PM Kisan Samman Nidhi : ನಮಸ್ಕಾರ ಸ್ನೇಹಿತರೇ, ದೇಶದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿ ಸುಮಾರು 9 ಕೋಟಿಗೂ ಅಧಿಕ ಅರ್ಹ ಫಲಾನುಭವಿ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ನೊಂದಾಯಿಸಿಕೊಂಡ ಎಲ್ಲ ಅರ್ಹ ಫಲಾನುಭವಿ ರೈತರು ಪ್ರತಿ ವರ್ಷ ₹6,000/- ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಈ ಬಾರಿಯ ಕೇಂದ್ರದ ಬಜೆಟ್ ನಲ್ಲಿ ರೈತರಿಗೆ ಅನುಕೂಲವಾಗುವ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ₹6,000/- ದಿಂದ ₹8,000/- ರೂಪಾಯಿಗಳವರೆಗೆ ಹೆಚ್ಚಿಸುವ ಸಾಧ್ಯತೆಯಿದೆ. 2019 ರಲ್ಲಿ ಆರಂಭಗೊಂಡ ಈ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೊಂದಾಯಿಸಿಕೊಂಡ ರೈತರಿಗೆ ₹2,000/- ರೂಪಾಯಿಗಳಂತೆ 17 ಕಂತುಗಳನ್ನು ಈಗಾಗಲೇ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ ಹೊಲಿಗೆ ಯಂತ್ರ ವಿತರಣೆ – ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ – ಇಲ್ಲಿದೆ ಡೈರೆಕ್ಟ್ ಲಿಂಕ್
ಈ ಬಾರಿ ನಡೆಯುವ ಕೇಂದ್ರ ಬಜೆಟ್ ನಲ್ಲಿ, ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಹಣವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ಯೋಜನೆಯ ಅಡಿ ವರ್ಷಕ್ಕೆ ₹6,000/- ರೂಪಾಯಿಗಳನ್ನು ನೀಡಲಾಗುತ್ತಿದ್ದು, ಅದನ್ನು ₹8,000/- ರೂಪಾಯಿಗೆ ಹೆಚ್ಚಿಸುವ ಸಾಧ್ಯತೆಯಿದೆಯಂತೆ. ಈಗ ಪ್ರತಿ 4 ತಿಂಗಳಿಗೊಮ್ಮೆ ಅಂದರೆ ವರ್ಷದಲ್ಲಿ ಮೂರು ಬಾರಿ ತಲಾ ₹2,000/- ರೂಪಾಯಿ ಕಂತುಗಳನ್ನು ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಈಗ ವರ್ಷಕ್ಕೆ ನಾಲ್ಕು ಕಂತುಗಳಲ್ಲಿ ₹8,000/- ರೂಪಾಯಿಗಳನ್ನು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ದೇಶದ ಕೃಷಿ ಕ್ಷೇತ್ರದ ತಜ್ಞರು ಮತ್ತು ಪ್ರತಿನಿಧಿಗಳು, ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರ ಬಳಿ ಈ ವಿಚಾರವನ್ನು ಚರ್ಚಿಸಿ ಮನವಿ ಕೂಡ ಮಾಡಿದ್ದಾರೆ. ಕೇಂದ್ರದ ಸಚಿವಾಲಯವು ಕೂಡ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಹಣವನ್ನು ಹೆಚ್ಚಿಸುವ ಶಿಫಾರಸ್ಸು ಮಾಡಿರುವುದು ಕೂಡ ತಿಳಿದು ಬಂದಿದೆ. ಕೇಂದ್ರ ಕೃಷಿ ಸಚಿವರಾದ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ, ಕೇವಲ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅನುದಾನದ ಹಣ ಹೆಚ್ಚಿಸುವುದು ಅಷ್ಟೇ ಅಲ್ಲ, ಬಜೆಟ್ನಲ್ಲಿ ಕೃಷಿ ಸಂಶೋಧನೆಗೂ ಇರುವ ಅನುದಾನವನ್ನು ಹೆಚ್ಚಿಸಬೇಕು ಎಂದು ಕೃಷಿ ಕ್ಷೇತ್ರದವರು ಒತ್ತಾಯಿಸಿದ್ದಾರೆ.
ಇದನ್ನೂ ಕೂಡ ಓದಿ : Gold Rate : ಇಂದು ಭಾರಿ ಇಳಿಕೆಯಾಯ್ತಾ ಚಿನ್ನದ ಬೆಲೆ.? ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ರೇಟ್.?
ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ.?
ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯು, 2019ರ ಫೆಬ್ರವರಿಯಲ್ಲಿ ಆರಂಭವಾದ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಜಮೀನು ಹೊಂದಿರುವ ರೈತರಿಗೆ ಆರ್ಥಿಕವಾಗಿ ಧನಸಹಾಯ ಮಾಡುವುದಾಗಿದೆ. ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ ₹2,000/- ರೂಪಾಯಿಗಳಂತೆ, ಒಟ್ಟು ₹6,000/- ರೂಪಾಯಿಗಳನ್ನು ಕೇಂದ್ರ ಸರ್ಕಾರ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದೆ.ಇದುವರೆಗೂ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ 17ಕಂತುಗಳ ಹಣ ಬಿಡುಗಡೆಯಾಗಿದೆ. ಸುಮಾರು 9 ಕೋಟಿಗೂ ಅಧಿಕ ಅರ್ಹ ಫಲಾನುಭವಿ ರೈತರು ಇದರ ಪ್ರಯೋಜನವನ್ನ ಪಡೆದುಕೊಂಡಿದ್ದಾರೆ.
ಇದನ್ನೂ ಕೂಡ ಓದಿ : Housing Scheme : ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.! ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು ಬಿಡುಗಡೆ.!
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು.?
ನೀವು ಇದುವರೆಗೂ ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಪ್ರಯೋಜನವನ್ನ ಪಡೆಯದಿದ್ದರೆ, ನೀವು ಕೃಷಿ ಜಮೀನನ್ನು ಹೊಂದಿದ್ದರೆ, ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಈಗಲೂ ಅರ್ಜಿ ಸಲ್ಲಿಸುವ ಅವಕಾಶವಿದೆ. PM Kisan ಯೋಜನೆಯ ಅಧಿಕೃತ ವೆಬ್ಸೈಟ್ ಅಥವಾ ನಿಮ್ಮ ಗ್ರಾಮ ಸಮೀಪದ ರೈತ ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು, ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಅಧಿಕೃತ ವೆಬ್ ಸೈಟ್ ಲಿಂಕ್ ಕೆಳಗೆ ನೀಡಲಾಗಿದ್ದು, ವೆಬ್ ಸೈಟ್ ಗೆ ಭೇಟಿ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧೀಕೃತ ವೆಬ್ ಸೈಟ್ ಲಿಂಕ್ :- PM KISAN SAMMAN NIDHI (ಪಿಎಂ ಕಿಸಾನ್ ಸಮ್ಮಾನ್ ನಿಧಿ)
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Gold Rate Today : ಚಿನ್ನ ಖರೀದಿಗೆ ಇದೇ ಸರಿಯಾದ ಸಮಯಾನಾ.? ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ನಿಖರ ಬೆಲೆ.?
- Gold Rate : ಇಳಿಕೆಯತ್ತ ಮುಖ ಮಾಡಿದ ಚಿನ್ನ.! ಇವತ್ತಿನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ ಗೊತ್ತಾ.?
- Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
- Gold Rate Today : ಭಾರೀ ಏರಿಕೆಯತ್ತ ಸಾಗಿದ ಚಿನ್ನದ ಬೆಲೆ.! ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸ ಮೂಡುತ್ತಾ.?
- ಪತಿಯ ಬಂಧನ ಭೀತಿ : ಮಗುವಿಗೆ ನೇಣು ಬಿಗಿದು ತಾಯಿಯೂ ಆತ್ಮಹತ್ಯೆ – ಪೊಲೀಸರ ನೋಟಿಸ್, ಬೆದರಿಕೆಯಿಂದ ನೊಂದ ಮಹಿಳೆ
- ಚಾಮುಂಡಿ ಬೆಟ್ಟ ಹಿಂದೂಗಳದ್ದು, ರಾಜಕೀಯಕ್ಕೆ ಚಾಮುಂಡಿ ತಾಯಿ ಹೆಸರು ಎಳೆದು ತಂದಿದ್ದು ಬೇಸರ ತರಿಸಿದೆ ಎಂದ ರಾಜಮಾತೆ ಪ್ರಮೋದಾದೇವಿ ಒಡೆಯರ್
- ಹಣೆಗೆ ಅರಿಶಿಣ, ಕುಂಕುಮವಿಟ್ಟು, ಹೂ ಮುಡಿದು ದಸರಾ ಉದ್ಘಾಟನೆ ಮಾಡೋದಾದ್ರೆ ಬನ್ನಿ ಎಂದ ಪ್ರತಾಪ್ ಸಿಂಹ
- ಇಂದೇ ಲೋಕಸಭೆ ಚುನಾವಣೆ ನಡೆದರೆ ಎನ್ಡಿಎ 324 ಸ್ಥಾನ ಗೆಲ್ಲುವ ಸಾಧ್ಯತೆ – ಇಂಡಿಯಾ ಮೈತ್ರಿಕೂಟಕ್ಕೆ ಆಘಾತ!
- ಯಾದಗಿರಿ ಹಾಸ್ಟೆಲ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಹೈಸ್ಕೂಲ್ ವಿದ್ಯಾರ್ಥಿನಿ : ಗರ್ಭಿಣಿಯಾಗಿದ್ದೇ ಗೊತ್ತಿಲ್ಲ ಎಂದ ವಾರ್ಡನ್
- ಬೆಳ್ಳಂಬೆಳಗ್ಗೆ 5 ಗಂಟೆಗೆ ಆಗಮಿಸಿ ಎಸ್ಐಟಿ ಅಧಿಕಾರಿಗಳಿಗೆ ಶಾಕ್ ಕೊಟ್ಟ ಸುಜಾತ ಭಟ್! ಅನನ್ಯಾ ಭಟ್ ನಾಪತ್ತೆ ಪ್ರಕರಣ!
- Gold Rate Today : ಏರಿಳಿತ ಕಾಣುತ್ತಿರುವ ಬಂಗಾರದ ಬೆಲೆ.? ಇವತ್ತಿನ ಚಿನ್ನದ ರೇಟ್ ಎಷ್ಟಿದೆ ಗೊತ್ತಾ.?
- ದಸರಾ ಉದ್ಘಾಟಿಸುವ ಮುನ್ನ ಭಾನು ಮುಷ್ತಾಕ್ ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು ಎಂದ ಬಿಜೆಪಿ ಸಂಸದ ಯದುವೀರ್
- ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು 24 ಗಂಟೆಯಲ್ಲಿ ಪಡೆದ ವೀವ್ಸ್ ಎಷ್ಟು ಗೊತ್ತಾ.? ಡಿಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ಧಿ!
- ಪ್ರಿಯತಮೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಹತ್ಯೆ : ಮೊಬೈಲ್ ಸ್ಫೋಟಗೊಂಡು ಸತ್ತಿದ್ದಾಳೆ ಎಂದು ಕಥೆ ಕಟ್ಟಿದ್ದ ಪ್ರಿಯಕರ ಅರೆಸ್ಟ್
- ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ಫಂಡಿಂಗ್ ಬರ್ತಿತ್ತು ಅನ್ನೋದು ಸುಳ್ಳು, ಕೂಲಿ ಮಾಡಿದ್ರಷ್ಟೇ ಜೀವನ ನಡೀತಿತ್ತು – ಚಿನ್ನಯ್ಯನ 2ನೇ ಪತ್ನಿ ಕಣ್ಣೀರು
- ಎಡಪಂಥೀಯರನ್ನ ಕೇಳಿ ತನಿಖೆಗೆ ಕೊಟ್ಟಿದ್ದಾರೆ, ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿ
- Gold Rate Today : ಏರಿಳಿತ ಕಾಣುತ್ತಿರುವ ಬಂಗಾರದ ಬೆಲೆ.? ಇವತ್ತಿನ ಚಿನ್ನದ ರೇಟ್ ಎಷ್ಟಿದೆ ಗೊತ್ತಾ.?
- Gold Rate : ಇಳಿಕೆಯತ್ತ ಸಾಗಿದ ಬಂಗಾರದ ಬೆಲೆ.?ಇಂದಿನಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- Gold Rate : ಭಾರೀ ಇಳಿಕೆ ಕಂಡ ಚಿನ್ನದ ರೇಟ್.! ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- Gold Rate Today : ಮತ್ತೆ ಅಲ್ಪ ಇಳಿಕೆ ಕಂಡ ಚಿನ್ನದ ರೇಟ್.! ಇಂದಿನ ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.?