“19 ಕೋಟಿ 25 ಲಕ್ಷ ರೂ. ಬಂದಿದ್ದರೂ ಕೊಡುತ್ತಿಲ್ಲ” : ಸಾವಿಗೆ ಕಾರಣ ಬರೆದಿಟ್ಟು ಹೋದ ದಾವಣಗೆರೆಯ ಶಶಿಕುಮಾರ!

Spread the love

ಆನ್ ಲೈನ್ ಗೇಮ್ ನಲ್ಲಿ ಸುಮಾರು 18 ಲಕ್ಷ ರೂಪಾಯಿ ಕಳೆದುಕೊಂಡು ಮಾನಸಿಕ ತೊಳಲಾಟಕ್ಕೆ ಸಿಲುಕಿದ್ದ 25 ವರ್ಷದ ಶಶಿಕುಮಾರ್ ಸಾವಿಗೆ ಕಾರಣವನ್ನೂ ಬಹಿರಂಗಪಡಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಗರದ ಸರಸ್ವತಿ ಬಡಾವಣೆಯ ಸರಸ್ವತಿ ನಗರದ ವಾಸಿಯಾದ ಶಶಿಕುಮಾರ್ ಸುಮಾರು 19 ಕೋಟಿ 25 ಲಕ್ಷದ 21,722 ರೂಪಾಯಿ ಆನ್ ಲೈನ್ ಗೇಮ್ ನಲ್ಲಿ ಬಂದಿದ್ದು, ವೆಬ್ ಸೈಟ್ ಮಾಲೀಕರಿಗೆ ಕೇಳಿದರೆ ವಾಪಸ್ ಕೊಡುವುದಿಲ್ಲ ಎಂದು ಹೇಳಿದ್ದಾರೆ. ನಾನು CROWN 246 ಎಂಬ ವೆಬ್ ಸೈಟ್ ನಲ್ಲಿ ಹಣ ಹೂಡಿಕೆ ಮಾಡಿದ್ದೆ. ಆದ್ರೆ, ಸೋತಾಗ ಹಣ ಪಡೆದು ನಾನು ಗೆದ್ದಾಗ ನೀಡಿಲ್ಲ ಎಂದು ಯುವಕ ಆರೋಪಿಸಿದ್ದಾನೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಗೂ ದೂರು ನೀಡಿದ್ದಾನೆ.

ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲೇನಿದೆ.?

ಮುಖ್ಯ ನ್ಯಾಯಾಧೀಶರು,

ಆನ್ ಲೈನ್ ಗೇಮಿಂಗ್ ನಲ್ಲಿ ಜನರಿಗೆ ಆಗುತ್ತಿರುವ ಮೋಸ ಹಾಗೂ ನನಗೆ ಆಗಿರುವ ಮೋಸದ ಬಗ್ಗೆ:

ನಾನು ಸರಿಸುಮಾರು ಒಂದು ವರ್ಷದಿಂದ ಆನ್ ಲೈನ್ ಗೇಮಿಂಗ್ ಆಡ್ತಾ ಬರ್ತಾ ಇದ್ದೇನೆ. ಆನ್ ಲೈನ್ ಗೇಮಿಂಗ್ ನಲ್ಲಿ ಎರಡು ವಿಧ ಕೌಶಲ್ಯದ ಆಟಗಳಿವೆ. ಭಾರತ ಸರ್ಕಾರ ಅವಕಾಶ ನೀಡಿದೆ. ಆದ್ರೆ, ಅದೃಷ್ಟದ ಆಟಗಳಿಗೆ ಯಾವುದೇ
ರೀತಿ ಅವಕಾಶ ನೀಡಿಲ್ಲ. ಆದ್ರೆ, ಭಾರತದಲ್ಲಿ ಹಾಗೂ ರಾಜ್ಯದಲ್ಲಿ ದಿನೇ ದಿನೇ ಅದೃಷ್ಟದ ಆಟಗಳ ವೆಬ್ ಸೈಟ್ ಗಳ ಹಾವಳಿ ಹೆಚ್ಚುತ್ತಾ ಇದೆ. ಈ ಆಟಗಳ ಹುಚ್ಚಿನಿಂದ ಹುಚ್ಚನಾಗಿದ್ದೇನೆ. ಇದರಿಂದ ಸರಿಸುಮಾರು 18 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಕಳೆದುಕೊಂಡಿದ್ದೇನೆ.

ನಾನು CROWN 246 ಎಂಬ ವೆಬ್ ಸೈಟ್ ನಲ್ಲಿ ಹಣ ಹೂಡಿಕೆ ಮಾಡಿದ್ದೆ. ಬಳಿಕ 19 ಕೋಟಿ 25 ಲಕ್ಷದ 21,722 ರೂಪಾಯಿ ಗೆದ್ದಿರುತ್ತೇನೆ. ನಂತರ ವೆಬ್ ಸೈಟ್ ಮಾಲೀಕನಿಗೆ ಹಣ ಕೇಳಿದರೆ ಹಣ ನೀಡುವುದಿಲ್ಲ ಎಂದು ಉತ್ತರಿಸಿದರು. ಇದಾಗಿ 2 ತಿಂಗಳು ಕಳೆದವು. ದಿನೇ ದಿನೇ ಮಾನಸಿಕ ಸ್ಥಿತಿ ಹದಗೆಟ್ಟು ಸೈಬರ್ ಹೆಲ್ಪ್ ಲೈನ್ ಗೆ ಕರೆ ಮಾಡಿದೆ. ಆನ್ ಲೈನ್ ಗೇಮಿಂಗ್ ವಿರುದ್ಧ ಕ್ರಮ ಕೈಗೊಳ್ಳಿ. ನಿಮ್ಮ ಜಿಲ್ಲೆಯ ನಾಗರಿಕರಿಗೆ ಇದರ ಬಗ್ಗೆ ಅರಿವು ಮೂಡಿಸಿ. ಜಾಗೃತರನ್ನಾಗಿಸಿ ಎಂದು ಮನವಿ ಮಾಡಿಕೊಂಡೆ. ಆದರೂ ಪ್ರಯೋಜನವಾಗಿಲ್ಲ. ರಾಜ್ಯ ಮತ್ತು ದೇಶದಲ್ಲಿ ಆನ್ ಲೈನ್ ಗೇಮಿಂಗ್ ನಿಷೇಧ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಬರೆದಿದ್ದಾನೆ.

ಜೊತೆಗೆ ಅಮೆರಿಕಾ ಮೇಡ್ ಚಾಟ್ ಜಿಪಿಟಿ, ಚೀನಾ ಮೇಡ್ ಡೀಪ್ ಸೀಕ್, ಇಂಡಿಯಾ ಮೇಡ್ ಒಟೆಮಾ ಆನ್ ಡ್ರೀಮ್..! ಇದರಿಂದ ಏನು ಸಂದೇಶ ಎಂದರೆ ವಿ ಆರ್ ನಾಟ್ ಡಿಜಿಟಲ್ ಇಂಡಿಯಾ, ವಿ ಆರ್ ಡಿಜಿಟಲ್ ಯೂಸರ್ಸ್ ಎಂದು ಬರೆದಿದ್ದಾನೆ.

ಯೋಚನೆ ಮಾಡಿ ಇಂಥವರಿಂದ ಹಾಗೂ ನಕಲಿ ವೆಬ್ ಸೈಟ್ ಗಳು, ಆನ್ ಲೈನ್ ಗೇಮಿಂಗ್ ಗಳಿಗೆ ಯುವಕರು ದಾರಿತಪ್ಪುತ್ತಿದ್ದಾರೆ ಎಚ್ಚರ ವಹಿಸಿ. ಇಂತಿ ಶಶಿಕುಮಾರ ಎಂದು ಬರೆದಿದ್ದಾನೆ.

WhatsApp Group Join Now

Spread the love

Leave a Reply