Ration Card Update : ನಿಮಗಿನ್ನೂ ರೇಷನ್ card ಸಿಕ್ಕಿಲ್ವಾ.? ನೀವು ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೆ.?

Spread the love

Ration Card Update : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯದ ಜೊತೆಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪಡೆಯಲು ಇದೀಗ ಪಡಿತರ ಚೀಟಿಯು ಪ್ರತಿಯೊಬ್ಬ ಫಲಾನುಭವಿಗಳಿಗೆ ಕಡ್ಡಾಯವಾಗಿದೆ. ಅದಲ್ಲದೇ ವಾಸಸ್ಥಳ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಪಾನ್ ಕಾರ್ಡ್, ಚಾಲಕರ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸುವಾಗ ರೇಷನ್ ಕಾರ್ಡ್ ನ್ನು ಗುರುತಿನ ಪುರಾವೆಯಾಗಿ ಬಳಸಲಾಗುತ್ತದೆ.

WhatsApp Group Join Now

ಆದರೆ ಕಾರಣಾಂತರಗಳಿಂದ ಕೆಲವು ತಿಂಗಳಿಂದ ಪಡಿತರ ಚೀಟಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೇ ತಿಂಗಳು ಇದು ಪುನರಾರಂಭಗೊಳ್ಳಲಿದ್ದು, ರೇಷನ್ ಕಾರ್ಡ್ ಗಾಗಿ ಕಾದು ಕುಳಿತಿರುವವರು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Bara Parihara Amount Status Check : ಇನ್ನೂ ನಿಮಗೆ ಬೆಳೆ ಪರಿಹಾರ ಹಣ ಬಾರದಿದ್ದರೆ ಈ 1 ಕೆಲಸ ಮಾಡಿ 5 ನಿಮಿಷದಲ್ಲಿ ಹಣ ನಿಮ್ಮ ಖಾತೆಗೆ ಜಮೆ

WhatsApp Group Join Now

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳೇನು.?

(ಗ್ರಾಮಾಂತರ ಪ್ರದೇಶದವರಿಗೆ)

  • ನಿಮ್ಮ ಗ್ರಾಮ ಪಂಚಾಯಿತಿಯ ಹೆಸರು
  • ಈಗ ವಾಸ ಮಾಡುತ್ತಿರುವ ಮನೆ ವಿಳಾಸ
  • ಮನೆಯ ಆಸ್ತಿ ಸಂಖ್ಯೆ ವಿವರ
  • ಮನೆಯ ವಿದ್ಯುತ್‌ ಸಂಪರ್ಕದ ಬಿಲ್‌ ಪ್ರತಿ
  • ಕುಟುಂಬದ ಎಲ್ಲ ಸದಸ್ಯರ ಹೆಸರು, ಸದಸ್ಯರು, ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ ನಮೂದಿಸಬೇಕು.
  • ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆನ್ನುವ ಬಗ್ಗೆ ಮಾಹಿತಿ.
  • ನಿಮ್ಮ ಕುಟುಂಬಕ್ಕಿರುವ ಅಡುಗೆ ಅನಿಲದ(Gas) ಸರಬರಾಜಿನ ಇತ್ತಿಚಿನ ಬಿಲ್/ರಶೀದಿ.

ಇದನ್ನೂ ಕೂಡ ಓದಿ : Labour Card Scholarship : ಕಾರ್ಮಿಕ ಇಲಾಖೆ ವತಿಯಿಂದ ವಿದ್ಯಾರ್ಥಿ ವೇತನ – ಅರ್ಜಿ ಹೇಗೆ ಸಲ್ಲಿಸುವುದು.?

WhatsApp Group Join Now

(ನಗರ / ಪಟ್ಟಣ ಪ್ರದೇಶದವರಿಗೆ) :-

  • ನೀವು ವಾಸವಿರುವ ನಗರಸಭೆ / ಪುರಸಭೆ / ನಗರ ಪಾಲಿಕೆಯ ವಾರ್ಡ್ ಸಂಖ್ಯೆ
  • ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶದವರಾಗಿದ್ದಲ್ಲಿ (ಬಿಬಿಎಂಪಿ ಪ್ರದೇಶ) ನೀವು ಆಹಾರ ಇಲಾಖೆಯ ಯಾವ ವಲಯ ವ್ಯಾಪ್ತಿಯಲ್ಲಿದ್ದೀರಿ ಎಂಬ ಬಗ್ಗೆ ಮಾಹಿತಿ.
  • ನಿಮ್ಮ ಮನೆಯ ವಿದ್ಯುತ್ ಬಿಲ್
  • ನಿಮ್ಮ ನಿವಾಸದ ಪೂರ್ಣ ವಿಳಾಸ (ಅಂಚೆ ಪಿನ್ ಕೋಡ್‌ ಕಡ್ಡಾಯ). ಸ್ವಂತ ಮನೆಯಾಗಿದ್ದಲ್ಲಿ ಮನೆಯ ಆಸ್ತಿ ಸಂಖ್ಯೆ ವಿವರ, ನಿಮ್ಮ ಮನೆ ವಿಳಾಸ ಹುಡುಕಲು ಸುಲಭವಾಗುವ ಹತ್ತಿರದ ಸ್ಥಳದ ಗುರುತು
  • ಕುಟುಂಬದ ಸದಸ್ಯರ ಹೆಸರು, ಸದಸ್ಯರು, ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.
  • ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ.
  • ನಿಮ್ಮ ಸಂಪರ್ಕದ ಮೊಬೈಲ್ ನಂಬರ್ (ಕಡ್ಡಾಯ), ಸ್ವಂತ ಮೊಬೈಲ್ ಇಲ್ಲದಿದ್ದರೂ ನಿಮ್ಮನ್ನು ಸಂಪರ್ಕಿಸಬಹುದಾದ ಯಾವುದಾದರೂ ಮೊಬೈಲ್ ಸಂಖ್ಯೆಯನ್ನು ನೀಡುವುದು.
  • ಅರ್ಜಿದಾರರು ಅವಿವಾಹಿತರಾಗಿದ್ದಲ್ಲಿ ಅವರ ಪೋಷಕರಿರುವ ಪೂರ್ಣ ವಿಳಾಸ.
  • ನಿಮ್ಮ ಕುಟುಂಬದ ಅಡುಗೆ ಅನಿಲ ಸಂಪರ್ಕದ ವಿವರ/ಇತ್ತೀಚಿನ ಎಲ್.ಪಿ.ಜಿ. ಬಿಲ್ ಪ್ರತಿ

ಪಡಿತರ ಚೀಟಿಗೆ ಹೇಗೆ ಅರ್ಜಿ ಸಲ್ಲಿಸುವುದು.?

  • ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬೇಕಿದ್ದರೆ ನೀವು ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ. (https://ahara.kar.nic.in/)
  • ಇ-ಸರ್ವಿಸ್‌ (ಇ-ಸೇವೆ) ಮೇಲೆ ಕ್ಲಿಕ್‌ ಮಾಡಿ.
  • ಇದರಲ್ಲಿ ಕೆಳಗಡೆ ನಿಮಗೆ ಇ-ಪಡಿತರ ಚೀಟಿ ಆಯ್ಕೆ ಕಾಣುತ್ತದೆ.
  • ಅದರಲ್ಲಿ ಕೆಳಗಿನ ಬಾಣದ ಗುರುತಿನ ಮೇಲೆ ಕ್ಲಿಕ್‌ ಮಾಡಿದರೆ ಹೊಸ ಪಡಿತರ ಚೀಟಿ ಎಂಬ ಆಯ್ಕೆ ತೋರಿಸುತ್ತದೆ.
  • ಅಲ್ಲಿ ಎಪಿಎಲ್(apl) ಹಾಗೂ ಬಿಪಿಎಲ್(bpl) ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದ ಬಳಿಕ ಅಗತ್ಯ ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿApplication for Ration Card

ಇದನ್ನೂ ಕೂಡ ಓದಿ : HSRP : ಮೇ 31 ರಿಂದ ಎಲ್ಲಾ ವಾಹನಸವಾರರಿಗೆ ಬಿಗ್ ಶಾಕಿಂಗ್ ನ್ಯೂಸ್ / HSRP ನಂಬರ್ ಪ್ಲೇಟ್ ₹1,000 ದಂಡ ಘೋಷಣೆ.!

ಇದೇ ರೀತಿಯ ಹೊಸ ಹೊಸ ಮಾಹಿತಿಗಳು ತಿಳಿಯಲು, ವಿದ್ಯಾರ್ಥಿವೇತನಗಳು, ಸರ್ಕಾರಿ ಯೋಜನೆಗಳು, ಸರ್ಕಾರಿ ಕೆಲಸಗಳು ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply