ನನ್ನನ್ನು ಬೇಕಾದರೆ ಜೈಲಿಗೆ ಹಾಕಿ ಆದರೆ ಧರ್ಮಸ್ಥಳ ಹೆಸರು ಹಾಳು ಮಾಡಲು ಪೂಜಾರಿ ಬಿಡೋದಿಲ್ಲ – ಜನಾರ್ಧನ ಪೂಜಾರಿ ಗುಡುಗು

Spread the love

ಧರ್ಮಸ್ಥಳದ ಮೇಲೆ ಆರೋಪದ ವಿರುದ್ದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಗರಂ ಆಗಿದ್ದು, ಧರ್ಮಸ್ಥಳದ ಜೊತೆ ಇಡೀ ದೇಶವೇ ಇದೆ. ವಿರೇಂದ್ರ ಹೆಗ್ಗಡೆಯವರೇ ನಾನು ನಿಮ್ಮ ಜೊತೆ ಇದ್ದೇನೆ ಎಂದು ಜನಾರ್ಧನ ಪೂಜಾರಿ ಅವರು ಹೇಳಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೊಕ್ಕೊಟ್ಟಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ನಡೆದ “ಮುದ್ದು ಕೃಷ್ಣ -2025” ಕೃಷ್ಣ ವೇಷ ಸ್ಪರ್ಧೆಯನ್ನ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳದ ವಠಾರವನ್ನು ಎಸ್ ಐಟಿಯವರು ಅಗೆಯುತ್ತಿದ್ದಾರೆ. ಧರ್ಮಸ್ಥಳ ಜೈನರಿಗೆ ಮಾತ್ರ ಸೇರಿದ್ದಲ್ಲ. ಧರ್ಮಸ್ಥಳ ಇಡೀ ದೇಶಕ್ಕೆ ಸೇರಿದ ಸ್ಥಳ. ಧರ್ಮಸ್ಥಳವನ್ನು ಹಾಳು ಮಾಡಲಿಕ್ಕೆ ಯಾರಿಂದಲೂ ಸಾದ್ಯವಿಲ್ಲ ಎಂದರು. ಭಾರತೀಯ ಸಂಸ್ಕೃತಿಯಲ್ಲಿ ಮೃತರಾದವರನ್ನು ದೇವಸ್ಥಾನದ ಆವರಣದಲ್ಲಿ ಹೂಳುವುದು ಕ್ರಮ, ಹಿಂದೂಗಳು ಮಾತ್ರವಲ್ಲ ಮುಸ್ಲಿಂ, ಕ್ರಿಶ್ಚಿಯನ್ನರು ಸತ್ತಾಗಲೂ ಶವಗಳನ್ನ ಮಸೀದಿ, ಚರ್ಚ್ ಗಳ ವಠಾರದಲ್ಲಿ ಹೂಳುವುದು ಅದು ಭಾರತೀಯ ಸಂಸ್ಕೃತಿಯಾಗಿದೆ. ಎಸ್ ಐಟಿಯವರು ಎಷ್ಟು ಹುಡುಕಿದರೂ ಅಲ್ಲಿ ಶವ ಸಿಗುವುದಿಲ್ಲ ಎಂದರು.

ಧರ್ಮಸ್ಥಳದ ಹೆಸರು ಹಾಳಾಗುತ್ತಿದ್ದರೂ ಪ್ರಧಾನಿ ಮೋದಿಯವರೇ ನೀವು ಏನು ಮಾಡುತ್ತಿದ್ದೀರಿ. ಮೋದಿಯವರೇ ಧೈರ್ಯ ತಾಕತ್ತಿದ್ದರೆ ಧರ್ಮಸ್ಥಳಕ್ಕೆ ಹೋಗಿ ನಿಂತು ಭಾಷಣ ಮಾಡಿ. ಶವ ಹೂಳುವುದು ದೇವಸ್ಥಾನಗಳಲ್ಲಿ ಮಾತ್ರವೇ.. ಮಸೀದಿ, ಚರ್ಚ್ ಗಳಲ್ಲೂ ಶವಗಳನ್ನ ಹೂತಿಲ್ಲವೇ ಎಂದು ಕೇಳಿ ಎಂದು ಮಾಜಿ ಕೇಂದ್ರ ಸಚಿವರೂ ಹಿರಿಯ ಕಾಂಗ್ರೆಸ್ ಮುಖಂಡರೂ ಆದ ಬಿ.ಜನಾರ್ಧನ ಪೂಜಾರಿ ಗುಡುಗಿದ್ದಾರೆ.

ಶವಗಳನ್ನ ಹೂತಿಟ್ಟ ಆರೋಪದಲ್ಲಿ ಧರ್ಮಸ್ಥಳ ವಠಾರವನ್ನ ಎಸ್ ಐಟಿ ಯವರು ಅಗೆಯುತ್ತಿದ್ದಾರೆ. ಎಸ್ ಐಟಿಯವರು ಹುಡುಕಿದರೂ ಏನೂ ಸಿಕ್ಕಿಲ್ಲ, ಸಿಗೋದಿಲ್ಲ. ನೀವು ಎಷ್ಟು ಹುಡುಕಿದರೂ ಸಿಗುವುದಿಲ್ಲ. ಎಸ್ ಐಟಿಯವರೇ, ಮುಖ್ಯಮಂತ್ರಿಯವರೇ ಏನು ಮಾಡುತ್ತಿದ್ದೀರಿ ನೀವು. ಧರ್ಮಸ್ಥಳದ ಹೆಸರು ಹಾಳಾಗುತ್ತಿದ್ದರೂ ಯಾಕೆ ನೀವು ಬಾಯಿ ಬಿಡುವುದಿಲ್ಲ, ನಾಚಿಗೆ ಆಗುತ್ತಿದೆ ನನಗೆ. ದೇವಸ್ಥಾನವನ್ನು ಹಾಳು ಮಾಡುವಾಗ ಮಾತನಾಡುವ ಧೈರ್ಯ ನಿಮಗಿಲ್ಲ. ಆದರೆ ನಾನು ಮಾತನಾಡುತ್ತಿದ್ದೇನೆ. ಪೂಜಾರಿಯನ್ನ ಜೈಲಿಗೆ ಹಾಕಿದರೂ ಧರ್ಮಸ್ಥಳದ ಹೆಸರು ಹಾಳು ಮಾಡಲು ಬಿಡೋದಿಲ್ಲ ಎಂದು ಗುಡುಗಿದರು.

WhatsApp Group Join Now

Spread the love

Leave a Reply