Land Records : ನಿಮ್ಮ ಜಮೀನಿನ ಪಹಣಿ ಪತ್ರದಲ್ಲಿ ಹೆಸರು ತಪ್ಪಾಗಿದ್ಯಾ.? ಈ ರೀತಿ ಸುಲಭವಾಗಿ ಬದಲಾಯಿಸಿ! ಒಂದೇ ದಿನದಲ್ಲಿ ನಿಮ್ಮ ಹೆಸರಿಗೆ.!

Spread the love

Land Records : ನಮಸ್ಕಾರ ಸ್ನೇಹಿತರೇ, ರೈತರ ಬಳಿ ಬಹಳ ಪ್ರಮುಖವಾಗಿ ಇರಬೇಕಾದ ದಾಖಲೆ ಅವರ ಜಮೀನಿನ ಪ್ರಮಾಣಪತ್ರ ಆಗಿರುತ್ತದೆ. ರೈತರು ಯಾವುದೇ ಕೆಲಸ ಮಾಡುವುದಕ್ಕೂ ಈ ದಾಖಲೆ ಬಹಳ ಮುಖ್ಯವಾಗಿ ಇರಲೇಬೇಕು. ಹಾಗಾಗಿ ರೈತರು ಪಹಣಿ ಪತ್ರವನ್ನು ಬಹಳ ಹುಷಾರಾಗಿ ನೋಡಿಕೊಳ್ಳಬೇಕು. ಹಾಗೆಯೇ ಅದರಲ್ಲಿ ಇರುವ ವಿವರಗಳು, ಮಾಹಿತಿಗಳು ಕೂಡ ಸರಿಯಾಗಿ ಇರಬೇಕು. ಇಲ್ಲದಿದ್ದರೆ ಮುಂದೆ ನಿಮಗೆ ತೊಂದರೆ ಆಗುತ್ತದೆ. ಹಾಗಾಗಿ ಪಹಣಿ ವಿಷಯದಲ್ಲಿ ಹುಷಾರಾಗಿರಿ.

WhatsApp Group Join Now

ಇದನ್ನೂ ಕೂಡ ಓದಿ : Raitha Siri Yojane : ರೈತ ಸಿರಿ ಯೋಜನೆಗೆ ಅರ್ಜಿ ಆಹ್ವಾನ.! ಈ ಯೋಜನೆಯಿಂದ ರೈತರಿಗೆ ಸಿಗುತ್ತೆ ₹10,000/- ರೂಪಾಯಿ ಹಣ – ಹೇಗೆ ಪಡೆಯುವುದು.?

ಒಂದು ವೇಳೆ ನಿಮ್ಮ ಪಹಣಿ ಪತ್ರದಲ್ಲಿ ಹೆಸರು ತಪ್ಪಾಗಿದ್ದರೆ, ಕೂಡಲೇ ಅದನ್ನು ಸರಿಪಡಿಸಿಕೊಳ್ಳುವುದು ಒಳ್ಳೆಯದು. ಹಾಗಿದ್ದಲ್ಲಿ ಇಂದು ನಿಮ್ಮ ಪಹಣಿ ಪತ್ರದಲ್ಲಿ ಹೆಸರು ಸರಿಪಡಿಸುವ ಸುಲಭ ವಿಧಾನ ಹೇಗೆ ಎಂದು ತಿಳಿದುಕೊಳ್ಳೋಣ.. ಹೆಸರು ತಿದ್ದುಪಡಿ ಮಾಡಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ನೀಡಲಾಗಿದೆ.

ಪಹಣಿ ಪತ್ರ : ಇದನ್ನು ತಹಸೀಲ್ದಾರ್ ಆಫೀಸ್ ಅಥವಾ ನೆಮ್ಮದಿ ಕೇಂದ್ರದಿಂದ ಪಡೆಯಬಹುದು. ನಿಮ್ಮ ಒಡೆತನದ ಭೂಮಿಯ ದಾಖಲೆ ಇದು. 20 ರೂಪಾಯಿ ಸ್ಟ್ಯಾಂಪ್ ಪೇಪರ್ : ಇದರಲ್ಲಿ ನೀವು ಪಹಣಿಯಲ್ಲಿ ಹೆಸರು ಸರಿಪಡಿಸುವ ಎಲ್ಲಾ ಮಾಹಿತಿಗಳನ್ನು ದಾಖಲೆಗಳನ್ನು ಫಿಲ್ ಮಾಡಬೇಕು. ಹಾಗೆಯೇ ನೋಟರಿ ಮಾಡಿಸಬೇಕು. ಇದು ಮುಖ್ಯವಾದ ಕೆಲಸ ಆಗುತ್ತದೆ.

WhatsApp Group Join Now

ಇದನ್ನೂ ಕೂಡ ಓದಿ : ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲ ಸೌಲಭ್ಯ – business loan for women

ಪಹಣಿ ತಿದ್ದುಪಡಿ ವಿಧಾನ :

WhatsApp Group Join Now

ಇಲಾಖೆ ಇಂದ ಹೆಸರು ತಿದ್ದುಪಡಿಗೆ ಕೊಡುವ ಅಪ್ಲಿಕೇಶನ್ ಪಡೆದು, ಅದರಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು. ಅರ್ಜಿಯ ಜೊತೆಗೆ ಅವಶ್ಯಕತೆ ಬರುವ ಆಧಾರ್ ಕಾರ್ಡ್, ಪಹಣಿ ಪತ್ರ, 20 ರೂಪಾಯಿಯ ಸ್ಟ್ಯಾಂಪ್ ಪೇಪರ್ ಈ ಎಲ್ಲಾ ದಾಖಲೆಗಳ ಜೊತೆಗೆ ಭೂಮಿ ಕೇಂದ್ರಕ್ಕೆ ಅರ್ಜಿ ತೆಗೆದುಕೊಂಡು ಹೋಗಿ ಕೊಡಬೇಕು.

ನೀವು ಈ ರೀತಿ ಕೊಡುವ ಅರ್ಜಿಯು ಗ್ರಾಮ ಲೆಕ್ಕಾಧಿಕಾರಿಗಳನ್ನು ತಲುಪುತ್ತದೆ. ಅವರು ನಿಮ್ಮ ಅರ್ಜಿಯನ್ನು ಕೂಲಂಕುಷವಾಗಿ ಚೆಕ್ ಮಾಡಿ, ಎಲ್ಲವೂ ಸರಿ ಇದ್ದರೆ ಹೆಸರು ತಿದ್ದುಪಡಿ ಪ್ರಕ್ರಿಯೆ ಮಾಡಿಕೊಡುತ್ತಾರೆ. ಅಕಸ್ಮಾತ್ ಹೆಸರು ಅಥವಾ ಇನ್ನಿತರ ಮಾಹಿತಿ ತಪ್ಪಾಗಿದ್ದರೆ, ನಿಮ್ಮ ಅರ್ಜಿಯನ್ನು ರಿಜೆಕ್ಟ್ ಮಾಡಲಾಗುತ್ತದೆ. ಹಾಗಾಗಿ ದಾಖಲೆಗಳನ್ನು ಕೊಡುವಾಗ ಹುಷಾರಾಗಿರಿ.

ಇದನ್ನೂ ಕೂಡ ಓದಿ : PM Schemes : ಕೇಂದ್ರ ಸರ್ಕಾರದ ಈ ಹೊಸ ಯೋಜನೆಯಲ್ಲಿ ತಿಂಗಳಿಗೆ ₹3,000/- ಸಿಗುತ್ತದೆ.! ಹೇಗೆ ಅರ್ಜಿ ಸಲ್ಲಿಸುವುದು.?

ನಿಮ್ಮ ಹೆಸರು ತಿದ್ದುಪಡಿ ಆಗುತ್ತಿದ್ದ ಹಾಗೆ ಪಹಣಿ ತಿದ್ದುಪಡಿ ಕೂಡ ಆಗುತ್ತದೆ, ಕೆಲವು ದಿನಗಳಲ್ಲಿ ಈ ಕೆಲಸ ಮುಗಿದು, ಪಹಣಿ ಪತ್ರ ನಿಮ್ಮ ಕೈ ಸೇರುತ್ತದೆ.

ಇನ್ನು ಆನ್ ಲೈನ್ ಮೂಲಕ ನಿಮ್ಮ ಭೂಮಿಯ ಪಹಣಿಯನ್ನು ಕೂಡ ಚೆಕ್ ಮಾಡಬಹುದು. Bhoomi Online | Land Records ಈ ಲಿಂಕ್ ಗೆ ಭೇಟಿ ನೀಡಿ, ನಿಮ್ಮ ಜಾಗದ ಬಗ್ಗೆ ಭೂಮಿಯ ಬಗ್ಗೆ ಇಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ನೀಡಿದರೆ, ನಿಮ್ಮ ಪಹಣಿ ಪತ್ರವನ್ನು ಆನ್ಸೆನ್ ನಲ್ಲಿಯೇ ನೋಡಬಹುದು. ಇದರಿಂದ ತಿದ್ದುಪಡಿ ಮಾಡಿಸಲು ಸುಲಭ ಆಗುತ್ತದೆ.

ಆನ್ ಲೈನ್ ಲಿಂಕ್ :- Bhoomi Online | Land Records 


Spread the love

Leave a Reply