Yashaswini Card : ರಾಜ್ಯ ಸರ್ಕಾರದಿಂದ ಸಿಹಿಸುದ್ಧಿ : ‘ಯಶಸ್ವಿನಿ ಯೋಜನೆ’ ನೋಂದಣಿ ಗಡುವು ಮಾ.31 ರವರೆಗೆ ವಿಸ್ತರಿಸಿ ಆದೇಶ.!

Yashaswini Card : ಸಹಕಾರ ಇಲಾಖೆಯು 2025-26ನೇ ಸಾಲಿನ ಯಶಸ್ವಿನಿ ಯೋಜನೆಗೆ ಅರ್ಹ ಸಹಕಾರಿಗಳನ್ನು ನೋಂದಣಿ ಮಾಡಿಕೊಳ್ಳಲು ಜ.31 ರವರೆಗೆ ಅವಕಾಶ ಕಲ್ಪಿಸಲಾಗಿತ್ತು, ಇದೀಗ ಯಶಸ್ವಿನಿ ಯೋಜನೆಗೆ ನೋಂದಣಿ ಮಾಡುವು ಗಡುವನ್ನು ಮಾ.31 ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಪಿಎಂ ಕಿಸಾನ್‌ ಸಮ್ಮಾನ್ ಯೋಜನೆಯಡಿ ಖಾತೆಗೆ ₹2,000/- ರೂ. ಹಣ ಜಮಾ.! PM Kisan Samman Yojana

ರಾಜ್ಯಾದ್ಯಂತ ಯಶಸ್ವಿನಿ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಡಿಸೆಂಬರ್-2024 ಮತ್ತು ಜನವರಿ-2025 ರ ತಿಂಗಳುಗಳಲ್ಲಿ ಹೆಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ / ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇತರೆ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಿಗದಿಯಾಗಿದ್ದು, ಇಲಾಖೆಯ ಕ್ಷೇತ್ರ ಸಿಬ್ಬಂದಿಗಳು / ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇದರಿಂದಾಗಿ ಯಶಸ್ವಿನಿ ನೋಂದಣಿಯಲ್ಲಿ ಹೆಚ್ಚಿನ ಪ್ರಗತಿ ಆಗಿರುವುದಿಲ್ಲವೆಂದು ಹಾಗೂ ನಿಗದಿಪಡಿಸಿರುವ ಗುರಿಯ ಪೈಕಿ ಇಲ್ಲಿಯವರೆಗೆ ಸುಮಾರು 10 ಲಕ್ಷ ಸದಸ್ಯರ ನೋಂದಣಿ ಮಾತ್ರವಾಗಿದ್ದು, ಇನ್ನೂ ಅನೇಕ ಸದಸ್ಯರು ನೋಂದಾಯಿಸಿಕೊಳ್ಳಲು ಆಸಕ್ತರಾಗಿರುವುದರಿಂದ ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ಪ್ರಗತಿ ಸಾಧಿಸಲು 2024-25 ನೇ ಸಾಲಿನ ಯಶಸ್ವಿನಿ ಯೋಜನೆಯಡಿ ಸದಸ್ಯರ ನೋಂದಣಿ/ನವೀಕರಣ ಅವಧಿಯನ್ನು ದಿನಾಂಕ: 01-02-2025 ರಿಂದ ದಿನಾಂಕ: 31-03-2025 ರವರೆಗೆ ವಿಸ್ತರಿಸಲು ನಿಬಂಧಕರು ಕೋರಿರುತ್ತಾರೆ.

WhatsApp Group Join Now

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2024-25ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯನ್ನು ಮುಂದುವರೆಸಲು ಹಾಗೂ ಈ ಯೋಜನೆಯಲ್ಲಿ ಹೊಸ ಸದಸ್ಯರನ್ನು ನೋಂದಾಯಿಸಲು/ನವೀಕರಣಗೊಳಿಸುವ ಸಲುವಾಗಿ ಅವಧಿಯನ್ನು ದಿನಾಂಕ:01-02-2025 ರಿಂದ ದಿನಾಂಕ:31-03-2025 ರವರೆಗೆ ವಿಸ್ತರಿಸಿ ಆದೇಶಿಸಿದೆ.

Leave a Reply