ಅಕ್ಟೋಬರ್ 21 ರವರೆಗೆ ಮಳೆ.! ಮಳೆ.! || 12 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ | Rain Update

Spread the love

ಈಗಾಗಲೇ ಮುಂಗಾರು ಪ್ರವೇಶ ಮುಗಿದಿದ್ದರೂ ಸಹ ರಾಜ್ಯದಲ್ಲಿ ಈಗ ಹಿಂಗಾರು ಅವಧಿಯ ಮಳೆ ಆರಂಭಗೊಂಡಿದೆ. ಈಗಾಗಲೇ ರಾಜ್ಯದಲ್ಲಿ ಅಕ್ಟೋಬರ್ 15ರಂದು ಮುಂಗಾರು ಅವಧಿ ಮುಗಿದಿದೆ. ಇದೆ ಅಕ್ಟೋಬರ್ 16 ರಿಂದ ರಾಜ್ಯದಲ್ಲಿ ಹಿಂಗಾರು ಮಳೆ ಪ್ರವೇಶಿಸಿದೆ. ಮತ್ತೆ ಬಿಟ್ಟು ಬಿಡದೆ ಭಯಂಕರವಾಗಿ ಮಳೆ ಸುರಿಯಲಿದ್ದು, ಹವಾಮಾನ ಇಲಾಖೆಯಿಂದ 12 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ.

ರಾಜ್ಯದಲ್ಲಿ ಇದೇ ಅಕ್ಟೋಬರ್ 21ರವರೆಗೆ ಬಿಟ್ಟುಬಿಡದೆ ಸತತವಾಗಿ ಮಿಂಚು ಗುಡುಗು ಭಯಂಕರ ರಬಸದಿಂದ ಬೀಸುವ ಗಾಳಿ ಸಹಿತ ಮಳೆ ಬೀಳಲಿದೆ. ಪ್ರತಿ ಗಂಟೆಗೆ 60 ರಿಂದ 70 ಕಿಲೋಮೀಟರ್ ವೇಗದಲ್ಲಿ ಬೀಸುವ ಬಿರುಗಾಳಿ ಸಹಿತ ಮಳೆ ಬೀಳಲಿದ್ದು, ಹವಾಮಾನ ಇಲಾಖೆಯು ಸಾರ್ವಜನಿಕರಲ್ಲಿ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನ ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಹಿಂಗಾರು ಮಳೆಯ ಪ್ರಭಾವವು ಕೂಡ ಈ ವರ್ಷ ಅಧಿಕವಾಗಿರಲಿದೆ.

ರಾಜ್ಯಾದ್ಯಂತ ಅಕ್ಟೋಬರ್ ಅಂತ್ಯ ಸಮೀಪಿಸಿದರು ಸಹ ಮಳೆ ಮಾತ್ರ ಕಡಿಮೆಯಾದಂತಿಲ್ಲ. ಬೆಂಗಳೂರಿನಲ್ಲಿಯೂ ಸಹ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಇನ್ನು ಹವಾಮಾನ ಇಲಾಖೆ ವರದಿಯ ಪ್ರಕಾರ ಪ್ರಸಕ್ತ ವರ್ಷದ ಮುಂಗಾರು ಅಕ್ಟೋಬರ್ 15ರಂದು ಕೊನೆಗೊಂಡಿದ್ದು, ಗುರುವಾರದಿಂದ ಹಿಂಗಾರು ಮಳೆ ರಾಜ್ಯ ಪ್ರವೇಶಿಸಲಿದೆ ಎಂದು ತಿಳಿಸಿದೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ ಈ ಬಾರಿ ಹಿಂಗಾರು ಮಳೆ ಬರೋಬ್ಬರಿ ನವೆಂಬರ್ ತಿಂಗಳ ಅಂತ್ಯದವರೆಗೆ ಇರಲಿದೆ. ಅಲ್ಲದೇ ವಾಡಿಕೆಯಷ್ಟೇ ಮಳೆ ಸುರಿಯಲಿದೆ. ಹೀಗಾಗಿ ಈ ಬಾರಿ ಹಿಂಗಾರಿನಿಂದ ಯಾವುದೇ ದೊಡ್ಡ ಮಳೆ ನಿರೀಕ್ಷೆ ಇಲ್ಲವಾಗಿದೆ. ಅದರಲ್ಲಿಯೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಿಂಗಾರು ಹೆಚ್ಚು ಮಳೆಯಾಗಬಹುದು. ಆದರೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೋ ಅಲರ್ಟ್ ಘೋಷಣೆ

ಇನ್ನು ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಮುಂಗಾರು ಅಂತ್ಯವಾಗುತ್ತದೆ. ಆದರೆ ಈ ಬಾರಿ ಅಕ್ಟೋಬರ್ ಮಧ್ಯದವರೆಗೂ ಮುಂಗಾರು ಮುಂದುವರೆದಿದೆ. ಅಲ್ಲದೇ ಗುರುವಾರ ಹಾಗೂ ಶುಕ್ರವಾರ ಗುಡುಗು ಸಹಿತ ಹೆಚ್ಚು ಮಳೆಯಾಗಲಿರುವ ಹಿನ್ನೆಲೆ ಮಲೆನಾಡು ಹಾಗೂ ಕರಾವಳಿಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನು ಅಕ್ಟೋಬರ್ 17 ರಿಂದ 19ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಾಳಿಯು ಗಂಟೆಗೆ 35 ರಿಂದ 55 km ವೇಗದಲ್ಲಿ ಬೀಸುವ ಸಾಧ್ಯತೆ ಇದು. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಹವಾಮಾನ ಇಲಾಖೆಯು ವಾರವಿಡೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರುತ್ತದೆ. ಆದರೂ ಯಾವುದೇ ಎಚ್ಚರಿಕೆಯನ್ನ ನೀಡಲಾಗಿಲ್ಲ.

ಅಕ್ಟೋಬರ್ 20ರವರೆಗೆ ಹವಾಮಾನವು ಹೆಚ್ಚಾಗಿ ಮೋಡಕವಿದಿದ್ದು ಸಾಂದರ್ಭಿಕವಾಗಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುತ್ತಿದೆ ಎಂದು ತಿಳಿಸಿದೆ. ಅಕ್ಟೋಬರ್ 21ರವರೆಗೂ ಮಳೆ ಇದ್ದು, ಅಕ್ಟೋಬರ್ 16ರಂದು ಕರಾವಳಿ ಜಿಲ್ಲೆಗಳು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅದರಂತೆ ಅಕ್ಟೋಬರ್ 17ರಂದು ಸಹ ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇನ್ನು ಅಕ್ಟೋಬರ್ 18 ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಅಕ್ಟೋಬರ್ 19 ರಂದು ಕರಾವಳಿ, ಮಲೆನಾಡು ಹಾಗೂ ಬೆಂಗಳೂರು, ಮಂಡ್ಯ, ಮೈಸೂರಿನ ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ. ಅಕ್ಟೋಬರ್ 20 ಮತ್ತು 21 ರಂದು ಕರಾವಳಿ ಜಿಲ್ಲೆಗಳು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

WhatsApp Group Join Now

Spread the love

Leave a Reply