ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಇದೀಗ ಅತಿ ದೊಡ್ಡ ತಿರುವು ಪಡೆದುಕೊಂಡಿದೆ. ಹೆಂಡತಿ ಮೃತಪಟ್ಟ ಬಳಿಕ ಪತಿ ಸೂರಜ್ ಕೂಡ ಮಹಾರಾಷ್ಟ್ರದ ನಾಗಪುರದಲ್ಲಿ ನೇಣಿಗೆ ಶರಣಾಗಿದ್ದಾರೆ. ಜೊತೆಗೆ ಸೂರಜ್ ತಾಯಿ ಕೂಡ ಆತ್ಮಹತ್ಯೆಗೆ ಯತ್ನ ಮಾಡಿದ್ದು, ಈಗ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ.
ಗಾನವಿ ಸಾವಿನ ನಂತರ ಕುಟುಂಬಸ್ಥರು ಸೂರಜ್ ಕುಟುಂಬದವರ ವಿರುದ್ಧ ಆರೋಪ ಮಾಡಿದ್ರು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಪತಿ ಸೂರಜ್, ತಮ್ಮ ತಾಯಿ ಜಯಂತಿ ಮತ್ತು ಸಹೋದರ ಸಂಜಯ್ ಜೊತೆ ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿದ್ದರು.
ಅಲ್ಲಿ ಸೂರಜ್ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಮಗನ ಜೊತೆಯಲ್ಲೇ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರಿಗೆ ನಾಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಶ್ರೀಲಂಕಾಗೆ ಹನಿಮೂನ್‌ಗೆ ತೆರಳಿದ್ದಾಗ ಸೂರಜ್‌ಗೆ ವಿವಾಹಕ್ಕೂ ಮುನ್ನ ಬೇರೊಬ್ಬನ ಜೊತೆ ಗಾನವಿಗೆ ಸಂಬಂಧ ಇದ್ದ ವಿಚಾರ ಗೊತ್ತಾಗಿ ದಂಪತಿ ಮಧ್ಯೆ ಜಗಳ ನಡೆದಿದೆ.
ಜಗಳ ವಿಕೋಪಕ್ಕೆ ತೆರಳಿ ಜೋಡಿ ಅರ್ಧದಲ್ಲೇ ಬೆಂಗಳೂರಿಗೆ ವಾಪಸ್ ಆಗಿತ್ತು. ಗಾನವಿ ಬೆಂಗಳೂರಿಗೆ ಮರಳಿದ್ದರೂ ಬೇರೊಬ್ಬನ ಜೊತೆ ವಿವಾಹ ಪೂರ್ವ ಸಂಬಂಧ ಇದ್ದ ಕಾರಣ ಆಕೆಯನ್ನು ಸೂರಜ್ ಕುಟುಂಬ ಸ್ವೀಕರಿಸಲಿಲ್ಲ. ಸೂರಜ್ ಕುಟುಂಬದಿಂದ ಅವಮಾನವಾಗಿದ್ದಕ್ಕೆ ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಿಳಿದು ಬಂದಿದೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನವವಧು ಗಾನವಿ ಆತ್ಮಹತ್ಯೆ ಕೇಸ್: ಪತಿ ಸೂರಜ್ ನೇಣಿಗೆ ಶರಣು, ಅತ್ತೆ ಸ್ಥಿತಿ ಗಂಭೀರ; ನವಜೋಡಿಗೆ ಮುಳುವಾಯ್ತು ವಿವಾಹ ಪೂರ್ವ ಸಂಬಂಧ?
WhatsApp Group
Join Now