ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈಗ ವಾಹನಗಳ ಮಾಲೀಕರಿಗೆ ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಹೊಸ ನಿಯಮವನ್ನ ಜಾರಿಗೆ ತಂದಿದೆ. ಯಾವುದೇ ವಾಹನ ಹೊಂದಿರುವವರು ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಕಡ್ಡಾಯವಾಗಿ ಈ ಕೆಲಸವನ್ನ ಮಾಡಬೇಕು. ಒಂದುವೇಳೆ ಈ ಕೆಲಸವನ್ನ ಮಾಡದೇ ಇದ್ದರೆ ಅಂತಹವರಿಗೆ ಆರ್ಟಿಓ ಅಧಿಕಾರಿಗಳು ದಂಡವನ್ನು ಹಾಕಲಿದ್ದಾರೆ. ಹಾಗಾದರೆ ಸ್ವಂತ ವಾಹನ ಹೊಂದಿರುವವರು ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿರುವರು ಕಡ್ಡಾಯವಾಗಿ ಮಾಡಬೇಕಾದ ಕೆಲಸ ಯಾವುದು ತಿಳಿಯೋಣ.
ಕೇಂದ್ರ ಸಾರಿಗೆ ಇಲಾಖೆ ಮತ್ತು ಹೆದ್ದಾರಿ ಸಚಿವಾಲಯ ಈಗ ಆದೇಶವನ್ನು ಹೊರಡಿಸಿದ್ದು, ಎಲ್ಲಾ ವಾಹನಗಳ ಮಾಲೀಕರು ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಕಡ್ಡಾಯವಾಗಿ ತಮ್ಮ ಮೊಬೈಲ್ ಸಂಖ್ಯೆಯನ್ನ ವಾಹನಗಳ ದಾಖಲೆ ಮತ್ತು ಡ್ರೈವಿಂಗ್ ಲೈಸೆನ್ಸ್ಗೆ ಲಿಂಕ್ ಮಾಡಬೇಕಾಗಿದೆ. ಕೇಂದ್ರ ಸರ್ಕಾರದ ಈ ನಿಯಮ ದೇಶದ ಎಲ್ಲಾ ರಾಜ್ಯಗಳಿಗೆ ಅನ್ವಯ ಆಗುವುದರಿಂದ ಪಾರದರ್ಶಕತೆ ಸುಗಮ ಸಂವಹನ ಮತ್ತು ಡಿಜಿಟಲ್ ದಾಖಲೆ ನಿರ್ವಹಣೆಗೆ ಸಾಕಷ್ಟು ಸಹಾಯಕವಾಗಲಿದೆ. ಈ ಕುರಿತಂತೆ ಕೇಂದ್ರ ಸಚಿವಾಲಯ ಈಗಾಗಲೇ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ.
ವಾಹನಗಳ ಸೇವೆಗಳು, ದಂಡಗಳು ಹಾಗೂ ಇತರ ಅಧಿಸೂಚನೆಗಳನ್ನ ನೇರವಾಗಿ ನೊಂದಾಯಿತ ಮೊಬೈಲ್ ನಂಬರ್ ಗೆ ಕಳುಹಿಸಲು ಈ ವ್ಯವಸ್ಥೆಯನ್ನ ಜಾರಿಗೆ ತರಲಾಗಿದೆ. ಇನ್ನು ಮುಂದೆ ಆರ್ಟಿಓ ಅಧಿಕಾರಿಗಳು ದಂಡವನ್ನ ನೇರವಾಗಿ ನಿಮ್ಮ ಮೊಬೈಲ್ ಗೆ ಕಳುಹಿಸಲಿದ್ದಾರೆ. ಈ ಕಾರಣಗಳಿಂದ ವಾಹನಗಳ ದಾಖಲೆ ಮತ್ತು ಡ್ರೈವಿಂಗ್ ಲೈಸೆನ್ಸ್ ನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ವಾಹನಗಳ ದಾಖಲೆ ಮತ್ತು ಡ್ರೈವಿಂಗ್ ಲೈಸೆನ್ಸ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡದೇ ಇರುವವರು ಪರಿವಾಹನ್ ವೆಬ್ಸೈಟ್ಗೆ ಭೇಟಿ ನೀಡಿ ಸುಲಭವಾಗಿ ಲಿಂಕ್ ಮಾಡಬಹುದು.
ಅದೇ ರೀತಿಯಲ್ಲಿ ಎಂ ಪರಿವಾಹನ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳುವುದರ ಮೂಲಕ ಕೂಡ ಮೊಬೈಲ್ ಸಂಖ್ಯೆಯನ್ನ ಲಿಂಕ್ ಮಾಡಬಹುದಾಗಿದೆ. ನಿಮ್ಮ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಯನ್ನ ನೀವು ನಮೂದಿಸಬೇಕಾಗುತ್ತದೆ. ನಂತರ ಆಧಾರ್ ಕಾರ್ಡ್ ಗೆ ನೊಂದಾಯಿಸಿದ ಮೊಬೈಲ್ ಸಂಖ್ಯೆಗೆ ಓಟಿಪಿಯನ್ನ ಕಳುಹಿಸಲಾಗುತ್ತದೆ. ಓಟಿಪಿ ನಮೂದಿಸುವುದರ ಮೂಲಕ ನೀವು ವಾಹನಗಳ ದಾಖಲೆ ಮತ್ತು ಡ್ರೈವಿಂಗ್ ಲೈಸೆನ್ಸ್ ಅನ್ನ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬಹುದು.
ಈ ಪ್ರಕ್ರಿಯೆ ಸಂಪೂರ್ಣವಾಗಿ ಉಚಿತವಾಗಿದ್ದು, ಆನ್ಲೈನ್ ಮೂಲಕ ಕೆಲವೇ ನಿಮಿಷದಲ್ಲಿ ಈ ಪ್ರಕ್ರಿಯೆಯನ್ನ ಪೂರ್ಣಗೊಳಿಸಿಕೊಳ್ಳಬಹುದು. parivahan.gov.in ವೆಬ್ಸೈಟ್ಗೆ ಭೇಟಿ ನೀಡಿ ಅಥವಾ mParivahan ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ನೀವು ವಾಹನಗಳ ದಾಖಲೆ ಮತ್ತು ಡ್ರೈವಿಂಗ್ ಲೈಸೆನ್ಸ್ ಅನ್ನ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬಹುದು. ಈ ಮಾಹಿತಿಯನ್ನ ಸ್ವಂತ ವಾಹನ ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಇಂದಿನಿಂದಲೇ ಹೊಸ ರೂಲ್ಸ್ | ಮತ್ತೊಂದು ಆದೇಶ – mParivahan
WhatsApp Group
Join Now