Goat Farming : ಕುರಿ, ಮೇಕೆ ಘಟಕಗಳ ಸ್ಥಾಪನೆಗೆ ಸಿಗಲಿದೆ ಶೇ.90% ಸಹಾಯಧನ.! ಸಂಪೂರ್ಣ ಮಾಹಿತಿ

Spread the love

Goat Farming : ನಮಸ್ಕಾರ ಸ್ನೇಹಿತರೇ, ಪ್ರಸಕ್ತ (2024-25) ಸಾಲಿನ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ವತಿಯಿಂದ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದವರಿಗೆ (10+01) ಕುರಿ, ಮೇಕೆ ಘಟಕಗಳ ಶೇಕಡ 90% ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ಬೆಂಗಳೂರು ಈ ಕಚೇರಿಯಲ್ಲಿ ನೋಂದಾಯಿಸಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಹಾಗೂ ಈ ಹಿಂದಿನ ವರ್ಷಗಳಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಅಥವಾ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಇದೇ ಉದ್ದೇಶಕ್ಕಾಗಿ ಸಹಾಯಧನ ಸೌಲಭ್ಯ ಪಡೆಯದೆ ಇರುವ ಪರಿಶಿಷ್ಟ ಪಂಗಡ ವರ್ಗದ ಆಸಕ್ತ ಸದಸ್ಯರುಗಳು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವವರು ತಮ್ಮ ವ್ಯಾಪ್ತಿಯಲ್ಲಿ ಬರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು/ಕಾರ್ಯದರ್ಶಿಯವರಿಂದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಡಿಸೆಂಬರ್, 10 ರೊಳಗೆ ಉಪನಿರ್ದೇಶಕರು, ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಡಗು ಮಡಿಕೇರಿ ಅವರಿಗೆ ಸಲ್ಲಿಸಬಹುದು.

ಇದನ್ನೂ ಕೂಡ ಓದಿ : PM Kisan Scheme : ಪಿಎಂ ಕಿಸಾನ್ ರೈತರಿಗೆ ಸಿಹಿಸುದ್ಧಿ.! ಹೊಸ ವರ್ಷಕ್ಕೆ ಪಿಎಂ ಕಿಸಾನ್ ಯೋಜನೆಯ 19 ನೇ ಕಂತಿನ ಹಣ ಜಮಾ.! 

ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು(ಆಡಳಿತ), ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮಡಿಕೇರಿ ಹಾಗೂ ತಾಲ್ಲೂಕು ಪಶುವೈದ್ಯಕೀಯ ಸಂಸ್ಥೆಗಳು ಮತ್ತು ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿ., ಚಾಮುಂಡಿಪುರಂ, ಮಾನಂದವಾಡಿ ರಸ್ತೆ, ಮೈಸೂರು ರವರ ಮೊಬೈಲ್ ಸಂಖ್ಯೆ:9845623137 ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ ಅವರು ತಿಳಿಸಿದ್ದಾರೆ.

WhatsApp Group Join Now

Spread the love

Leave a Reply