ಪೊಲೀಸರ ಈ ಅಧಿಕಾರವನ್ನು ಕಿತ್ತುಕೊಂಡ ಕೋರ್ಟ್ | ಹೊಸ ಆದೇಶ | Property Rules

Spread the love

ಇನ್ಮುಂದೆ ಪೊಲೀಸರು ಸಿವಿಲ್ ವ್ಯಾಜ್ಯ, ಭೂವಿವಾದಗಳು ಮತ್ತೆ ಆಸ್ತಿ ಮಾಲಿಕತ್ವದ ಪ್ರಕರಣಗಳಲ್ಲಿ ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ಸರಕಾರ ಸುತ್ತೋಲೆಯನ್ನ ಹೊರಡಿಸಿದೆ. ಸಿವಿಲ್ ವ್ಯಾಜ್ಯಗಳಲ್ಲಿ ಇನ್ಮುಂದೆ ಪೊಲೀಸರು ತಲೆ ಹಾಕುವಂತಿಲ್ಲ. ಪೊಲೀಸರ ಅಧಿಕಾರದ ಹೆಸರಿನಲ್ಲಿ ನಡೆಯುತ್ತಿದ್ದ ವಸೂಲಿ ದಂಧೆಗೆ ಕಡಿವಾಣ ಹಾಕಲು ಈ ಕ್ರಮವನ್ನು ಕೈಕೊಳ್ಳಲಾಗ್ತಾ ಇದೆ.

ನಿಯಮ ಉಲ್ಲಂಘಿಸುವ ಸಿಬ್ಬಂದಿಗೆ ಇಲಾಖೆಯಿಂದ ಗೇಟ್ ಪಾಸ್ ನೀಡುವುದಾಗಿ ಕಠಿಣ ಎಚ್ಚರಿಕೆಯನ್ನ ಕೂಡ ನೀಡಲಾಗಿದೆ. ಸಿವಿಲ್ ವಿವಾದಗಳಲ್ಲಿ ಪೊಲೀಸ್ ಇಲಾಖೆ ಮೂಗು ತೂರಿಸಬಾರದು ಎಂದು ಇದೀಗ ಸ್ಪಷ್ಟನೆಯನ್ನ ನೀಡಿದೆ. ಸುಪ್ರೀಂ ಕೋರ್ಟ್ನ ಪ್ರಕರಣದ ತೀರ್ಪನ್ನ ಉಲ್ಲೇಖಿಸಿ ಇದೀಗ ಈ ವಿಷಯಗಳನ್ನ ಇದೀಗ ಸರ್ಕಾರ ಪ್ರಸ್ತಾಪ ಪಡಿಸಿದೆ.

ಒಪ್ಪಂದದ ಉಲ್ಲಂಘನೆ : ಅಂದರೆ ಕರಾರು ಅಥವಾ ಒಪ್ಪಂದಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸರು ಮಧ್ಯೆ ಹೋಗುವಂತಿಲ್ಲ. ಇನ್ನು ಮಾಲೀಕ-ಬಾಡಿಗೆದಾರರ ವಿವಾದ ಅಂದರೆ ಮನೆ ಮಾಲಿಕರು ಮತ್ತೆ ಬಾಡಿಗೆದಾರರ ನಡುವೆ ಯಾವುದೇ ವ್ಯಾಜ್ಯಕ್ಕೂ ಕೂಡ ತಲೆ ಹಾಕುವಂತಿಲ್ಲ. ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತ ವಿವಾದ ಕಡೆಗೆ ಇನ್ನು ಪ್ರಾಪರ್ಟಿಯ ಸ್ವಾಧೀನ ಸಂಬಂಧಿಸಿದ ಯಾವುದೇ ಗೊಂದಲ. ಅದೇ ರೀತಿ ಪೂಜೆಯ ಹಕ್ಕುಗಳು ಅಂದ್ರೆ ಧಾರ್ಮಿಕ ಸ್ಥಳಗಳ ವಿವಿಧ ನಿರ್ವಹಣೆಗೆ ಸಂಬಂಧಿಸಿದಂತ ಸಮಸ್ಯೆಗಳ ಪರಿಹಾರಕ್ಕೆ ಪೊಲೀಸರು ತಲೆ ಹಾಕುವಂತಿಲ್ಲ.

ವ್ಯಾಪಾರ ಚಟುವಟಿಕೆಗಳು, ವಾಣಿಜ್ಯ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದ ವ್ಯಾಜ್ಯಗಳು, ಅದೇ ರೀತಿ ಸ್ಪಷ್ಟ ಕ್ರಿಮಿನಲ್ ಅಂಶಗಳಿಲ್ಲದ ಸಿವಿಲ್ ಕೇಸ್ಗಳು ಅಂದರೆ ಯಾವುದೇ ಸ್ಪಷ್ಟ ಕ್ರಿಮಿನಲ್ ಅಂಶವಿಲ್ಲದೆ ಕೇವಲ ಸಿವಿಲ್ ಸ್ವರೂಪದಲ್ಲಿರುವಂತ ಪ್ರಕರಣಗಳಲ್ಲಿ ಪೊಲೀಸರು ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ಆದೇಶವನ್ನ ಹೊರಡಿಸಿದೆ.

WhatsApp Group Join Now

Spread the love

Leave a Reply