ಕೇಂದ್ರ ಸರ್ಕಾರ ನಿಮಗಾಗಿ ಈಗ ಹೊಸ ಸೇವೆಯನ್ನ ಆರಂಭ ಮಾಡಿದೆ. ಈಗ ನೀವು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ಕೊಡಬಹುದು. ಸರ್ಕಾರಿ ಕೆಲಸಗಳು ವಿಳಂಬವಾದರೆ ಅಥವಾ ನಿಮಗೆ ಸರ್ಕಾರಿ ಯೋಜನೆಗಳ ಲಾಭ ಸಿಗುತ್ತಿಲ್ಲ ಅಂತ ಹೇಳಿದ್ರೆ ನೀವು ನೇರವಾಗಿ ಈಗ ನರೇಂದ್ರ ಮೋದಿಯವರಿಗೆ ಕಂಪ್ಲೇಂಟ್ ಕೊಡಬಹುದು. ಹಾಗಾದರೆ ನೇರವಾಗಿ ನರೇಂದ್ರ ಮೋದಿ ಯವರ ಕಚೇರಿಗೆ ದೂರು ಕೊಡುವುದು ಹೇಗೆ.? ತಿಳಿಯೋಣ.
ಕೇಂದ್ರ ಸರ್ಕಾರ ಈಗ ದೇಶದ ಜನಸಾಮಾನ್ಯರಿಗಾಗಿ ಹೊಸ ಸೇವೆಯನ್ನ ಆರಂಭಿಸಿದೆ. ಸರ್ಕಾರಿ ಕೆಲಸಗಳ ವಿಷಯವಾಗಿ ಸಂಕಷ್ಟದಲ್ಲಿರುವವರು ಈಗ ನೇರವಾಗಿ ನರೇಂದ್ರ ಮೋದಿಯವರ ಕಚೇರಿಗೆ ದೂರುಕೊಡಬಹುದು. ಆನ್ಲೈನ್ ಮತ್ತು ಆಫ್ಲೈನ್ ಮೂಲಕ ದೂರುvಕೊಡಲು ಈಗ ಅವಕಾಶವನ್ನ ಕಲ್ಪಿಸಿಕೊಡಲಾಗಿದೆ. ಆನ್ಲೈನ್ ಮೂಲಕ ದೂರುಕೊಡುವವರು ಪ್ರಧಾನಮಂತ್ರಿ ಕಚೇರಿಯ ಅಧಿಕೃತ ವೆಬ್ಸೈಟ್ ಆಗಿರುವ pmindia.gov.in ಗೆ ಭೇಟಿ ನೀಡಿ ಸುಲಭವಾಗಿ ದೂರು ಕೊಡಬಹುದು.
ಪ್ರಧಾನಮಂತ್ರಿ ಕಚೇರಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿದ ನಂತರ ನಿಮಗೆ ಮುಖಪುಟದಲ್ಲಿ ಪ್ರಧಾನಮಂತ್ರಿಯೊಂದಿಗೆ ಸಂವಾದ ನಡೆಸುವ ಆಯ್ಕೆ ಸಿಗುತ್ತದೆ. ಆ ಆಯ್ಕೆಯಲ್ಲಿ ನೀವು ಪ್ರಧಾನಮಂತ್ರಿಗೆ ಪತ್ರ ಬರೆಯಿರಿ ಅನ್ನುವ ಆಯ್ಕೆಯನ್ನ ಆಯ್ಕೆ ಮಾಡಬೇಕು. ಆಯ್ಕೆ ಮಾಡಿದ ನಂತರ ನಿಮ್ಮ ಮುಂದೆ ಒಂದು ಮುಖಪುಟ ತೆರೆಯುತ್ತದೆ. ಆ ಮುಖಪುಟದಲ್ಲಿ ನೀವು ದೂರು ದಾಖಲಿಸಬಹುದು. ನಿಮ್ಮ ದೂರು ದಾಖಲಾದ ನಂತರ ಪ್ರಧಾನಮಂತ್ರಿ ಕಚೇರಿಯಿಂದ ನಿಮಗೆ ನೊಂದಾವಣಿ ಸಂಖ್ಯೆಯನ್ನು ಕೂಡ ಕೊಡಲಾಗುತ್ತದೆ. ಈ ನೊಂದಾವಣಿ ಸಂಖ್ಯೆಯನ್ನ ಬಳಸಿಕೊಂಡು ನೀವು ನಿಮ್ಮ ದೂರಿನ ಸ್ಥಿತಿಯನ್ನ ಟ್ರ್ಯಾಕ್ ಮಾಡಬಹುದು.
ಕೇವಲ ದೂರು ದಾಖಲಿಸುವುದು ಮಾತ್ರವಲ್ಲದೇ, ಕೆಲವು ಸಂಬಂಧಪಟ್ಟ ದಾಖಲೆಗಳನ್ನು ಕೂಡ ನೀವು ಅಪ್ಲೋಡ್ ಮಾಡಬಹುದು. ಅದೇ ರೀತಿಯಲ್ಲಿ ಆಫ್ಲೈನ್ ಮೂಲಕ ಕೂಡ ನೀವು ಪ್ರಧಾನಮಂತ್ರಿ ಕಚೇರಿಗೆ ದೂರು ಕೊಡಬಹುದು. ಫ್ಯಾಕ್ಸ್ ಅಥವಾ ಇಮೇಲ್ ಮೂಲಕ ಕೂಡ ನೀವು ಪ್ರಧಾನಮಂತ್ರಿ ಕಚೇರಿಗೆ ದೂರು ಸಲ್ಲಿಸಬಹುದು. ಆಫ್ಲೈನ್ ಮೂಲಕ ದೂರು ಕೊಡುವವರು ಪ್ರಧಾನಮಂತ್ರಿ ಕಚೇರಿ ವಿಳಾಸಕ್ಕೆ ದೂರು ಸಲ್ಲಿಸಬಹುದು ಅಥವಾ ನವದೆಹಲಿಯಲ್ಲಿರುವ ಪ್ರಧಾನಮಂತ್ರಿ ಕಚೇರಿಗೆ ನೇರವಾಗಿ ಭೇಟಿ ನೀಡಿ ಕೂಡ ದೂರು ಸಲ್ಲಿಸಬಹುದಾಗಿದೆ.
ನೀವು ದೂರು ಸಲ್ಲಿಸಿದ ನಂತರ ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು ನಿಮ್ಮ ದೂರನ್ನ ಪರಿಶೀಲನೆ ಮಾಡಿ ಮೇಲ್ವಿಚಾರಣೆಗೆ ಒಳಪಡಿಸುತ್ತಾರೆ. ನೀವು ಸಲ್ಲಿಸಿದ ದೂರು ಸರಿಯಾಗಿದ್ದರೆ ನೀವು ಸಲ್ಲಿಸಿದ ದೂರಿನ ಮೇಲೆ ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ. ದೇಶದ ಜನತೆಯ ಸಮಸ್ಯೆಗಳನ್ನ ನೇರವಾಗಿ ಬಗೆಹರಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಈಗ ಈ ಸೇವೆಯನ್ನ ಆರಂಭಿಸಿದ್ದಾರೆ.

ದೇಶದ ಎಲ್ಲರಿಗೂ ಗುಡ್ ನ್ಯೂಸ್ ಕೊಟ್ಟು ಪ್ರಧಾನಿ ನರೇಂದ್ರ ಮೋದಿ | ಕೂಡಲೇ ಈ ಕೆಲಸ ಮಾಡಿ
WhatsApp Group
Join Now