿದ್ದ ಎಚ್ಚರಿಕೆಗಳು ಈಗಿನ ಘಟನೆಗಳಿಗೆ ಕನ್ನಡಿ ಹಿಡಿಯುತ್ತಿವೆ.
ಕೈಕೊಟ್ಟ ಮುಂಗಾರು
ಸಾಮಾನ್ಯವಾಗಿ ಜೂನ್ ಆರಂಭದಲ್ಲೇ ಅಬ್ಬರಿಸಬೇಕಿದ್ದ ಮುಂಗಾರು ಮಳೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಈ ಬಾರಿ ಮಳೆ ಬೆಳೆ ಕಡಿಮೆಯಾಗಲಿದೆ ಮತ್ತು ಅನ್ನ ನೀರಿಗೆ ಹಾಹಾಕಾರ ಏಳಲಿದೆ ಎಂದು ಕೋಡಿಶ್ರೀಗಳು ಒಂದು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಜೂನ್ ಮುಗಿಯುತ್ತಾ ಬಂದರೂ ರಾಜ್ಯದ ಹಲವೆಡೆ ಬರದ ಛಾಯೆ ಆವರಿಸುತ್ತಿರುವುದು ಶ್ರೀಗಳ ಕಾಲಜ್ಞಾನವನ್ನು ನೆನಪಿಸುವಂತಿದೆ.
ಹೆಚ್ಚುತ್ತಿರುವ ಅಗ್ನಿ ದುರಂತ
ದೇಶದಾದ್ಯಂತ ಅಪಮೃತ್ಯುಗಳು ಸಂಭವಿಸಲಿವೆ ಎಂದು ಶ್ರೀಗಳು ಹೇಳಿದ್ದರು. ಇದಕ್ಕೆ ಪೂರಕವಾಗಿ ಉತ್ತರ ಪ್ರದೇಶದ ಲಖನೌ ಅಗ್ನಿ ದುರಂತ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಬೆಂಕಿಯ ಅವಘಡಗಳು ಸಂಭವಿಸಿ ಜನರನ್ನು ಸಾವುನೋವಿಗೆ ಈಡುಮಾಡುತ್ತಿವೆ. ಅಗ್ನಿಭಯ ಹೆಚ್ಚಾಗಲಿದೆ ಎಂಬ ಅವರ ಮಾತು ಪ್ರಸ್ತುತ ವಿದ್ಯಮಾನಗಳಿಗೆ ಅತ್ಯಂತ ಹತ್ತಿರವಾಗಿದೆ.
ಭೂತಾಯಿ ಬಾಯಿಬಿಡಲಿದ್ದಾಳೆ ಎಂದು ಶ್ರೀಗಳು ಎಚ್ಚರಿಸಿದ್ದ ಬೆನ್ನಲ್ಲೇ ವೆನೆಜುವೆಲಾದಲ್ಲಿ ಸಂಭವಿಸಿದ ಸರಣಿ ಭೂಕಂಪಗಳು 200ಕ್ಕೂ ಹೆಚ್ಚು ಬಲಿ ಪಡೆದಿವೆ. ಜಪಾನ್ ನಲ್ಲೂ ನಿರಂತರವಾಗಿ ಭೂಮಿ ಕಂಪಿಸುತ್ತಿದ್ದು, ಜಾಗತಿಕವಾಗಿ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಮನುಷ್ಯನಿಗೆ ಮುಂದಿನ ದಿನಗಳು ಸುಲಭವಿಲ್ಲ ಎಂಬ ಶ್ರೀಗಳ ಮಾತು ಜಾಗತಿಕ ಮಟ್ಟದಲ್ಲಿ ಸಾಬೀತಾಗುತ್ತಿದೆ.
ಕರ್ನಾಟಕಕ್ಕೆ ದೈವ ರಕ್ಷಣೆ
ವಿಶ್ವದಾದ್ಯಂತ ಇಷ್ಟೆಲ್ಲಾ ಸಮಸ್ಯೆಗಳು ಎದುರಾದರೂ, ಕರ್ನಾಟಕಕ್ಕೆ ಅಂತಹ ದೊಡ್ಡ ಮಟ್ಟದ ಆಪತ್ತು ಇರುವುದಿಲ್ಲ ಎಂಬ ಸಮಾಧಾನದ ಸಂಗತಿಯನ್ನು ಶ್ರೀಗಳು ತಿಳಿಸಿದ್ದಾರೆ. ಜನರ ಭಕ್ತಿ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿರುವ ಅವರು, ಪ್ರಕೃತಿ ವಿಕೋಪಗಳ ನಡುವೆಯೂ ಭಗವಂತನ ದಯೆಯಿಂದ ರಾಜ್ಯಕ್ಕೆ ರಕ್ಷಣೆ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.
ಕೋಡಿಮಠದ ಶ್ರೀಗಳ ಪ್ರತಿಯೊಂದು ಭವಿಷ್ಯವಾಣಿಯು ಪ್ರಸ್ತುತ ನಡೆಯುತ್ತಿರುವ ಪ್ರಕೃತಿ ವಿಕೋಪ ಮತ್ತು ಹವಾಮಾನ ಬದಲಾವಣೆಗೆ ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ಇನ್ಯಾವ ಅನಾಹುತಗಳು ಕಾದಿವೆಯೋ ಎಂಬ ಭೀತಿ ಜನರಲ್ಲಿ ಮೂಡಿದೆ.
ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ
WhatsApp Group
Join Now