PMFBY : ಪಿಎಂ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮಾ ಪರಿಹಾರಕ್ಕೆ ನೋಂದಣಿ ಆರಂಭ – ಕೊನೆಯ ದಿನಾಂಕ.?

Spread the love

PMFBY : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಅನುಷ್ಟಾನಗೊಳಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಇಲ್ಲಿಯವರೆಗೆ 6390 ರೈತರು ವಿವಿಧ ಬೆಳೆಗಳಿಗೆ ಈ ಯೋಜನೆಯಡಿ ಪ್ರಿಮಿಯಂ ಪಾವತಿಸಿ ನೋಂದಣಿ ಮಾಡಿಕೊಂಡಿರುತ್ತಾರೆ.

ಇದನ್ನೂ ಕೂಡ ಓದಿ : Pan Card 2.0 : ಪ್ಯಾನ್ ಕಾರ್ಡ್ 2.0 ಬಂದ ಮೇಲೆ ಹಳೇ ಪ್ಯಾನ್ ಕಾರ್ಡ್ ಬದಲಾಯಿಸಬೇಕಾ.? ಸಂಪೂರ್ಣ ಮಾಹಿತಿ ಇಲ್ಲಿದೆ

ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಕಡಲೆ (ಮಳೆ ಆಶ್ರಿತ), ಜೋಳ(ಮಳೆ ಆಶ್ರಿತ), ಗೋಧಿ (ಮಳೆ ಆಶ್ರಿತ) ಬೆಳೆಗಳಿಗೆ ನವೆಂಬರ್ 30, 2024 ರೊಳಗಾಗಿ ನೋಂದಾಯಿಸಕೊಳ್ಳಬಹುದು.
ಹಿಂಗಾರು ಹಂಗಾಮಿನ ಗೋಧಿ(ನೀರಾವರಿ) ಬೆಳೆಗಳಿಗೆ ಡಿಸೆಂಬರ 16, 2024 ಹಾಗೂ ಕಡಲೆ(ನೀರಾವರಿ) ಬೆಳೆಗೆ ಡಿಸೆಂಬರ 31, 2024 ರೊಳಗಾಗಿ ನೋಂದಾಯಿಸಕೊಳ್ಳಬಹುದು.

ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಬೇಸಿಗೆ ಹಂಗಾಮಿಗೆ ಆಯ್ದ ಹೋಬಳಿ ಮಟ್ಟಕ್ಕೆ ಅಧಿಸೂಚಿತ ಶೇಂಗಾ(ನೀರಾವರಿ) ಬೆಳೆಗೆ ಫೆಬ್ರುವರಿ 28, 2025 ರೊಳಗಾಗಿ ನೋಂದಾಯಿಸಕೊಳ್ಳಬಹುದು.ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಂಡಲ್ಲಿ ಹೆಚ್ಚಿನ ಮಳೆಯಿಂದಾಗಿ ಹಾನಿ, ಬರದಿಂದ ಬೆಳೆ ವಿಫಲ ಮತ್ತು ಇತರೇ ಕಾರಣಗಳಿಂದ ಬೆಳೆ ಹಾನಿಯಾದ ಸಂದರ್ಭಗಳಲ್ಲಿ ವಿಮಾ ಪರಿಹಾರ ಸುರಕ್ಷತೆಯನ್ನು ಪಡೆಯಬಹುದಾಗಿದೆ. ಜಿಲ್ಲೆಯ ಎಲ್ಲ ರೈತರು ಈ ಯೋಜನೆಯಡಿ ನೊಂದಣಿ ಮಾಡಿಕೊಂಡು ಪ್ರಯೋಜನ ಪಡೆಯಬೇಕು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now

Spread the love

Leave a Reply