10ನೇ ತರಗತಿಯ ಪರೀಕ್ಷೆಯ ವಿಷಯವಾಗಿ ಶೈಕ್ಷಣಿಕ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರ ಸದ್ಯ ಮಕ್ಕಳ ಬೇಸರಕ್ಕೆ ಕಾರಣವಾಗಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಈಗ ಎಸ್ಎಸ್ಎಲ್ಸಿ ಮಕ್ಕಳ ಪರೀಕ್ಷಾ ಶುಲ್ಕವನ್ನ ಹೆಚ್ಚಳ ಮಾಡಿದೆ. 10ನೇ ತರಗತಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳ ಶುಲ್ಕವನ್ನ ಶೇಕಡ ಐದರಷ್ಟು ಏರಿಕೆ ಮಾಡಲಾಗಿದೆ.
ಈ ಹಿಂದೆ 10ನೇ ತರಗತಿ ಪರೀಕ್ಷೆ ಬರೆಯುವ ಮಕ್ಕಳು 676 ರೂಪಾಯ ಶುಲ್ಕವನ್ನ ಪಾವತಿ ಮಾಡಬೇಕಾಗಿತ್ತು. ಆದರೆ ಇನ್ನು ಮುಂದೆ 710 ರೂಪಾಯ ಶುಲ್ಕವನ್ನ ಪಾವತಿ ಮಾಡಬೇಕಾಗುತ್ತೆ. ಅದೇ ರೀತಿಯಲ್ಲಿ ಹೊಸದಾಗಿ ನೋಂದಾವಣೆಯಾಗುವ ಖಾಸಗಿ ಅಭ್ಯರ್ಥಿಗಳ ನೋಂದಾವಣಿ ಶುಲ್ಕ ಹಾಗೂ ಅರ್ಜಿ ಶುಲ್ಕವನ್ನ 236 ರಿಂದ 248 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಅಷ್ಟೇ ಮಾತ್ರವಲ್ಲದೆ ಈಗಾಗಲೇ ಖಾಸಗಿ ಅಭ್ಯರ್ಥಿಯಾಗಿ ನೋಂದಾವಣೆಯನ್ನ ಮಾಡಿಕೊಂಡು ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಾವಣಿ ನವೀಕರಣ ಶುಲ್ಕವನ್ನ 69 ರೂಪಾಯಯಿಂದ 72 ರೂಪಾಯಿಗೆ ಏರಿಕೆ ಮಾಡಲಾಗಿದೆ. ಈ ಹಿಂದೆ ಎರಡು ವಿಷಯಕ್ಕೆ ಪರೀಕ್ಷೆ ಬರೆಯುವವರು 532 ರೂಪಾಯ ಶುಲ್ಕವನ್ನ ಪಾವತಿ ಮಾಡಬೇಕಾಗಿತ್ತು. ಆದರೆ ಇನ್ನು ಮುಂದೆ 559 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಹಾಗೆ ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ಪರೀಕ್ಷೆಯನ್ನು ಬರೆಯುವವರು ಈ ಹಿಂದೆ 716 ರೂಪಾಯಿ ಶುಲ್ಕವನ್ನ ಪಾವತಿ ಮಾಡಬೇಕಾಗಿತ್ತು.
ಆದರೆ ಈಗ 752 ರೂಪಾಯಿ ಶುಲ್ಕವನ್ನ ಪಾವತಿ ಮಾಡಬೇಕು. ಪರೀಕ್ಷಾ ಮಂಡಳಿ ಈಗ ಎಲ್ಲಾ ವಿಷಯಕ್ಕೆ ಸಂಬಂಧಪಟ್ಟಂತೆ ಶುಲ್ಕವನ್ನ ಶೇಕಡ ಐದರಷ್ಟು ಏರಿಕೆ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರ ಈಗ ಪರೀಕ್ಷಾ ಶುಲ್ಕವನ್ನ ಕೂಡ ಏರಿಕೆ ಮಾಡಿರುವುದು ಸದ್ಯ ವಿದ್ಯಾರ್ಥಿಗಳ ಮತ್ತು ಪೋಷಕರ ಬೇಸರಕ್ಕೆ ಕಾರಣವಾಗಿದೆ.

ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಗೆ ಹೊಸ ರೂಲ್ಸ್ ಘೋಷಣೆ | Karnataka SSLC Examination Rules
WhatsApp Group
Join Now