Crime News : ತಮಿಳುನಾಡಿನ ಜೋಲಾರ್ಪೇಟೆ ಬಳಿ ಚಲಿಸುವ ರೈಲಿನಿಂದ ನಾಲ್ಕು ತಿಂಗಳ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿ, ತಳ್ಳಿ ಗಂಭೀರ ಗಾಯಗೊಳಿಸಲಾಗಿದೆ. ಕೊಯಮತ್ತೂರಿನಲ್ಲಿ ಟೇಲರಿಂಗ್ ಮಾಡುತ್ತಿದ್ದ ಸಂತ್ರಸ್ತೆ ಕೊಯಿಮತ್ತೂರ್-ತಿರುಪತಿ ಇಂಟರ್ಸಿಟಿ ಎಕ್ಸ್ಪ್ರೆಸ್ನಲ್ಲಿ ಚಿತ್ತೂರಿಗೆ ಪ್ರಯಾಣಿಸುತ್ತಿದ್ದಾಗ, ಮಹಿಳೆಯರ ವಿಭಾಗದಲ್ಲಿದ್ದ ವ್ಯಕ್ತಿಯೊಬ್ಬರು ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ 36 ವರ್ಷದ ಗರ್ಭಿಣಿ ಮಹಿಳೆ ಶನಿವಾರ ಗರ್ಭಪಾತಕ್ಕೊಳಗಾಗಿದ್ದಾರೆ. TOI ವರದಿಯ ಪ್ರಕಾರ, 4 ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಎರಡು ದಿನಗಳ ಹಿಂದೆ ನಡೆದ ಹಲ್ಲೆಯ ನಂತರ ವೆಲ್ಲೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಗರ್ಭಿಣಿ ಎಂದು ಬೇಡಿಕೊಂಡರು ಬಿಡದ ಪಾಪಿ:
ವರದಿಯ ಪ್ರಕಾರ, ಚಲಿಸುತ್ತಿದ್ದ ರೈಲಿನಲ್ಲಿ ಇತರ ಮಹಿಳಾ ಪ್ರಯಾಣಿಕರು ಹೋದ ನಂತರ ಆರೋಪಿಯು ಮಹಿಳಾ ಬೋಗಿಯನ್ನು ಹತ್ತಿದ್ದ ಎಂದು ಮಹಿಳೆ ತನ್ನ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಇದು ಮಹಿಳಾ ಬೋಗಿಯಾಗಿರುವುದರಿಂದ ನಾನು ಅವನನ್ನು ಕೆಳಗಿಳಿಯಲು ಕೇಳಿದಾಗ, ರೈಲು ಈಗಾಗಲೇ ಚಲಿಸಲು ಪ್ರಾರಂಭಿಸಿದೆ ಮತ್ತು ಮುಂದಿನ ನಿಲ್ದಾಣದಲ್ಲಿ ಇಳಿಯುವುದಾಗಿ ಅವನು ಹೇಳಿದನು. ನಾನು ಸರಿ ಎಂದು ಹೇಳಿದೆ. ಆದರೆ ಆ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ಹೇಳಿದರು. ಅರ್ಧ ಗಂಟೆ ಆ ವ್ಯಕ್ತಿ ಮೌನವಾಗಿದ್ದ. ನಂತರ, ಅವನು ಬಾತ್ರೂಮ್ ನಿಂದ ಬೆತ್ತಲೆಯಾಗಿ ಬಂದು ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದನು. ನಾನು ಗರ್ಭಿಣಿ ಮತ್ತು ನಾನು ನಿಮ್ಮ ಸಹೋದರಿಯಂತೆ ಎಂದು ಹೇಳುತ್ತಾ ಬೇಡಿಕೊಂಡರೂ ಪಾಪಿ ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ದೌರ್ಜನ್ಯವೆಸಗಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ.
ಮಹಿಳೆಯ ತಲೆಗೆ 20 ಹೊಲಿಗೆ
ಇನ್ನು, ಶನಿವಾರ ಮಧ್ಯಾಹ್ನ ವೈದ್ಯರು ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಆದರೆ ದುರಾದೃಷ್ಟವಶಾತ್ ಗರ್ಭಪಾತವಾಗಿರುವುದನ್ನು ದೃಢಪಡಿಸಿದ್ದಾರೆ ಎಂದು ಅವರ ಪತಿ ವರದಿಗಾರರಿಗೆ ಮಾಹಿತಿ ನೀಡಿದರು. ಗುರುವಾರ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಭ್ರೂಣವು ಸಾಮಾನ್ಯವಾಗಿತ್ತು. ಆದರೆ ಮಹಿಳೆ ಸ್ಥಿತಿ ಹದಗೆಟ್ಟಿತು. ಶನಿವಾರ ಭ್ರೂಣದ ಹೃದಯ ಬಡಿತ ಕಡಿಮೆಯಾದ ಕಾರಣ ಗರ್ಭಪಾತವಾಗಿದೆ ಎಂದು ಹೇಳಿದ್ದಾರೆ. ಇನ್ನು, ಮಹಿಳೆಯ ಕೈಕಾಲುಗಳು ಮತ್ತು ತಲೆಯಲ್ಲಿ ಮುರಿತಗಳು ಸೇರಿದಂತೆ ತೀವ್ರವಾದ ಗಾಯಗಳಾಗಿದ್ದು, ಆಕೆಯ ತಲೆಯ ಮೇಲೆ 20 ಹೊಲಿಗೆಗಳನ್ನು ಹಾಕಲಾಗಿದೆ ಎಂದು ವರದಿಯಾಗಿದೆ.
ಆರೋಪಿ ಹೇಮರಾಜ್ ಬಂಧನ
ವೆಲ್ಲೂರಿನ ಕೆವಿ ಕುಪ್ಪಂನ 30 ವರ್ಷದ ಹೇಮರಾಜ್ ಎಂದು ಗುರುತಿಸಲಾದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು 12 ಗಂಟೆಗಳ ಒಳಗೆ ಪತ್ತೆಹಚ್ಚಲಾಯಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಕೊಲೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆತ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ದಕ್ಷಿಣ ರೈಲ್ವೆ ಮಹಿಳೆಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ. ಮಹಿಳಾ ಪ್ರಯಾಣಿಕನ ಮೇಲೆ ದುಷ್ಕರ್ಮಿ ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಆದರೆ ಆಕೆ ಧೈರ್ಯದಿಂದ ವಿರೋಧಿಸಿದ್ದಾಳೆ ಎಂದು ದಕ್ಷಿಣ ರೈಲ್ವೆ ಮುಖ್ಯಸ್ಥ ಪಿಆರ್ಒ ಎಂ. ಸೆಂಥಮಿಲ್ ಸೆಲ್ವನ್ ಹೇಳಿದ್ದಾರೆ. ನಾನು ಸುಮಾರು 30 ನಿಮಿಷಗಳ ಕಾಲ ಹೋರಾಡಿದೆ. ನಾನು ಎದುರಿಸಿದ ಘಟನೆಯನ್ನು ಬೇರೆ ಯಾವುದೇ ಮಹಿಳೆ ಎದುರಿಸಬಾರದು. ದಯವಿಟ್ಟು ಅವನನ್ನು ಶಿಕ್ಷಿಸಿ. ಈ ಸೈಕೋನನ್ನು ಹೊರಗೆ ಬಿಡಬೇಡಿ ಎಂದು ಮಹಿಳೆ ಕೇಳಿಕೊಂಡಿದ್ದಾಳೆ.
- ಗ್ರಾಮೀಣ ಜನತೆಗೆ ಸಿಹಿಸುದ್ದಿ : ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಬಿ-ಖಾತಾ ವಿತರಣೆ, ಇ-ಸ್ವತ್ತು ಸರಳೀಕರಣ
- ಬ್ಯಾಂಕ್ ಸಾಲ ಬಾಕಿ ಇದ್ದವರಿಗೆ RBI ನಿಂದ ಗುಡ್ ನ್ಯೂಸ್ | ಆರ್ ಬಿಐ ನೀಡಿರುವ ಗುಡ್ ನ್ಯೂಸ್ ಏನು.?
- Gold Rate : ಭಾರೀ ಇಳಿಕೆ ಕಂಡ ಚಿನ್ನದ ಬೆಲೆ.? ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನದ ದರ.? ಭರ್ಜರಿ ಇಳಿಕೆಯತ್ತ!
- ಬ್ಯಾಂಕ್ FD ಇಟ್ಟ ಹಿರಿಯ ನಾಗರೀಕರಿಗೆ RBI ಹೊಸ ರೂಲ್ಸ್ | Senior Citizen FD New Rules
- ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್.! BPL Ration Card Updates
- ವಿಧವೆಯ ಪಿತ್ರಾರ್ಜಿತ ಆಸ್ತಿ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್- Inherited property rights
- Online gambling : ಆನ್ಲೈನ್ ಜೂಜು ನಿಷೇಧ : ಕೇಂದ್ರದ ನೆರವು ಕೇಳಿದ ಸುಪ್ರೀಂ ಕೋರ್ಟ್
- ಪ್ಯಾನ್ ಕಾರ್ಡ್ ಹೊಂದಿರೋರೇ ಎಚ್ಚರ! ಈ ತಪ್ಪು ಮಾಡಿದ್ರೇ 10,000 ದಂಡ ಕಟ್ಟಬೇಕಾಗುತ್ತೆ ಹುಷಾರ್! | PAN Card Alert
- 2026 ರ ಚಿನ್ನದ ಬೆಲೆ ಎಷ್ಟಾಗುತ್ತೆ ಎಂದು ತಿಳಿಸಿದ ಸರ್ಕಾರ.! ಚಿನ್ನದ ಭವಿಷ್ಯ ಹೇಗಿದೆ.? | Gold Price Prediction 2026
- ದೀಪಾವಳಿಗೆ BSNL ನಿಂದ ಕೈಗೆಟುಕುವ ದರದಲ್ಲಿ 365 ದಿನಗಳ ಸೇವೆಯ ‘BSNL ಸಮ್ಮಾನ್’ ಪ್ಲಾನ್ ಬಿಡುಗಡೆ
- Weather Forecast : ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ – 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
- ಫೋನ್ ಬಳಸಿದ ವಿದ್ಯಾರ್ಥಿಗೆ ಕಾಲಿನಿಂದ ಒದ್ದು, ಮನಸೋ ಇಚ್ಛೆ ಥಳಿಸಿದ ‘ರಕ್ಕಸ’ ಶಿಕ್ಷಕ! ವಿಡಿಯೋ ವೈರಲ್
- ಇನ್ಮುಂದೆ ಇವರು `BPL – ಅಂತ್ಯೋದಯ’ ರೇಷನ್ ಕಾರ್ಡ್ ಪಡೆಯಲು ಅನರ್ಹ.! ಸಂಪೂರ್ಣ ಮಾಹಿತಿ
- Arecanut : ಅಡಕೆ ನಿಷೇಧ ಮಾಡಲು ʼWHO” ಕರೆ – ಕ್ಯಾನ್ಸರ್ ಕಾರಕ ಎಂದು ಗಂಭೀರ ಆರೋಪ
- ‘ಮೈದುನನ ಜೊತೆ ಮಲಗೋಕೆ ಒತ್ತಾಯ’ : ಕಿರುಕುಳಕ್ಕೆ ಬೇಸತ್ತು ಡ್ಯಾಂಗೆ ಹಾರಿ ಉಪನ್ಯಾಸಕಿ ಆತ್ಮಹತ್ಯೆ!
- ‘ಬ್ಯಾಂಕ್’ ಗ್ರಾಹಕರೇ ಗಮನಿಸಿ : ಖಾತೆಯಿಂದ ಈ 10 ವಹಿವಾಟು ಮಾಡಿದ್ರೆ ನಿಮಗೆ ‘IT ನೋಟಿಸ್’ ಗ್ಯಾರೆಂಟಿ.! Bank Rules
- ಬ್ಯಾಂಕ್ ನಲ್ಲಿ ನವೆಂಬರ್ 1 ರಿಂದ ಹಿರಿಯ ನಾಗರೀಕರಿಗೆ ಈ 5 ಸೇವೆ ಉಚಿತ | Senior Citizens
- ಅಕ್ಟೋಬರ್ 31 ರವೆರೆಗೆ ಶಾಲೆಗಳಿಗೆ ರಜೆ ವಿಸ್ತರಣೆ.? ಮಕ್ಕಳಿಗೆ ಇನ್ನೊಂದು ಸಿಹಿಸುದ್ದಿ.!
- ಚಿನ್ನದ ಬೆಲೆ ಬಗ್ಗೆ RBI ಹೊಸ ನಿರ್ಧಾರ | ಇಳಿಕೆಯತ್ತ ಸಾಗುತ್ತಾ ಬಂಗಾರದ ಬೆಲೆ.?
- ನವೆಂಬರ್ 1 ರಿಂದ ದೇಶಾದ್ಯಂತ ಸ್ವಂತ ವಾಹನಕ್ಕೆ 5000 ರೂ. ದಂಡ | ಹೊಸ ರೂಲ್ಸ್
- 6 ತಿಂಗಳು ಒಂದೇ ಕಂಪನಿಯಲ್ಲಿ ಇದ್ದವರಿಗೆ ದೊಡ್ಡ ರೂಲ್ಸ್ | ಐತಿಹಾಸಿಕ ನಿರ್ಧಾರ
- ದೀಪಾವಳಿಗೆ ಗೃಹಲಕ್ಷ್ಮೀ ಹಣ ಫಿಕ್ಸ್! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ದುಡ್ಡು – ಹಣ ಬಂದಿರೋದು ಹೇಗೆ ಚೆಕ್ ಮಾಡೋದು?
- ಬ್ಯಾಂಕ್ ನಲ್ಲಿ ಚಿನ್ನ ಅಡವಿಟ್ಟವರಿಗೆ ದೊಡ್ಡ ಸಿಹಿಸುದ್ದಿ | Gold Loan Updates
- 30×40 ಸೈಟ್ ಖರೀದಿಗೆ ಇನ್ಮೇಲೆ ಈ 4 ದಾಖಲೆ ಕಡ್ಡಾಯ | ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ.?
- ಮಗನಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇಲ್ಲ.? ಕೋರ್ಟ್ ಆದೇಶ – ಏನಿದು ಹೊಸ ನಿಯಮ.?
- ಜಾತಿಗಣತಿ ಇನ್ನೂ ಮುಗಿಯದ ಕಾರಣ ಶಾಲೆಗಳಿಗೆ ರಜೆ ವಿಸ್ತರಣೆ? | Karnataka Caste Census
- ಈ 4 ಬ್ಯಾಂಕುಗಳಲ್ಲಿ ಹೆಚ್ಚಿನ ಹಣ ಇದ್ದವರಿಗೆ ಹೊಸ ಸಂಕಷ್ಟ | RBI ನಿರ್ಧಾರ.!