ಚಿಕಿತ್ಸೆಗೆ ಟೈಮೇ ಇಲ್ಲ, ಸರ್ಕಾರಿ ಆಸ್ಪತ್ರೆಯಲ್ಲೇ ಗರ್ಲ್‌ಫ್ರೆಂಡ್ ಜೊತೆ ವೈದ್ಯ ಸಿದ್ದಿಕಿ ಮಸ್ತ್ ಡ್ಯಾನ್ಸ್

ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯವಿದೆ, ವೈದ್ಯರು, ನರ್ಸ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಇರುತ್ತಾರೆ. ಆದರೂ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಅನ್ನೋ ಆರೋಪಗಳು ಇಂದು ನಿನ್ನೆಯದಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಸರ್ಕಾರಿ ಆಸ್ಪತ್ರೆಯ ಪ್ರಮುಖ ವೈದ್ಯನ ವಿಡಿಯೋ ಒಂದು ಹೊರಬಂದಿದೆ. WhatsApp Group Join Now ತನ್ನ ಡ್ಯೂಟಿ ಸಮಯದಲ್ಲಿ ವೈದ್ಯ, ರೋಗಿಗಳ ಆರೈಕೆ, ಚಿಕಿತ್ಸೆ ಮಾಡಬೇಕಿತ್ತು. ಆದರೆ ಇದಕ್ಕೆ ಟೈಮೇ ಸಿಗುತ್ತಿಲ್ಲ. ರೋಗಿಗಳು ಕಾದು ಕಾದು ಸುಸ್ತಾಗಿ, ಕೊನೆಗೆ ಸಮಸ್ಯೆ ತೀವ್ರಗೊಂಡು ಬೇರೆಡೆ ಹೋದರೂ ಈ ವೈದ್ಯನಿಗೆ … Read more

ಜೀವ ತೆಗೆದ ಫ್ಲೆಕ್ಸ್ : ಗೆಳೆಯನ ಮದ್ವೆಗೆಂದು ಜರ್ಮನಿಯಿಂದ ಬಂದ ಯುವಕ ದುರಂತ ಸಾವು

ನಗರದಲ್ಲಿ ಫ್ಲೆಕ್ಸ್ ಹಾವಳಿ (Flex Banner) ನಿಂತ್ತಿಲ್ಲ. ಇದೇ ಫ್ಲೆಕ್ಸ್ನಿಂದ ಮತ್ತೊಂದು ಜೀವ ಹೋಗಿದೆ. ಬೈಕ್ನಲ್ಲಿ ತೆರಳುವಾಗ ಫ್ಲೆಕ್ಸ್ ತಗುಲಿ ಯುವಕ ರಸ್ತೆಗೆ ಬಿದ್ದಿದ್ದಾನೆ. ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ತೇಜಸ್ ಗೌಡ (27) ಮೃತ ಯುವಕ. WhatsApp Group Join Now ಜರ್ಮನಿಯಲ್ಲಿ ಎಂ.ಎಸ್ ಓದುತ್ತಿದ್ದ ತೇಜಸ್ ಗೌಡ, ಸ್ನೇಹಿತನ ಮದುವೆ ಅಂತ ಊರಿಗೆ ಬಂದಿದ್ದ ವೇಳೆ ದುರಂತ ಸಂಭವಿಸಿದೆ. ನೆಲಮಂಗಲ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಮದುವೆ ದಿನವೇ ಅಪಘಾತ, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ಆಸ್ಪತ್ರೆಯಲ್ಲಿಯೇ ತಾಳಿ ಕಟ್ಟಿದ ವರ!

ಕೇರಳದ ಆಲಪ್ಪುಳದ ಥಂಪೋಲಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ವರ ತಾಳಿ ಕಟ್ಟಿರುವ ಘಟನೆ ನಡೆದಿದೆ. WhatsApp Group Join Now ಹೌದು. ಮದುವೆಗಾಗಿ ದೇವಸ್ಥಾನಕ್ಕೆ ತೆರಳುವ ಮುನ್ನ ಮೇಕಪ್ ಮಾಡಿಸಿಕೊಳ್ಳಲು ಇಂದು ಬೆಳಗ್ಗೆಯೇ ಮನೆಯಿಂದ ತೆರಳಿದ್ದ ವಧು ಅವನಿ ಅನಿರೀಕ್ಷಿತ ಅಪಘಾತದಿಂದ ಗಾಯಗೊಂಡಿದ್ದಾರೆ. ಆರಂಭದಲ್ಲಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಧಾವಿಸಿದ ನಂತರ ಅವರನ್ನು ವಿಶೇಷ ಆರೈಕೆಗಾಗಿ ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. … Read more

ದುಬೈ ಏರ್‌ಶೋ : HAL ನಿರ್ಮಿತ ‘ತೇಜಸ್’ ಲಘು ಯುದ್ಧವಿಮಾನ ಪತನ

ಇಲ್ಲಿನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ‘ದುಬೈ ಏರ್ ಶೋ 2025’ರಲ್ಲಿ ಭಾರತದ ‘ತೇಜಸ್’ ಲಘು ಯುದ್ಧವಿಮಾನ ಪತನವಾಗಿದೆ. WhatsApp Group Join Now ಏರ್‌ಶೋನಲ್ಲಿ ‘ತೇಜಸ್’ ಯುದ್ಧವಿಮಾನ ಪ್ರದರ್ಶನ ನಡೆಸುತ್ತಿದ್ದಾಗ ಪತನವಾಗಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ 2:10ರ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ಕುರಿತು ಭಾರತೀಯ ವಾಯುಪಡೆ ತನಿಖೆಗೆ ಆದೇ‌ಶ ಮಾಡಿದೆ.

ವಿಚ್ಛೇದಿತ ಮಹಿಳೆಯರಿಗೆ ವಂಚನೆ ಆರೋಪಿ ಸೂಸೈಡ್ : ಹೆದರಿ ಪ್ರಾಣ ಕಳೆದುಕೊಂಡ್ನಾ ಗಿರೀಶ್?

ವಿಚ್ಛೇದಿತ ಮಹಿಳೆಯರನ್ನು ಮರುಮದುವೆ ಆಗೋದಾಗಿ ವಂಚನೆ ಮಾಡಿದ್ದ ಪ್ರಕರಣದ ಆರೋಪಿ ಸಿ.ಎಂ.ಗಿರೀಶ್ ನೇಣಿಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಕನ್ನಂಪಲ್ಲಿ ಮನೆಯಲ್ಲಿ ನೇಣು ಬಿಗಿದು ಗಿರೀಶ್ ಸೂಸೈಡ್ ಮಾಡಿಕೊಂಡಿದ್ದು, ವಂಚನೆ ಪ್ರಕರಣ ಸಂಬಂಧ ನಾಲ್ವರು ಸಂತ್ರಸ್ತೆಯರು ಈತನ ವಿರುದ್ಧ ದೂರು ನೀಡಿದ್ದರು. WhatsApp Group Join Now ಈ ಬಗ್ಗೆ ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಭಯದಿಂದ ಗಿರೀಶ್ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ತಿಂಗಳ ಹಿಂದೆಯೂ ಈತ ಆತ್ಮಹತ್ಯೆಗೆ ಯತ್ನಿಸಿ … Read more

ಮಗು ಕೆಂಪಾಗಿ ಹುಟ್ಟಿದಕ್ಕೆ ಅನುಮಾನ : ಪತ್ನಿಯ ಕತ್ತು ಸೀಳಿ ಕೊಂದ ಪಾಪಿ ಪತಿ.!

ಮಗು ಕೆಂಪಾಗಿ ಹುಟ್ಟಿದಕ್ಕೆ ಅನುಮಾನಗೊಂಡ ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಕತಿಹಾರ್ ಜಿಲ್ಲೆಯ ಅಬಾದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಆರೋಪಿ ಗಂಡನ ವಿರುದ್ಧ ಪ್ರಕರಣ ದಾಖಲಿಸಿ, ಅವನನ್ನು ಹುಡುಕಲು ಪ್ರಾರಂಭಿಸಿದರು. WhatsApp Group Join Now ವರದಿಗಳ ಪ್ರಕಾರ, ಅಜಮ್‌ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಲ್ಕಿ ಗ್ರಾಮದ ನಿವಾಸಿ ಸುಕುಮಾರ್ ದಾಸ್ … Read more

ಹೊರಗುತ್ತಿಗೆ ಉದ್ಯೋಗ ಬಂದ್‌, ಸರಕಾರಕ್ಕೆ ಹೆಚ್ಚುವರಿ ಹೊರೆ, ಸರಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ

ಸರಕಾರಿ ಇಲಾಖೆ, ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕ ಪದ್ಧತಿಯನ್ನು 2028ರ ಮಾರ್ಚ್‌ನೊಳಗೆ ಸಂಪೂರ್ಣ ನಿಲ್ಲಿಸಲು ರಾಜ್ಯ ಸಚಿವ ಸಂಪುಟ ಉಪಸಮಿತಿ ನಿರ್ಣಯಿಸಿದೆ. ಖಾಸಗಿ ಏಜೆನ್ಸಿಗಳ ಮೂಲಕ ಬಹುದೊಡ್ಡ ಸಂಖ್ಯೆಯಲ್ಲಿ ನೇಮಕಗೊಂಡಿರುವ ಹೊರಗುತ್ತಿಗೆ ಸೇವೆಯನ್ನು ಈ ಗಡುವಿನೊಳಗೆ ಹಂತಹಂತವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ. WhatsApp Group Join Now ಈ ತೀರ್ಮಾನದಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ ಹೆಚ್ಚುವರಿ 10,000 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಅಂದಾಜು ಮಾಡಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ … Read more

ಒ.ಸಿ ಕಡ್ಡಾಯ ನಿಯಮ : ಸಿಎಂ ಸಿದ್ದರಾಮಯ್ಯ ಮನೆಗೂ ಸಿಗದ ವಿದ್ಯುತ್‌ ಸಂಪರ್ಕ

ಮೈಸೂರಿನ ಕುವೆಂಪು ನಗರದಲ್ಲಿ ನಿರ್ಮಿಸಿರುವ ಹೊಸ ಮನೆಗೆ ವಿದ್ಯುತ್‌ ಸಂಪರ್ಕ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ಇನ್ನೂ ಸಾಧ್ಯವಾಗಿಲ್ಲ…!’ಸಿದ್ದರಾಮಯ್ಯ ಅವರು 80X120 ಅಡಿ ಅಳತೆಯ ನಿವೇಶನದಲ್ಲಿ ಮೂರು ಅಂತಸ್ತಿನ ಮನೆ ನಿರ್ಮಿಸಿದ್ದಾರೆ. ಆರು ತಿಂಗಳ ಹಿಂದೆಯೇ 94 ಕಿಲೊವಾಟ್‌ ವಿದ್ಯುತ್‌ ಮಂಜೂರಾಗಿದೆ. ಆದರೆ, ನ್ಯಾಯಾಲಯವು ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಕಡ್ಡಾಯ ಮಾಡಿರುವ ಕಾರಣ ವಿದ್ಯುತ್‌ ಸಂಪರ್ಕ ನೀಡಲು ಸಾಧ್ಯವಾಗಿಲ್ಲ’ ಎಂದು ಮೂಲಗಳು ಖಚಿತಪಡಿಸಿವೆ. WhatsApp Group Join Now ‘ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ, ಈ … Read more

ಬೆಳ್ತಂಗಡಿ ಬಳಿ ಕಾರು ಹೋಂಡಾ ಆಕ್ಟಿವಾ ಮಧ್ಯೆ ಅಪಘಾತ : ಫೈನಲ್ ಇಯರ್‌ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

ಕಾರು ಹಾಗೂ ಸ್ಕೂಟಿ ಮಧ್ಯೆ ನಡೆದ ಅಪಘಾತವೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಳಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ 21 ವರ್ಷದ ಅನನ್ಯಾ ಎಂದು ಗುರುತಿಸಲಾಗಿದೆ. WhatsApp Group Join Now ಸ್ಕೂಟರ್‌ನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಪೃಥ್ವಿ ರಾವ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಬೆಳ್ತಂಗಡಿ … Read more

ಕ್ಷಮಿಸು ಅಮ್ಮಾ… ಇದೇ ಕೊನೆ ; ಶಿಕ್ಷಕರ ಕಿರುಕುಳಕ್ಕೆ ನೊಂದು ಮೆಟ್ರೋಗೆ ಹಳಿಗೆ ಹಾರಿ 10ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ

ಕ್ಷಮಿಸು ಅಮ್ಮ ನಿನ್ನ ಮನಸನ್ನು ಹಲವಾರು ಬಾರಿ ನೋಯಿಸಿದ್ದೇನೆ. ಇದು ಕೊನೆಯ ಬಾರಿ. ನಾನು ತೆಗೆದುಕೊಂಡ ಈ ತೀರ್ಮಾನಕ್ಕಾಗಿ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಶಾಲೆಯಲ್ಲಿ ನಡೆದ ಘಟನೆ ಎದುರಿಸಲು ನನ್ನ ಬಳಿ ಈ ನಿರ್ಧಾರ ಹೊರತುಪಡಿಸಿ ಬೇರೆ ಮಾರ್ಗವಿರಲಿಲ್ಲ ಎಂದು 10ನೇ ತರಗತಿ ವಿದ್ಯಾರ್ಥಿಯೊಬ್ಬ ಡೆತ್‌ ನೋಟ್‌ ಬರೆದಿಟ್ಟು ದೆಹಲಿ ಮೆಟ್ರೋ ಹಳಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. WhatsApp Group Join Now ಈ ಘಟನೆಯಿಂದ ಪೋಷಕರು ಭಾರಿ ಅಘಾತಕ್ಕೊಳಗಾಗಿದ್ದಾರೆ. ಶಾಲಾ ಸಮವಸ್ತ್ರದಲ್ಲಿದ್ದ 16 ವರ್ಷದ ಶೌರ್ಯ ಪಾಟೀಲ್ … Read more