2026 ರ ಚಿನ್ನದ ಬೆಲೆ ಎಷ್ಟಾಗುತ್ತೆ ಎಂದು ತಿಳಿಸಿದ ಸರ್ಕಾರ.! ಚಿನ್ನದ ಭವಿಷ್ಯ ಹೇಗಿದೆ.? | Gold Price Prediction 2026

Spread the love

ಈಗಾಗಲೇ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಚಿನ್ನದ ಬೆಲೆ ಡಬ್ಬಲ್ ಏರಿಕೆಯಾಗಿತ್ತು. 2026ರಲ್ಲಿ ಚಿನ್ನದ ಬೆಲೆ ಎಷ್ಟು ಆಗಬಹುದು ಎನ್ನುವ ಕುತೂಹಲ ನಿಮಗೆ ಇರಬಹುದು. ಈ ಬಗ್ಗೆ ಇದೀಗ ತಜ್ಞರೇ ಮಾಹಿತಿಯನ್ನ ನೀಡಿದ್ದಾರೆ. ಹಾಗಿದ್ರೆ 2026ರಲ್ಲಿ ಚಿನ್ನದ ಬೆಲೆ ಎಷ್ಟು ಆಗಬಹುದು.?

ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ ಶೇಕಡ 65ರಷ್ಟು ಏರಿದೆ. ಈ ಏರಿಕೆಯ ಓಟ ನಿಲ್ಲುವ ಲಕ್ಷಣ ಕಾಣ್ತಾ ಇಲ್ಲ. ಚಿನ್ನ ತನ್ನ ಗರಿಷ್ಠ ಮಟ್ಟ ಮುಟ್ಟಿತು ಎಂದು ಭಾವಿಸಿದವರ ಎಣಿಕೆ ಇದೀಗ ಉಲ್ಟಾ ಆಗಿದೆ. ಎರಡು ವರ್ಷಗಳ ಹಿಂದೆ 2023ರ ಅಕ್ಟೋಬರ್ 89 ರಂದು 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 5688 ರೂ. ಇತ್ತು. ಈಗ 2025ರ ಅಕ್ಟೋಬರ್ ನಲ್ಲಿ 12,315 ರೂ. ಗೇರಿದೆ. ಇಂದು ಬೆಲೆ ಕೂಡ ಇದರ ಡಬಲ್ ಆಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ ಎರಡು ವರ್ಷದ ಹಿಂದೆ 5262 ರೂ. ಇತ್ತು. ಈಗ ಅದು 11,290 ರೂ. ಆಗಿದೆ. ಸೋ ಬೆಳ್ಳಿ ಬೆಲೆ 2023 ರಲ್ಲಿ ಕಿಲೋಗೆ 68,800 ಇತ್ತು ಈಗ 2024 ರಲ್ಲಿ 93,400 ಆಗಿದೆ. ಈಗ 1.61 ಲಕ್ಷ ಆಗಿದೆ. ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಕಡಿಮೆಗೊಳ್ಳುವ ಸಾಧ್ಯತೆ ಇಲ್ಲ. ದಿನಕ್ಕೆ 50 ರೂನಿಂದ 200 ರೂಪಾಯವರೆಗೆ ಬೆಲೆ ಏರಬಹುದು ಅಂತ ಹೇಳಿ ತಜ್ಞರು ನಿರೀಕ್ಷೆ ಮಾಡಿದ್ದಾರೆ.

ಅಂದಾಜು ಪ್ರಕಾರ 2026ರ ಅಕ್ಟೋಬರ್ ನಲ್ಲಿ ಚಿನ್ನದ ಬೆಲೆ ಗ್ರಾಂ ಗೆ 15,000 ರೂಪಾಯ ಗಡಿ ದಾಟಿ ಹೊಸ ದಾಖಲೆಯನ್ನ ನಿರ್ಮಿಸಬಹುದು. ಬೆಳ್ಳಿ ಬೆಲೆಯು ಕೂಡ 2 ಲಕ್ಷ ರೂಪಾಯಿ ದಾಟಬಹುದು ಅಂತ ಹೇಳಿ ಹೇಳಲಾಗ್ತಾ ಇದೆ. ಇನ್ನು ಚಿನ್ನ ಬೆಳ್ಳಿ ಬೆಲೆಗಳನ್ನ ಐತಿಹಾಸಿಕವಾಗಿ ಗಮನಿಸಿದಾಗ ವಾರ್ಷಿಕವಾಗಿ ಶೇಕಡ 8% ರಿಂದ 15ರಷ್ಟು ಏರಿಕೆಯಾಗಿರುವುದನ್ನ ಕಾಣಬಹುದು. ಆದರೆ ಕಳೆದ ಕೆಲವು ವರ್ಷದಿಂದ ಅವೆರಡು ಕೂಡ ಶೇಕಡ 60ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.

ಇದಕ್ಕೆ ಹಲವು ಕಾರಣಗಳು ಕೂಡ ಇವೆ. ಚಿನ್ನ ಸೀಮಿತವಾಗಿ ಲಭ್ಯ ಇಲ್ಲದೆ ಇರುವುದು. ಜಾಗತಿಕವಾದಂತಹ ಅನಿಶ್ಚಿತತೆ. ಅದೇ ರೀತಿ ಆರ್ಥಿಕ ಬೆಳವಣಿಗೆ ಮಂದಗೊಂಡಿರುವುದು. ಸೆಂಟ್ರಲ್ ಬ್ಯಾಂಕುಗಳು ಚಿನ್ನವನ್ನ ಹೆಚ್ಚೆಚ್ಚು ಖರೀದಿ ಮಾಡ್ತಾ ಇರವುದು. ಇದೆಲ್ಲ ಕೂಡ ಕಾರಣ ಆಗಿದೆ.

WhatsApp Group Join Now

Spread the love

Leave a Reply