ಬ್ಯಾಂಕ್ ಲಾಕಾರ್ ನಲ್ಲಿ ಚಿನ್ನ ಇಟ್ಟವರಿಗೆ RBI ಹೊಸ ರೂಲ್ಸ್ | Gold Locker Rules

Spread the love

ಚಿನ್ನದ ಲಾಕಾರ್ ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿ ಆಗಲಿವೆ. ಒಂದು ವೇಳೆ ನಿಮ್ಮ ಬ್ಯಾಂಕ್ ಲಾಕರ್ ನಲ್ಲಿ ನಿರ್ದಿಷ್ಟ ಮೌಲ್ಯಕ್ಕಿಂತ ಹೆಚ್ಚಿನ ಚಿನ್ನದ ಆಭರಣಗಳು ಅಥವಾ ಚಿನ್ನದ ಬಾರ್ ಗಳನ್ನ ಸಂಗ್ರಹಿಸಿದರೆ ಈ ಬಗ್ಗೆ ಬ್ಯಾಂಕ್ಗಳು ತೆರಿಗೆ ಇಲಾಖೆಗೆ ವರದಿ ಮಾಡಬೇಕಾಗಬಹುದು.

ಒಂದು ಕುಟುಂಬವು 15 ರಿಂದ 20 ಲಕ್ಷ ಮೌಲ್ಯದ ಚಿನ್ನವನ್ನ ಬ್ಯಾಂಕ್ ಲಾಕರ್ನಲ್ಲಿ ಸಂಗ್ರಹಿಸಿದ್ರೆ ಆದರೆ ಅವರ ವಾರ್ಷಿಕ ಐಟಿಆರ್ ಆದಾಯ ಕೇವಲ 4-5 ಲಕ್ಷದಲ್ಲಿ ಇದ್ದರೆ ಬ್ಯಾಂಕ್ ಈ ವ್ಯತ್ಯಾಸದ ಬಗ್ಗೆ ಪ್ರಶ್ನೆಯನ್ನು ಕೂಡ ಮಾಡಬಹುದು. ಯಾರಾದರೂ ಆಗಾಗ್ಗೆ ಚಿನ್ನದ ಸಾಲ ಪಡೆದು ಅದನ್ನ ದೊಡ್ಡ ಮೊತ್ತದ ನಗದಿನಲ್ಲಿ ಮರುಪಾವತಿ ಮಾಡಿದರೆ ಆ ವಿವರಗಳನ್ನು ಸಹ ತೆರಿಗೆ ಇಲಾಖೆಯೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಇನ್ನು ಆದಾಯ ತೆರಿಗೆ ಇಲಾಖೆಯು, ಕುಟುಂಬದ ಬಳಿ ಇರುವ ಚಿನ್ನಕ್ಕೆ ಸಂಬಂಧಪಟ್ಟಂತೆ ಹಳೆಯ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಈ ಮಿತಿಗಳನ್ನ ಮೀರಿ ಚಿನ್ನ ಇಟ್ಟುಕೊಂಡರೆ ಅವುಗಳ ಖರೀದಿ ದಾಖಲೆ ಮತ್ತು ಆದಾಯದ ಮೂಲವನ್ನ ತೋರಿಸುವುದು ಕಡ್ಡಾಯವಾಗಿದೆ. ಹಾಗಾಗಿ ಮದುವೆಯಾದ ಮಹಿಳೆಯರು 500 ಗ್ರಾಂ ವರೆಗೆ ಚಿನ್ನವನ್ನ ಇಟ್ಟುಕೊಳ್ಳಲು ಅವಕಾಶ ಇದೆ. ಮದುವೆಯಾಗದ ಮಹಿಳೆಯರು 250ಗ್ರಾಂ ವರೆಗೆ ಚಿನ್ನವನ್ನ ಇಟ್ಟುಕೊಳ್ಳಬಹುದು.

ಇನ್ನು ಪುರುಷರು 100ಗ್ರಾಂ ವರೆಗೆ ಚಿನ್ನವನ್ನ ಇಟ್ಕೊಳ್ಳಲು ಅವಕಾಶವಿದೆ. ಒಟ್ಟನಲ್ಲಿ ಈ ಹೊಸ ನಿಯಮಗಳು ತಮ್ಮ ಆದಾಯಕ್ಕೆ ಅನುಗುಣವಾಗಿ ಚಿನ್ನವನ್ನ ಖರೀದಿಸುವ ಪ್ರಾಮಾಣಿಕ ತೆರಿಗೆದಾರರಿಗೆ ಯಾವುದೇ ತೊಂದರೆ ಇಲ್ಲ. ಆದರೆ ತಮ್ಮ ಆದಾಯದ ಮೂಲವನ್ನ ಬಹಿರಂಗಪಡಿಸದೇ ಅಕ್ರಮವಾಗಿ ದೊಡ್ಡ ಪ್ರಮಾಣದ ಚಿನ್ನವನ್ನ ಬ್ಯಾಂಕ್ ಲಾಕರ್ನಲ್ಲಿ ಸಂಗ್ರಹಿಸುವವರ ಮೇಲೆ ಈ ನಿಯಮ ಅನ್ವಯವಾಗಲಿದೆ.

WhatsApp Group Join Now

Spread the love

Leave a Reply