PM Udyoga Srujana Scheme :  ಪಿಎಂ ಉದ್ಯೋಗ ಸೃಜನ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ – ಬೇಕಾಗುವ ದಾಖಲೆಗಳೇನು.?

PM Udyoga Srujana Scheme : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನ ಮಂತ್ರಿಗಳ ಸೃಜನ ಯೋಜನೆ (ಪಿ.ಎಂ.ಇ.ಜಿ.ಪಿ)ಯಡಿ ನಿರುದ್ಯೋಗ ಯುವಕ-ಯುವತಿಯರಿಗೆ ಆರ್ಥಿಕ ಸಾಲ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇದನ್ನೂ ಕೂಡ ಓದಿ : ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana

18 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರು /ಪ.ಜಾ, ಪ.ಪಂ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು, ಮಾಜಿ ಸೈನಿಕರು, ಅಂಗವಿಕಲರು ಅರ್ಜಿ ಸಲ್ಲಿಸಬಹುದು. ವಿವಿಧ ಹಣಕಾಸು ಸಂಸ್ಥೆಗಳು (ಬ್ಯಾಂಕುಗಳ) ಮೂಲಕ ಸಾಲ ಸೌಲಭ್ಯ ನೀಡಲಾಗುವುದು. ಯಾವುದೇ ಆದಾಯದ ಮಿತಿ ಇರುವುದಿಲ್ಲ.

ಇದನ್ನೂ ಕೂಡ ಓದಿ : Ration Card Updates : ನಿಮ್ಮ ಬಳಿ ಇವುಗಳಿದ್ರೆ ಕೂಡಲೇ ‘ಬಿಪಿಎಲ್ ರೇಷನ್ ಕಾರ್ಡ್’ ಹಿಂದಿರುಗಿಸಿ : ಇಲ್ಲದಿದ್ರೆ ದಂಡ ಫಿಕ್ಸ್.! ಸಂಪೂರ್ಣ ಮಾಹಿತಿ

ಅಸಕ್ತಿ ಹೊಂದಿರುವ ಉದ್ಯಮಶೀಲರು www.kviconline.gov.in ವೆಬ್ ಸೈಟ್ ನಲ್ಲಿ kvib ಏಜೆನ್ಸಿ ಲಾಗಿನ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಕಛೇರಿ ದೂರವಾಣಿ ಸಂಖ್ಯೆ. 9480825612 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇಕಾಗುವ ದಾಖಲೆಗಳೇನು.?

• ಅರ್ಜಿ ನಮೂನೆ
• ಭಾವಚಿತ್ರಗಳು-2
• ವಾಸಸ್ಥಳ ದೃಢೀಕರಣ ಪತ್ರ
• ಯೋಜನಾ ವರದಿ
• ಸ್ಥಾಪಿಸುವ ಘಟಕ ಗ್ರಾಮೀಣ ಪ್ರದೇಶವಾಗಿರುವುದಕ್ಕೆ ದಾಖಲಾತಿ
• ಜಾತಿ ಪ್ರಮಾಣ ಪತ್ರ/ಮಾಜಿ ಸೈನಿಕ/• ಅಂಗವಿಕಲರಾಗಿರುವುದಕ್ಕೆ ದಾಖಲಾತಿ
• ವಿದ್ಯಾಭ್ಯಾಸ/ತಾಂತ್ರಿಕ ವಿದ್ಯಾರ್ಹತೆ ಪ್ರಮಾಣ ಪತ್ರದ ಪ್ರತಿ.
• ಯಂತ್ರೋಪಕರಣಗಳ ದರ ಪಟ್ಟಿ
• ಪಂಚಾಯತ್ ಲೈಸೆನ್ಸ್
• ಘಟಕದ ಕಟ್ಟಡದ ದಾಖಲಾತಿಗಳು.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಯೋಜನೆ ಅನುಷ್ಠಾನಗೊಳಿಸುವ ಬ್ಯಾಂಕ್‍ಗಳು :-

• ರಾಷ್ಟ್ರೀಕೃತ ಬ್ಯಾಂಕ್‍ಗಳು
• ಗ್ರಾಮೀಣ ಬ್ಯಾಂಕ್‍ಗಳು
• ಎಸ್.ಎಲ್.ಬಿ.ಸಿ. ಯಿಂದ ಅನುಮೋದಿಸಲ್ಪಟ್ಟ ಖಾಸಗಿ ವಾಣಿಜ್ಯ ಬ್ಯಾಂಕ್‍ಗಳು/ಸಹಕಾರಿ ಬ್ಯಾಂಕ್‍ಗಳು.

ಸಂಯುಕ್ತ ಸಾಲ :-

ರಾಷ್ಟ್ರೀಕೃತ ಬ್ಯಾಂಕ್‍ಗಳು/ವಾಣಿಜ್ಯ ಬ್ಯಾಂಕ್‍ಗಳು/ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಂತಹ ಹಣಕಾಸು ಸಂಸ್ಥೆಗಳು ಸಾಮಾನ್ಯ ಸಾಲ ಯೋಜನೆ ಅಡಿಯಲ್ಲಿ ಅಥವಾ ಸಿ.ಜಿ.ಟಿಎಂ.ಎಸ್.ಇ ಯೋಜನೆ ಅಡಿಯಲ್ಲಿ ಅಳವಡಿಸಿಕೊಂಡು ಯೋಜನಾ ವೆಚ್ಚದ ಶೇ 90-95% ರಷ್ಟು ಸಾಲವನ್ನು ಮಂಜೂರು ಮಾಡುವುದು.

ಪ್ರವರ್ತಕರ ವಂತಿಕೆ :-

ಸಾಮಾನ್ಯ ವರ್ಗದ  ಉದ್ಯಮಶೀಲರು  ಯೋಜನಾ ವೆಚ್ಚದ ಶೇ 10% ರಷ್ಟು ಬಂಡವಾಳವಾಗಿ ತೊಡಗಿಸಬೇಕು. ಉದ್ಯಮಶೀಲರು ಪ.ಜಾತಿ/ಪ.ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ/ಮಾಜಿ ಸೈನಿಕ/ಅಂಗವಿಕಲ/ಮಹಿಳೆ ಆಗಿದ್ದಲ್ಲಿ ಯೋಜನಾ ವೆಚ್ಚದ ಶೇ.5% ರಷ್ಟು ಬಂಡವಾಳ ತೊಡಗಿಸಬೇಕು.

Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

WhatsApp Group Join Now

ಈ ಯೋಜನೆಯಲ್ಲಿ ಕೈಗೊಳ್ಳಬಹುದಾದ ಕೆಲವು ಚಟುವಟಿಕೆಗಳು :-

ಖನಿಜಾಧಾರಿತ ಉದ್ದಿಮೆಗಳು :-

ಗೃಹ ಕುಂಬಾರಿಕೆ ಉದ್ದಿಮೆ
ಸುಣ್ಣಕಲ್ಲು,ಕಪ್ಪೆ ಚಿಪ್ಪು ಮತ್ತಿತ್ತರ ಸುಣ್ಣ ಉತ್ಪನ್ನ ಉದ್ದಿಮೆ
ಕಲ್ಲುಪುಡಿ ಮಾಡುವುದು,ಸೈಜು ಕಲ್ಲುಗಳನ್ನು ತಯಾರಿಸುವುದು.ಕಟ್ಟಡ ಮತ್ತು ದೇವಾಲಯಗಳಿಗೆ ಕಲ್ಲಿನಲ್ಲಿ ಶಿಲ್ಪಗಳ ತಯಾರಿಕೆ.
ಕಲ್ಲಿನಿಂದ ಬಳಕೆ ವಸ್ತುಗಳ ತಯಾರಿಕೆ
ಸ್ಲೇಟ್ ಮತ್ತು ಬಳಪಗಳ ತಯಾರಿಕೆ
ಪ್ಲಾಸ್ಟರ್ ಆಫ್ ಪ್ಯಾರಿಸ್ ಉತ್ಪಾದನೆ
ಪಾತ್ರೆಗಳನ್ನು ತೊಳೆಯುವ ಪುಡಿ
ಸೌದೆಯಿಂದ ಇದ್ದಿಲು ತಯಾರಿಕೆ
ಚಿನ್ನ,ಬೆಳ್ಳಿ,ಕಲ್ಲು,ಚಿಪ್ಪುಗಳು ಹಾಗೂ ಕೃತಕ ವಸ್ತುಗಳಿಂದ ಆಭರಣಗಳ ತಯಾರಿಕೆ
ಗುಲಾಲು ಮತ್ತು ರಂಗೋಲಿಗಳ ತಯಾರಿಕೆ
ಬಳೆಗಳ ತಯಾರಿಕೆ
ಪೇಯಿಂಟುಗಳು,ವಾರ್ನಿಷ್‍ಗಳು,ಡಿಸ್ಟೆಂಪರ್ ಗಳ ಉತ್ಪಾದನೆ
ಗಾಜಿನ ಅಲಂಕಾರಿಕ ವಸ್ತುಗಳ ತಯಾರಿಕೆ, ಹೊಳಪು ನೀಡುವುದು
ಆಭರಣದ ಕಲ್ಲುಗಳ ತಯಾರಿಕೆ
ಐಯೋಡೈಸ್ಡ್ ಉಪ್ಪು ತಯಾರಿಕೆ

ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana

ಅರಣ್ಯಾಧಾರಿತ ಕೈಗಾರಿಕೆ :-

ಕೈಕಾಗದ
ಕತ್ತಾಳೆ ನಾರು ತಯಾರಿಕೆ
ಗೊಂದು ಮತ್ತು ರೆಸಿನ್‍ಗಳ ತಯಾರಿಕೆ
ಷೆಲ್ಲಾಕ್ ತಯಾರಿಕೆ
ಗೃಹ ಬೆಂಕಿಕಡ್ಡಿ,ಪಟಾಕಿ ಹಾಗೂ ಅಗರಬತ್ತಿಗಳ ತಯಾರಿಕೆ
ಬೆತ್ತ ಮತ್ತು ಬಿದಿರು ಉದ್ದಿಮೆ
ಕಾಗದದ ದೊನ್ನೆ, ತಟ್ಟೆ,ಕೈಚೀಲ ಮತ್ತಿತರ ಕಾಗದದ ವಸ್ತುಗಳ ತಯಾರಿಕೆ
ಎಕ್ಸರ್ ಸೈಜ್ ಪುಸ್ತಕದ ರಟ್ಟು ಹಾಕುವಿಕೆ, ಕವರುಗಳ ತಯಾರಿಕೆ, ರಿಜಿಸ್ಟರ್ ಪುಸ್ತಕಗಳ ತಯಾರಿಕೆ ಇತ್ಯಾದಿಗಳ ಕಾಗದದಿಂದ ತಯಾರಿಸಲಾಗುವ ವಸ್ತುಗಳು
ಪೊರಕೆ ಮತ್ತು ತಟ್ಟಿಗಳ ತಯಾರಿಕೆ
ಅರಣ್ಯ ಉತ್ಪನ್ನಗಳ ಸಂಗ್ರಹಣೆ,ಪರಿಷ್ಕರಣೆ ಹಾಗೂ ಪ್ಯಾಕಿಂಗ್
ಪೋಟೋಗಳಿಗೆ ಕಟ್ಟು ಹಾಕುವಿಕೆ
ಸೆಣಬಿನ ಉತ್ಪನ್ನಗಳ ಉತ್ಪಾದನೆ (ನಾರು ಉದ್ದಿಮೆ ಅಡಿಯಲ್ಲಿ)

ಕೃಷಿ ಆಧಾರಿತ ಮತ್ತು ಆಹಾರ ಉದ್ದಿಮೆಗಳು:-

ಏಕದಳ,ಸಾಂಬಾರು ಪದಾರ್ಥಗಳ, ಹಪ್ಪಳ,ಸಂಡಿಗೆ ಮಸಾಲೆಪುಡಿಗಳ ಪರಿಷ್ಕರಣೆ, ಪ್ಯಾಕಿಂಗ್ ಮತ್ತು ಮಾರಾಟ
ನ್ಯೂಡಲ್ಸ್‍ಗಳ ತಯಾರಿಕೆ
ಹಿಟ್ಟಿನ ಗಿರಣಿ
ಬೇಳೆಗಳನ್ನು ತಯಾರಿಸುವುದು
ಸಣ್ಣ ಅಕ್ಕಿ ನುಚ್ಚಮಾಡುವ ಘಟಕ
ಪನೆ ಬೆಲ್ಲ ತಯಾರಿಕೆ ಮತ್ತಿತ್ತರ ಪನೆ ಬೆಲ್ಲ ಉತ್ಪನ್ನಗಳ ಉದ್ದಿಮೆ
ಬೆಲ್ಲ ಮತ್ತು ಖಂಡಸಾರಿ
ಭಾರತೀಯ ಸಿಹಿ ತಂಡಿಗಳ ತಯಾರಿಕೆ
ಕಬ್ಬಿನ ರಸ ತೆಗೆಯುವ ಘಟಕ
ಜೇನು ಸಾಕಾಣೆ
ಹಣ್ಣು ಮತ್ತು ತರಕಾರಿಗಳ ಪರಿಷ್ಕರಣೆ ಹಾಗೂ ಉಪ್ಪಿನಕಾಯಿ ತಯಾರಿಕೆ
ಗಾಣ ಎಣ್ಣೆ ತಯಾರಿಕೆ
ಮೆಂಥಾಲ್ ಎಣ್ಣೆ ತಯಾರಿಕೆ
ತೆಂಗಿನ ನಾರು ಹಾಗೂ ಇತರೆ ನಾರು ಉದ್ದಿಮೆ
ವೈದ್ಯಕೀಯ ಉದ್ದೇಶಗಳಿಗಾಗಿ ಅರಣ್ಯ ಗಿಡಮೂಲಿಕೆಗಳ ಹಾಗೂ ಹಣ್ಣುಗಳ ಸಂಗ್ರಹಣೆ
ರಾಗಿ ಮತ್ತು ಮೆಕ್ಕೆ ಜೋಳದ ಪರಿಷ್ಕರಣೆ
ಬೆಂಡಿನ ಕೆಲಸ, ಚಾಪೆ ಹಾಗೂ ಹೂವಿನ ಹಾರಗಳು ಇತ್ಯಾದಿಗಳ ತಯಾರಿಕೆ
ಗೋಡಂಬಿ ಪರಿಷ್ಕರಣೆ
ಅಡಿಕೆ ಎಲೆಯ ತಟ್ಟೆ,ದೊನ್ನೆ ತಯಾರಿಕೆ
ಹಾಲಿನ ಉತ್ಪನ್ನಗಳ ಘಟಕ
ಪಶು ಆಹಾರ,ಕೋಳಿ ಆಹಾರ ತಯಾರಿಕೆ

Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?

ಪಾಲಿಮರ್ ಮತ್ತು ರಾಸಾಯನಿಕ ಆಧಾರಿತ ಉದ್ದಿಮೆಗಳು :-

ಗೃಹ ಚರ್ಮೋದ್ಯೋಗ-ಇದರಲ್ಲಿ ಚರ್ಮ ಸುಲಿಯುವುದು, ಚರ್ಮಹದ ಮಾಡುವುದು ಇತ್ಯಾದಿಗಳು ಸೇರಿವೆ.
ಗೃಹ ಸಾಬೂನು ಉದ್ದಿಮೆ
ರಬ್ಬರ್ ವಸ್ತುಗಳ ತಯಾರಿಕೆ
ರೆಕ್ಸಿನ್ ಮತ್ತು ಪಿ.ವಿ.ಸಿ. ಉತ್ಪನ್ನಗಳ ತಯಾರಿಕೆ
ಕೊಂಬು,ಮೂಳೆ ಇವುಗಳ ಉತ್ಪನ್ನಗಳು
ಮೇಣದಬತ್ತಿ,ಕರ್ಪೂರ,ವ್ಯಾಕ್ಸ್ ತಯಾರಿಕೆ
ಪ್ಲಾಸ್ಟಿಕ್ ಪ್ಯಾಕಿಂಗ್ ವಸ್ಸುಗಳ ತಯಾರಿಕೆ
ಬಿಂದಿ ತಯಾರಿಕೆ
ಮೆಹಂದಿ ತಯಾರಿಕೆ
ಸುಗಂದ ಎಣ್ಣೆಗಳ ತಯಾರಿಕೆ
ಷಾಂಪೂಗಳ ತಯಾರಿಕೆ
ಕೇಶ ತೈಲಗಳ ಉತ್ಪಾದನೆ
ಡಿಟರ್ಜೇಂಟ್ಸ್ ಮತ್ತು ವಾಷಿಂಗ್ ಪೌಡರ್‍ ಗಳ ತಯಾರಿಕೆ

ಎಂಜಿನಿಯರಿಂಗ್ ಹಾಗೂ ಅಸಾಂಪ್ರದಾಯಕ ಶಕ್ತಿ :-

ಬಡಗಿತನ
ಕಮ್ಮಾರಿಕೆ
ಗೃಹ ಬಳಿಕೆಗಾಗಿ ಅಲ್ಯೂಮಿನಿಯಂ ಪಾತ್ರೆಗಳ ತಯಾರಿಕೆ
ಹಸುವಿನ ಸಗಣಿ ಮತ್ತಿತ್ತರ ನಿರುಪಯುಕ್ತ ವಸ್ತುಗಳಿಂದ (ಮಲ,ಸತ್ತ ಪ್ರಾಣಿಗಳ ಮಾಂಸ ಇತ್ಯಾದಿ) ಮಿಥೇನು (ಗೊಬ್ಬರ)ಅನಿಲದ ಉತ್ಪಾದನೆ ಮತ್ತು ಬಳಕೆ
ವರ್ಮಿಕಲ್ಚರ್ (ಸಾವಯವ ಗೊಬ್ಬರ)
ಗುಂಡು ಸೂಜಿಗಳು ಕ್ಲಿಪ್ಪುಗಳು,ಸುರಕ್ಷತಾ ಪಿನ್ನುಗಳು,ಸೀಸೆಗಳು, ಗಾಜಿನ ಲೋಟಗಳ ತಯಾರಿಕೆ
ಛತ್ರಿ ಜೋಡಣೆ
ಸೌರ ಹಾಗೂ ವಾಯುಶಕ್ತಿ ಉಪಕರಣಗಳು
ಹಿತ್ತಾಳೆಯಿದ ಕೈಯಿಂದ ತಯಾರಿತ ವಸ್ತುಗಳ ಉತ್ಪಾದನೆ
ತಾಮ್ರದಿಂದ ಕೈಯಿಂದ ತಯಾರಿತ ವಸ್ತುಗಳ ಉತ್ಪಾದನೆ
ಕಂಚಿನಿಂದ ತಯಾರಿಸಲ್ಪಡುವ ಇತರೆ ವಸ್ತುಗಳ ತಯಾರಿಕೆ
ಹಿತ್ತಾಳೆ,ತಾಮ್ರ ಮತ್ತು ಕಂಚಿನಿಂದ ತಯಾರಿಸಲ್ಪಡುವ ಇತರೆ ವಸ್ತುಗಳು
ರೇಡಿಯೋ ಜೋಡಣೆ ಮತ್ತು ರಿಪೇರಿ
ಕ್ಯಾಸೆಟ್ ಪ್ಲೇಯರ್‍ ಗಳ ತಯಾರಿಕೆ(ರೇಡಿಯೋದಲ್ಲಿ ಅಳವಡಿಸುವ ಹಾಗೂ ಅಳವಡಿಸದ)
ಕ್ಯಾಸೆಟ್ ರಿಕಾರ್ಡ್‍ಗಳ ತಯಾರಿಕೆ (ರೇಡಿಯೋದಲ್ಲಿ ಅಳವಡಿಸುವ ಹಾಗೂ ಅಳವಡಿಸದ)
ವೋಲ್ಟೇಜ್‍ಸ್ಟೇಬಿಲೈಸರ್ ತಯಾರಿಕೆ
ಎಲೆಕ್ಟ್ರಾನಿಕ್ ಗಡಿಯಾರಗಳ, ಅಲಾರಾಂ ಗಡಿಯಾರಗಳ ತಯಾರಿಕೆ.
ಕಲಾತ್ಮಕ ಪೀಠೋಪಕರಣಗಳ ತಯಾರಿಕೆ.
ಟಿನ್ ಸೇವೆ.
ಮೋಟರ್ ವೈಂಡಿಂಗ್.
ತಂತಿ ಬಲೆ ತಯಾರಿಕೆ.
ಕಬ್ಬಿಣದ ಗ್ರಿಲ್ ತಯಾರಿಕೆ
ಗ್ರಾಮೀಣ ಸಾರಿಗೆ-ಅಂದರೆ ಕೈಗಾಡಿಗಳು,ಎತ್ತಿನ ಗಾಡಿಗಳು,ಇತ್ಯಾದಿಗಳ ಉತ್ಪಾದನೆ
ಸಂಗೀತೋಪಕರಣಗಳ ತಯಾರಿಕೆ

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಸೇವಾ ಉದ್ದಿಮೆಗಳು :-

ಸೈಕಲ್ ಅಸೆಂಬೆಲ್
ಎಂಬ್ರಾಯಿಡರಿ ಅಲಂಕಾರ
ಬಟ್ಟೆಗೆ ಎಂಬ್ರಾಯಿಡರಿ ಅಲಂಕಾರ
ಸಿದ್ದ ಉಡುಪುಗಳ ತಯಾರಿಕೆ
ಸಿದ್ದ ಉಡುಪುಗಳ ತಯಾರಿಕೆ ಟೈಲರಿಂಗ್
ಬಾಟಿಕ್ ಕೆಲಸ
ಸ್ಟೌವ್ ಬತ್ತಿಗಳು
ಆಟದ ಸಾಮಾನುಗಳು ಹಾಗೂ ಬೊಂಬೆಗಳ ತಯಾರಿಕೆ
ದಾರದ ಉಂಡೆಗಳು,ಉಲ್ಲನ್ ಉಡುಪುಗಳು
ಶಸ್ತ್ರ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುವ ಬ್ಯಾಂಡೇಜ್‍ಗಳು
ಬ್ಯೂಟಿ ಪಾರ್ಲರ್
ಲಾಂಡ್ರಿ
ಕ್ಷೌರಿಕ ಘಟಕ
ಎಲೆಕ್ಟ್ರಿಕಲ್ ವೈರಿಂಗ್ ಎಲೆಕ್ಟ್ರಾನಿಕ್ಸ್ ಮತ್ತು ಈ ಬಗೆಯ ಗೃಹ ಬಳಕೆ ವಸ್ತುಗಳ ತಯಾರಿಕೆ
ಡೀಸೆಲ್ ಇಂಜಿನ್‍ಗಳ ರಿಪೇರಿ, ಪಂಪುಸೆಟ್ಟುಗಳ ರಿಪೇರಿ
ಟೈರ್/ವಲ್ಕನೈಎಸಿಂಗ್/ಘಟಕ
ಸ್ಟ್ರಯರ್‍ ಗಳ ಕ್ರಿಮಿನಾಶಕಗಳ ಪಂಪುಸೆಟ್ಟುಗಳ ಇತ್ಯಾದಿ ಕೃಷಿ ಸೇವಾ ಉದ್ದಿಮೆಗಳು
ಸೌಂಡ್ ಸಿಸ್ಟಂ
ಬ್ಯಾಟರಿ ಚಾರ್ಜಿಂಗ್
ಆರ್ಟ್ ಬೋರ್ಡ್ ಪೈಂಟಿಂಗ್
ಸೈಕಲ್ ರಿಪೇರಿ
ಕಟ್ಟಡದ ಕೆಲಸ
ಬ್ಯಾಂಡ್ ಟ್ರೂಪ್
ಟೀ ಸ್ಟಾಲುಗಳು

ನಿಷೇಧಿತ ಉದ್ದಿಮೆಗಳ ಪಟ್ಟಿ :-

ಮಾಂಸಾಹಾರಕ್ಕೆ ಸಂಬಂಧಿಸಿದ ಉದ್ದಿಮೆಗಳು,ಅಂದರೆ ಮಾಂಸದ ಸಂಸ್ಕರಣೆ ಶೇಖರಣೆ ಮತ್ತು ಇತರೆ ವಸ್ತುಗಳ ಮಾರಾಟ,ಮಾದಕ ವಸ್ತುಗಳಾದ ಬೀಡಿ,ಸಿಗರೇಟ್ ಪಾನ್ ಪರಾಗ್, ಇತ್ಯಾದಿಗಳು ಡಾಬಾದಲ್ಲಿ ಮದ್ಯ ಪೂರೈಕೆ ತಂಬಾಕು ಉತ್ಪನ್ನಗಳ ತಯಾರಿಕೆ, ನೀರಾ ಅಥವಾ ಈಚಲು ಮರದ ರಸ ಇಳಿಸುವಿಕೆ,ವ್ಯವಸಾಯ ಮತ್ತು ಪ್ಲಾಂಟೇಷನ್‍ಗಳಿಗೆ ಸಂಬಂಧಪಟ್ಟ ವಸ್ತುಗಳು, ಬೆಳೆ ಕೊಯ್ಲುಗೆ ಸಂಬಂಧಿಸಿದ ಯಂತ್ರೋಪಕರಣಗಳು, 20 ಮೈಕ್ರಾನ್‍ಗಿಂತ ಕಡಿಮೆ ಇರುವ ಪಾಲಿಥಿನ್ ಕೈ ಚೀಲಗಳು, ಆಹಾರ ಪದಾರ್ಥಗಳ ಶೇಖರಣೆ ಪಾಶ್ಮಿನ ಉಣ್ಣೆ ಮತು ಕೈಯಿಂದ ನೇಯ್ಗೆ ಮಾಡಿದ, ನೂಲು ಮಾಡಿದ ಹಾಗೂ ಅದಕ್ಕೆ ಸಂಬಂಧಪಟ್ಟ ವಸ್ತುಗಳ ಪರಿಷ್ಕರಣೆ ಖಾದಿ ಕಾರ್ಯಕ್ರಮದಡಿಯಲ್ಲಿ ರಿಬೇಟ್ ಪಡೆಯುವಿಕೆ, ಗ್ರಾಮಾಂತರ ಸಾರಿಗೆ. (ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿನ ಆಟೋರಿಕ್ಷಾಗಳು,ಜಮ್ಮು ಕಾಶ್ಮೀರದಲ್ಲಿನ ಮನೆಯ ದೋಣಿ,ಶಿಕಾರ ಪ್ರವಾಸದ ದೋಣಿಗಳು ಮತ್ತು ಸೈಕಲ್ ರಿಕ್ಷಾಗಳನ್ನು ಹೊರತುಪಡಿಸಿ).

Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಇತರೆ ಷರತ್ತುಗಳು :-

ಈ ಯೋಜನೆಯು ಹೊಸ ಘಟಕಗಳಿಗೆ ಮಾತ್ರ. ವಿಸ್ತರಣೆ/ಆಧುನೀಕರಣ/ವೈವಿದ್ಯಿಕರಣ ಘಟಕಗಳಿಗೆ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಇರುವುದಿಲ್ಲ. ಇತರೆ ಯೋಜನೆಗಳಲ್ಲಿ ಸಾಲ ಮತ್ತಿತ್ತರ ಸೌಲಭ್ಯ ಪಡೆದ ಘಟಕಗಳು/ಉದ್ಯಮಶೀಲರು ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹತೆ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ :-

ನಿಮ್ಮ ಹತ್ತಿರದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾಮಟ್ಟದ ಅಧಿಕಾರಿಗಳು/ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು/ಸಹಾಯಕ ನಿರ್ದೇಶಕರು/ಕೈಗಾರಿಕಾ ವಿಸ್ತಾರಣಾಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ. ಮಂಡಳಿಯ ಜಿಲ್ಲಾ ಕಛೇರಿಗಳಲ್ಲಿ ಪಿಎಂಇಜಿಪಿ ಯೋಜನೆಗಳ ಅನುಷ್ಠಾನಕ್ಕಾಗಿ ಉಚಿತ ನೆರವು ಕೇಂದ್ರಗಳನ್ನು ತೆರಯಲಾಗಿದೆ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ.

Leave a Reply