ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ದೀಪಾವಳಿ ಹಬ್ಬದಿಂದ ಗೃಹಲಕ್ಷ್ಮಿ ಪಟ್ಟಿಯ ಹೊಸ ಅಪ್ಡೇಟ್ ಮಾಡಲಾಗಿದ್ದು, ಅನರ್ಹರ ಹೆಸರುಗಳನ್ನ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅಂದ್ರೆ ಇನ್ಮುಂದೆ ಈ ಪಟ್ಟಿಯಲ್ಲಿ ಹೆಸರಿಲ್ಲದ ಮಹಿಳೆಯರಿಗೆ ಹಣ ಬರುವುದಿಲ್ಲ. ಕೇವಲ ಈ ಪಟ್ಟಿಯಲ್ಲಿ ಹೆಸರು ಇರುವ ಮಹಿಳೆಯರಿಗೆ ಮಾತ್ರ ಇನ್ಮುಂದೆ ಪ್ರತಿ ತಿಂಗಳು ಹಣ ಬರುತ್ತದೆ.
ಇಡೀ ಕರ್ನಾಟಕದಾದ್ಯಂತ ಪ್ರತಿಯೊಂದು ಜಿಲ್ಲೆಗಳ ಲಿಸ್ಟ್ ಈಗಾಗಲೇ ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಪ್ರತಿಯೊಬ್ಬ ಗೃಹಲಕ್ಷ್ಮಿ ಫಲಾನುಭವಿಗಳು ತಮ್ಮ ಹೆಸರು ಇದೆಯಾ ಅಥವಾ ಇಲ್ವಾ ಎಂದು ಚೆಕ್ ಮಾಡಿಕೊಳ್ಳಬಹುದು. ಈ ಪಟ್ಟಿಯಲ್ಲಿ ಹೆಸರಿರುವ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ. ನೀವು ಕೂಡ ನಿಮ್ಮ ಮೊಬೈಲ್ನಲ್ಲಿಯೇ ಆನ್ಲೈನ್ ನಲ್ಲಿ ಲಿಸ್ಟಲ್ಲಿ ಹೆಸರು ಇದೆಯೇ ಅಥವಾ ಇಲ್ವಾ ಅನ್ನುವುದನ್ನ ಚೆಕ್ ಮಾಡಬಹುದು. ಒಂದುವೇಳೆ ಇಲ್ಲದೆ ಹೋದರೆ ನೀವು ನಿಮ್ಮ ಹತ್ತಿರದ ಹಾಗೂ ನಿಮ್ಮ ವಲಯಕ್ಕೆ ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಫೀಸ್ಗೆ ಸಂಪರ್ಕಿಸಬೇಕಾಗುತ್ತದೆ.
ಜುಲೈ ತಿಂಗಳಿನಿಂದಲೂ ಹಣ ಬರುತ್ತಿಲ್ಲ. ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ದೀಪಾವಳಿಯ ಸಂದರ್ಭದಲ್ಲಿ ಗೃಹಲಕ್ಷ್ಮಿಯ ಬಾಕಿ ಹಣ ಪಾವತಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ರಾಜ್ಯದ ಮಹಿಳೆಯರಿಗೆ ದೀಪಾವಳಿಯ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇತ್ತೀಚೆಗೆ ಹಾಸನಾಂಬಾದೇವಿಯ ದರ್ಶನ ಮಾಡಿದ್ದ ಸಂದರ್ಭದಲ್ಲಿ ಜುಲೈ ತಿಂಗಳ ಬಾಕಿ ಹಣವನ್ನ ದಸರಾ ಸಂದರ್ಭದಲ್ಲಿ ಫಲಾನುಭವಿಗಳಿಗೆ ನೀಡಲಾಗಿದೆ.
ಆಗಸ್ಟ್ ತಿಂಗಳ ಹಣವನ್ನ ದೀಪಾವಳಿಯ ಸಂದರ್ಭದಲ್ಲಿ ನೀಡಲಾಗುತ್ತದೆ. ಸೆಪ್ಟೆಂಬರ್ ತಿಂಗಳ ಬಾಕಿ ಹಣವನ್ನ ಆದಷ್ಟು ಬೇಗನೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದರು. ಅಂತೆಯೇ ಇದೀಗ ದೀಪಾವಳಿಯ ಈ ಸಂದರ್ಭದಲ್ಲಿ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿದೆ. ಈ ಯೋಜನೆಯ ಹಣ ಎಲ್ಲರಿಗೂ ಬರುತ್ತಿಲ್ಲ. ಫಲಾನುಭವಿಗಳಾಗಿದ್ದರೂ ಸಹ ನಿಮ್ಮ ಹೆಸರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಈ ರೇಷನ್ ಕಾರ್ಡ್ ಪಟ್ಟಿಯಲ್ಲಿ ಕಡ್ಡಾಯವಾಗಿ ಇರಬೇಕು.
ಈ ಪಟ್ಟಿಯಲ್ಲಿ ನಿಮ್ಮ ಹೆಸರು ದಾಖಲಾಗಿದ್ರೆ ಮಾತ್ರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಆಸಕ್ತರು ತಮ್ಮ ಅರ್ಹತೆಯನ್ನ ಖಚಿತಪಡಿಸಿಕೊಳ್ಳಲು ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ನಿಮ್ಮ ರೇಷನ್ ಕಾರ್ಡ್ ಮತ್ತು ಯೋಜನೆಯ ಸ್ಥಿತಿಯನ್ನ ಪರಿಶೀಲಿಸುವ ಮೂಲಕ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಾಲತಾಣದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿ ಹಾಕಲಾಗಿದೆ. ಅದರಲ್ಲಿ ಯಾವ ಫಲಾನುಭವಿಗಳ ಹೆಸರು ಇರುವುದು ಅವರಿಗೆ ಮಾತ್ರ ಈ ಹಣ ಬರುತ್ತದೆ. ಆ ಪಟ್ಟಿಯನ್ನ ಚೆಕ್ ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೆಬ್ ಸೈಟ್ ನ್ನು ಉಪಯೋಗಿಸಿಕೊಳ್ಳಿ.
ಎಲ್ಲಾ ಗೃಹಲಕ್ಷ್ಮಿ ಯರಿಗೆ ಬಿಗ್ ಶಾಕ್.! ರಾತ್ರೋರಾತ್ರಿ ಹೊಸ ಲಿಸ್ಟ್ ಬಿಡುಗಡೆ | ಹೆಸರು ಇದ್ದವರಿಗೆ ಮಾತ್ರ ಹಣ.!
WhatsApp Group
Join Now