ನಿನ್ನೆ ಜೇವರ್ಗಿ ಬೈಪಾಸ್ ಬಳಿ ಕಾರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಹಿರಿಯ ಐಎಎಸ್ ಅಧಿಕಾರಿ ಮಹಂತೇಶ್ ಬೀಳಗಿಯವರದ್ದು ಮರ್ಡರ್ ಎಂದು ಬಾಂಬ್ ಹಾಕಲಾಗಿದೆ. ಇಂತಹದ್ದೊಂದು ಆರೋಪ ಮಾಡಿದವರು ಯಾರು ಗೊತ್ತಾ? ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಮಹಂತೇಶ್ ಬೀಳಗಿ, ಅವರ ಸಹೋದರ ಸೇರಿದಂತೆ ಐವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು.
ಕಾರಿಗೆ ನಾಯಿ ಅಡ್ಡ ಬಂದಿದ್ದರಿಂದ ತಪ್ಪಿಸಲು ಹೋದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಓರ್ವನ ಸ್ಥಿತಿ ಗಂಭೀರವಾಗಿದೆ. ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾನೆ. ಘಟನೆ ಬಗ್ಗೆ ವಕೀಲ್ ಸಾಬ್ ಖ್ಯಾತಿಯ, ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಜಗದೀಶ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಹಂತೇಶ್ ಬೀಳಗಿ ದಕ್ಷ ಅಧಿಕಾರಿಯಾಗಿದ್ದರು. ಬಡತನದಿಂದ ಬೆಳೆದು ಬಂದು ಐಎಎಸ್ ಅಧಿಕಾರಿಯಾಗಿ ಜನರ ಪ್ರೀತಿ ಗಳಿಸಿದ್ದರು. ಅವರದ್ದು ಅಪಘಾತವಾ.? ಕೊಲೆಯಾ.? ಎಂದು ಜಗದೀಶ್ ಕುಮಾರ್ ಅನುಮಾನ ವ್ಯಕ್ತಪಡಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.
