Mini Tractor : ಮಿನಿ ಟ್ಯಾಕ್ಟರ್ ಖರೀದಿಗೆ ಒಂದು ಲಕ್ಷ ರೂಪಾಯಿವರೆಗೆ ಸಬ್ಸಿಡಿ ಸಾಲ ಸೌಲಭ್ಯ.! ಬೇಕಾಗುವ ದಾಖಲೆಗಳೇನು.?

Mini Tractor : ನಮಸ್ಕಾರ ಸ್ನೇಹಿತರೇ, ತೋಟಗಾರಿಕೆ ಇಲಾಖೆಯಿಂದ ಮಿನಿ ಟ್ಯಾಕ್ಟರ್ ಖರೀದಿ ಮಾಡಲು ಒಂದು ಲಕ್ಷ ರೂಪಾಯಿ ತನಕ ಸಬ್ಸಿಡಿ ನೀಡಲು ಅರ್ಹ ಫಲಾನುಭವಿ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹೌದು, 2024-25 ನೇ ಸಾಲಿನ ತೋಟಗಾರಿಕೆ ಯಾಂತ್ರಿಕೀಕರಣ ಸಂರಕ್ಷಿತ ಬೇಸಾಯದ ಅಡಿಯಲ್ಲಿ ಅರ್ಹ ಫಲಾನುಭವಿ ರೈತರಿಗೆ ಟ್ರಾಕ್ಟರ್(Tractor) ಖರೀದಿ ಮಾಡಲು ಸಬ್ಸಿಡಿಯನ್ನು ನೀಡಲಾಗುತ್ತದೆ. ಯಾವೆಲ್ಲಾ ರೈತರಿಗೆ ಟ್ರಾಕ್ಟರ್ ಖರೀದಿಗೆ ಎಷ್ಟು ಸಬ್ಸಿಡಿ ನೀಡಲಾಗುತ್ತದೆ.? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು.? ಬೇಕಾಗುವ ದಾಖಲೆಗಳೇನು.? ಹಾಗು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : PM Surya Ghar Yojana : ಕರೆಂಟ್ ಬಿಲ್ ಕಟ್ಟುತ್ತಿರುವ ಎಲ್ಲರಿಗು ಸಿಗುತ್ತೆ 78000 ರೂಪಾಯಿ.! ಹೀಗೆ ಅರ್ಜಿ ಸಲ್ಲಿಸಿ – ಬೇಕಾಗುವ ದಾಖಲೆಗಳೇನು.?

ಮಿನಿ ಟ್ರ್ಯಾಕ್ಟರ್ ಬಂದ ನಂತರ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ರೈತರ ಆದಾಯ ಹೆಚ್ಚಿದ್ದು, ಅವರ ಇನ್ನಿತರ ಕೆಲಸದ ಆಳುಗಳ ಸಮಸ್ಯೆಗೂ ಇದರಿಂದ ಪರಿಹಾರ ಸಿಕ್ಕಿದೆ. ಈ ಕಾರಣದಿಂದ ಸರ್ಕಾರವೂ ರೈತರಿಗೆ ಹೆಚ್ಚು ಹೆಚ್ಚು ಮಿನಿ ಟ್ರ್ಯಾಕ್ಟರ್(Mini Tractor) ಬಳಸುವಂತೆ ಪ್ರೇರೇಪಣೆ ನೀಡಲು ಅರ್ಹ ರೈತರಿಗೆ ಸಬ್ಸಿಡಿ ನೀಡುತ್ತಿದೆ. ಇದೀಗ ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ಅಡಿಯಲ್ಲಿ ಮಿನಿ ಟ್ರ್ಯಾಕ್ಟರ್ ಖರೀದಿಸಲು ಬಯಸುವ ಅರ್ಹ ಫಲಾನುಭವಿ ರೈತರಿಂದ ಅರ್ಜಿಯನ್ನ ಆಹ್ವಾನಿಸಿದೆ. ರೈತರಿಗೆ ಶೇಕಡಾ 50% ರಷ್ಟು ಸಬ್ಸಿಡಿ ಆಧಾರದಲ್ಲಿ ಮಿನಿ ಟ್ರ್ಯಾಕ್ಟರ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಯ ಅಡಿಯಲ್ಲಿ ರೈತರು ಮಿನಿ ಟ್ಯಾಕ್ಟರ್ ಗಳನ್ನು ಖರೀದಿಸಿ ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಯನ್ನು ತುಂಬಾ ಸುಲಭವಾಗಿ ನಡೆಸಿಕೊಂಡು ಹೋಗಬಹುದು.

ಬೇಕಾಗುವ ದಾಖಲೆಗಳೇನು.?

ಅರ್ಹತೆ ಹೊಂದಿರುವ ರೈತರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಗಿದ್ದರೆ, ಮಿನಿ ಟ್ಯಾಕ್ಟರ್ ಖರೀದಿ ಮಾಡಲು ನಿಗದಿತ ಅರ್ಜಿ ನಮೂನೆಯ ಜೊತೆಗೆ ಈ ದಾಖಲೆಗಳನ್ನು ನೀಡಬೇಕು.

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮಾತ್ರ)
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ಜಮೀನಿನ ಪಹಣಿ
  • ಹೊಲದ ಉತಾರಿ
  • ಇತ್ತೀಚಿನ ಭಾವಚಿತ್ರ

ಇದನ್ನೂ ಕೂಡ ಓದಿ : Kisan Credit Card Scheme : ಇನ್ನು ಮುಂದೆ ಎಲ್ಲ ರೈತರಿಗೂ ಪಶು ಕಿಸಾನ್ ಕಾರ್ಡ್ ನಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ.! ಅರ್ಜಿ ಸಲ್ಲಿಸುವುದು ಹೇಗೆ.?

ನೀರಾವರಿ ಸೌಲಭ್ಯ ಹೊಂದಿರುವ ರೈತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಗತ್ಯವಾದ ದಾಖಲೆಗಳೊಂದಿಗೆ ಜುಲೈ 20 ರೊಳಗಾಗಿ ಮಿನಿ ಟ್ರ್ಯಾಕ್ಟರ್(Mini Tractor) ಗಾಗಿ ಅರ್ಜಿ ಸಲ್ಲಿಸಬೇಕು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply