Gold Price Today Hike : ನೀವು ದಸರಾ ಹಬ್ಬಕ್ಕೆ ಚಿನ್ನವನ್ನ ಖರೀದಿ ಮಾಡುವ ಯೋಜನೆಯನ್ನ ಹಾಕಿಕೊಂಡಿದ್ರೆ, ಆ ಯೋಜನೆಯನ್ನ ಕೈಬಿಡುವುದು ಬಹಳ ಉತ್ತಮ. ಯಾಕೆಂದರೆ ಚಿನ್ನದ ಬೆಲೆಯಲ್ಲಿ ಒಂದೇ ದಿನಕ್ಕೆ ಐತಿಹಾಸಿಕ ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ ಚಿನ್ನವಾಗಿರಬಹುದು, 22 ಕ್ಯಾರೆಟ್ ಚಿನ್ನವಾಗಿರಬಹುದು ಅಥವಾ 18 ಕ್ಯಾರೆಟ್ ಚಿನ್ನವಾಗಿರಬಹುದು, ಚಿನ್ನದ ಬೆಲೆಯಲ್ಲಿ ಐತಿಹಾಸಿಕ ಏರಿಕೆಯಾಗಿದೆ.
ಚಿನ್ನದ ಬೆಲೆಯ ಈ ಏರಿಕೆ ಸದ್ಯ ಚಿನ್ನ ಕೊಳ್ಳುವವರ ಬೇಸರಕ್ಕೆ ಕಾರಣವಾಗಿದೆ. ಹಾಗಾದರೆ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಮತ್ತು ಚಿನ್ನದ ಬೆಲೆಯಲ್ಲಿ ಮುಂದೆ ಎಷ್ಟು ಏರಿಕೆ ಆಗಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
ಇಂದು ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 75 ರೂಪಾಯಿ ಏರಿಕೆ ಕಂಡಿದೆ. ಅಂದರೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 750 ರೂ. ಏರಿಕೆ, ಆದರೆ 100ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 7,500 ರೂಪಾಯ ಏರಿಕೆಯಾಗಿದೆ.
ಅದೇ ರೀತಿಯಲ್ಲಿ 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 82 ರೂಪಾಯಿ ಏರಿಕೆಯಾಗಿರುವುದನ್ನ ನಾವು ಕಾಣಬಹುದಾಗಿದೆ. ಅಂದರೆ 10ಗ್ರಾಂ ನ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸುಮಾರು 820 ರೂಪಾಯಿ ಏರಿಕೆಯಾದರೆ, 100ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 8,200 ರೂಪಾಯಿ ಏರಿಕೆಯಾಗಿದೆ.
ಹಾಗೆಯೇ 18 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 61 ರೂಪಾಯ ಏರಿಕೆಯಾಗಿದೆ. ದೇಶೀಯ ಚಿನ್ನದ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರೆಟ್ ನ 1ಗ್ರಾಂ ಚಿನ್ನದ ಬೆಲೆ 11,215ರೂ ಆದರೆ 22 ಕ್ಯಾರೆಟ್ ನ 1ಗ್ರಾಂ ಚಿನ್ನದ ಬೆಲೆ 10,280 ರೂಪಾಯಿ ಆಗಿದೆ. ತಜ್ಞರ ಅಭಿಪ್ರಾಯದ ಪ್ರಕಾರ ಡಿಸೆಂಬರ್ ಅಂತ್ಯದ ವೇಳೆಗೆ 22 ಕ್ಯಾರೆಟ್ನ ಆಭರಣ ಚಿನ್ನದ ಬೆಲೆಯಲ್ಲಿ ಐತಿಹಾಸಿಕ ಏರಿಕೆ ಕಂಡು ಬರಲಿದೆ. ಹೌದು, ಡಿಸೆಂಬರ್ ಅಂತ್ಯದ ಒಳಗಾಗಿ 22 ಕ್ಯಾರೆಟ್ನ ಒಂದು ಗ್ರಾಂ ಚಿನ್ನದ ಬೆಲೆ 12,000 ಗಡಿ ದಾಟುವ ಸಾಧ್ಯತೆ ಇದೆ ಅಂತ ಅಂದಾಜು ಮಾಡಲಾಗಿದೆ.
ಅದೇ ರೀತಿಯಲ್ಲಿ 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 13,000 ರೂ. ಗಡಿ ದಾಟುವ ಸಾಧ್ಯತೆ ಇದೆ ಅಂತ ಅಂದಾಜು ಮಾಡಲಾಗಿದೆ. ಸದ್ಯ ಚಿನ್ನದ ಬೆಲೆ ಏರಿಕೆಯು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ.