ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬದಲಾವಣೆ?: ರೇಸ್ ನಲ್ಲಿದೆ ಪ್ರಿಯಾಂಕಾ ಗಾಂಧಿ ಹೆಸರು!

ದಿಲ್ಲಿಯಲ್ಲಿ ಕಾಂಗ್ರೆಸ್ ವಲಯದಲ್ಲಿ ನಾಯಕತ್ವ ಕುರಿತ ಚರ್ಚೆಗಳು ಮತ್ತೊಮ್ಮೆ ವೇಗ ಪಡೆದಿವೆ. ಪಕ್ಷದ ಪ್ರಸ್ತುತ ಸ್ಥಿತಿ ಹಾಗೂ ನಿರಂತರ ಚುನಾವಣಾ ಸೋಲಿನ ಹಿನ್ನೆಲೆ, ಹೊಸ ನೇತೃತ್ವದ ಅಗತ್ಯವಿದೆ ಎಂಬ ಮಾತು ಸಂಘಟನೆಯ ಒಳವಲಯದಲ್ಲೇ ಎದ್ದಿದೆ. WhatsApp Group Join Now ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಮೊಹಮ್ಮದ್ ಮೊಖಿಮ್ ಬರೆದ ಪತ್ರ ರಾಷ್ಟ್ರಮಟ್ಟದಲ್ಲಿ ರಾಜಕೀಯ ಗಮನ ಸೆಳೆದಿದ್ದು, ಅವರು ಸೋನಿಯಾ ಗಾಂಧಿಗೆ ಬರೆಯುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರ ಬದಲಿಗೆ ಪ್ರಿಯಾಂಕಾ ಗಾಂಧಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ … Read more

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಪ್ರೌಢಶಾಲೆಯ ಪ್ರಾಂಶುಪಾಲ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪೋಷಕರು ಮತ್ತು ಸ್ಥಳೀಯರಿಂದ ಧರ್ಮದೇಟು ತಿಂದಿದ್ದಾನೆ. ಘಟನೆಯ ನಂತರ, ಪೊಲೀಸರು ಆರೋಪಿ ಪ್ರಾಂಶುಪಾಲನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. WhatsApp Group Join Now ಶಾಲಾ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪ್ರೌಢ ಶಾಲೆಯ ಪ್ರಾಂಶುಪಾಲನಿಗೆ ಸ್ಥಳೀಯರು ಮತ್ತು ಪೋಷಕರು ಧರ್ಮದೇಟು ನೀಡಿರುವ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಹೆಣ್ಣು ಮಕ್ಕಳ ಹೈಸ್ಕೂಲ್‌ನಲ್ಲಿ ನಡೆದಿದೆ. ಈ ಘಟನೆ … Read more

ಪತ್ನಿಯ ಬಟ್ಟೆ ಹರಿದು ಹಲ್ಲೆ ಮಾಡಿದ ಪತಿ ; ಸಹಾಯಕ್ಕಾಗಿ ಅಂಗಲಾಚಿ ವಿಡಿಯೋ ಮಾಡಿದ 14 ವರ್ಷದ ಮಗಳು!

ಲಕ್ನೋದಲ್ಲಿ ನಡೆದ ಒಂದು ಆಘಾತಕಾರಿ ಘಟನೆಯ ವಿಡಿಯೋ ಗಂಭೀರ ಕಳವಳ ಮೂಡಿಸಿದೆ. ಒಬ್ಬ ವ್ಯಕ್ತಿ ತನ್ನ ಪತ್ನಿಗೆ ಹಲ್ಲೆ ಮಾಡುತ್ತಿರುವಾಗ, ಅವರ 14 ವರ್ಷದ ಮಗಳು ಸಹಾಯಕ್ಕಾಗಿ ಅಂಗಲಾಚುತ್ತಾ ಘಟನೆಯನ್ನು ಚಿತ್ರೀಕರಿಸಿದ್ದಾಳೆ. ಸಹಾರಾಗಂಜ್ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಈ ದೃಶ್ಯದಲ್ಲಿ ಆರೋಪಿಯನ್ನು ವಿಕ್ರಮ್ ರೂಪಾಲಿ ಎಂದು ಗುರುತಿಸಲಾಗಿದೆ. WhatsApp Group Join Now ಸಮಸ್ಯೆ ಏನು? ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಆ ಮಹಿಳೆ ಮನೆಯ ಖರ್ಚುಗಳು ಮತ್ತು ಮಗಳ ಶಿಕ್ಷಣಕ್ಕಾಗಿ ತಮ್ಮ ಮನೆಯಿಂದ ಪೇಯಿಂಗ್ ಗೆಸ್ಟ್ … Read more

ನನ್ನನ್ನು ಸಿಎಂ ಮಾಡುವುದಾದರೆ ಬಿಜೆಪಿಗೆ ವಾಪಾಸ್ ಹೋಗುತ್ತೇನೆ : ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್

ಬಿಜೆಪಿಗೆ ವಾಪಾಸ್ ಬನ್ನಿ ಎಂದು ನನಗೆ ಆಹ್ವಾನ ನೀಡಿದ್ದಾರೆ. ಆದರೆ ನನ್ನನ್ನು ಮುಖ್ಯಮಂತ್ರಿ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ವಾಪಾಸ್ ಹೋಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬೇಡಿಕೆ ಇಟ್ಟಿದ್ದಾರೆ. WhatsApp Group Join Now ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸ್ವತಃ ಆರ್.ಅಶೋಕ್ ಅವರೇ ನನ್ನನ್ನು ಚೇಂಬರ್ ಗೆ ಕರೆದು ಮಾತನಾಡಿದರು. ಯತ್ನಾಳ್ ಅವರೇ ನೀವು ಬಿಜೆಪಿಗೆ ವಾಪಾಸ್ ಆಗಲೇಬೇಕು. ಬಿಜೆಪಿ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ನೀವು ಪಕ್ಷಕ್ಕೆ ಮರಳಿ ಬನ್ನಿ … Read more

ಮಾಜಿ ಸಚಿವ `ಹೆಚ್ ಎಂ ರೇವಣ್ಣ’ ಪುತ್ರನ ಕಾರು ಅಪಘಾತ : ಬೈಕ್ ಸವಾರ ಸಾವು.!

ಮಾಜಿ ಸಚಿವ ಹೆಚ್ ಎಂ ರೇವಣ್ಣ ಪುತ್ರನ ಒಡೆತನದ ಕಾರು ಅಪಘಾತಗಿದ್ದು, ಹೆಚ್ ಎಂ ರೇವಣ್ಣ ಪುತ್ರನಿಗೆ ಸೇರಿದ ಕಾರು ಡಿಕ್ಕಿಯಾಗಿ 27 ವರ್ಷದ ಯುವಕ ಸಾವನಪ್ಪಿದ್ದಾನೆ . ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಗುಡಿಮರನಹಳ್ಳಿ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸಿದೆ. WhatsApp Group Join Now ಹೆಚ್ ಎಂ ರೇವಣ್ಣ ಪುತ್ರ ಶಶಾಂಕ್ ಗೆ ಈ ಒಂದು ಕಾರು ಸೇರಿದೆ ತಡರಾತ್ರಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ರಾಜೇಶ್ (27) ಸಾವನಪಿದ್ದಾನೆ.ಮೃತ … Read more

ಘಾಟ್ ರಸ್ತೆಯಲ್ಲಿ ಬಸ್ ಕಂದಕಕ್ಕೆ ಉರುಳಿಬಿದ್ದು 9 ಯಾತ್ರಿಕರು ಸಾವು, 22 ಮಂದಿಗೆ ಗಾಯ

ವಿಶಾಖಪಟ್ಟಣಂ: ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯಲ್ಲಿ ಶುಕ್ರವಾರ ನಸುಕಿನ ಜಾವ ಖಾಸಗಿ ಟ್ರಾವೆಲ್ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 9 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. WhatsApp Group Join Now ಭದ್ರಾಚಲಂ ದೇವಸ್ಥಾನದ ದರ್ಶನ ಪಡೆದು ಅನ್ನಾವರಂ ಕಡೆಗೆ 35 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಇದಾಗಿತ್ತು. ಆರಂಭಿಕ ಮಾಹಿತಿಯ ಪ್ರಕಾರ, ಕನಿಷ್ಠ ಒಂಬತ್ತು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಪ್ಪತ್ತೆರಡು ಜನರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಸೌಲಭ್ಯಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಎಲ್ಲರೂ ಚಿತ್ತೂರು … Read more

16 ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ: ಸತ್ತ ಸರ್ಕಾರದ ಹೆಣ ಹೊರುತ್ತಿದ್ದಾರೆಂದು ಪ್ರತಾಪ್ ಸಿಂಹ ವಾಗ್ದಾಳಿ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಸತ್ತುಹೋಗಿದೆ. ಹದಿನಾರು ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದು, ಸತ್ತ ಸರ್ಕಾರದ ಹೆಣವನ್ನು ಸಿದ್ದರಾಮಯ್ಯ ಮುಂದೆ ಮತ್ತು ಡಿ.ಕೆ.ಶಿವಕುಮಾರ್ ಹಿಂದೆ ಹೊರುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. WhatsApp Group Join Now ಕೆಜಿಎಫ್‌ನಲ್ಲಿ ಆಯೋಜಿಸಲಾಗಿದ್ದ ಭೀಮ ನಡಿಗೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿ, ಆರ್ಥಿಕ ದಿವಾಳಿತನ ಹಾಗೂ … Read more

ಕೇವಲ ಅಲ್ಕೋಹಾಲ್‌ನಿಂದ ಮಾತ್ರವಲ್ಲ, ಈ ಅಭ್ಯಾಸಗಳಿಂದಲೂ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ!

ದೇಹವನ್ನ ಆರೋಗ್ಯವಾಗಿಡುವಲ್ಲಿ ಯಕೃತ್‌ ಅಥವಾ ಲಿವರ್‌ ಪಾತ್ರ ತುಂಬಾ ಮುಖ್ಯ. ದೇಹಕ್ಕೆ ಪ್ರೋಟೀನ್ ಉತ್ಪಾದನೆಯಾಗಲಿ ಅಥವಾ ಜೀರ್ಣಕ್ರಿಯೆಗೆ ಪಿತ್ತರಸದ ಉತ್ಪಾದನೆಯಾಗಲಿ, ಯಕೃತ್ತು ಈ ಎಲ್ಲಾ ಕೆಲಸ ಮಾಡುತ್ತದೆ. ಇದಲ್ಲದೇ ಪಿತ್ತಜನಕಾಂಗವು ಪೋಷಕಾಂಶಗಳನ್ನ ಶಕ್ತಿಯನ್ನಾಗಿ ಪರಿವರ್ತಿಸಲು ರೋಗನಿರೋಧಕ ಅಂಶಗಳನ್ನ ತಯಾರಿಸಲು ಮತ್ತು ರಕ್ತದಿಂದ ಬ್ಯಾಕ್ಟೀರಿಯಾ ಹಾಗೂ ಜೀವಾಣುಗಳನ್ನ ತೆಗೆದುಹಾಕುವ ಮೂಲಕ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. WhatsApp Group Join Now ದೇಹದ ಒಂದು ಪ್ರಮುಖ ಭಾಗವಾಗಿರುವ ಯಕೃತ್ತಿನ ಬಗ್ಗೆ ಸ್ವಲ್ಪ ಅಜಾಗರೂಕತೆಯೂ ಕೂಡ ನಿಮ್ಮನ್ನ ದೊಡ್ಡ … Read more

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು

ಕುರಿಗಳು ರಸ್ತೆಗೆ ಅಡ್ಡ ಬಂದ ಕಾರಣ ಹಾರ್ನ್ ಮಾಡಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ರಾಮನಗರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಬಸ್ ಚಾಲಕನ ದೂರಿನ ಮೇರೆಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. WhatsApp Group Join Now ಮಾಗಡಿ ಡಿಪೋಗೆ ಸೇರಿದ್ದ ಕೆಎಸ್‌ಆರ್‌ಟಿಸಿ ಬಸ್ ರಾಮನಗರದಿಂದ ಮಾಗಡಿ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್ ಲಕ್ಷ್ಮೀಪುರ ಗ್ರಾಮದ ಬಳಿ ಬಂದಾಗ ರಸ್ತೆ ಮಧ್ಯೆ ಕುರಿಗಳನ್ನು ಅಟ್ಟಿಸಿಕೊಂಡು … Read more

Horoscope Today : ಡಿಸೆಂಬರ್‌ 12 ರಂದು ಯಾವ ರಾಶಿಗೆ ಶುಭ.? ಯಾವ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಉಜ್ವಲ ಕಲ್ಪನಾಶಕ್ತಿ, ಕ್ರಿಯಾತ್ಮಕ ಪ್ರೇರಣೆ ಮತ್ತು ನಾವೀನ್ಯ ಕಲಾತ್ಮಕತೆ ಇವೆಲ್ಲವೂ ಇಂದು ನಿಮ್ಮ ದಿನವನ್ನು ಗುರುತಿಸಲಿದೆ. ಇಂದು ನಿಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯು ಅತ್ಯುತ್ತಮವಾಗಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನೀವು ಅದೃಷ್ಟಕಾರಿ ಮೇಷ ರಾಶಿಯವರು ಕಲ್ಪನಾ ಲೋಕದಲ್ಲಿರುತ್ತೀರಿ ಮತ್ತು ನಿಮ್ಮ ಕ್ರಿಯಾತ್ಮಕತೆ ಮತ್ತು ನಾವೀನ್ಯತೆಯು ಉತ್ತುಂಗಕ್ಕೇರಲಿದೆ. WhatsApp Group Join Now ಸಾಹಿತ್ಯ, ಕಲೆ ಮತ್ತು ಶೈಕ್ಷಣಿಕ ಆಸಕ್ತಿಗಳು ಇಂದಿನ ಗ್ರಹಗತಿಗಳ ಅದ್ಭುತ ಪ್ರಭಾವದ ಅನುಗ್ರಹವನ್ನು ಪಡೆಯಲಿದೆ. ಇವೆಲ್ಲದರ ಜೊತೆಗೆ ಮನೆಯಲ್ಲಿನ … Read more