ಪರಮೇಶ್ವರ್ ದುಡಿದಿರುವ ಕೂಲಿಯೇ ಬಾಕಿಯಿದೆ, ಡಿಕೆಶಿ ಲೆಕ್ಕ ಆಮೇಲೆ – ಮಾಜಿ ಸಚಿವ ಕೆ‌.ಎನ್. ರಾಜಣ್ಣ

Spread the love

ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ (Cm siddaramaiah) ಹಾಗೂ ಡಿಕೆಶಿ ನಡುವೆ ತೀವ್ರ ಪೈಪೋಟಿ ನಡುವೆಯೇ ಮಾಜಿ ಸಚಿವ ಕೆಎನ್ ರಾಜಣ್ಣ (Kn Rajanna) ಪ್ರತಿಕ್ರಿಯಿಸಿದ್ದು, ಜಿ ಪರಮೇಶ್ವರ್ ಸಿಎಂ ಆದರೆ ನಾನು ಅವರ ಪರವಾಗಿ ಇದ್ದೇನೆ, ಬದಲಾವಣೆ ಅಂತ ಆದರೆ ಪರಮೇಶ್ವರ್ ಅವರೇ ಸಿಎಂ ಆಗಬೇಕು ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಕೂಲಿ ಬಗ್ಗೆ ಮಾತನಾಡುವುದಾದರೆ, ಪರಮೇಶ್ವರ್ 2013ರಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದವರು. ಪರಮೇಶ್ವರ್ ಅವರದ್ದು ಹಳೆ ಕೂಲಿ, ಡಿಕೆಶಿಯದ್ದು ಹೊಸದು. ಹೀಗಿರುವಾಗ, ಮೊದಲು ಹಳೆ ಕೂಲಿ ತೀರಿಸಬೇಕೋ ಅಥವಾ ಹೊಸದು ತೀರಿಸಬೇಕೋ ಎಂಬ ಪ್ರಶ್ನಿಸಿದರು.

2013ರಲ್ಲಿ ಕಾಂಗ್ರೆಸ್‌ಗೆ ಅಧಿಕಾರ ತಂದುಕೊಟ್ಟವರು ಅವರೇ ಹೀಗಿರುವಾಗ ಪರಮೇಶ್ವರ್ ಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ.. ಅವರ ಕೂಲಿ ಇನ್ನೂ ಬಾಕಿಯೇ ಇದೆ. ಡಿಕೆಶಿ ಸಿಎಂ ಸ್ಥಾನಕ್ಕೆ ಒತ್ತಾಯ ಮಾಡುತ್ತಿದ್ದರೆ, ಮೊದಲು ಪರಮೇಶ್ವರ್ ಗೆ ಸಿಎಂ ಸ್ಥಾನ ನೀಡಬೇಕು ಎಂದು ಪರಂ ಪರ ಬ್ಯಾಟ್ ಬೀಸಿದರು.

ಹೈಕಮಾಂಡ್ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕು. ಇಲ್ಲದಿದ್ದರೆ ಸರ್ಕಾರವನ್ನು ವಿಸರ್ಜಿಸಿ, ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು. ಡಿಕೆಶಿಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಹುದು. ಪಕ್ಷವನ್ನು ನಮ್ಮಿಂದಲೇ ಅಧಿಕಾರಕ್ಕೆ ತಂದೆವು ಎಂದು ಹೇಳುವವರು ಹುಚ್ಚರು, ಮೆಂಟಲ್‌ಗಳು ಎಂದು ರಾಜಣ್ಣ ಡಿಕೆಶಿ ಮತ್ತು ಅವರ ತಂಡದ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

ಹೈಕಮಾಂಡ್ ಯಾವ ನಿರ್ಧಾರ ಮಾಡಿದರೂ ಎಲ್ಲರೂ ಬದ್ಧವಾಗಿರಬೇಕು.. ಕೆಲ ಶಾಸಕರು ದೆಹಲಿಗೆ ಮಂತ್ರಿ ಸ್ಥಾನಕ್ಕಾಗಿ ಒತ್ತಡ ಹಾಕಲು ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುವುದನ್ನು ಹೈಕಮಾಂಡ್‌ವೇ ತೀರ್ಮಾನಿಸುತ್ತದೆ. ನನ್ನ ಪ್ರಕಾರ, ಸಿದ್ದರಾಮಯ್ಯರನ್ನು ಈಗ ಬದಲಿಸುವ ಸಾಧ್ಯತೆ ಕಡಿಮೆ. ಅವರೇ ಸಿಎಂ ಆಗಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ ಎಂದು ರಾಜಣ್ಣ ತಿಳಿಸಿದರು.

WhatsApp Group Join Now

Spread the love

Leave a Reply