Gruhalakshmi Scheme : ‘ಗೃಹಲಕ್ಷ್ಮಿ’ ಮಾಸಿಕ ಹಣ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಚಿಂತನೆ! ಗೃಹಲಕ್ಷ್ಮೀಯರಿಗೆ ಸಿಹಿಸುದ್ಧಿ.!

Spread the love

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಕೂಡಲೇ ಪ್ರಮುಖ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಮುಖವಾಗಿದ್ದು, ಮನೆಯ ಯಜಮಾನತಿಗೆ ತಿಂಗಳಿಗೆ ರೂ.2000 ಅವರ ಖಾತೆಗೆ ಜಮೆ ಆಗುತ್ತದೆ. ಇದೀಗ ಈ ಒಂದು ಮಾಸಿಕ ಹಣದಲ್ಲಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಹೌದು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗಾಗಲೇ 2 ಸಾವಿರ ಹಣ ಮಹಿಳೆಯರ ಖಾತೆಗೆ ಹಾಕಲಾಗುತ್ತಿದ್ದೂ, ಅತೀ ಶೀಘ್ರದಲ್ಲಿ ಗೃಹಲಕ್ಷ್ಮಿಯರ ಮಾಸಿಕ ಹಣ ಹೆಚ್ಚಳ ಸಾಧ್ಯತೆ ಇದೆ ಎನ್ನಲಾಗಿದೆ.ಇದೀಗ 2000 ರೂ. ಮಾಸಿಕವಾಗಿ ನೀಡಲಾಗುತ್ತಿದೆ. ಅದನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್‌ 7ರಂದು ರಾಜ್ಯ ಬಜೆಟ್‌ ಮಂಡನೆಯಾಗಲಿದೆ.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಈ ವೇಳೆ ಗೃಹಲಕ್ಷ್ಮಿಯರ ಮಾಸಿಕ ಹಣ 2000 ರೂ.ನಿಂದ 2300 ರೂ. ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ. ರಾಜ್ಯದ ಒಟ್ಟು ಆರ್ಥಿಕ ಸ್ಥಿತಿ ಪರಿಗಣಿಸಿ ಸಿಎಂ ಸಿದ್ದರಾಮಯ್ಯ ಇದರ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ಹಾಗಾಗಿ ಮಾರ್ಚ್ 7 ರಂದು ನಡೆಯುವ ಬಜೆಟ್ ಮಂಡನೆಯಲ್ಲಿ ಗೃಹಲಕ್ಷ್ಮಿಯರ ರೂ.2000 ಹಣ ಹೆಚ್ಚಳ ಆಗುತ್ತಾ ಇಲ್ಲವಾ.? ಎನ್ನುವುದನ್ನು ಕಾದು ನೋಡಬೇಕಾಗಿದೆ.

WhatsApp Group Join Now

Spread the love

Leave a Reply