ಸ್ನೇಹಿತನ ಜೊತೆ ಲವ್ವಿಡವ್ವಿ, ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ ಪತ್ನಿಗೆ ಚಾಕು ಇರಿದ ಪತಿ.!

ಕನ್ನಡ ನ್ಯೂಸ್ ಟೈಮ್ : ಸ್ನೇಹಿತನ ಜೊತೆ ಲವ್ವಿಡವ್ವಿ, ನಡುರಸ್ತೆಯಲ್ಲಿಯೇ ಪತ್ನಿಗೆ ಚಾಕು ಇರಿದ ಪತಿ!
ಆನೇಕಲ್‌ನಲ್ಲಿ ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನು ನಡುರಸ್ತೆಯಲ್ಲಿ ಚಾಕು ಚುಚ್ಚಿ ಕೊಂದಿದ್ದಾನೆ. ಮಗುವನ್ನು ಶಾಲೆಗೆ ಬಿಡಲು ಬಂದಾಗ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನು ನಡುರಸ್ತೆಯಲ್ಲಿಯೇ ಚಾಕು ಚುಚ್ಚಿ ಕೊಂದಿರುವ ಘಟನೆ ಆನೇಕಲ್‌ನಲ್ಲಿ ನಡೆದಿದೆ. ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ 7-8 ಬಾರಿ ಚಾಕು ಇರಿದಿದ್ದಾನೆ. ಮಗುವನ್ನ ಶಾಲೆಗೆ ಬಿಡಲು ಬಂದಾಗ ಪತ್ನಿಯ ಮೇಲೆ ಪತಿ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಬೆಂಗಳೂರು ಹೊರವಲಯದ  ಆನೇಕಲ್ ತಾಲೂಕಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ಘಟನೆ ನಡೆದಿದೆ. 29 ವರ್ಷದ ಶ್ರೀಗಂಗಾ ಕೊಲೆಯಾದ ಮಹಿಳೆ. 32 ವರ್ಷದ ಆಕೆಯ ಪತಿ ಮೋಹನ್‌ ರಾಜು ಕೊಲೆಗೈದ ವ್ಯಕ್ತಿ.

ಇಬ್ಬರೂ ಕೂಡ ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿಗಳಾಗಿದ್ದು, ಮದುವೆಯಾಗಿ ಏಳು ವರ್ಷಗಳಾಗಿವೆ. ಆರು ವರ್ಷದ ಮಗ ಇವರಿಗೆ ಇದ್ದಾನೆ. ಮೋಹನ್ ರಾಜ್ ಸ್ನೇಹಿತನ ಜೊತೆಗೆ ಪತ್ನಿ ಅಕ್ರಮ ಸಂಬಂಧ ಶಂಕೆ ವ್ಯಕ್ತವಾಗಿತ್ತು. ಎರಡು ಮೂರು ವರ್ಷದಿಂದ  ಪತ್ನಿ ಶೀಲ ಶಂಕಿಸಿ ಮೋಹನ್‌ ರಾಜ್‌ ಗಲಾಟೆ ಮಾಡುತ್ತಿದ್ದ. ಕಳೆದ ಎಂಟು ತಿಂಗಳಿನಿಂದ ಪತಿ, ಪತ್ನಿ ದೂರವಾಗಿದ್ದರು. ಮೋಹನ್ ರಾಜ್ ರಾತ್ರಿ ಮಗುವನ್ನ ನೋಡಲು ಬಂದಿದ್ದ. ಈ ವೇಳೆಯೂ ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆದಿತ್ತು.

ವೀರ್ಯಾಣು ಹೇಗೆ ಅಂಡಾಣುವನ್ನು ಸೇರುತ್ತದೆ ನೋಡಿ – Health Tips

ಬೆಳಿಗ್ಗೆ ಮಗುವನ್ನ ಶಾಲೆಗೆ ಬಿಡಲು ಶ್ರೀಗಂಗಾ ಬೈಕ್ ನಲ್ಲಿ ಬಂದಿದ್ದರು. ಈ ಹಂತದಲ್ಲಿ ಆಕೆಯ ಬರುವಿಕೆಯನ್ನೇ ಕಾದು ಕುಳಿತಿದ್ದ ಪರತಿ ಮೋಹನ್‌ ರಾಜ್‌, ಶ್ರೀಗಂಗಾ ಮೇಳೆ ದಾಳಿ ಮಾಡಿದ್ದಾರೆ. ಏಳೆಂಟು ಬಾರಿ ಆಕೆಗೆ ಚಾಕುವಿನಿಂದ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದ ಮಹಿಳೆಯನ್ನ  ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಂಗಾ ಸಾವು ಕಂಡಿದ್ದಾಳೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರ ಭೇಟಿ ನೀಡಿದ್ದು, ಆರೋಪಿ ಮೋಹನ್ ರಾಜ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply