Union Bank Recruitment : ಯೂನಿಯನ್ ಬ್ಯಾಂಕ್‌ನಲ್ಲಿ 85 ಸಾವಿರ ಸಂಬಳದ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಡೈರೆಕ್ಟ್ ಲಿಂಕ್.!

Union Bank Recruitment : ನಮಸ್ಕಾರ ಸ್ನೇಹಿತರೇ, ಯೂನಿಯನ್ ಬ್ಯಾಂಕ್‌ನಲ್ಲಿ 1,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ತಮ್ಮ ಅರ್ಜಿಯನ್ನು ಮುಂಬರುವ 13ನೇ ತಾರೀಖಿನೊಳಗೆ ಸಲ್ಲಿಕೆ ಮಾಡಬೇಕು. ಅಕ್ಟೋಬರ್ 24ರಂದು ಅಧಿಸೂಚನೆ ಪ್ರಕಟನೆಯಾಗಿದೆ. ಲೋಕಲ್ ಬ್ಯಾಂಕ್ ಆಫಿಸರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 24ನೇ ಅಕ್ಟೋಬರ್ 2024ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ.

ಅಭ್ಯರ್ಥಿಗಳು 20 ರಿಂದ 30 ವರ್ಷದೊಳಗಿರಬೇಕು. ಸರ್ಕಾರಿ ನಿಯಮಗಳ ಪ್ರಕಾರ, ಹಿಂದುಳಿದ ವರ್ಗದವರಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ವಿನಾಯಿತಿ ನೀಡಲಾಗುವುದು. ಯಾವ ರಾಜ್ಯಕ್ಕೆ ಸಲ್ಲಿಸುತ್ತಾರೋ ಅಲ್ಲಿಯ ಪ್ರಾದೇಶಿಕ ಭಾಷೆಯನ್ನು ತಿಳಿದವರಾಗಿರಬೇಕು.

ಇದನ್ನೂ ಕೂಡ ಓದಿ : Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಅರ್ಜಿ ಸಲ್ಲಿಕೆ ಶುಲ್ಕ ಎಷ್ಟು.?

• General/ EWS/OBC ಅಭ್ಯರ್ಥಿಗಳಿಗೆ 850 ರೂಪಾಯಿ ಜೊತೆಗೆ ಜಿಎಸ್‌ಟಿ
• SC/ST/PwBD ಅಭ್ಯರ್ಥಿಗಳಿಗೆ 175 ರೂಪಾಯಿ ಜೊತೆಗೆ ಜಿಎಸ್‌ಟಿ
• ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್‌ನೆಟ್ ಬ್ಯಾಂಕಿಂಗ್/ಎಂಪಿಎಸ್/ ಕ್ಯಾಶ್ ಕಾರ್ಡ್/ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಶುಲ್ಕ ಪಾವತಿಸಬೇಕು.

ವಯೋಮಿತಿ :-

ಕನಿಷ್ಠ : 20 ವರ್ಷ
ಗರಿಷ್ಠ : 30 ವರ್ಷ

ಭಾರತ ಸರ್ಕಾರ ಅಥವಾ ಅದರ ಮೂಲಕ ಗುರುತಿಸಲ್ಪಟ್ಟ ನಿಯಂತ್ರಣ ಸಂಸ್ಥೆಗಳಿಂದ ಯಾವುದಾದರೂ ಒಂದು ಪೂರ್ಣಾವಧಿ/ರೆಗ್ಯೂಲರ್ ಬ್ಯಾಚುಲರ್ ಪದವಿ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪಡೆದುಕೊಂಡಿರಬೇಕು. ಅಭ್ಯರ್ಥಿಯು ಮಾನ್ಯವಾದ ಮಾರ್ಕ್-ಶೀಟ್ ಮತ್ತು ಪದವೀಧರ ಎಂಬ ಪದವಿ ಪ್ರಮಾಣಪತ್ರ ಹೊಂದಿರಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅಂಕಗಳನ್ನು ನಮೂದಿಸಬೇಕು.

ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಯಾವ ರಾಜ್ಯದಲ್ಲಿ ಎಷ್ಟು ಹುದ್ದೆ?

• ಆಂಧ್ರ ಪ್ರದೇಶ ದಲ್ಲಿ 200 ಹುದ್ದೆ
• ಗುಜರಾತ್ ನಲ್ಲಿ 200 ಹುದ್ದೆ
• ಅಸ್ಸಾಂನಲ್ಲಿ 50 ಹುದ್ದೆ
• ಕರ್ನಾಟಕದಲ್ಲಿ 300 ಹುದ್ದೆ
• ಕೇರಳದಲ್ಲಿ 100 ಹುದ್ದೆ
• ಮಹಾರಾಷ್ಟ್ರದಲ್ಲಿ 50 ಹುದ್ದೆ
• ಓಡಿಶಾ ದಲ್ಲಿ 100 ಹುದ್ದೆ
• ತಮಿಳನಾಡಿನಲ್ಲಿ 200 ಹುದ್ದೆ
• ತೆಲಂಗಾಣ ದಲ್ಲಿ 200 ಹುದ್ದೆ
• ಪಶ್ಚಿಮ ಬಂಗಾಳದಲ್ಲಿ 100 ಹುದ್ದೆ

ಅರ್ಜಿ ಸಲ್ಲಿಸುವ ಆಸಕ್ತರು ಈ ಲಿಂಕ್ ಮೂಲಕ https://ibpsonline.ibps.in/ubilbooct24/ ಮಾಡಬಹುದು.

Leave a Reply