ಪಾರ್ವತಮ್ಮನವರಿಗೂ ಇಷ್ಟು ಧಿಮಾಕು ಇರ್ಲಿಲ್ಲ : ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಟ್ರೋಲ್ ಆಗಿದ್ದೇಕೆ.?

Spread the love

ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಈಗ ತಮ್ಮದೇ ಪ್ರೊಡಕ್ಷನ್ ಹೌಸ್ ಮಾಡಿ ಕೊತ್ತಲವಾಡಿ ಎಂಬ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆದರೆ ಮಾಧ್ಯಮಗಳ ಜೊತೆ ಅವರು ಮಾತನಾಡುವ ಧಾಟಿ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದು ಪಾರ್ವತಮ್ಮನವಿರಗೂ ಇಷ್ಟು ಧಿಮಾಕು ಇರ್ಲಿಲ್ಲ ಎಂದಿದ್ದಾರೆ.

ನಿನ್ನೆ ಡಾ ರಾಜ್ ಕುಮಾರ್ ಸಮಾಧಿಗೆ ಕೊತ್ತಲವಾಡಿ ಚಿತ್ರತಂಡ ನಮಿಸಿದೆ. ಈ ವೇಳೆ ಪುಷ್ಪ ಕೂಡಾ ಬಂದಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡುವಾಗ ಅವರು ರಫ್ ಆಗಿ ಮಾತನಾಡುತ್ತಿದ್ದರು. ಯಶ್ ಸಿನಿಮಾ ಬಗ್ಗೆ ಏನಂದ್ರು ಎಂದರೆ ಅವನ ಜೊತೆ ನಾನು ಮಾತನಾಡಿಲ್ಲ. ಅವನು ನೋಡಿದ್ರೆ ಸಿನಿಮಾ ಹಿಟ್ ಆಗಲ್ಲ ಎಂದಿದ್ದರು. ಸೊಸೆ ರಾಧಿಕಾ ಪಂಡಿತ್ ಬಗ್ಗೆ ಕೇಳಿದಾಗ ಅವಳು ಅಮೆರಿಕಾದಲ್ಲಿದ್ದಾಳೆ ಎಂದರು.

ಅವರ ಮಾತಿನ ಶೈಲಿ ಒರಟಾಗಿತ್ತು. ಜೊತೆಗೆ ನಾವು ಗೌಡ್ರು. ಅಂಬರೀಷಣ್ಣ ಎಲ್ಲಾ ನೋಡಿಲ್ವಾ? ನಮ್ಮ ಮಾತು ಸ್ವಲ್ಪ ಒರಟು. ನೇರವಾಗಿ ಇದ್ದಿದ್ದನ್ನು ಹೇಳಿಬಿಡ್ತೀವಿ ಎಂದಿದ್ದರು.

ಪುಷ್ಪ ಈ ಮಾತಿಗೆ ನೆಟ್ಟಿಗರು ಟ್ರೋಲ್ ಮಾಡಿದ್ದರು. ಇನ್ನೂ ಮೊದಲ ಸಿನಿಮಾ ಆಗಲೇ ಇಷ್ಟು ಧಿಮಾಕಿನಲ್ಲಿ ಮಾತನಾಡುತ್ತಾರೆ. ಪಾರ್ವತಮ್ಮನವರು ನೂರಾರು ಸಿನಿಮಾ ಮಾಡಿ ಸಾಕಷ್ಟು ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದವರು. ಆದರೂ ಅವರಿಗೆ ಸ್ವಲ್ಪವೂ ಮಾತಿನಲ್ಲಿ ಒರಟುತನ ಇರ್ಲಿಲ್ಲ ಎಂದಿದ್ದಾರೆ. ಅದ್ರೂ ರಾಕಿಂಗ್ ಸ್ಟಾರ್ ಯಶ್ ಅಮ್ಮ ಅಲ್ವಾ? ಅದೇ ಕಾನ್ಫಿಡೆನ್ಸ್ ಅಮ್ಮನಲ್ಲೂ ಇದೆ ಎಂದು ಹೊಗಳಿದ್ದಾರೆ.

WhatsApp Group Join Now

Spread the love

Leave a Reply