Crime News : ತಮಿಳುನಾಡಿನ ಜೋಲಾರ್ಪೇಟೆ ಬಳಿ ಚಲಿಸುವ ರೈಲಿನಿಂದ ನಾಲ್ಕು ತಿಂಗಳ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿ, ತಳ್ಳಿ ಗಂಭೀರ ಗಾಯಗೊಳಿಸಲಾಗಿದೆ. ಕೊಯಮತ್ತೂರಿನಲ್ಲಿ ಟೇಲರಿಂಗ್ ಮಾಡುತ್ತಿದ್ದ ಸಂತ್ರಸ್ತೆ ಕೊಯಿಮತ್ತೂರ್-ತಿರುಪತಿ ಇಂಟರ್ಸಿಟಿ ಎಕ್ಸ್ಪ್ರೆಸ್ನಲ್ಲಿ ಚಿತ್ತೂರಿಗೆ ಪ್ರಯಾಣಿಸುತ್ತಿದ್ದಾಗ, ಮಹಿಳೆಯರ ವಿಭಾಗದಲ್ಲಿದ್ದ ವ್ಯಕ್ತಿಯೊಬ್ಬರು ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ 36 ವರ್ಷದ ಗರ್ಭಿಣಿ ಮಹಿಳೆ ಶನಿವಾರ ಗರ್ಭಪಾತಕ್ಕೊಳಗಾಗಿದ್ದಾರೆ. TOI ವರದಿಯ ಪ್ರಕಾರ, 4 ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಎರಡು ದಿನಗಳ ಹಿಂದೆ ನಡೆದ ಹಲ್ಲೆಯ ನಂತರ ವೆಲ್ಲೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಗರ್ಭಿಣಿ ಎಂದು ಬೇಡಿಕೊಂಡರು ಬಿಡದ ಪಾಪಿ:
ವರದಿಯ ಪ್ರಕಾರ, ಚಲಿಸುತ್ತಿದ್ದ ರೈಲಿನಲ್ಲಿ ಇತರ ಮಹಿಳಾ ಪ್ರಯಾಣಿಕರು ಹೋದ ನಂತರ ಆರೋಪಿಯು ಮಹಿಳಾ ಬೋಗಿಯನ್ನು ಹತ್ತಿದ್ದ ಎಂದು ಮಹಿಳೆ ತನ್ನ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಇದು ಮಹಿಳಾ ಬೋಗಿಯಾಗಿರುವುದರಿಂದ ನಾನು ಅವನನ್ನು ಕೆಳಗಿಳಿಯಲು ಕೇಳಿದಾಗ, ರೈಲು ಈಗಾಗಲೇ ಚಲಿಸಲು ಪ್ರಾರಂಭಿಸಿದೆ ಮತ್ತು ಮುಂದಿನ ನಿಲ್ದಾಣದಲ್ಲಿ ಇಳಿಯುವುದಾಗಿ ಅವನು ಹೇಳಿದನು. ನಾನು ಸರಿ ಎಂದು ಹೇಳಿದೆ. ಆದರೆ ಆ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ಹೇಳಿದರು. ಅರ್ಧ ಗಂಟೆ ಆ ವ್ಯಕ್ತಿ ಮೌನವಾಗಿದ್ದ. ನಂತರ, ಅವನು ಬಾತ್ರೂಮ್ ನಿಂದ ಬೆತ್ತಲೆಯಾಗಿ ಬಂದು ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದನು. ನಾನು ಗರ್ಭಿಣಿ ಮತ್ತು ನಾನು ನಿಮ್ಮ ಸಹೋದರಿಯಂತೆ ಎಂದು ಹೇಳುತ್ತಾ ಬೇಡಿಕೊಂಡರೂ ಪಾಪಿ ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ದೌರ್ಜನ್ಯವೆಸಗಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ.
ಮಹಿಳೆಯ ತಲೆಗೆ 20 ಹೊಲಿಗೆ
ಇನ್ನು, ಶನಿವಾರ ಮಧ್ಯಾಹ್ನ ವೈದ್ಯರು ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಆದರೆ ದುರಾದೃಷ್ಟವಶಾತ್ ಗರ್ಭಪಾತವಾಗಿರುವುದನ್ನು ದೃಢಪಡಿಸಿದ್ದಾರೆ ಎಂದು ಅವರ ಪತಿ ವರದಿಗಾರರಿಗೆ ಮಾಹಿತಿ ನೀಡಿದರು. ಗುರುವಾರ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಭ್ರೂಣವು ಸಾಮಾನ್ಯವಾಗಿತ್ತು. ಆದರೆ ಮಹಿಳೆ ಸ್ಥಿತಿ ಹದಗೆಟ್ಟಿತು. ಶನಿವಾರ ಭ್ರೂಣದ ಹೃದಯ ಬಡಿತ ಕಡಿಮೆಯಾದ ಕಾರಣ ಗರ್ಭಪಾತವಾಗಿದೆ ಎಂದು ಹೇಳಿದ್ದಾರೆ. ಇನ್ನು, ಮಹಿಳೆಯ ಕೈಕಾಲುಗಳು ಮತ್ತು ತಲೆಯಲ್ಲಿ ಮುರಿತಗಳು ಸೇರಿದಂತೆ ತೀವ್ರವಾದ ಗಾಯಗಳಾಗಿದ್ದು, ಆಕೆಯ ತಲೆಯ ಮೇಲೆ 20 ಹೊಲಿಗೆಗಳನ್ನು ಹಾಕಲಾಗಿದೆ ಎಂದು ವರದಿಯಾಗಿದೆ.
ಆರೋಪಿ ಹೇಮರಾಜ್ ಬಂಧನ
ವೆಲ್ಲೂರಿನ ಕೆವಿ ಕುಪ್ಪಂನ 30 ವರ್ಷದ ಹೇಮರಾಜ್ ಎಂದು ಗುರುತಿಸಲಾದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು 12 ಗಂಟೆಗಳ ಒಳಗೆ ಪತ್ತೆಹಚ್ಚಲಾಯಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಕೊಲೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆತ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ದಕ್ಷಿಣ ರೈಲ್ವೆ ಮಹಿಳೆಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ. ಮಹಿಳಾ ಪ್ರಯಾಣಿಕನ ಮೇಲೆ ದುಷ್ಕರ್ಮಿ ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಆದರೆ ಆಕೆ ಧೈರ್ಯದಿಂದ ವಿರೋಧಿಸಿದ್ದಾಳೆ ಎಂದು ದಕ್ಷಿಣ ರೈಲ್ವೆ ಮುಖ್ಯಸ್ಥ ಪಿಆರ್ಒ ಎಂ. ಸೆಂಥಮಿಲ್ ಸೆಲ್ವನ್ ಹೇಳಿದ್ದಾರೆ. ನಾನು ಸುಮಾರು 30 ನಿಮಿಷಗಳ ಕಾಲ ಹೋರಾಡಿದೆ. ನಾನು ಎದುರಿಸಿದ ಘಟನೆಯನ್ನು ಬೇರೆ ಯಾವುದೇ ಮಹಿಳೆ ಎದುರಿಸಬಾರದು. ದಯವಿಟ್ಟು ಅವನನ್ನು ಶಿಕ್ಷಿಸಿ. ಈ ಸೈಕೋನನ್ನು ಹೊರಗೆ ಬಿಡಬೇಡಿ ಎಂದು ಮಹಿಳೆ ಕೇಳಿಕೊಂಡಿದ್ದಾಳೆ.
- GOOD NEWS: ‘ಮಹಿಳಾ ಉದ್ಯೋಗಿ’ಗಳಿಗೆ ಗುಡ್ ನ್ಯೂಸ್: ಮಾಸಿಕ 1 ದಿನ ‘ಋತುಚಕ್ರ ರಜೆ’ ಮಂಜೂರು, ಸರ್ಕಾರ ಆದೇಶ.!
- ಬೆಂಗಳೂರು ಫ್ಲ್ಯಾಟ್ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ
- ಬೆಂಗಳೂರಿನ ಹೃದಯಭಾಗದಲ್ಲೇ ಇದೆ ಪಾಕಿಸ್ತಾನ, ಚೀನಾ ಪ್ರಜೆಗಳ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ.!
- ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ 1 ಲಕ್ಷ ರೂ. ಆರ್ಥಿಕ ನೆರವು – ಶೇ.20ರಷ್ಟು ಸಬ್ಸಿಡಿ.!
- ರಾಜ್ಯದ ರೈತರಿಗೆ ಸಿಹಿಸುದ್ಧಿ : ಮೃತರ ಹೆಸರಲ್ಲಿನ ಜಮೀನು ವಾರಸುದಾರರಿಗೆ ಬದಲಿಸಲು ಪೌತಿ ಖಾತೆ, ಪೋಡಿಗೆ ಡಿಸೆಂಬರ್ ಗಡುವು
- ರಜೆ ಬಳಿಕ ಇದೀಗ 8 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್.! ಏನಿದು ಹೊಸ ನಿಯಮ!
- ಬೆಳೆ ಸಮೀಕ್ಷೆ 2025 : AI ತಂತ್ರಜ್ಞಾನದೊಂದಿಗೆ ರೈತರಿಗೆ ಬಂಗಾರದ ಅವಕಾಶ! ನೀವು ಇನ್ನೂ ಮಾಡದೇ ಇದ್ದರೆ ಈ ಕ್ಷಣವೇ ಆರಂಭಿಸಿ!
- Gruhalakshmi Loan Scheme – ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಗುಡ್ ನ್ಯೂಸ್.! ಸೊಸೈಟಿಯಿಂದ ₹3 ಲಕ್ಷ ರೂ.ವರೆಗೆ ಸಾಲ ಸೌಲಭ್ಯ.!
- ಬಡ ಜನರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು 2.5 ಲಕ್ಷ ಸರ್ಕಾರದಿಂದ ಸಹಾಯಧನ! Rajiv Gandhi Vasati Yojana
- Bele Parihara : ಬೆಳೆ ಪರಿಹಾರ ಹಣ – ಪರಿಹಾರ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಿ
- ದೇಶದ ಎಲ್ಲಾ ಬ್ಯಾಂಕ್ ನೌಕರರಿಗೆ ಇದೀಗ ಹೊಸ ರೂಲ್ಸ್ | ಸ್ಥಳೀಯ ಭಾಷೆ ಬಳಕೆ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ.!
- ಬ್ಯಾಂಕ್ FD ಗಿಂತ ಹೆಚ್ಚು ಬಡ್ಡಿ ಸಿಗುತ್ತೆ ಈ ಆರು ಯೋಜನೆಗಳಲ್ಲಿ.! ಯಾವ ಯೋಜನೆ.? ಸಂಪೂರ್ಣ ಮಾಹಿತಿ
- ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಮನೆ ಕಟ್ಟಡ ನಿರ್ಮಿಸಿದವರಿಗೆ ಭರ್ಜರಿ ಗುಡ್ ನ್ಯೂಸ್ – ಸಕ್ರಮ ಮಾಡಿಕೊಳ್ಳಲು ಅರ್ಜಿ ಆಹ್ವಾನ
- ಮನೆ ಬಾಡಿಗೆದಾರ `ಮನೆಯ ಮಾಲೀಕತ್ವ’ ಹೊಂದುವುದು ಅಸಾಧ್ಯ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು
- ‘PM ಆವಾಸ್ ಯೋಜನೆ’ಯಡಿ ಮನೆ ಕಟ್ಟಲು ಸಿಗಲಿದೆ 25 ಲಕ್ಷ ರೂ. ಸಾಲ.! ಅರ್ಜಿ ಹೇಗೆ ಸಲ್ಲಿಸುವುದು.?
- ಅಡಿಕೆ ತೋಟ ಮಾಡಲು ಸಬ್ಸಿಡಿ ಯೋಜನೆ – ಸಿಗಲಿದೆ ಎಕರೆಗೆ ಇಷ್ಟು ಸಹಾಯ ಧನ.!
- 10 ವರ್ಷದ ಬ್ಯಾಂಕ್ ಖಾತೆ ಇದ್ದವರಿಗೆ ದೊಡ್ಡ ಗುಡ್ ನ್ಯೂಸ್ | ಬ್ಯಾಂಕ್ ಖಾತೆ ಹೊಂದಿರುವವರು ತಪ್ಪದೇ ನೋಡಿ
- ಅಡಿಕೆ ನಿಷೇಧ ಚರ್ಚೆಗಳಿಂದ ಆತಂಕದಲ್ಲಿದ್ದ ಬೆಳೆಗಾರರಿಗೆ ಗುಡ್ ನ್ಯೂಸ್ : ಅಡಕೆಯಲ್ಲಿದೆ ಕ್ಯಾನ್ಸರ್ ಪ್ರತಿಬಂಧಕ ಗುಣ
- ಅಣ್ಣನನ್ನು ಕೊಂದು ಗರ್ಭಿಣಿ ಅತ್ತಿಗೆಯ ಮೇಲೆ ಅತ್ಯಾಚಾರ : ಹೊಟ್ಟೆಗೆ ಒದ್ದು ಭ್ರೂಣ ಹೊರ ತೆಗೆದು ಬಾಲಕನಿಂದ ಭೀಕರ ಕೃತ್ಯ!
- ರಾಜ್ಯದ ಮಹಿಳೆಯರಿಗೆ ಇನ್ನೊಂದು ಭಾಗ್ಯ, ನ. 19 ರಂದು ರಾಜ್ಯದ ಹೊಸ ಯೋಜನೆ ಜಾರಿ
- ನವೆಂಬರ್ 30 ರ ನಂತರ ರದ್ದಾಗಲಿದೆ ಇಂತವರ ಪಿಂಚಣಿ ಹಣ, ಜೀವನ ಪ್ರಮಾಣಪತ್ರಕ್ಕೆ ಕೊನೆಯ ಗಡುವು
- ಕರ್ನಾಟಕದಲ್ಲಿ 3 ದಿನಗಳ ವಿಶೇಷ ರಜೆ ಘೋಷಣೆ! ಕಾರಣವೇನು ಗೊತ್ತಾ?
- ಸಾರ್ವಜನಿಕರೇ ಗಮನಿಸಿ : ‘ಭೂಮಿ’ ಖರೀದಿಸುವಾಗ ಈ 6 ದಾಖಲೆಗಳು ಕಡ್ಡಾಯ.! ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು!
- ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಗೌಡ; ಅರ್ಧದಲ್ಲೇ ಮನೆಯಿಂದ ಎಲಿಮಿನೇಟ್? Biggboss Kannada
- ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಸಾಮೂಹಿಕ ಅತ್ಯಾಚಾರ – ಸಿಸಿಟಿವಿ ದೃಶ್ಯ ಆಧರಿಸಿ ಸಂತ್ರಸ್ತ ನಾಯಿಯ ಪತ್ತೆ.!
- ಕೆನರಾ ಬ್ಯಾಂಕ್ ನಲ್ಲಿ ಅತ್ಯಂತ ಹಳೆ ಖಾತೆ ಇದ್ದವರಿಗೆ ಸಿಹಿಸುದ್ದಿ | Canara Bank Easy Loan
- ಬಾಡಿಗೆ ಮನೆಯಲ್ಲಿದ್ದವರಿಗೆ ಕೋರ್ಟ್ ಐತಿಹಾಸಿಕ ತೀರ್ಪು – ಪದೇ ಪದೇ ಮನೆ ಬಾಡಿಗೆ ಹೆಚ್ಚಳ ಆಗುತ್ತಿದೆಯಾ.?


























