BPL Ration Card : ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್! ಇದು ಮೋದಿ ಸರ್ಕಾರದ ಗ್ಯಾರಂಟಿ.!

BPL Ration Card : ನಮಸ್ಕಾರ ಸ್ನೇಹಿತರೇ, ಮೂರನೇ ಬಾರಿ ಪ್ರಧಾನಿ ಪಟ್ಟಕ್ಕೇರಿದ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಬಿಪಿಎಲ್ ರೇಷನ್ ಕಾರ್ಡ್(BPL Ration Card) ಹೊಂದಿರುವ ಬದಕುಟುಂಬಗಳಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಏನಿದು ಮೋದಿ ಗ್ಯಾರಂಟಿ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ದೇಶದ ಪ್ರತಿಯೊಂದು ಕುಟುಂಬದ ಮಹಿಳೆಯರು ಅಡುಗೆ ಮಾಡಲು ಗ್ಯಾಸ್ ಸಿಲೆಂಡರ್ ಅನ್ನು ಬಳಸುತ್ತಿದ್ದಾರೆ. ಕಟ್ಟಿಗೆಯಿಂದ ಹಾಗೂ ಒಲೆಗಳಿಂದ ಅಡುಗೆ ಮಾಡುವುದು ಈ ಕಾಲದಲ್ಲಿ ತುಂಬಾ ವಿರಳ ಎಂದೇ ಹೇಳಬಹುದು. ಆದರೆ ಕೆಲವೊಂದಿಷ್ಟು ಬಿಪಿಎಲ್ ರೇಷನ್ ಕಾರ್ಡ್(BPL Ration Card) ಹೊಂದಿರುವ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರನ್ನು ಖರೀದಿಸಲು ಕಷ್ಟವಾಗಬಹುದು. ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಅಂತಹ ಕಡು ಬಡವರಿಗೆ ಆರ್ಥಿಕವಾಗಿ ನೆರವು ನೀಡಲು ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಬಳಸಿಕೊಂಡು ಉಚಿತವಾಗಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ಅನ್ನು ಪಡೆದುಕೊಳ್ಳಬಹುದು.

ಇದನ್ನೂ ಕೂಡ ಓದಿ : PM Awas Yojana : ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಿಗುತ್ತಿದೆ ₹1.5 ಲಕ್ಷ ಸಹಾಯಧನ.! ಕೂಡಲೇ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.

ಪ್ರಧಾನಮಂತ್ರಿ ಉಜ್ವಲ ಯೋಜನೆ

ಪ್ರಧಾನಿ ಮೋದಿಯವರು ಪ್ರಧಾನಮಂತ್ರಿ ಉಜ್ವಲ ಯೋಜನೆ(PradhanMantri Ujjvala Yojana) ಎಂಬ ಹೆಸರಿನಲ್ಲಿ ಈ ಯೋಜನೆಯನ್ನು 2016ರಲ್ಲಿ ಜಾರಿಗೆ ತಂದರು. ಬಡ ಕುಟುಂಬದ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ಅನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲೆಂಡರ್ ಹಾಗೂ ಸ್ಟವ್ ಅನ್ನು ಕೂಡ ನೀಡಲಾಗುತ್ತದೆ.

ಪ್ರತಿ ಬಾರಿ ನೀವು ಗ್ಯಾಸ್ ಸಿಲಿಂಡರನ್ನು ತುಂಬಿಸಿದಾಗ ನಿಮಗೆ ₹300 ಸಬ್ಸಿಡಿ ಹಣವನ್ನು ಕೂಡ ನೀಡಲಾಗುತ್ತದೆ. ಇದರಿಂದ ನೀವು ಕೇವಲ ₹500ರಲ್ಲಿ ಗ್ಯಾಸ್ ಸಿಲಿಂಡರನ್ನು ಪಡೆದಂತಾಗುತ್ತದೆ. ಸಬ್ಸಿಡಿಯ ಹಣ ವರ್ಷ ಕಳೆದಂತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೇಗನೇ ಬಿಪಿಎಲ್ ರೇಷನ್ ಕಾರ್ಡ್(BPL Ration Card) ಹೊಂದಿರುವ ಅರ್ಹ ಫಲಾನುಭವಿಗಳು ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಿ.

ಇದನ್ನೂ ಕೂಡ ಓದಿ : Laptop Scheme : ಹೀಗೆ ಮಾಡಿದರೆ ಸಿಗಲಿದೆ ಕರ್ನಾಟಕ ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್.! ಡೈರೆಕ್ಟ್ ಲಿಂಕ್

ಅರ್ಜಿ ಸಲ್ಲಿಸುವ ವಿಧಾನ :-

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ(PradhanMantri Ujjvala Yojana) ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಬಹುದು. ಅಥವಾ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನೀವು ನಿಮ್ಮ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಆದರೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಅರ್ಹ ಫಲಾನುಭವಿಗಳು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಅಥವಾ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಸೂಕ್ತ.

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವ ವೆಬ್ ಸೈಟ್ ಲಿಂಕ್ :- Pradhan Mantri Ujjwala Yojana 2.0

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply