Ration Card : ರೇಷನ್ ಕಾರ್ಡ್ ರದ್ದಾದ ಹೊಸ ಪಟ್ಟಿ ಬಿಡುಗಡೆ.! ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ ಬೇಗ ಚೆಕ್ ಮಾಡಿಕೊಳ್ಳಿ.!

Ration Card : ನಮಸ್ಕಾರ ಸ್ನೇಹಿತರೇ, ರೇಷನ್ ಕಾರ್ಡ್ ರದ್ದು ಮಾಡಲಾಗಿರುವ ಹೊಸ ಪಟ್ಟಿ ಬಿಡುಗಡೆಯಾಗಿದ್ದು, ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆಯಾ ಅಥವಾ ರದ್ದಾಗಿದೆಯಾ ಎಂದು ಈಗಲೇ ಇಲ್ಲಿ ನೀಡಿರುವ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಿ..! ಹೇಗೆ ಚೆಕ್ ಮಾಡಬೇಕು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Mahalakshmi Scheme : ಮಹಿಳೆಯರಿಗೆ ಪ್ರತಿ ತಿಂಗಳು ₹8,500/- ನೀಡುವ ಕಾಂಗ್ರೆಸ್ ಗ್ಯಾರಂಟಿ. ಹೇಗೆ ಅರ್ಜಿ ಸಲ್ಲಿಸುವುದು.? ಸಂಪೂರ್ಣ ಮಾಹಿತಿ

ಇತ್ತೀಚಿಗೆ ಸರ್ಕಾರವು ಕೆಲವೊಂದು ಅನರ್ಹ ಫಲಾನುಭವಿಗಳ ಪಟ್ಟಿಯನ್ನು ರೇಷನ್ ಕಾರ್ಡ್ ನಿಂದ ತೆಗೆದುಹಾಕಿದೆ. ಈ ರೀತಿ ಅನರ್ಹರ ಪಟ್ಟಿ ತೆಗೆದು ಹಾಕುವಾಗ ಕೆಲವೊಂದು ಅರ್ಹ ಫಲಾನುಭವಿಗಳನ್ನು ಕೂಡ ಸರ್ಕಾರವು ತೆಗೆದು ಹಾಕಿದೆ. ಅಂತಹ ಅರ್ಹ ಫಲಾನುಭವಿಗಳು ಏನು ಮಾಡಬೇಕು.? ಎಂದು ತಿಳಿಯೋಣ.

ರೇಷನ್ ಕಾರ್ಡ್ ನಿಂದ ಕೆಲವೊಂದು ಅನರ್ಹರ ಹೆಸರನ್ನು ತೆಗೆದು ಹಾಕುತ್ತಿದ್ದಾರೆ. ಯಾರ ಹೆಸರನ್ನೂ ತೆಗೆದು ಹಾಕಿದ್ದಾರೆ.? ಎಂದು ನೀವು ನಿಮ್ಮ ಮೊಬೈಲ್ ನಲ್ಲಿಯೇ ಇಲ್ಲಿ ನೀಡಿರುವ ವೆಬ್ ಸೈಟ್ ಲಿಂಕ್ ಭೇಟಿ ನೀಡಿ ನೋಡಿಕೊಳ್ಳಬಹುದು. ನೀವು ಎಲ್ಲಾ ಅರ್ಹತೆ ಹೊಂದಿದ್ದರರೂ ಕೂಡ ನಿಮ್ಮ ಹೆಸರು ರದ್ದು ಮಾಡಲಾಗಿದೆಯೇ ಎಂದು ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು.

ನಿಮ್ಮ ರೇಷನ್ ಕಾರ್ಡ್ ನ ಸ್ಥಿತಿ ತಿಳಿಯಲು ಈ ಲಿಂಕ್ ಗೆ ಭೇಟಿ ನೀಡಿ :- ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ

ಇದನ್ನೂ ಕೂಡ ಓದಿ : LPG Subsidy : ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಪಡೆಯಲು ಈ ಸುದ್ದಿ ತಪ್ಪದೇ ಓದಿ

ರೇಷನ್ ಕಾರ್ಡ್ ಚೆಕ್ ಮಾಡುವ ವಿಧಾನ.?

  • ನಿಮ್ಮ ರೇಷನ್ ಕಾರ್ಡ್ ಸ್ಥಿತಿ ತಿಳಿಯಲು ಮೊದಲು ಈ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಲಿಂಕ್ ಗೆ ಭೇಟಿ ನೀಡಿ.
  • ನಂತರ ಆಹಾರ ಇಲಾಖೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ಎಡಗಡೆ ಮೂರು ಲೈನ್ ಕಾಣುತ್ತದೆ. ಅಲ್ಲಿ ಒತ್ತಿ.
  • ನಂತರ ಅಲ್ಲಿ ನಿಮಗೆ ಕೆಲವು ಆಯ್ಕೆಗಳು ಕಾಣುತ್ತವೆ. ಅದರಲ್ಲಿ ಇ- ಪಡಿತರ ಚೀಟಿಯ ಮೇಲೆ ಒತ್ತಿ.
  • ನಂತರ ಅಲ್ಲಿ ಮತ್ತೆ ಕೆಲವು ಆಯ್ಕೆಗಳು ಕಾಣುತ್ತವೆ, ಅದರಲ್ಲಿ ರದ್ದುಗೊಳಿಸಲಾದ ಪಟ್ಟಿ ಎನ್ನುವುದರ ಮೇಲೆ ಒತ್ತಿ.
  • ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ, ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತಿ, ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ಅಲ್ಲಿ ನಿಮ್ಮ ಊರಿನ ಯಾರ ರೇಷನ್ ಕಾರ್ಡ್ ರದ್ದಾಗಿವೆ ಎಂಬ ಲಿಸ್ಟ್ ನಿಮಗೆ ತಿಳಿಯುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply