Rain Updates : ಮುಂದಿನ ಕೆಲವೇ ಗಂಟೆಗಳಲ್ಲಿ ಮಳೆರಾಯನ ಅಬ್ಬರ ಶುರು.! ಎಲ್ಲೆಲ್ಲಿ ಮಳೆ ಬೀಳಲಿದೆ.?

Rain Updates : ನಮಸ್ಕಾರ ಸ್ನೇಹಿತರೇ, ಮಳೆರಾಯ ಅಬ್ಬರಿಸುತ್ತಾ ಕನ್ನಡಿಗರ ಎದೆಯಲ್ಲಿ ಭಯ ಹುಟ್ಟಿಸಿದ್ದಾನೆ. ಅರೆರೆ.. ಮಳೆ ಬಂದ್ರೆ ಭಯ ಏಕೆ? ಅಂತಾ ಕೇಳಬೇಡಿ ಮತ್ತೆ. ಯಾಕಂದ್ರೆ ಅಕಾಲಿಕ ಮಳೆ ಕಾರಣಕ್ಕೆ ಹಲವು ರೀತಿ ಸಮಸ್ಯೆಗಳು ಇದೀಗ ಎದುರಾಗುತ್ತಿವೆ. ಮುಂಗಾರು ಮಳೆ ಕಾಲ ಮುಗಿದು, ಹಿಂಗಾರು ಮಳೆ ಸಮಯ ಕೂಡ ಅಂತ್ಯವಾಗಿದೆ ಎನ್ನುವಾಗಲೇ ಮಳೆ ಶುರುವಾಗಿದೆ.

ಇದನ್ನೂ ಕೂಡ ಓದಿ : Birth & Death Certificate : ಜನನ ಹಾಗು ಮರಣ ಪ್ರಮಾಣ ಪತ್ರ ಪಡೆಯಲು ಈ ದಾಖಲೆಗಳು ಕಡ್ಡಾಯ.! ಎಲ್ಲಿ ಅರ್ಜಿ ಸಲ್ಲಿಸುವುದು.?

ಅದರಲ್ಲೂ ಚಳಿ ಶುರು ಆಗುವಾಗ ಕರ್ನಾಟಕ ರಾಜ್ಯದಲ್ಲಿ ಭಾರಿ ಮಳೆ ಬೀಳುತ್ತಿರುವುದು ಹಲವಾರು ಸಮಸ್ಯೆ ಇದೀಗ ಎದುರಾಗುವಂತೆ ಮಾಡಿದೆ. ಹೀಗಿದ್ದಾಗಲೇ ಮತ್ತೆ ಮಳೆ ಎಚ್ಚರಿಕೆ ನೀಡಲಾಗಿದೆ!

ಕಳೆದ ವರ್ಷ ಅಂದ್ರೆ 2023ರ ನವೆಂಬರ್ ವೇಳೆಗೆ ಜನರು ಮಳೆ ಯಾಕೆ ಬಂದಿಲ್ಲ?? ಅಂತಾ ಹಿಡಿಶಾಪ ಹಾಕುತ್ತಾ ವರುಣನ ವಿರುದ್ಧ ಗೊಣಗುತ್ತಿದ್ದರು. ಯಾಕಂದ್ರೆ 2023 ರಲ್ಲಿ ಮಳೆಯು ಕೈಕೊಟ್ಟು ಹೋಗಿದ್ದ ಕಾರಣಕ್ಕೆ ಜನರಿಗೆ ನಾನಾ ರೀತಿಯ ಸಮಸ್ಯೆ ಎದುರಾಗಿತ್ತು. ಹೀಗಾಗಿ ಜನರಿಗೆ ಕೂಡ ಚಿಂತೆ ಶುರುವಾಗಿತ್ತು. ಆದರೆ 2024ರ ಹೊತ್ತಿಗೆ ಅಂದ್ರೆ ಪ್ರಸಕ್ತ ವರ್ಷದಲ್ಲಿ ಮಳೆ ಯಾಕಪ್ಪಾ ಬೀಳುತ್ತಿದೆ? ಅಂತಾ ಜನ ಗೊಣಗುತ್ತಿದ್ದಾರೆ. ಹೀಗಿದ್ದರೂ ಮತ್ತೆ ಹಲವಾರು ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ನೆಚ್ಚರಿಕೆ ಸಿಗುತ್ತಿದೆ.

ಇದನ್ನೂ ಕೂಡ ಓದಿ : SBI Bank Updates : ‘ಎಸ್ ಬಿಐ’ ಗ್ರಾಹಕರಿಗೆ ಭರ್ಜರಿ ಸಿಹಿಸುದ್ಧಿ – ಇನ್ಮುಂದೆ ಕೇವಲ 15 ನಿಮಿಷದಲ್ಲೇ ‘ಸಾಲ’ ಲಭ್ಯ – ಸಂಪೂರ್ಣ ಮಾಹಿತಿ

ಅಂದಹಾಗೆ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ & ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಇಂದು ಮಳೆ ಬರಲಿದೆ. ಹಾಗೇ ಮತ್ತೊಂದು ಕಡೆ ಸಕ್ಕರೆ ನಾಡು ಮಂಡ್ಯ, ಕೋಲಾರ ಸೇರಿ ಕನ್ನಡ ನಾಡಿನ ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಇಂದು ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲೂ ಹಗುರ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ.

Leave a Reply