Ration Card Update : ಹೊಸ ರೇಷನ್ ಕಾರ್ಡ್ ಗೆ ಕಾಯ್ತಿದ್ದೀರಾ.? ಯಾವಾಗ ಮತ್ತು ಹೇಗೆ ಅರ್ಜಿ ಸಲ್ಲಿಸುವುದು.?

Ration Card Update : ನಮಸ್ಕಾರ ಸ್ನೇಹಿತರೇ, ಇದೀಗ ಜನಸಾಮಾನ್ಯರು ಸರ್ಕಾರದ ಯಾವುದೇ ಮಹತ್ವದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕಿದ್ದರೆ ಪಡಿತರ ಚೀಟಿ(Ration Card) ಕಡ್ಡಾಯವಾಗಿ ಹೋಂದಿರಬೇಕು. ಬಿಪಿಎಲ್ ಪಡಿತರ ಚೀಟಿ ಯಾರು ಹೊಂದಿಲ್ಲವೋ ಅವರಿಗೆ ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಾಗಲಿ ಅಥವಾ ಇತರ ಯಾವುದೇ ಸರ್ಕಾರಿ ಯೋಜನೆಯ ಪ್ರಯೋಜನಗಳಾಗಲಿ ಪಡೆಯಲು ಸಾಧ್ಯವಿಲ್ಲ.

ಇನ್ನು ಹೊಸ ಪಡಿತರ ಚೀಟಿ(Ration Card) ಗೆ ಅರ್ಜಿ ಸಲ್ಲಿಸಲು ಇದೇ ಜೂನ್ ತಿಂಗಳಿನಿಂದ ಪ್ರಾರಂಭಿಸಲಾಗುತ್ತದೆ ಎನ್ನಲಾಗುತ್ತಿದ್ದು, ಹೊಸ ರೇಷನ್ ಕಾರ್ಡ್ ಪಡೆಯಲು ಯಾರೆಲ್ಲಾ ಅರ್ಹರು.? ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ.? ಹಾಗೆಯೇ ಹೇಗೆ ಅರ್ಜಿ ಸಲ್ಲಿಸುವುದು.? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

WhatsApp Group Join Now

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿ ಯರಿಗೆ ಈ ಕೆಲಸ ಕಡ್ಡಾಯ | 10ನೇ ಕಂತಿಗೆ ಹೊಸ ರೂಲ್ಸ್ | ಮಹಿಳೆಯರಿಗೆ ಗುಡ್ ನ್ಯೂಸ್.!

ಹೊಸ ಪಡಿತರ ಚೀಟಿಗೆ ಯಾರೆಲ್ಲಾ ಅರ್ಹರು.?

  • ಹೊಸದಾಗಿ ಮದುವೆಯಾದ ನವ ವಿವಾಹಿತ ಪತಿ-ಪತ್ನಿ ಅರ್ಜಿ ಸಲ್ಲಿಸಬಹುದು.
  • ಕುಟುಂಬದಲ್ಲಿ ಈಗಾಗಲೇ ಪಡಿತರ ಚೀಟಿ ಹೊಂದಿದ್ದರೆ ಮತ್ತೆ ರೇಷನ್ ಕಾರ್ಡ್ ಸಿಗುವುದಿಲ್ಲ.
  • ಆರ್ಥಿಕವಾಗಿ ಸಬಲರಾಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ದೊರೆಯುವುದಿಲ್ಲ.

ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ.?

  • ಆಧಾರ್ ಕಾರ್ಡ್
  • ವಿಳಾಸದ ಪುರಾವೆ
  • ಬ್ಯಾಂಕ್ ಖಾತೆಯ ವಿವರ
  • ಪಾನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ

ಇದನ್ನೂ ಕೂಡ ಓದಿ : Crop Insurance : ನಿಮಗೆ ಬೆಳೆ ಪರಿಹಾರ ಸಿಕಿದ್ಯಾ.? ಆಧಾರ್ ಕಾರ್ಡ್, ಮೊಬೈಲ್ ನಂಬ‌ರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ

WhatsApp Group Join Now

ಅರ್ಜಿ ಸಲ್ಲಿಸುವ ವಿಧಾನ.?

ಹೊಸ ರೇಷನ್ ಕಾರ್ಡ್(Ration Card) ಗಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಈ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply