ರಾಜ್ಯ ಕಾಂಗ್ರೆಸ್ ಸರ್ಕಾರ ತಂದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2000 ಹಣವನ್ನ ಜಮಾ ಮಾಡಲಾಗುತ್ತಿದೆ. ಇದೀಗ ರಾಜ್ಯದ ಕೋಟ್ಯಂತರ ಗೃಹಲಕ್ಷ್ಮಿಯರಿಗೆ, ಸ್ವಾವಲಂಬಿ ಬದುಕಿನ ಕನಸು ಕಾಣುತ್ತಿರುವ ಮಹಿಳೆಯರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಇದೇ ನವೆಂಬರ್ 28 ರಂದು ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಅಧಿಕೃತವಾಗಿ ಚಾಲನೆ ಸಿಗಲಿದೆ.
ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆಯಲು ಮಹಿಳೆಯರು ಹಣ ಕಟ್ಟಿ ಷೇರ್ ಹೋಲ್ಡರ್ಸ್ ಆಗಬೇಕಿದೆ. ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ಗೆ ಸೇರಲು ಒಂದಿಷ್ಟು ನಿಯಮಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ಗೆ ಸೇರಲು ಏನೇನು ನಿಯಮ ಪಾಲಿಸಬೇಕು?, ಎಷ್ಟು ಹಣ ಕಟ್ಟಿ ಷೇರ್ ಹೋಲ್ಡರ್ಸ್ ಆಗಬೇಕು?, ಎಷ್ಟು ಸಾಲ ಸಿಗುತ್ತೆ? ಎಂಬ ಮಾಹಿತಿ ಇಲ್ಲಿದೆ ನೋಡಿ.
ಗೃಹಲಕ್ಷ್ಮಿ ಸಂಘಕ್ಕೆ ಸೇರ ಬಯಸುವವರಿಗೆ ಯಾವುದೇ ಒತ್ತಡ ಇಲ್ಲ. ಬ್ಯಾಂಕ್ ಗೆ ಸೇರ ಬಯಸುವವರು ಸಾವಿರ ರೂಪಾಯಿ ಕೊಟ್ಟು ಶೇರ್ ಹೋಲ್ಡರ್ ಆಗಬೇಕು. ಸಂಪೂರ್ಣ ಕ್ಯಾಶ್ ಲೆಸ್ ವ್ಯವಹಾರ ನಡೆಯಲಿದ್ದು, ಷೇರುದಾರರಾದ ಬಳಿಕ ಪ್ರತಿ ತಿಂಗಳು ಇನ್ನೂರು ರೂಪಾಯಿ ಕಟ್ಟಬೇಕು, ಆರು ತಿಂಗಳಲ್ಲಿ ಲೋನ್ ಪಡೆಯಬಹುದು, ಮೂವತ್ತು ಸಾವಿರದಿಂದ ಮೂರು ಲಕ್ಷದವರೆಗೂ ಸಾಲ ನೀಡಲಾಗುವುದು. ಗೃಹಲಕ್ಷ್ಮಿ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಮಾತ್ರ ನೀಡಲಾಗುವುದು, ಗುಂಪು, ಸಂಘಗಳಿಗೆ ಸಾಲ ನೀಡಲಾಗುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.
ಇದು ಇಡೀ ವಿಶ್ವದಲ್ಲೇ ದಾಖಲೆಯಾಗಿ ಉಳಿಯಲಿದೆ. ಬ್ಯಾಂಕ್ ಬಗ್ಗೆ ಇಂಥಹ ಪರಿಕಲ್ಪನೆಯನ್ನು ಇಟ್ಟುಕೊಂಡಿರುವೆ. ಮುಂದೆ ಯಾವುದೇ ಸರ್ಕಾರಗಳು ಬಂದರೂ ಗೃಹಲಕ್ಷ್ಮಿ ಬ್ಯಾಂಕ್ ಅನ್ನು ಮುಚ್ಚುವ ಪ್ರಯತ್ನ ಮಾಡುವುದಿಲ್ಲ. ಇದು ನಿರಂತರ ಪ್ರಕ್ರಿಯೆ. ಮಹಿಳೆಯರಿಗೆ ಅನುಕೂಲ ಆಗುವ ದೃಷ್ಟಿಯಿಂದ ಬ್ಯಾಂಕ್ ತೆರೆಯಲಾಗುತ್ತಿದ್ದು, ಕೃಷಿ, ಹೈನುಗಾರಿಕೆ, ವಾಹನ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ವಿವಿಧ ರೀತಿಯಲ್ಲಿ ಲೋನ್ ತೆಗೆದುಕೊಳ್ಳಬಹುದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಎಂದರು.
ಈ ಬ್ಯಾಂಕ್ನ ಭಾಗವಾಗಲು ನೀವು ಕೇವಲ 1,000 ರೂಪಾಯಿ ನೀಡಿ ಷೇರುದಾರರಾಗಬೇಕು. ಇದು ನಿಮ್ಮ ಸದಸ್ಯತ್ವದ ಮೊದಲ ಹೆಜ್ಜೆ. ಆಮೇಲೆ ಷೇರುದಾರರಾದ ನಂತರ, ಪ್ರತಿ ತಿಂಗಳು ಕೇವಲ 200 ರೂಪಾಯಿಗಳನ್ನು ಕಟ್ಟಬೇಕು. ಇದು ನಿಮ್ಮ ಉಳಿತಾಯದ ಹಾದಿಯೂ ಹೌದು. ನೀವು ಸದಸ್ಯರಾದ ಕೇವಲ ಆರೇ ತಿಂಗಳಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಹರಾಗುತ್ತೀರಿ. ಕನಿಷ್ಠ 30,000 ರೂಪಾಯಿಗಳಿಂದ ಹಿಡಿದು ಗರಿಷ್ಠ 3 ಲಕ್ಷ ರೂಪಾಯಿವರೆಗೂ ವೈಯಕ್ತಿಕ ಸಾಲ ಸೌಲಭ್ಯ ಲಭ್ಯವಾಗಲಿದೆ. ಇಲ್ಲಿ ಒಂದು ಪ್ರಮುಖ ಅಂಶವಿದೆ.
ಈ ಬ್ಯಾಂಕ್ನಲ್ಲಿ ಗುಂಪು ಅಥವಾ ಸಂಘಗಳಿಗೆ ಸಾಲ ನೀಡಲಾಗುವುದಿಲ್ಲ. ಕೇವಲ ವೈಯಕ್ತಿಕ ಸಾಲಕ್ಕೆ ಮಾತ್ರ ಅವಕಾಶ. ಅಂದರೆ, ಪ್ರತಿಯೊಬ್ಬ ಮಹಿಳೆಯೂ ನೇರವಾಗಿ ಬ್ಯಾಂಕ್ನೊಂದಿಗೆ ವ್ಯವಹರಿಸಬಹುದು. ಇನ್ನು ಬಡ್ಡಿ ದರ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಇರುವಷ್ಟೇ ಬಡ್ಡಿ ದರ ಇರಲಿದೆ. ಅಂದರೆ, ಕಡಿಮೆ ಬಡ್ಡಿಯಲ್ಲಿ ಸಾಲ ಸಿಗಲಿದೆ. ಮತ್ತೊಂದು ಖುಷಿಯ ವಿಚಾರವೆಂದರೆ, ಈ ಬ್ಯಾಂಕ್ನ ಎಲ್ಲಾ ವ್ಯವಹಾರಗಳು ಸಂಪೂರ್ಣವಾಗಿ ಕ್ಯಾಶ್ಲೆಸ್ ಆಗಿರಲಿವೆ. ಪಾರದರ್ಶಕತೆಗೆ ಇಲ್ಲಿ ಮೊದಲ ಆದ್ಯತೆ ಇರುತ್ತೆ. ಇನ್ನೊಂದು ಪ್ರಮುಖ ಅಂಶ ಅಂದ್ರೆ ಸಂಘಕ್ಕೆ ಸೇರಲು ಯಾವುದೇ ಒತ್ತಡ ಇರಲ್ಲ ಎಂದು ಹೇಳಿದರು.
Gruha Lakshmi : ಗೃಹಲಕ್ಷ್ಮೀ ಸಹಕಾರ ಬ್ಯಾಂಕ್ – ಏನೆಲ್ಲ ಷರತ್ತು? ಸಾಲ ಪಡೆಯೋದು ಹೇಗೆ.? ಇಲ್ಲಿದೆ ಸಂಪೂರ್ಣ ಮಾಹಿತಿ
WhatsApp Group
Join Now